ಹೊಸ ಟಾಟಾ ಟಿಯಾಗೋ ಎಕ್ಸ್‌ಟಿಒ ವೆರಿಯೆಂಟ್ ಬಿಡುಗಡೆ: ಬೆಲೆ ರೂ.5.47 ಲಕ್ಷ
ಟಾಟಾ ಮೋಟಾರ್ಸ್ ಕಂಪನಿಯು ತನ್ನ ಟಿಯಾಗೋ ಹ್ಯಾಚ್‌ಬ್ಯಾಕ್ ಮಾದರಿಗಾಗಿ ಎಕ್ಸ್‌ಟಿಒ ಎಂಬ ಹೊಸ ವೆರಿಯೆಂಟ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಸದ್ದಿಲ್ಲದೆ ಬಿಡುಗಡೆಗೊಳಿಸಿಸಿದೆ. ಈ ಹೊಸ ಟಾಟಾ ಟಿಯಾಗೋ ಎಕ್ಸ್‌ಟಿಒ ವೆರಿಯೆಂಟ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.5.47 ಲಕ್ಷಗಳಾಗಿದೆ.

ಟಾಟಾ ಟಿಯಾಗೋ ಎಕ್ಸ್‌ಟಿಒ ವೆರಿಯೆಂಟ್ ಎಂಟ್ರಿ ಲೆವೆಲ್ ಎಕ್ಸ್‌ಇ ಮತ್ತು ಎಕ್ಸ್‌ಟಿ ವೆರಿಯೆಂಟ್ ಗಳ ನಡುವೆ ಇರುತ್ತದೆ. ಇದು ಬೇಸ್ ಎಕ್ಸ್‌ಇ ರೂಪಾಂತರಕ್ಕಿಂತ ಸುಮಾರು ರೂ.48,000 ಹೆಚ್ಚು ಬೆಲೆಯನ್ನು ಹೊಂದಿದೆ. ಇನ್ನು ಈ ಹೊಸ ಟಿಯಾಗೋ ಎಕ್ಸ್‌ಟಿಒ ವೆರಿಯೆಂಟ್ ನಲ್ಲಿ 1.2 ಎಲ್, 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ಮಾತ್ರ ಜೋಡಿಸಲಾಗಿದೆ.

2021ರ ಟಾಟಾ ಟಿಯಾಗೋ ಎಕ್ಸ್‌ಟಿಒ ವೆರಿಯೆಂಟ್ ಸ್ಪೀಕರ್‌ಗಳ ಆಡಿಯೋ ಸಿಸ್ಟಂ ಮತ್ತು ಸ್ಟೀಯರಿಂಗ್ ಮೌಂಟೆಡ್ ಫೋನ್ ಮತ್ತು ಆಡಿಯೋ ಕಂಟ್ರೋಲ್ ಗಳನ್ನು ಹೊಂದಿವೆ. ಆದರೂ ಬ್ಲೂಟೂತ್ ಕನೆಕ್ಟಿವಿಟಿ, ಹರ್ಮನ್ ಮ್ಯೂಸಿಕ್ ಸಿಸ್ಟಂ, ಸ್ಪೀಡ್ ಡಿಪೆಂಡೆಂಟ್ ವಾಲ್ಯೂಮ್ ಕಂಟ್ರೋಲ್ ಮತ್ತು ಯುಎಸ್‌ಬಿ ಜೊತೆಗೆ ಎಎಂ/ಎಫ್‌ಎಂನಂತಹ ಕೆಲವು ಪ್ರಮುಖ ಫೀಚರ್ಸ್ ಗಳನ್ನು ಕಳೆದುಕೊಳ್ಳುತ್ತದೆ.

ಈ ಟಿಯಾಗೋ ಎಕ್ಸ್‌ಟಿಒ ವೆರಿಯೆಂಟ್ ಬಾಡಿ-ಕಲರ್ ಬಂಪರ್, 14-ಇಂಚಿನ ಸ್ಟೀಲ್ ರಿಮ್ಸ್, ಡ್ಯುಯಲ್ ಟೋನ್ ಇಂಟೀರಿಯರ್ ಥೀಮ್, 2.5 ಇಂಚಿನ ಎಂಐಡಿ, ಟ್ಯಾಕೋಮೀಟರ್, ಟಿಲ್ಟ್ ಮತ್ತು ಪವರ್ ಸ್ಟೀರಿಂಗ್, ಮಲ್ಟಿ ಡ್ರೈವ್ ಮೋಡ್‌ಗಳು ಸೇರಿದಂತೆ ಎಂಟ್ರಿ-ಲೆವೆಲ್ ಎಕ್ಸ್‌ಇ ರೂಪಾಂತರದಲ್ಲಿ ನೀಡಲಾಗುವ ಎಲ್ಲಾ ಫೂಚರ್ಸ್ ಗಳನ್ನು ನೀಡಿದ್ದಾರೆ.

ಇದರೊಂದಿಗೆ ಇಂಟಿಗ್ರೇಟೆಡ್ ರಿಯರ್ ಹೆಡ್ ರೆಸ್ಟ್, ಎಬಿಎಸ್ ಜೊತೆ ಇಬಿಡಿ, ರಿಯರ್ ಪಾರ್ಕಿಂಗ್ ಸೆನ್ಸರ್ಸ್, ಸ್ಪೀಡ್ ಅಲರ್ಟ್, ಡ್ಯುಯಲ್ ಏರ್‌ಬ್ಯಾಗ್ ಮತ್ತು ಹೆಚ್ಚಿನ ಸುರಕ್ಷತಾ ಫೀಚರ್ಸ್ ಗಳನ್ನು ಕೂಡ ನೀಡಲಾಗಿದೆ.

2021ರ ಟಾಟಾ ಟಿಯಾಗೋ ಮಾದರಿಯು 6 ಮ್ಯಾನುಯಲ್ ವೆರಿಯೆಂಟ್ ಗಳು ಮತ್ತು 4 ಆಟೋಮ್ಯಾಟಿಕ್ ವೆರಿಯೆಂಟ್ ಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಟಾಟಾ ಟಿಯಾಗೋ ಕೈಗೆಟುಕುವ ಬೆಲೆಯಲ್ಲಿ ಖರೀದಿಸಬಹುದಾದ ಸುರಕ್ಷಿತ ಕಾರುಗಳಲ್ಲಿ ಒಂದಾಗಿದೆ.

ಟಾಟಾ ಟಿಯಾಗೋವನ್ನು ಮೊದಲ ಬಾರಿಗೆ 2016 ರಲ್ಲಿ ಪರಿಚಯಿಸಲಾಯಿತು ಮತ್ತು ಇದು ಬ್ರ್ಯಾಂಡ್‌ಗಾಗಿ ಹೊಸ ವಿನ್ಯಾಸ ಭಾಷೆಯನ್ನು ಪರಿಚಯಿಸಿತು, ಇದನ್ನು ಟೀಗೊರ್ ಮತ್ತು ನೆಕ್ಸಾನ್‌ನಂತಹ ಇತರ ಮಾದರಿಗಳು ಅನುಸರಿಸುತ್ತವೆ.

ಈ ಟಾಟಾ ಟಿಯಾಗೋ ಕಾರಿನಲ್ಲಿ 1.2-ಲೀಟರ್ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 85 ಬಿಹೆಚ್‌ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಇನ್ನು ಟಾಟಾ ಕಂಪನಿಯು ಈ ವರ್ಷದ ಕೊನೆಯಲ್ಲಿ ಪ್ರೊಡಕ್ಷನ್-ಸ್ಪೆಕ್ ಹೆಚ್‌ಬಿಎಕ್ಸ್ ಮೈಕ್ರೊ ಎಸ್‌ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ. ಈ ಹೊಸ ಟಾಟಾ ಹೆಚ್‌ಬಿಎಕ್ಸ್ ಮೈಕ್ರೊ ಎಸ್‌ಯುವಿಯು ಭಾರತದಲ್ಲಿ ಬಿಡುಗಡೆಗೊಂಡ ಬಳಿಕ ಸುಜುಕಿ ಇಗ್ನಿಸ್ ಮತ್ತು ಮಹೀಂದ್ರಾ ಕೆಯುವಿ ಎನ್‌ಎಕ್ಸ್‌ಟಿ ಕಾರುಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications








