ಏಪ್ರಿಲ್ ಅವಧಿಯಲ್ಲಿ 25,654 ಯುನಿಟ್ ಕಾರುಗಳನ್ನು ಮಾರಾಟ ಮಾಡಿದ ಟಾಟಾ ಮೋಟಾರ್ಸ್

ಕೋವಿಡ್‌ನಿಂದಾಗಿ ಹೊಸ ವಾಹನ ಮಾರಾಟವು ಇದೀಗ ಸಾಕಷ್ಟು ಇಳಿಕೆಯಾಗಿದ್ದರೂ ಕಳೆದ ತಿಂಗಳ ಆರಂಭದಲ್ಲಿ ಹಲವಾರು ಕಾರು ಕಂಪನಿಗಳು ಉತ್ತಮ ಬೇಡಿಕೆ ಪಡೆದುಕೊಂಡಿದ್ದು, ಟಾಟಾ ಕಂಪನಿಯು ಸಹ ಸುಮಾರು 25,654 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ.

25,654 ಯುನಿಟ್ ಕಾರುಗಳನ್ನು ಮಾರಾಟ ಮಾಡಿದ ಟಾಟಾ ಮೋಟಾರ್ಸ್

ಕಳೆದ ವರ್ಷದ ಏಪ್ರಿಲ್‌ನಲ್ಲಿ ಸಂಪೂರ್ಣವಾಗಿ ವಾಹನ ಉತ್ಪಾದನೆ ಮತ್ತು ಮಾರಾಟವನ್ನು ಬಂದ್ ಮಾಡಿದ್ದ ಆಟೋ ಕಂಪನಿಗಳು ಕಳೆದ ವರ್ಷದ ಕೊನೆಯಲ್ಲಿ ಮತ್ತು ಈ ವರ್ಷದ ಆರಂಭದಲ್ಲಿ ಗರಿಷ್ಠ ಮಟ್ಟದ ಬೇಡಿಕೆ ಪಡೆದುಕೊಂಡಿದ್ದವು. ಕಳೆದ ತಿಂಗಳ ಮಧ್ಯಂತರದ ತನಕವು ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಂಡಿದ್ದ ಕಾರು ಕಂಪನಿಗಳಿದೆ ಕೋವಿಡ್ 2ನೇ ಅಲೆ ಮತ್ತೆ ಹೊಡೆತ ನೀಡುತ್ತಿದೆ. ಇದರ ನಡುವೆ ಟಾಟಾಟ ಕಂಪನಿಯು ಕಳೆದ ತಿಂಗಳು 25,654 ಯುನಿಟ್ ಕಾರುಗಳನ್ನು ವಿತರಣೆ ಮಾಡಿದೆ.

25,654 ಯುನಿಟ್ ಕಾರುಗಳನ್ನು ಮಾರಾಟ ಮಾಡಿದ ಟಾಟಾ ಮೋಟಾರ್ಸ್

ಕಳೆದ ವರ್ಷ ಕೋವಿಡ್‌ನಿಂದಾದ ಆರ್ಥಿಕ ಸಂಕಷ್ಟದಿಂದಾಗಿ ವಾಹನ ಖರೀದಿ ಯೋಜನೆಯನ್ನು ಕೈಬಿಟ್ಟಿದ್ದ ಗ್ರಾಹಕರು ಈ ವರ್ಷದ ಯುಗಾದಿ ವೇಳೆಗೆ ಹೊಸ ವಾಹನ ಖರೀದಿ ಯೋಜನೆಯೊಂದಿಗೆ ಭಾರೀ ಪ್ರಮಾಣದ ಬುಕ್ಕಿಂಗ್ ದಾಖಲಿಸಿದ್ದರು.

25,654 ಯುನಿಟ್ ಕಾರುಗಳನ್ನು ಮಾರಾಟ ಮಾಡಿದ ಟಾಟಾ ಮೋಟಾರ್ಸ್

ಬುಕ್ಕಿಂಗ್ ಮತ್ತು ಉತ್ಪಾದನಾ ಸಾಮಾರ್ಥ್ಯದ ಆಧಾರದ ಮೇಲೆ ಟಾಟಾ ಮೋಟಾರ್ಸ್ ಕಂಪನಿಯು ಏಪ್ರಿಲ್ ತಿಂಗಳ ಮೊದಲ 15 ದಿನಗಳಲ್ಲಿ ಅಧಿಕ ಪ್ರಮಾಣದ ವಾಹನ ವಿತರಣೆ ಮಾಡಿದ್ದು, ಸುಮಾರು 25,654 ಯುನಿಟ್ ಕಾರುಗಳನ್ನು ವಿತರಣೆ ಮಾಡಿದೆ.

25,654 ಯುನಿಟ್ ಕಾರುಗಳನ್ನು ಮಾರಾಟ ಮಾಡಿದ ಟಾಟಾ ಮೋಟಾರ್ಸ್

ಇದೀಗ ಕೋವಿಡ್ 2ನೇ ಅಲೆ ಹೆಚ್ಚಿರುವುದರಿಂದ ಹೊಸ ವಾಹನಗಳ ವಿತರಣೆಯನ್ನು ಹೊಸ ಸುರಕ್ಷಾ ಮಾರ್ಗಸೂಚಿಯೊಂದಿಗೆ ಕೈಗೊಳ್ಳಲಾಗುತ್ತಿದ್ದು, ಮೇ ಅವಧಿಯಲ್ಲಿನ ಕಾರು ಮಾರಾಟವು ಭಾರೀ ಪ್ರಮಾಣದಲ್ಲಿ ಕುಸಿತ ಕಾಣಬಹುದು ಎನ್ನಲಾಗುತ್ತಿದೆ. ಕೋವಿಡ್ ಪರಿಣಾಮ ವಾಹನಗಳ ಬುಕ್ಕಿಂಗ್ ಪ್ರಕ್ರಿಯೆಗಾಗಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಬುಕ್ಕಿಂಗ್ ಪ್ರಕ್ರಿಯೆಯಲ್ಲಿ ಸಾಕಷ್ಟು ಕುಸಿತ ಕಂಡುಬರುತ್ತಿರುವುದು ಆಟೋ ಕಂಪನಿಗಳಿಗೆ ಮತ್ತೆ ನಷ್ಟ ಭೀತಿ ಎದುರಾಗಿದೆ.

25,654 ಯುನಿಟ್ ಕಾರುಗಳನ್ನು ಮಾರಾಟ ಮಾಡಿದ ಟಾಟಾ ಮೋಟಾರ್ಸ್

ಸದ್ಯ ಹೊಸ ಸುರಕ್ಷಾ ಮಾರ್ಗಸೂಚಿಯೊಂದಿಗೆ ವಾಹನ ಉತ್ಪಾದನೆ ಮತ್ತು ಮಾರಾಟವನ್ನು ಕೈಗೊಳ್ಳಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಭಾರೀ ಪ್ರಮಾಣದ ನಷ್ಟ ಸಂಭವಿಸುವ ಸಾಧ್ಯತೆಗಳಿವೆ.

25,654 ಯುನಿಟ್ ಕಾರುಗಳನ್ನು ಮಾರಾಟ ಮಾಡಿದ ಟಾಟಾ ಮೋಟಾರ್ಸ್

ಕಳೆದ ವರ್ಷದ ಲಾಕ್‌ಡೌನ್‌ ಹೊಡೆತಕ್ಕೆ ಸಿಲುಕಿ ಸುಧಾರಣೆಯ ಹಾದಿಯಲ್ಲಿದ್ದ ಆಟೋ ಉದ್ಯಮವು ಇದೀಗ ಮತ್ತೆ ಸಂಕಷ್ಟ ಎದುರಿಸುತ್ತಿದ್ದು, ದೇಶಾದ್ಯಂತ ಹಲವು ಆಟೋ ಕಂಪನಿಗಳು ಈಗಾಗಲೇ ಕನಿಷ್ಠ ಪ್ರಮಾಣದ ಉದ್ಯೋಗಿಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದರೆ ಇನ್ನು ಕೆಲವು ವಾಹನ ಕಂಪನಿಗಳು ಉದ್ಯೋಗಿಗಳ ಆರೋಗ್ಯದ ದೃಷ್ಠಿಯಿಂದ ಹೊಸ ವಾಹನಗಳ ಉತ್ಪಾದನೆಯನ್ನೇ ತಾತ್ಕಾಲಿಕವಾಗಿ ಬಂದ್ ಮಾಡಿವೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

25,654 ಯುನಿಟ್ ಕಾರುಗಳನ್ನು ಮಾರಾಟ ಮಾಡಿದ ಟಾಟಾ ಮೋಟಾರ್ಸ್

ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲೇ ವಾಹನ ಉತ್ಪಾದನೆಯು ತಗ್ಗಿರುವುರುವುದು ಭಾರೀ ನಷ್ಟ ಎದುರಿಸುವ ಭೀತಿ ಎದುರಾಗಿದ್ದು, ಹೊಸ ಸುರಕ್ಷಾ ಕ್ರಮಗಳೊಂದಿಗೆ ಕೆಲವೇ ಕೆಲವು ಕಂಪನಿಗಳು ಮಾತ್ರ ವಾಹನ ಉತ್ಪಾದನೆ ಕೈಗೊಳ್ಳುತ್ತಿವೆ.

25,654 ಯುನಿಟ್ ಕಾರುಗಳನ್ನು ಮಾರಾಟ ಮಾಡಿದ ಟಾಟಾ ಮೋಟಾರ್ಸ್

ಇದರ ನಡುವೆ ಹೊಸ ವಾಹನಗಳ ಖರೀದಿಗೆ ಬುಕ್ಕಿಂಗ್ ಸಲ್ಲಿಕೆ ತೀವ್ರ ಕಂಡಿರುವುದಲ್ಲದೆ ಈಗಾಗಲೇ ಬುಕ್ಕಿಂಗ್ ಸಲ್ಲಿಕೆ ಮಾಡಿದ್ದ ಲಕ್ಷಾಂತರ ಹೊಸ ವಾಹನ ಖರೀದಿದಾರರು ಈಗಾಗಲೇ ಮಾಡಲಾಗಿರುವ ಬುಕ್ಕಿಂಗ್ ಹಿಂಪಡೆಯುತ್ತಿದ್ದಾರೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

25,654 ಯುನಿಟ್ ಕಾರುಗಳನ್ನು ಮಾರಾಟ ಮಾಡಿದ ಟಾಟಾ ಮೋಟಾರ್ಸ್

ಸದ್ಯದ ಪರಿಸ್ಥಿತಿಯಲ್ಲಿ ಹೊಸ ವಾಹನ ಖರೀದಿಯು ಆರ್ಥಿಕ ಸಂಕಷ್ಟ ಇನ್ನಷ್ಟು ಹೆಚ್ಚಳವಾಗುವ ಭೀತಿಯಿಂದ ಹೊಸ ವಾಹನ ಖರೀದಿ ಪ್ರಕ್ರಿಯೆಯಿಂದ ಹಿಂದೆ ಸರಿಯುತ್ತಿದ್ದು, ಈ ಪರಿಸ್ಥಿತಿ ಸುಧಾರಣೆಯಾಗಲು ಇನ್ನು ಕೆಲ ತಿಂಗಳುಗಳೇ ಬೇಕಾಗಬಹುದು ಎನ್ನಲಾಗುತ್ತಿದೆ.

Article Published On: Wednesday, May 5, 2021, 20:40 [IST]
English summary
Tata Motors Posted 25,095 Unit Passenger Vehicle Sales In April 2021. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+