ಸಫಾರಿ ಗೋಲ್ಡ್ ಎಡಿಷನ್ ಹೊಸ ಟಿವಿ ಜಾಹೀರಾತು ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್(Tata Motors) ಕಂಪನಿಯು ತನ್ನ ಪ್ರಮುಖ ಕಾರು ಉತ್ಪನ್ನಗಳಲ್ಲಿ ಗ್ರಾಹಕರ ಬೇಡಿಕೆಯೆಂತೆ ಹಲವಾರು ಬದಲಾವಣೆಗಳನ್ನು ಪರಿಚಯಿಸಿದ್ದು, ಕಂಪನಿಯು ಇದೀಗ ಸಫಾರಿ(Safari) ಎಸ್‌ಯುವಿ ಮಾದರಿಯಲ್ಲಿ ವಿಶೇಷ ಆವೃತ್ತಿಯೊಂದನ್ನು ಬಿಡುಗಡೆ ಮಾಡಿ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ.

ಸಫಾರಿ ಗೋಲ್ಡ್ ಎಡಿಷನ್ ಹೊಸ ಟಿವಿ ಜಾಹೀರಾತು ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಬಿಸಿಸಿಐ ಜೊತೆಗೆ ಸತತ ನಾಲ್ಕನೇ ವರ್ಷವೂ ಪಾಲುದಾರಿಕೆ ಪಡೆದುಕೊಂಡಿದ್ದ ವಿಶೇಷತೆಗಾಗಿ ಟಾಟಾ ಮೋಟಾರ್ಸ್ ಕಂಪನಿಯು ಬ್ರಾಂಡ್ ನ್ಯೂ ಸಫಾರಿ ಎಸ್‌ಯುವಿ ಮಾದರಿಯನ್ನು ಗೋಲ್ಡ್ ಎಡಿಷನ್ ಪರಿಚಯಿಸಿದ್ದು, ಹೊಸ ಕಾರು ವಿತರಣೆ ಆರಂಭದೊಂದಿಗೆ ಟಾಟಾ ಮೋಟಾರ್ಸ್ ಕಂಪನಿಯು ಅಡ್ವೆಂಚರ್ ಪ್ರದರ್ಶನದ ಜಾಹೀರಾತು ಬಿಡುಗಡೆ ಮಾಡಿದೆ.

ಸಫಾರಿ ಗೋಲ್ಡ್ ಎಡಿಷನ್ ಹೊಸ ಟಿವಿ ಜಾಹೀರಾತು ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ಸಫಾರಿ ಗೋಲ್ಡ್ ಆವೃತ್ತಿಯನ್ನು ಪ್ರಮುಖ ಆವೃತ್ತಿಗಳಲ್ಲಿ ಬಿಡುಗಡೆ ಮಾಡಿದ್ದು, ಎಕ್ಸ್‌ಜೆಡ್ ಪ್ಲಸ್ ಮ್ಯಾನುವಲ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 21.98 ಲಕ್ಷಕ್ಕೆ ಮತ್ತು ಎಕ್ಸ್‌ಜೆಡ್ಎ ಪ್ಲಸ್ ಆಟೋಮ್ಯಾಟಿಕ್ ಮಾದರಿಯು ರೂ. 23.17 ಲಕ್ಷ ಬೆಲೆ ಹೊಂದಿವೆ.

ಸಫಾರಿ ಗೋಲ್ಡ್ ಎಡಿಷನ್ ಹೊಸ ಟಿವಿ ಜಾಹೀರಾತು ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಆರಂಭಿಕ ಮಾದರಿಯಾದ ಫ್ರಾಸ್ಟ್ ವೈಟ್ ಬಾಡಿ ಪೇಂಟ್ ಹೊಂದಿರುವ ವೈಟ್ ಗೋಲ್ಡ್ ಆವೃತ್ತಿಯು ಬ್ಲ್ಯಾಕ್ ಕಾಂಟ್ರಾಸ್ಟ್ ರೂಫ್ ಜೊತೆಗೆ ಗ್ರಿಲ್, ಹೆಡ್‌ಲ್ಯಾಂಪ್ ಸುತ್ತಮತ್ತ, ರೂಫ್ ರೈಲ್ಸ್, ಡೋರ್ ಹ್ಯಾಂಡಲ್‌ಮತ್ತು ಬ್ಯಾಡ್ಜ್‌ಗಳಲ್ಲಿ ಗೋಲ್ಡ್ ಆಕ್ಸೆಂಟ್ ನೀಡಲಾಗಿದೆ.

ಹಾಗೆಯೇ ಬ್ಲ್ಯಾಕ್ ಎಡಿಷನ್ ಹೊಂದಿರುವ ಮಾದರಿಯಲ್ಲೂ ಬ್ಲ್ಯಾಕ್ ಕಂಟ್ರಾಸ್ಟ್ ಜೊತೆಗೆ ಗೋಲ್ಡ್ ಆಕ್ಸೆಂಟ್ ನೀಡಲಾಗಿದ್ದು, ಹೊಸ ಕಾರಿನ ಒಳಭಾಗದಲ್ಲಿ ಎಸಿ ವೆಂಟ್ಸ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಡೋರ್ ಹ್ಯಾಂಡಲ್ಸ್ ಮತ್ತು ಸೀಟ್ ಹೆಡ್‌ರೆಸ್ಟ್ ಸುತ್ತಲೂ ಗೋಲ್ಡ್ ಆಕ್ಸೆಂಟ್ ಒಳಗೊಂಡಿದೆ.

ಸಫಾರಿ ಗೋಲ್ಡ್ ಎಡಿಷನ್ ಹೊಸ ಟಿವಿ ಜಾಹೀರಾತು ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಜೊತೆಗೆ ಹೊಸ ಕಾರಿನಲ್ಲಿ ಓಲಿಸ್ಟರ್ ವೈಟ್ ಡೈಮಂಡ್ ಕ್ವಿಲ್ಟೆಡ್ ಲೆದರ್ ಸೀಟುಗಳು, 1 ನೇ ಮತ್ತು 2 ನೇ ಸಾಲುಗಳಲ್ಲೂ ವೆಂಟೆಲೇಷನ್ ಸೀಟುಗಳು, ವೈರ್‌ಲೆಸ್ ಚಾರ್ಜರ್, ಏರ್ ಪ್ಯೂರಿಫೈಯರ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಸೌಲಭ್ಯಗಳನ್ನು ನೀಡಲಾಗಿದೆ.

ಸಫಾರಿ ಗೋಲ್ಡ್ ಎಡಿಷನ್ ಹೊಸ ಟಿವಿ ಜಾಹೀರಾತು ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಇದರೊಂದಿಗೆ ಸಫಾರಿ ಹೊಸ ಆವೃತ್ತಿಯ ಮತ್ತೊಂದು ವಿಶೇಷವೆಂದರೆ ನ್ಯೂ ಜನರೇಷನ್ ಸಫಾರಿ ಮಾದರಿಯು ಇದುವರೆಗೆ ಸುಮಾರು 10 ಸಾವಿರ ಯುನಿಟ್‌ಗಳು ಉತ್ಪಾದನೆಗೊಂಡಿದ್ದು, 10 ಸಾವಿರ ಯುನಿಟ್ ಉತ್ಪಾದನೆ ಸಂಭ್ರಮ ಭಾಗವಾಗಿಯೂ ಗೋಲ್ಡನ್ ಎಡಿಷನ್ ಮಾರುಕಟ್ಟೆ ಪ್ರವೇಶಿಸಿದೆ.

ಸಫಾರಿ ಗೋಲ್ಡ್ ಎಡಿಷನ್ ಹೊಸ ಟಿವಿ ಜಾಹೀರಾತು ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಗೋಲ್ಡ್ ಎಡಿಷನ್ ಹೊರತುಪಡಿಸಿ ಸಫಾರಿ ಕಾರು ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಟಿ, ಎಕ್ಸ್‌ಟಿ ಪ್ಲಸ್, ಎಕ್ಸ್‌ಜೆಡ್, ಎಕ್ಸ್‌ಜೆಡ್ ಪ್ಲಸ್ ಮತ್ತು ಎಕ್ಸ್‌ಜೆಡ್ ಪ್ಲಸ್ ಅಡ್ವೆಂಚರ್ ಪೆರಸೊನಾ ಮಾದರಿಗಳೊಂದಿಗೆ ಖರೀದಿಗೆ ಲಭ್ಯವಿದ್ದು, ಹೊಸ ಸಫಾರಿ ಕಾರು ಗ್ರಾಹಕರ ಬೇಡಿಕೆಯೆಂತೆ 6 ಸೀಟರ್ ಮತ್ತು 7 ಸೀಟರ್ ಆಯ್ಕೆ ಪಡೆದುಕೊಂಡಿದೆ.

ಸಫಾರಿ ಗೋಲ್ಡ್ ಎಡಿಷನ್ ಹೊಸ ಟಿವಿ ಜಾಹೀರಾತು ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಹೊಸ ಕಾರು ಆರಂಭಿಕವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 14.99 ಲಕ್ಷಕ್ಕೆ ಮತ್ತು ಹೊಸ ಎಡಿಷನ್ ಸೇರ್ಪಡೆ ನಂತರ ಟಾಪ್ ಎಂಡ್ ಮಾದರಿಯು ರೂ. 23.19 ಲಕ್ಷ ಬೆಲೆ ಹೊಂದಿದ್ದು, ಒಮೆಗಾ ಪ್ಲ್ಯಾಟ್‌ಫಾರ್ಮ್‌ನಲ್ಲಿ ಅಭಿವೃದ್ದಿಗೊಳ್ಳುವ ಮೂಲಕ ಹೊಸ ಸಫಾರಿ ಕಾರು ಐಷಾರಾಮಿ ವಿನ್ಯಾಸದೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ.

ಸಫಾರಿ ಗೋಲ್ಡ್ ಎಡಿಷನ್ ಹೊಸ ಟಿವಿ ಜಾಹೀರಾತು ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಸಫಾರಿ ಎಸ್‌ಯುವಿಯಲ್ಲಿ ಆರು ಸ್ಪೀಡ್ ಮ್ಯಾನುವಲ್ ಅಥವಾ ಆರು ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಗೇರ್‌ಬಾಕ್ಸ್ ಆಯ್ಕೆ ಹೊಂದಿರುವ 2.0-ಲೀಟರ್ ಕ್ರಿಯೊಟೆಕ್ ಡೀಸೆಲ್ ಎಂಜಿನ್ ಆಯ್ಕೆ ನೀಡಲಾಗಿದ್ದು, ಫ್ರಂಟ್ ವೀಲ್ಹ್ ಡ್ರೈವ್ ಸಿಸ್ಟಂನೊಂದಿಗೆ 168-ಬಿಎಚ್‌ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದೆ.

ಸಫಾರಿ ಗೋಲ್ಡ್ ಎಡಿಷನ್ ಹೊಸ ಟಿವಿ ಜಾಹೀರಾತು ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಹೊಸ ಸಫಾರಿ ಕಾರು ಸದ್ಯ ಮಾರುಕಟ್ಟೆಯಲ್ಲಿ ಸ್ಟ್ಯಾಂಡರ್ಡ್ ಮತ್ತು ಅಡ್ವೆಂಚರ್ ಎನ್ನುವ ಎರಡು ಪ್ರಮುಖ ವೆರಿಯೆಂಟ್‌ಗಳಲ್ಲಿ ಮಾರಾಟಗೊಳ್ಳುತ್ತಿದ್ದು, ಅಡ್ವೆಂಚರ್ ಮಾದರಿಯಾಗಿ ಗುರುತಿಸಿಕೊಳ್ಳಲು ಹೆಚ್ಚುವರಿಯಾಗಿ ಮೈಸ್ಟಿಕ್ ಬ್ಲ್ಯೂ ಬಣ್ಣದ ಆಯ್ಕೆಯೊಂದಿಗೆ ಬ್ಲ್ಯಾಕ್ ಔಟ್ ಅಂಶಗಳನ್ನು ಹೊಂದಿದೆ.

ಸಫಾರಿ ಗೋಲ್ಡ್ ಎಡಿಷನ್ ಹೊಸ ಟಿವಿ ಜಾಹೀರಾತು ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಟಾಪ್ ಎಂಡ್‌ನಲ್ಲಿರುವ ಎಕ್ಸ್‌ಜೆಡ್, ಎಕ್ಸ್‌ಜೆಡ್ ಪ್ಲಸ್ ಆವೃತ್ತಿಗಳಲ್ಲಿ ಆರಂಭಿಕ ಮಾದರಿಗಳಲ್ಲಿನ ಹಲವು ಫೀಚರ್ಸ್‌ನೊಂದಿಗೆ ಪನೊರಮಿಕ್ ಸನ್‌ರೂಫ್, ಸೈಡ್ ಕರ್ಟೈನ್ ಏರ್‌ಬ್ಯಾಗ್, ಹಿಲ್ ಡಿಸೆಂಟ್ ಕಂಟ್ರೋಲ್, ಟೈರೈನ್ ರೆಸ್ಪಾನ್ಸ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಮಷಿನ್ ಕಟ್ ಅಯಾಲ್ ವೀಲ್ಹ್, ಜೆಕ್ಸಾನ್ ಹೆಚ್‌ಡಿಐ ಹೆಡ್‌ಲೈಟ್ಸ್, ಫ್ರಂಟ್ ಫಾಗ್ ಲೈಟ್ಸ್, ಕಾರ್ನರಿಂಗ್ ಫಂಕ್ಷನ್, ಟೆರೈನ್ ರೆನ್ಪಾನ್ಸ್ ಮೋಡ್, 8.8 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ ನೀಡಲಾಗಿದೆ.

ಸಫಾರಿ ಗೋಲ್ಡ್ ಎಡಿಷನ್ ಹೊಸ ಟಿವಿ ಜಾಹೀರಾತು ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಜೊತೆಗೆ 7 ಇಂಚಿನ ಡಿಜಿಟಲ್ ಡಿಸ್‌ಪ್ಲೇ, 9 ಜೆಬಿಎಲ್ ಸ್ಪೀಕರ್ಸ್ 6 ಹಂತಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೀಟ್ ಮತ್ತು ಹೈ ಎಂಡ್ ಮಾದರಿಯಲ್ಲಿ ಮಾತ್ರ ಪನೊರಮಿಕ್ ಸನ್‌ರೂಫ್ ಸೌಲಭ್ಯ ಸೇರಿದಂತೆ ಸುರಕ್ಷತೆ ಹೆಚ್ಚಿನ ಒತ್ತು ನೀಡಲಾಗಿದ್ದು, ಸ್ಟ್ಯಾಂಡರ್ಡ್ ಮತ್ತು ಅಡ್ವೆಂಚರ್ ಎರಡು ಮಾದರಿಗಳಲ್ಲೂ ಒಂದೇ ಮಾದರಿಯ ಡೀಸೆಲ್ ಎಂಜಿನ್ ಆಯ್ಕೆ ನೀಡಲಾಗಿದೆ.

ಸಫಾರಿ ಗೋಲ್ಡ್ ಎಡಿಷನ್ ಹೊಸ ಟಿವಿ ಜಾಹೀರಾತು ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಟಾಟಾ ಕಂಪನಿಯು ಹೊಸ ಕಾರಿನ ಪ್ರತಿ ಮಾದರಿಯಲ್ಲೂ ಸದ್ಯಕ್ಕೆ 2 ವೀಲ್ಹ್ ಡ್ರೈವ್ ಸಿಸ್ಟಂ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ನೀಡಿದ್ದು, ಮುಂಬರುವ ದಿನಗಳಲ್ಲಿ ಹೈ ಎಂಡ್ ಮಾದರಿಯಾಗಿರುವ ಅಡ್ವೆಂಚರ್ ಆವೃತ್ತಿಯಲ್ಲಿ ಗ್ರಾಹಕರ ಬೇಡಿಕೆಯ ಅನುಸಾರವಾಗಿ ಆಫ್ ರೋಡ್ ಪರ್ಫಾಮೆನ್ಸ್‌ಗಾಗಿ 4x4 ಡ್ರೈವ್ ಸಿಸ್ಟಂ ಮಾದರಿಯನ್ನು ಸಹ ಪರಿಚಯಿಸುವ ಯೋಜನೆಯಲ್ಲಿದೆ.

Most Read Articles

Kannada
English summary
Tata motors releases new tvc for safari gold edition suv
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X