ಅಕ್ಟೋಬರ್ ತಿಂಗಳಿನಲ್ಲಿ ದಾಖಲೆ ಮಟ್ಟದ ಮಾರಾಟ ಕಂಡ Tata Safari ಎಸ್‍ಯುವಿ
ಸ್ವದೇಶಿ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ನ್ಯೂ ಜನರೇಷನ್ ಸಫಾರಿ ಎಸ್‍ಯುವಿಯನ್ನು ಬಿಡುಗಡೆಗೊಳಿಸಿತ್ತು. ಈ ಹೊಸ ಟಾಟಾ ಸಫಾರಿ(Tata Safari) ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆಯೊಂದಿಗೆ ಮಾರಾಟವಾಗುತ್ತಿದೆ.

ಕಳೆದ ತಿಂಗಳಿನ ಮಾರಾಟದಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಮೂರನೇ ಅತಿ ಹೆಚ್ಚು ಮಾರಾಟವಾದ ಪ್ರಯಾಣಿಕ ವಾಹನ ತಯಾರಕರಾಗಿ ಹೊರಹೊಮ್ಮಿದೆ. ಒಟ್ಟು ಮಾರಾಟದ ಉತ್ತಮ ಭಾಗವು ಅದರ ಯುಟಿಲಿಟಿ ವಾಹನಗಳಿಂದ ಬಂದಿದೆ. ಇದರಲ್ಲಿ ಟಾಟಾ ಸಫಾರಿ ಎಸ್‍ಯುವಿಯು ಕೂಡ ಉತ್ತಮ ಕೊಡುಗೆಯನ್ನು ನೀಡಿದೆ. ಕಳೆದ ತಿಂಗಳು ಆಟಾ ಮೋಟಾರ್ಸ್ ಕಂಪನಿಯು ಸಫಾರಿ ಎಸ್‍ಯುವಿ ಮಾದರಿಯ 1,700ಕ್ಕೂ ಹೆಚ್ಚು ಯೂನಿಟ್‌ಗಳನ್ನು ಮಾರಾಟಗೊಳಿಸಿವೆ.

ಹೊಸ ಟಾಟಾ ಸಫಾರಿ ಎಸ್‍ಯುವಿಯು ಹ್ಯಾರಿಯರ್ ಮಾದರಿಗೆ ಹೋಲುವ ವಿನ್ಯಾಸವನ್ನು ಹೊಂದಿದೆ. ಈ ಎಸ್‍ಯುವಿಯ ಮುಂಭಾಗದಿಂದ ಸಿ-ಪಿಲ್ಲರ್ ವರೆಗೆ, ಟಾಟಾ ಸಫಾರಿ ಮತ್ತು ಹ್ಯಾರಿಯರ್ ಎರಡೂ ಬಹುತೇಕ ಒಂದೇ ರೀತಿ ಇದೆ. ಅವುಗಳ ನಡುವೆ ಇರುವ ಏಕೈಕ ಬದಲಾವಣೆಯೆಂದರೆ ಸಫಾರಿಗಳಲ್ಲಿ ಕಂಡುಬರುವ ಹೊಸ ಟ್ರೈ-ಏರೋ ಮೆಷ್ ಗ್ರಿಲ್ ಆಗಿದೆ.

ಹೊಸ ಟಾಟಾ ಸಫಾರಿ ಎಸ್‌ಯುವಿ ಹ್ಯಾರಿಯರ್‌ನಂತೆಯೇ ಡ್ಯುಯಲ್ ಹೆಡ್‌ಲ್ಯಾಂಪ್ ಸೆಟಪ್ ಅನ್ನು ಹೊಂದಿದೆ. ಇದರೊಂದಿಗೆ ಇಂಟಿಗ್ರೇಟೆಡ್ ಟರ್ನ್ ಇಂಡೀಗೆಟರ್ ಗಳೊಂದಿಗೆ ಮೇಲಿರುವ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಇದು ಒಳಗೊಂಡಿದೆ, ಅದರ ಕೆಳಗೆ ಮುಖ್ಯ ಕ್ಸೆನಾನ್ ಎಚ್‌ಐಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಗಳಿವೆ.

ಟಾಟಾ ಸಫಾರಿ ತನ್ನ ಫಾಗ್ ಲ್ಯಾಂಪ್ ಗಳನ್ನು ಅದೇ ಹೌಸಿಂಗ್‌ನಲ್ಲಿ ಹೆಡ್‌ಲ್ಯಾಂಪ್ ಯುನಿಟ್ ಗಿಂತ ಸ್ವಲ್ಪ ಕೆಳಗೆ ಹೊಂದಿದೆ. ಮುಂಭಾಗದ ಬಂಪರ್‌ಗಳಲ್ಲಿ ಸಫಾರಿ ಕ್ಲಾಡಿಂಗ್ ಹೊಂದಿದ್ದು, ಇದು ಸೆಂಟ್ರಲ್ ಇನ್ ಟೆಕ್ ಅನ್ನು ಹೊಂದಿದೆ. ಜೊತೆಗೆ ಕೆಳಭಾಗದಲ್ಲಿ ಸಿಲ್ವರ್ ಫಿನಿಶಿಂಗ್ ಸ್ಕಿಡ್ ಪ್ಲೇಟ್ ಅನ್ನು ಹೊಂದಿರುತ್ತದೆ. ಹಿಂಭಾಗದ ಮಧ್ಯಭಾಗದಲ್ಲಿ ಎಲ್ಇಡಿ ಸ್ಟಾಪ್ ಲೈಟ್ ಹೊಂದಿರುವ ರೂಫ್-ಮೌಂಟಡ್ ಸ್ಪಾಯ್ಲರ್ ಹೊಂದಿದೆ.

ಆದರೆ ಬೂಟ್ ನಂಬರ್ ಪ್ಲೇಟ್ ಕೆಳಗೆ ಸಫಾರಿ' ಬ್ಯಾಡ್ಜಿಂಗ್ ಅನ್ನು ಪಡೆಯುತ್ತದೆ. ಇದರಲ್ಲಿ ಸಫಾರಿ ಟೆರೈನ್ ರೆಸ್ಪಾನ್ಸ್ ಸಿಸ್ಟಂನೊಂದಿಗೆ ಬರುತ್ತದೆ, ಮತ್ತೆ ಮಾರ್ಮಲ್, ರಫ್ ಮತ್ತು ವೆಟ್ ಎಂಬ ಮೋಡ್ ಗಳನ್ನು ಹೊಂದಿದೆ. ಇದು ಇದು ಎಲ್ಲಾ ರೀತಿಯ ಭೂಪ್ರದೇಶಗಳಲ್ಲಿ ಸುಲಭವಾಗಿ ಚಲಿಸಲು ನೆರವಾಗಲಿದೆ.

ಹೊಸ ಟಾಟಾ ಸಫಾರಿ ಎಸ್‍ಯುವಿಯಲ್ಲಿ 2.0-ಲೀಟರ್, ಟರ್ಬೋಚಾರ್ಜ್ಡ್, ಇನ್-ಲೈನ್ ನಾಲ್ಕು ಸಿಲಿಂಡರ್, ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 170 ಬಿಹೆಚ್‌ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಆರು ಸ್ಪೀಡ್ ಮ್ಯಾನುವಲ್ ಮತ್ತು ಆರು ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಗೇರ್‌ಬಾಕ್ಸ್ ಆಯ್ಕೆಗಳನ್ನು ಒಳಗೊಂಡಿದೆ.

ಇನ್ನು ಈ ಸಫಾರಿ ಎಸ್‍ಯುವಿಯಲ್ಲಿ 2741 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ. ಇನ್ನು ಈ ಎಸ್‍ಯುವಿಯಲ್ಲಿ ಪನೋರಮಿಕ್ ಸನ್ ರೂಫ್, ಸಿಗ್ನೇಚರ್ ಆಸ್ಟರ್ ವೈಟ್ ಇಂಟೀರಿಯರ್ಸ್ ಜೊತೆಗೆ ಆಶ್‌ವುಡ್ ಫಿನಿಶ್ ಡ್ಯಾಶ್‌ಬೋರ್ಡ್ ಮತ್ತು 8.8 ಇಂಚಿನ ಫ್ಲೋಟಿಂಗ್ ಐಲ್ಯಾಂಡ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ನೀಡುತ್ತದೆ.

ಹೊಸ ಎಸ್‍ಯುವಿಯ ಬೆಸ್ ರೂಪಾಂತರಗಳಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಇಎಸ್‌ಪಿ, ಹಿಲ್ ಹೋಲ್ಡ್ ಅಸಿಸ್ಟ್, ರೋಲ್ ಓವರ್ ಮಿಟಿಗೇಷನ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಟೆಲಿಸ್ಕೋಪಿಕ್ ಸ್ಟೀರಿಂಗ್ ವೀಲ್ಹ್ ಮತ್ತು ಪ್ರೋಜೆಕ್ಟರ್ ಹೆಡ್‌ಲ್ಯಾಂಪ್ ಹೊಂದಿದೆ.

ಮಿಡ್ ರೂಪಾಂತರಗಳಲ್ಲಿ ಬೇಸ್ ಮಾದರಿಯಲ್ಲಿನ ಕೆಲವು ಫೀಚರ್ಸ್‌ಗಳೊಂದಿಗೆ ಟೈರ್ ಪ್ರೆಷರ್ ಮಾನಿಟರ್, ಆಟೋ ಡಿಮ್ಮಿಂಗ್ ಇನ್‌ಸೈಡ್ ರಿಯರ್ ವ್ಯೂ ಮಿರರ್, 18-ಇಂಚಿನ ಅಲಾಯ್ ವೀಲ್ಹ್, ಆಟೋ ಕ್ಲೈಮೆಟ್ ಕಂಟ್ರೋಲ್, ಆಟೋ ಹೆಡ್‌ಲೈಟ್ಸ್ ಮತ್ತು ವೈಪರ್ಸ್, ಪವರ್ ಫೋಲ್ಡಿಂಗ್ ಮತ್ತು ಹೊಂದಾಣಿಕೆ ಮಾಡಬಹುದಾದ ವಿಂಗ್ ಮಿರರ್, ಕೀ ಲೆಸ್ ಎಂಟ್ರಿ, ಆ್ಯಂಬಿಯೆಂಟ್ ಮೋಡ್ ಮತ್ತು ಐರಾ ಕಾರ್ ಕನೆಕ್ಟ್ ಟೆಕ್ನಾಲಜಿ ಒಳಗೊಂಡಿದೆ, ಸಫಾರಿ ಎಸ್‍ಯುವಿಯು ಆಕರ್ಷಕ ಲುಕ್ ಜೊತೆ ವಿನೂತನ ಫೀಚರ್ಸ್ ಗಳನ್ನು ಒಳಗೊಂಡಿರುವುದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತಿದೆ.

ಇನ್ನು ಸಫಾರಿ ಎಸ್‍ಯುವಿಯ ಟಾಪ್ ಎಂಡ್ ರೂಪಾಂತರದಲ್ಲಿ ಎಕ್ಸ್‌ಜೆಡ್, ಎಕ್ಸ್‌ಜೆಡ್ ಪ್ಲಸ್ ರೂಪಾಂತಗಳು ಮತ್ತು ಆರಂಭಿಕ ರೂಪಾಂತರಗಳಲ್ಲಿರುವ ಹಲವು ಫೀಚರ್ಸ್‌ನೊಂದಿಗೆ ಪನೊರಮಿಕ್ ಸನ್‌ರೂಫ್, ಸೈಡ್ ಕರ್ಟೈನ್ ಏರ್‌ಬ್ಯಾಗ್, ಹಿಲ್ ಡಿಸೆಂಟ್ ಕಂಟ್ರೋಲ್, ಟೈರೈನ್ ರೆಸ್ಪಾನ್ಸ್ ಫೀಚರ್ಸ್ ಅನ್ನು ಹೊಂದಿದೆ. ಹೊಸ ಟಾಟಾ ಸಫಾರಿ ಎಸ್‍ಯುವಿಯು ಉತ್ತಮ ಕಾರ್ಯಕ್ಷಮತೆ, ದೃಡವಾದ ನಿರ್ಮಾಣ ಗುಣಮಟ್ಟ, ಅತ್ಯುತ್ತಮ ಸೌಕರ್ಯದೊಂದಿಗೆ ಆಧುನಿಕ ಫೀಚರ್ ಗಳನ್ನು ಹೊಂದಿರುವ ಎಸ್‍ಯುವಿಯಾಗಿದೆ. ಸಫಾರಿ ಎಸ್‍ಯುವಿಯು ಸ್ಟ್ಯಾಂಡರ್ಡ್ 2 ಡಬ್ಲ್ಯುಡಿ ಸಿಸ್ಟಂ ಅನ್ನು ಹೊಂದಿದೆ. ಆದರೆ 4ಡಬ್ಲ್ಯುಡಿ ಸಿಸ್ಟಂ ಅನ್ನು ನೀಡಲಾಗಿಲ್ಲ.


Click it and Unblock the Notifications