2021ರ ಐಪಿಎಲ್ ವೇಳೆ ಅನಾವರಣವಾಗಲಿದೆ Tata Safari Gold Edition

ಸ್ವದೇಶಿ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ 2021ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಅನಾವರಣಗೊಳ್ಳಲಿರುವ ಮುಂಬರುವ Safari Gold Edition( ಸಫಾರಿ ಗೋಲ್ಡ್ ಎಡಿಷನ್) ಮಾದರಿಯ ಆಕರ್ಷಕ ಟೀಸರ್ ವಿಡಿಯೋವನ್ನು ಬಿಡುಗಡೆ ಮಾಡಿದೆ.

2021ರ ಐಪಿಎಲ್ ವೇಳೆ ಅನಾವರಣವಾಗಲಿದೆ Tata Safari Gold Edition

ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 15 ರವರೆಗೆ ಯುಎಇಯಲ್ಲಿ ಎರಡನೇ ಹಂತದ ಐಪಿಎಲ್ ಅನ್ನು ಆಯೋಜಿಸಲಾಗಿದೆ. ಕೊರೋನಾ ಎರಡನೇ ಅಲೆಯ ಕಾರಣದಿಂದ ಐಪಿಎಲ್ ಅನ್ನು ಸ್ಥಗಿತಗೊಳಿಸಬೇಕಾಗಿತ್ತು. ಇದೀಗ ಮತ್ತೆ ಐಪಿಎಲ್ ಯುಎಇಯಲ್ಲಿ ಪುನರ್ ಆರಂಭವಾಗುತ್ತಿದೆ. ಈ ವೇಳೆ ಸಫಾರಿ ಗೋಲ್ಡ್ ಎಡಿಷನ್ ಅನ್ನು ಅನಾವರಣಗೊಳಿಸಲಾಗುತ್ತದೆ. ನಿಮಗೆ ತಿಳಿದಿರುವಂತೆ, ಟಾಟಾ ಮೋಟಾರ್ಸ್ 2021ರ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗೆ ಅಧಿಕೃತ ಪಾಲುದಾರರಾಗಿದ್ದಾರೆ. ಟೀಸರ್ ವೀಡಿಯೋ ಮುಂಬರುವ ಟಾಟಾ ಸಫಾರಿ ಗೋಲ್ಡ್ ಆವೃತ್ತಿಯ ವಿವರಗಳನ್ನು ಬಹಿರಂಗಪಡಿಸಿಲ್ಲ.

2021ರ ಐಪಿಎಲ್ ವೇಳೆ ಅನಾವರಣವಾಗಲಿದೆ Tata Safari Gold Edition

ಟೀಸರ್ ನಲ್ಲಿ "ಲೆಜೆಂಡ್ ವಿಲ್ ಟೇಕ್ ಓವರ್" ಶೀಘ್ರದಲ್ಲೇ ಬರಲಿದೆ "ವಿವೋ ಐಪಿಎಲ್ 2021 ಯುಎಇ " ಎಂದು ಬರೆಯಲಾಗಿದೆ. ಈ ಟಾಟಾ ಸಫಾರಿ ಗೋಲ್ಡ್ ಎಡಿಷನ್ ಅನ್ನು ಹೈಸ್ಟ್ರೀಟ್ ಗೋಲ್ಡ್ ಕಲರ್ ಸ್ಕೀಮ್‌ನಲ್ಲಿ ಚಿತ್ರಿಸುವ ಸಾಧ್ಯತೆ ಇದೆ, ಇದನ್ನು ನಾವು ಅಲ್ಟ್ರೋಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನಲ್ಲಿ ನೋಡಿದ್ದೇವೆ.

2021ರ ಐಪಿಎಲ್ ವೇಳೆ ಅನಾವರಣವಾಗಲಿದೆ Tata Safari Gold Edition

ಈ ಹೊಸ ಸಫಾರಿ ಗೋಲ್ಡ್ ಸ್ಪೆಷಲ್ ಎಡಿಷನ್ ನಲ್ಲಿ ಯಾವುದೇ ಇತರ ಅಪ್‌ಗ್ರೇಡ್‌ಗಳನ್ನು ಮಾಡುವ ಸಾಧ್ಯತೆಯಿಲ್ಲ. ಸ್ಟ್ಯಾಂಡರ್ಡ್ ಸಫಾರಿ ಎಸ್‍ಯುವಿಯ ರೀತಿಯ ಫೀಚರ್ಸ್ ಮತ್ತು ಎಂಜಿನ್ ಅನ್ನು ಒಳಗೊಂಡಿರುತ್ತದೆ. 2021ರ ಟಾಟಾ ಸಫಾರಿ ಬ್ರ್ಯಾಂಡ್‌ನ ಇತ್ತೀಚಿನ 'ಇಂಪ್ಯಾಕ್ಟ್ 2.0' ವಿನ್ಯಾಸ ಶೈಲಿಯನ್ನು ಒಳಗೊಂಡಿದೆ.

2021ರ ಐಪಿಎಲ್ ವೇಳೆ ಅನಾವರಣವಾಗಲಿದೆ Tata Safari Gold Edition

ಇನ್ನು ಈ ಎಸ್‍ಯುವಿಯು ಒಮೆಗಾ ಆರ್ಗಿಟೆಕ್ಚರ್ ನಿಂದ ಸಂಯೋಜಿಸುತ್ತದೆ. ಲ್ಯಾಂಡ್ ರೋವರ್‌ನ ಪ್ರಸಿದ್ಧ ಡಿ8 ಪ್ಲಾಟ್‌ಫಾರ್ಮ್‌ನಿಂದ ಹೊಸ ಸಫಾರಿ ಎಸ್‍ಯುವಿಯನ್ನು ಅಭಿವೃದ್ದಿ ಪಡಿಸಲಾಗಿದೆ. ಈ ಹೊಸ ಟಾಟಾ ಸಫಾರಿ ಎಸ್‍ಯುವಿಯು ಹ್ಯಾರಿಯರ್ ಮಾದರಿಗೆ ಹೋಲುವ ವಿನ್ಯಾಸವನ್ನು ಹೊಂದಿದೆ. ಈ ಎಸ್‍ಯುವಿಯ ಮುಂಭಾಗದಿಂದ ಸಿ-ಪಿಲ್ಲರ್ ವರೆಗೆ, Tata Safari ಮತ್ತು ಹ್ಯಾರಿಯರ್ ಎರಡೂ ಬಹುತೇಕ ಒಂದೇ ರೀತಿ ಇದೆ.

2021ರ ಐಪಿಎಲ್ ವೇಳೆ ಅನಾವರಣವಾಗಲಿದೆ Tata Safari Gold Edition

ಅವುಗಳ ನಡುವೆ ಇರುವ ಏಕೈಕ ಬದಲಾವಣೆಯೆಂದರೆ ಸಫಾರಿಗಳಲ್ಲಿ ಕಂಡುಬರುವ ಹೊಸ ಟ್ರೈ-ಏರೋ ಮೆಷ್ ಗ್ರಿಲ್ ಆಗಿದೆ. ಈ ಹೊಸ ಸಫಾರಿ ಎಸ್‌ಯುವಿ ಹ್ಯಾರಿಯರ್‌ನಂತೆಯೇ ಡ್ಯುಯಲ್ ಹೆಡ್‌ಲ್ಯಾಂಪ್ ಸೆಟಪ್ ಅನ್ನು ಹೊಂದಿದೆ. ಇದರೊಂದಿಗೆ ಇಂಟಿಗ್ರೇಟೆಡ್ ಟರ್ನ್ ಇಂಡೀಗೆಟರ್ ಗಳೊಂದಿಗೆ ಮೇಲಿರುವ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಇದು ಒಳಗೊಂಡಿದೆ, ಅದರ ಕೆಳಗೆ ಮುಖ್ಯ ಕ್ಸೆನಾನ್ ಎಚ್‌ಐಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಗಳಿವೆ.

2021ರ ಐಪಿಎಲ್ ವೇಳೆ ಅನಾವರಣವಾಗಲಿದೆ Tata Safari Gold Edition

ಈ ಎಸ್‍ಯುವಿ ಫಾಗ್ ಲ್ಯಾಂಪ್ ಗಳನ್ನು ಅದೇ ಹೌಸಿಂಗ್‌ನಲ್ಲಿ ಹೆಡ್‌ಲ್ಯಾಂಪ್ ಯುನಿಟ್ ಗಿಂತ ಸ್ವಲ್ಪ ಕೆಳಗೆ ಹೊಂದಿದೆ. ಮುಂಭಾಗದ ಬಂಪರ್‌ಗಳಲ್ಲಿ ಸಫಾರಿ ಕ್ಲಾಡಿಂಗ್ ಹೊಂದಿದ್ದು, ಇದು ಸೆಂಟ್ರಲ್ ಇನ್ ಟೆಕ್ ಅನ್ನು ಹೊಂದಿದೆ. ಜೊತೆಗೆ ಕೆಳಭಾಗದಲ್ಲಿ ಸಿಲ್ವರ್ ಫಿನಿಶಿಂಗ್ ಸ್ಕಿಡ್ ಪ್ಲೇಟ್ ಅನ್ನು ಹೊಂದಿರುತ್ತದೆ. ಹಿಂಭಾಗದ ಮಧ್ಯಭಾಗದಲ್ಲಿ ಎಲ್ಇಡಿ ಸ್ಟಾಪ್ ಲೈಟ್ ಹೊಂದಿರುವ ರೂಫ್-ಮೌಂಟಡ್ ಸ್ಪಾಯ್ಲರ್ ಹೊಂದಿದೆ.

2021ರ ಐಪಿಎಲ್ ವೇಳೆ ಅನಾವರಣವಾಗಲಿದೆ Tata Safari Gold Edition

ಆದರೆ ಬೂಟ್ ನಂಬರ್ ಪ್ಲೇಟ್ ಕೆಳಗೆ ಸಫಾರಿ' ಬ್ಯಾಡ್ಜಿಂಗ್ ಅನ್ನು ಪಡೆಯುತ್ತದೆ. ಇದರಲ್ಲಿ ಸಫಾರಿ ಟೆರೈನ್ ರೆಸ್ಪಾನ್ಸ್ ಸಿಸ್ಟಂನೊಂದಿಗೆ ಬರುತ್ತಿದೆ. ಇದರೊಂದಿಗೆ ಮಾರ್ಮಲ್, ರಫ್ ಮತ್ತು ವೆಟ್ ಎಂಬ ಮೋಡ್ ಗಳನ್ನು ಹೊಂದಿದೆ. ಇದು ಇದು ಎಲ್ಲಾ ರೀತಿಯ ಭೂಪ್ರದೇಶಗಳಲ್ಲಿ ಸುಲಭವಾಗಿ ಚಲಿಸಲು ನೆರವಾಗುತ್ತದೆ.

2021ರ ಐಪಿಎಲ್ ವೇಳೆ ಅನಾವರಣವಾಗಲಿದೆ Tata Safari Gold Edition

ಈ ಟಾಟಾ ಸಫಾರಿ ಎಸ್‍ಯುವಿಯಲ್ಲಿ 2.0-ಲೀಟರ್, ಟರ್ಬೋಚಾರ್ಜ್ಡ್, ಇನ್-ಲೈನ್ ನಾಲ್ಕು ಸಿಲಿಂಡರ್, ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 170 ಬಿಹೆಚ್‌ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಆರು ಸ್ಪೀಡ್ ಮ್ಯಾನುವಲ್ ಮತ್ತು ಆರು ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಗೇರ್‌ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದೆ.

2021ರ ಐಪಿಎಲ್ ವೇಳೆ ಅನಾವರಣವಾಗಲಿದೆ Tata Safari Gold Edition

ಇನ್ನು ಈ ಸಫಾರಿ ಎಸ್‍ಯುವಿಯಲ್ಲಿ 2741 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ. ಇನ್ನು ಈ ಎಸ್‍ಯುವಿಯಲ್ಲಿ ಪನೋರಮಿಕ್ ಸನ್ ರೂಫ್, ಸಿಗ್ನೇಚರ್ ಆಸ್ಟರ್ ವೈಟ್ ಇಂಟೀರಿಯರ್ಸ್ ಜೊತೆಗೆ ಆಶ್‌ವುಡ್ ಫಿನಿಶ್ ಡ್ಯಾಶ್‌ಬೋರ್ಡ್ ಮತ್ತು 8.8 ಇಂಚಿನ ಫ್ಲೋಟಿಂಗ್ ಐಲ್ಯಾಂಡ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ನೀಡುತ್ತದೆ.

2021ರ ಐಪಿಎಲ್ ವೇಳೆ ಅನಾವರಣವಾಗಲಿದೆ Tata Safari Gold Edition

ಹೊಸ ಎಸ್‍ಯುವಿಯ ಬೆಸ್ ರೂಪಾಂತರಗಳಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಇಎಸ್‌ಪಿ, ಹಿಲ್ ಹೋಲ್ಡ್ ಅಸಿಸ್ಟ್, ರೋಲ್ ಓವರ್ ಮಿಟಿಗೇಷನ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಟೆಲಿಸ್ಕೋಪಿಕ್ ಸ್ಟೀರಿಂಗ್ ವೀಲ್ಹ್ ಮತ್ತು ಪ್ರೋಜೆಕ್ಟರ್ ಹೆಡ್‌ಲ್ಯಾಂಪ್ ಹೊಂದಿದೆ.

2021ರ ಐಪಿಎಲ್ ವೇಳೆ ಅನಾವರಣವಾಗಲಿದೆ Tata Safari Gold Edition

ಮಿಡ್ ರೂಪಾಂತರಗಳಲ್ಲಿ ಬೇಸ್ ಮಾದರಿಯಲ್ಲಿನ ಕೆಲವು ಫೀಚರ್ಸ್‌ಗಳೊಂದಿಗೆ ಟೈರ್ ಪ್ರೆಷರ್ ಮಾನಿಟರ್, ಆಟೋ ಡಿಮ್ಮಿಂಗ್ ಇನ್‌ಸೈಡ್ ರಿಯರ್ ವ್ಯೂ ಮಿರರ್, 18-ಇಂಚಿನ ಅಲಾಯ್ ವೀಲ್ಹ್, ಆಟೋ ಕ್ಲೈಮೆಟ್ ಕಂಟ್ರೋಲ್, ಆಟೋ ಹೆಡ್‌ಲೈಟ್ಸ್ ಮತ್ತು ವೈಪರ್ಸ್, ಪವರ್ ಫೋಲ್ಡಿಂಗ್ ಮತ್ತು ಹೊಂದಾಣಿಕೆ ಮಾಡಬಹುದಾದ ವಿಂಗ್ ಮಿರರ್, ಕೀ ಲೆಸ್ ಎಂಟ್ರಿ, ಆ್ಯಂಬಿಯೆಂಟ್ ಮೋಡ್ ಮತ್ತು ಐರಾ ಕಾರ್ ಕನೆಕ್ಟ್ ಟೆಕ್ನಾಲಜಿ ಒಳಗೊಂಡಿದೆ.

2021ರ ಐಪಿಎಲ್ ವೇಳೆ ಅನಾವರಣವಾಗಲಿದೆ Tata Safari Gold Edition

ಇನ್ನು ಸಫಾರಿ ಎಸ್‍ಯುವಿಯ ಟಾಪ್ ಎಂಡ್‌ ರೂಪಾಂತರದಲ್ಲಿ ಎಕ್ಸ್‌ಜೆಡ್, ಎಕ್ಸ್‌ಜೆಡ್ ಪ್ಲಸ್ ರೂಪಾಂತಗಳು ಮತ್ತು ಆರಂಭಿಕ ರೂಪಾಂತರಗಳಲ್ಲಿರುವ ಹಲವು ಫೀಚರ್ಸ್‌ನೊಂದಿಗೆ ಪನೊರಮಿಕ್ ಸನ್‌ರೂಫ್, ಸೈಡ್ ಕರ್ಟೈನ್ ಏರ್‌ಬ್ಯಾಗ್, ಹಿಲ್ ಡಿಸೆಂಟ್ ಕಂಟ್ರೋಲ್, ಟೈರೈನ್ ರೆಸ್ಪಾನ್ಸ್ ಫೀಚರ್ಸ್ ಅನ್ನು ಹೊಂದಿದೆ. 2021ರ ಟಾಟಾ ಸಫಾರಿ ಎಸ್‍ಯುವಿಯು ಉತ್ತಮ ಕಾರ್ಯಕ್ಷಮತೆ, ದೃಡವಾದ ನಿರ್ಮಾಣ ಗುಣಮಟ್ಟ, ಅತ್ಯುತ್ತಮ ಸೌಕರ್ಯದೊಂದಿಗೆ ಆಧುನಿಕ ಫೀಚರ್ ಗಳನ್ನು ಹೊಂದಿರುವ ಎಸ್‍ಯುವಿಯಾಗಿದೆ. Safari ಎಸ್‍ಯುವಿಯು ಸ್ಟ್ಯಾಂಡರ್ಡ್ 2 ಡಬ್ಲ್ಯುಡಿ ಸಿಸ್ಟಂ ಅನ್ನು ಹೊಂದಿದೆ.

Article Published On: Wednesday, September 15, 2021, 12:48 [IST]
English summary
Tata motors teased upcoming safari gold edition launch soon details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+