2022ರ ಮಾದರಿಯಲ್ಲಿ ಆಟೋಮ್ಯಾಟಿಕ್ ವರ್ಷನ್ ಪಡೆದುಕೊಳ್ಳಲಿದೆ ಟಾಟಾ ಆಲ್‌ಟ್ರೊಜ್

ಟಾಟಾ ಮೋಟಾರ್ಸ್ ಕಂಪನಿಯು ಆಲ್‌ಟ್ರೊಜ್ ಕಾರು ಮಾದರಿಯ ಮೂಲಕ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾರಾಟದಲ್ಲಿ ಮುಂಚೂಣಿ ಸಾಧಿಸಿದ್ದು, ಕಂಪನಿಯು ಶೀಘ್ರದಲ್ಲೇ ಆಲ್‌ಟ್ರೊಜ್ ಮಾದರಿಯಲ್ಲಿ ಆಟೋಮ್ಯಾಟಿಕ್ ಆವೃತ್ತಿಯನ್ನು ಬಿಡುಗಡೆ ಮಾಡುವ ಯೋಜನೆ ರೂಪಿಸಿದೆ.

2022ರ ಮಾದರಿಯಲ್ಲಿ ಆಟೋಮ್ಯಾಟಿಕ್ ವರ್ಷನ್ ಪಡೆದುಕೊಳ್ಳಲಿದೆ ಟಾಟಾ ಆಲ್‌ಟ್ರೊಜ್

ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾದರಿಗಳ ಮಾರಾಟದಲ್ಲಿ ಸದ್ಯ ಮುಂಚೂಣಿ ಸಾಧಿಸುತ್ತಿರುವ ಟಾಟಾ ಆಲ್‌ಟ್ರೊಜ್ ಆವೃತ್ತಿಯು ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ಹಲವು ಹೊಸ ದಾಖಲೆಗೆ ಕಾರಣವಾಗಿದ್ದು, ಹೊಸ ಕಾರಿನಲ್ಲಿ ಗ್ರಾಹಕರ ಬೇಡಿಕೆಯೆಂತೆ 2022ರ ಆವೃತ್ತಿಯಲ್ಲಿ ಉನ್ನತ ಮಾದರಿಯೊಂದನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

2022ರ ಮಾದರಿಯಲ್ಲಿ ಆಟೋಮ್ಯಾಟಿಕ್ ವರ್ಷನ್ ಪಡೆದುಕೊಳ್ಳಲಿದೆ ಟಾಟಾ ಆಲ್‌ಟ್ರೊಜ್

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಪ್ರಮುಖ ಕಾರು ಮಾದಿರಗಳಲ್ಲಿ ಗ್ರಾಹಕರ ಬೇಡಿಕೆಯೆಂತೆ ಎರಡು ತಿಂಗಳಿಗೆ ಒಂದು ಬಾರಿಗೆ ವೆರಿಯೆಂಟ್‌ಗಳ ಉನ್ನತೀಕರಣ ಮತ್ತು ಹೊಸ ವೆರಿಯೆಂಟ್ ಅಭಿವೃದ್ದಿಗೊಳಿಸುವ ಪ್ರಕ್ರಿಯೆ ಕೈಗೊಂಡಿದ್ದು, ಇದೀಗ ಆಲ್‌ಟ್ರೊಜ್ ಮಾದರಿಯಲ್ಲಿ ಆಟೋಮ್ಯಾಟಿಕ್ ಆವೃತ್ತಿಯ ಮಾರಾಟಕ್ಕೆ ಸಿದ್ದವಾಗಿದೆ.

2022ರ ಮಾದರಿಯಲ್ಲಿ ಆಟೋಮ್ಯಾಟಿಕ್ ವರ್ಷನ್ ಪಡೆದುಕೊಳ್ಳಲಿದೆ ಟಾಟಾ ಆಲ್‌ಟ್ರೊಜ್

ಆಲ್‌ಟ್ರೊಜ್ ಕಾರು ಮಾದರಿಯು ಹೊಸದಾಗಿ ಸದ್ಯ ಬಿಡುಗಡೆ ಮಾಡಲಾದ ಎಕ್ಸ್‌ಇ ಪ್ಲಸ್ ಜೊತೆಗೆ ಎಕ್ಸ್‌ಇ, ಎಕ್ಸ್ಎಂ ಪ್ಲಸ್, ಎಕ್ಸ್‌ಟಿ, ಎಕ್ಸ್‌ಜೆಡ್, ಎಕ್ಸ್‌ಜೆಡ್ ಆಪ್ಷನ್ ಮತ್ತು ಎಕ್ಸ್‌ಜೆಡ್ ಅರ್ಬನ್ ವೆರಿಯೆಂಟ್‌‌ಗಳೊಂದಿಗೆ ಮಾರಾಟಗೊಳ್ಳುತ್ತಿದೆ.

2022ರ ಮಾದರಿಯಲ್ಲಿ ಆಟೋಮ್ಯಾಟಿಕ್ ವರ್ಷನ್ ಪಡೆದುಕೊಳ್ಳಲಿದೆ ಟಾಟಾ ಆಲ್‌ಟ್ರೊಜ್

ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಎಲ್ಲಾ ರೂಪಾಂತರಗಳು 1.2 ಲೀಟರ್ ರೆವೊಟ್ರಾನ್ ಪೆಟ್ರೋಲ್ ಮತ್ತು 1.5 ಲೀಟರ್ ಟರ್ಬೊ ಚಾರ್ಜ್ಡ್ ರೆವೊಟಾರ್ಕ್ ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದ್ದು, ಸದ್ಯಕ್ಕೆ ಆಲ್‌ಟ್ರೊಜ್ ಕಾರಿನಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ಮಾತ್ರವೇ ನೀಡಲಾಗುತ್ತಿದೆ.

2022ರ ಮಾದರಿಯಲ್ಲಿ ಆಟೋಮ್ಯಾಟಿಕ್ ವರ್ಷನ್ ಪಡೆದುಕೊಳ್ಳಲಿದೆ ಟಾಟಾ ಆಲ್‌ಟ್ರೊಜ್

ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 1.2-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು 86-ಬಿಎಚ್‌ಪಿ, 113-ಎನ್ಎಂ ಟಾರ್ಕ್ ಮತ್ತು 1.5-ಲೀಟರ್ ಡೀಸೆಲ್ ಆವೃತ್ತಿಯು 90-ಬಿಎಚ್‌ಪಿ, 200-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿದ್ದು, ಬಿಡುಗಡೆಯಾಗಲಿರುವ 5-ಸ್ಪೀಡ್ ಆಟೋಮ್ಯಾಟಿಕ್ ಆವೃತ್ತಿಯನ್ನು ಪಂಚ್ ಮಾದರಿಯೊಂದಿಗೆ ಹಂಚಿಕೊಳ್ಳಲಿದೆ.

2022ರ ಮಾದರಿಯಲ್ಲಿ ಆಟೋಮ್ಯಾಟಿಕ್ ವರ್ಷನ್ ಪಡೆದುಕೊಳ್ಳಲಿದೆ ಟಾಟಾ ಆಲ್‌ಟ್ರೊಜ್

ಆಲ್‌ಟ್ರೊಜ್ ಮಾದರಿಯಲ್ಲಿ ಟಾಟಾ ಕಂಪನಿಯು ಕಳೆದ ಒಂದು ವರ್ಷದಲ್ಲಿ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸಿದ್ದು, ಹೊಸ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.89 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9.64 ಲಕ್ಷ ಬೆಲೆ ಹೊಂದಿದೆ.

2022ರ ಮಾದರಿಯಲ್ಲಿ ಆಟೋಮ್ಯಾಟಿಕ್ ವರ್ಷನ್ ಪಡೆದುಕೊಳ್ಳಲಿದೆ ಟಾಟಾ ಆಲ್‌ಟ್ರೊಜ್

ಐ-ಟರ್ಬೊ ಮಾದರಿಯು ಸಿಟಿ ಮತ್ತು ಸ್ಟೋರ್ಟ್ ಡ್ರೈವಿಂಗ್ ಮೋಡ್‌ಗಳನ್ನು ನೀಡಲಾಗಿದ್ದು, ಸದ್ಯಕ್ಕೆ ಹೊಸ ಮಾದರಿಯಲ್ಲಿ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ನೀಡಿರುವ ಕಂಪನಿಯು ಶೀಘ್ರದಲ್ಲೇ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಸಹ ನೀಡಲಿದೆಯೆಂತೆ.

2022ರ ಮಾದರಿಯಲ್ಲಿ ಆಟೋಮ್ಯಾಟಿಕ್ ವರ್ಷನ್ ಪಡೆದುಕೊಳ್ಳಲಿದೆ ಟಾಟಾ ಆಲ್‌ಟ್ರೊಜ್

ಟಾಟಾ ಮೋಟಾರ್ಸ್ ಕಂಪನಿಯು ಆಲ್‌ಟ್ರೊಜ್ ಕಾರಿನ ಟರ್ಬೊ ಮಾದರಿಗಳಲ್ಲಿ ಮತ್ತು ಸಾಮಾನ್ಯ ಪೆಟ್ರೋಲ್ ಮಾದರಿಯ ಹೈ ಎಂಡ್ ವೆರಿಯೆಂಟ್‌ಗಳಲ್ಲಿ ಕನೆಕ್ಟೆಡ್ ಟೆಕ್ನಾಲಜಿ ಬಳಕೆ ಮಾಡಿದ್ದು, ಹೊಸ ತಂತ್ರಜ್ಞಾನವು ಕಾರಿಗೆ ಗರಿಷ್ಠ ಭದ್ರತೆ ನೀಡುತ್ತದೆ.

2022ರ ಮಾದರಿಯಲ್ಲಿ ಆಟೋಮ್ಯಾಟಿಕ್ ವರ್ಷನ್ ಪಡೆದುಕೊಳ್ಳಲಿದೆ ಟಾಟಾ ಆಲ್‌ಟ್ರೊಜ್

ಹಾಗೆಯೇ ಹೊಸ ಕಾರುಗಳಲ್ಲಿ ಪ್ರತಿ ಎರಡು ತಿಂಗಳಿಗೆ ಒಂದು ಬಾರಿ ಉನ್ನತೀಕರಣದೊಂದಿಗೆ ಮುಂಚೂಣಿ ಸಾಧಿಸುತ್ತಿದ್ದು, ಆಲ್‌ಟ್ರೊಜ್ ಎಕ್ಸ್ಇ ಪ್ಲಸ್ ಮಾದರಿಯು ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 6.34 ಲಕ್ಷದಿಂದ ರೂ. 7.54 ಲಕ್ಷ ಬೆಲೆ ಹೊಂದಿದೆ.

2022ರ ಮಾದರಿಯಲ್ಲಿ ಆಟೋಮ್ಯಾಟಿಕ್ ವರ್ಷನ್ ಪಡೆದುಕೊಳ್ಳಲಿದೆ ಟಾಟಾ ಆಲ್‌ಟ್ರೊಜ್

ಹೊಸ ಕಾರು ಎಕ್ಸ್ಇ ಪ್ಲಸ್ ಮಾದರಿಯಲ್ಲಿ ಫ್ಲಿಪ್ ಕೀ, ಲಾಕ್, ಅನ್‌ಲಾಕ್, ಫಾಲೋ ಮಿ ಹೆಡ್‌ಲ್ಯಾಂಪ್, ಎಲೆಕ್ಟ್ರಿಕ್ ಮೂಲಕ ಮಡಿಕೆ ಮಾಡಬಹುದಾದ ರಿಯರ್ ವ್ಯೂ ಮಿರರ್, ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಹರ್ಮನ್ ಸೌಂಡ್ ಸಿಸ್ಟಂ, ಯುಎಸ್‌ಬಿ ಫೋರ್ಟ್ ಈ ವೆರಿಯೆಂಟ್‌‌ನ ಪ್ರಮುಖ ಗುಣಲಕ್ಷಣವಾಗಿದೆ.

2022ರ ಮಾದರಿಯಲ್ಲಿ ಆಟೋಮ್ಯಾಟಿಕ್ ವರ್ಷನ್ ಪಡೆದುಕೊಳ್ಳಲಿದೆ ಟಾಟಾ ಆಲ್‌ಟ್ರೊಜ್

ಈ ಹಿಂದಿನ ಎಕ್ಸ್ಎಂ ರೂಪಾಂತರದ ನಡುವೆ ಗಮನಾರ್ಹ ಬೆಲೆಯ ಅಂತರವಿದ್ದ ಕಾರಣ ಟಾಟಾ ಮೋಟಾರ್ಸ್ ಕಂಪನಿಯು ಹೊಸ ಹೆಚ್ಚು ಕೈಗೆಟುಕುವ ಬೆಲೆಯ ಎಕ್ಸ್ಇ ಪ್ಲಸ್ ಆವೃತ್ತಿಯನ್ನು ಪರಿಚಯಿಸಿದೆ. ಹೊಸ ಮಾದರಿಯನ್ನು ಹೆಚ್ಚು ಕೈಗೆಟುಕುವಂತೆ ಮಾಡಲು ಖರೀದಿ ನಿರ್ಧಾರಗಳ ಮೇಲೆ ಪರಿಣಾಮ ಬೀರದ ಕೆಲವು ವೈಶಿಷ್ಟ್ಯಗಳನ್ನು ತೆಗೆದುಹಾಕಲಾಗಿದ್ದು, ಪ್ರಮುಖ ಪ್ರೀಮಿಯಂ ಫೀಚರ್ಸ್‌ಗಳನ್ನು ಕೈಬಿಡಲಾಗಿದೆ.

2022ರ ಮಾದರಿಯಲ್ಲಿ ಆಟೋಮ್ಯಾಟಿಕ್ ವರ್ಷನ್ ಪಡೆದುಕೊಳ್ಳಲಿದೆ ಟಾಟಾ ಆಲ್‌ಟ್ರೊಜ್

ಆಲ್‌ಟ್ರೊಜ್ ಬೇಸ್ ಮಾದರಿಯಾದ ಎಕ್ಸ್ಇ ರೂಪಾಂತರಕ್ಕೆ ಹೋಲಿಸಿದರೆ ಹೊಸ ಆವೃತ್ತಿಯಲ್ಲಿ 4 ಸ್ಪೀಕರ್‌ಗಳು, ಬ್ಲೂಟೂತ್ ಸಂಪರ್ಕ, ಎಫ್ಎಂ/ ಎಎಂ ರೇಡಿಯೋ, ಯುಎಸ್‌ಬಿ ಪೋರ್ಟ್ ಮತ್ತು ಸ್ಪೀಡ್ ಯುಎಸ್‌ಬಿ ಚಾರ್ಜರ್‌ನೊಂದಿಗೆ ಬರುತ್ತದೆ. ಹೊಸ ಮಾದರಿಯಲ್ಲಿ ಬೇಸ್ ರೂಪಾಂತರದಲ್ಲಿರುವಂತೆಯೇ ಕೆಲವು ಹೆಚ್ಚುವರಿ ತಾಂತ್ರಿಕ ಸೌಲಭ್ಯಗಳನ್ನು ನೀಡಲಾಗಿದ್ದು, ಹೊಸ ಮಾದರಿಯ ಆಗಮನದ ಜೊತೆಗೆ ಟಾಟಾ ಮೋಟಾರ್ಸ್ ಆಲ್‌ಟ್ರೊಜ್ ಬೆಲೆ ಹೆಚ್ಚಿಸಿದೆ.

Article Published On: Wednesday, December 29, 2021, 22:02 [IST]
English summary
Tata motors to launch 2022 altroz with automatic variant soon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+