ಐಒಸಿಎಲ್'ಗೆ 15 ಹೈಡ್ರೋಜನ್ ಬಸ್‌ಗಳನ್ನು ಪೂರೈಸಲಿದೆ ಟಾಟಾ ಮೋಟಾರ್ಸ್

ಹೈಡ್ರೋಜನ್ ಇಂಧನ ಕೋಶ ವಾಹನಗಳು ಪರಿಸರ ಸ್ನೇಹಿ ಹಾಗೂ ಮಾಲಿನ್ಯರಹಿತ ವಾಹನಗಳಲ್ಲಿ ಒಂದಾಗಿದೆ. ಈ ಕಾರಣಕ್ಕೆ ಹೈಡ್ರೋಜನ್ ಇಂಧನ ಕೋಶ ಚಾಲಿತ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳ ಜೊತೆಗೆ ಪರಿಸರ ಸ್ನೇಹಿ ವಾಹನಗಳೆಂದು ಪರಿಗಣಿಸಲಾಗುತ್ತದೆ.

ಐಒಸಿಎಲ್'ಗೆ 15 ಹೈಡ್ರೋಜನ್ ಬಸ್‌ಗಳನ್ನು ಪೂರೈಸಲಿದೆ ಟಾಟಾ ಮೋಟಾರ್ಸ್

ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಟಾಟಾ ಮೋಟಾರ್ಸ್‌ಗೆ 15 ಹೈಡ್ರೋಜನ್ ಇಂಧನ ಕೋಶ ಬಸ್‌ಗಳನ್ನು ತಯಾರಿ ಪೂರೈಸಲು ಆರ್ಡರ್ ನೀಡಿದೆ. ಇದಕ್ಕೆ ಸಂಬಂಧಿಸಿದ ಟೆಂಡರ್ ಅನ್ನು ಟಾಟಾ ಮೋಟಾರ್ಸ್ ಟೆಂಡರ್ ಗೆದ್ದಿದೆ ಎಂದು ಐ‌ಒಸಿ‌ಎಲ್ ತಿಳಿಸಿದೆ.

ಐಒಸಿಎಲ್'ಗೆ 15 ಹೈಡ್ರೋಜನ್ ಬಸ್‌ಗಳನ್ನು ಪೂರೈಸಲಿದೆ ಟಾಟಾ ಮೋಟಾರ್ಸ್

ಐಒಸಿಎಲ್ 2020ರ ಡಿಸೆಂಬರ್‌ನಲ್ಲಿ ಟೆಂಡರ್‌ಗಳನ್ನು ಕರೆದಿತ್ತು. ಈ ಟೆಂಡರ್ ನಲ್ಲಿ ಟಾಟಾ ಮೋಟಾರ್ಸ್ ಸೇರಿದಂತೆ ದೇಶದ ಪ್ರಮುಖ ಕಂಪನಿಗಳು ಭಾಗವಹಿಸಿದ್ದವು. ಕೊನೆಗೆ ಟಾಟಾ ಮೋಟಾರ್ಸ್ ಹರಾಜಿನಲ್ಲಿ ಗೆದ್ದಿದೆ.

ಐಒಸಿಎಲ್'ಗೆ 15 ಹೈಡ್ರೋಜನ್ ಬಸ್‌ಗಳನ್ನು ಪೂರೈಸಲಿದೆ ಟಾಟಾ ಮೋಟಾರ್ಸ್

ಈ ಹಿನ್ನೆಲೆಯಲ್ಲಿ ಟಾಟಾ ಮೋಟಾರ್ಸ್‌ಗೆ ಆರ್ಡರ್ ನೀಡಲಾಗಿದೆ. ಎಲ್ಲಾ 15 ಹೈಡ್ರೋಜನ್ ಇಂಧನ-ಚಾಲಿತ ಬಸ್ಸುಗಳನ್ನು 144 ವಾರಗಳಲ್ಲಿ ತಲುಪಿಸಬೇಕು ಎಂದು ಐಒಸಿಎಲ್ ತಿಳಿಸಿದೆ. ಟಾಟಾ ಮೋಟಾರ್ಸ್ ಕೆಲವೇ ತಿಂಗಳುಗಳಲ್ಲಿ ಈ ಎಲ್ಲಾ ಬಸ್ಸುಗಳನ್ನು ತಲುಪಿಸುವ ನಿರೀಕ್ಷೆಗಳಿವೆ.

ಐಒಸಿಎಲ್'ಗೆ 15 ಹೈಡ್ರೋಜನ್ ಬಸ್‌ಗಳನ್ನು ಪೂರೈಸಲಿದೆ ಟಾಟಾ ಮೋಟಾರ್ಸ್

ಐಒಸಿಎಲ್‌ನ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರದ ಸಹಯೋಗದೊಂದಿಗೆ ಭವಿಷ್ಯದಲ್ಲಿ ಇಂಧನ ಕೋಶ ವಾಹನಗಳು ಹಾಗೂ ತಂತ್ರಜ್ಞಾನಗಳ ಕುರಿತು ಸಂಶೋಧನೆ ಮುಂದುವರಿಸುವುದಾಗಿ ಟಾಟಾ ಮೋಟಾರ್ಸ್ ತಿಳಿಸಿದೆ.

ಐಒಸಿಎಲ್'ಗೆ 15 ಹೈಡ್ರೋಜನ್ ಬಸ್‌ಗಳನ್ನು ಪೂರೈಸಲಿದೆ ಟಾಟಾ ಮೋಟಾರ್ಸ್

ಈಗ ಪೂರೈಸಲಿರುವ ಎಲ್ಲಾ ಹೈಡ್ರೋಜನ್ ಇಂಧನ ಕೋಶ ಬಸ್‌ಗಳ ನಿರ್ವಹಣೆ ಹಾಗೂ ಕಾರ್ಯಾಚರಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಾಗಿ ಟಾಟಾ ಮೋಟಾರ್ಸ್ ಹೇಳಿದೆ.

ಐಒಸಿಎಲ್'ಗೆ 15 ಹೈಡ್ರೋಜನ್ ಬಸ್‌ಗಳನ್ನು ಪೂರೈಸಲಿದೆ ಟಾಟಾ ಮೋಟಾರ್ಸ್

ಈ ಕುರಿತು ಪ್ರತಿಕ್ರಿಯೆ ನೀಡಿರುವ ಟಾಟಾ ಮೋಟಾರ್ಸ್ ವಾಣಿಜ್ಯ ವಾಹನ ಅಧಿಕಾರಿ ಕ್ರಿಸ್ ವಾ, ಟಾಟಾ ಮೋಟಾರ್ಸ್ ಇದುವರೆಗೆ ಫೇಮ್ 1 ಯೋಜನೆಯಡಿ 215 ಎಲೆಕ್ಟ್ರಿಕ್ ಬಸ್ಸುಗಳನ್ನು ತಲುಪಿಸಿದೆ. ಫೇಮ್ 2 ಯೋಜನೆಯಡಿ 600 ಎಲೆಕ್ಟ್ರಿಕ್ ಬಸ್ಸುಗಳನ್ನು ತಲುಪಿಸಲು ಕಂಪನಿಗೆ ಅವಕಾಶವಿದೆ ಎಂದು ಹೇಳಿದರು.

ಐಒಸಿಎಲ್'ಗೆ 15 ಹೈಡ್ರೋಜನ್ ಬಸ್‌ಗಳನ್ನು ಪೂರೈಸಲಿದೆ ಟಾಟಾ ಮೋಟಾರ್ಸ್

ಹೈಡ್ರೋಜನ್ ಇಂಧನ ಕೋಶ ವಾಹನಗಳು ಆವಿಗಳನ್ನು ಮಾತ್ರ ಮಾಲಿನ್ಯಕಾರಕಗಳಾಗಿ ಹೊರಸೂಸುತ್ತವೆ. ಇದು ಹೈಡ್ರೋಜನ್ ಇಂಧನ ಕೋಶವನ್ನು ವಿದ್ಯುಚ್ಛಕ್ತಿಯಾಗಿ ಪರಿವರ್ತಿಸಿ ಅದರ ಮೂಲಕ ಚಲಿಸಬಹುದು.

ಐಒಸಿಎಲ್'ಗೆ 15 ಹೈಡ್ರೋಜನ್ ಬಸ್‌ಗಳನ್ನು ಪೂರೈಸಲಿದೆ ಟಾಟಾ ಮೋಟಾರ್ಸ್

ಆದರೆ ಇಂಧನ ಕೋಶ ವಾಹನ ಎಲೆಕ್ಟ್ರಿಕ್ ವಾಹನಕ್ಕಿಂತ ಉತ್ತಮ ವಾಹನವಾಗಿದೆ. ಎಲೆಕ್ಟ್ರಿಕ್ ವಾಹನವನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಆರರಿಂದ ಎಂಟು ಗಂಟೆ ಬೇಕಾಗುತ್ತದೆ ಎಂಬುದು ಇದಕ್ಕೆ ಕಾರಣ. ಸಾಮಾನ್ಯ ಚಾರ್ಜಿಂಗ್ ಕೇಂದ್ರಗಳಲ್ಲಿ ಚಾರ್ಜ್ ಮಾಡುವಾಗ ಇಷ್ಟು ಸಮಯ ಬೇಕಾಗುತ್ತದೆ.

ಐಒಸಿಎಲ್'ಗೆ 15 ಹೈಡ್ರೋಜನ್ ಬಸ್‌ಗಳನ್ನು ಪೂರೈಸಲಿದೆ ಟಾಟಾ ಮೋಟಾರ್ಸ್

ಆದರೆ ಸಾಂಪ್ರದಾಯಿಕ ಇಂಧನ ವಾಹನಗಳಲ್ಲಿ ಇಂಧನವನ್ನು ಕೆಲವೇ ಕ್ಷಣಗಳಲ್ಲಿ ಇಂಧನ ತುಂಬಿಸಬಹುದು. ಅಗತ್ಯವಿರುವಷ್ಟು ಹೈಡ್ರೋಜನ್ ಅನ್ನು ಕೆಲವೇ ಕ್ಷಣಗಳಲ್ಲಿ ತುಂಬಬಹುದು.

ಐಒಸಿಎಲ್'ಗೆ 15 ಹೈಡ್ರೋಜನ್ ಬಸ್‌ಗಳನ್ನು ಪೂರೈಸಲಿದೆ ಟಾಟಾ ಮೋಟಾರ್ಸ್

ಹೈಡ್ರೋಜನ್ ಇಂಧನ ಕೋಶ ವಾಹನಗಳು ಹೆಚ್ಚು ದೂರ ತಲುಪುವ ಸಾಮರ್ಥ್ಯವನ್ನು ಹೊಂದಿವೆ. ಟೊಯೊಟಾದ ಮಿರೈ ಪೂರ್ತಿಯಾಗಿ ಇಂಧನ ತುಂಬಿದ ನಂತರ ಸಾವಿರ ಕಿ.ಮೀಗಳವರೆಗೆ ಸಂಚರಿಸುತ್ತದೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Tata Motors to supply 15 Hydrogen fuel cell powered buses for IOCL. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X