ಆಲ್‌ಟ್ರೊಜ್ ಕಾರಿನ ಎಕ್ಸ್ಇ ಮತ್ತು ಎಕ್ಸ್ಎಂ ಪ್ಲಸ್ ವೆರಿಯೆಂಟ್ ಉನ್ನತೀಕರಿಸಿದ ಟಾಟಾ ಮೋಟಾರ್ಸ್

ಟಾಟಾ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾದರಿಯಾದ ಆಲ್‌ಟ್ರೊಜ್‌ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಹಲವಾರು ಹೊಸ ಬದಲಾವಣೆಗಳನ್ನು ಪಡೆದುಕೊಳ್ಳುತ್ತಿದ್ದು, ಎಕ್ಸ್ಇ ಮತ್ತು ಎಕ್ಸ್ಎಂ ಪ್ಲಸ್ ಹೊಸ ವೆರಿಯೆಂಟ್‌ಗಳು ಇದೀಗ ಮತ್ತಷ್ಟು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿವೆ.

ಆಲ್‌ಟ್ರೊಜ್ ಕಾರಿನ ಎಕ್ಸ್ಇ ಮತ್ತು ಎಕ್ಸ್ಎಂ ಪ್ಲಸ್ ವೆರಿಯೆಂಟ್ ಉನ್ನತೀಕರಿಸಿದ ಟಾಟಾ ಮೋಟಾರ್ಸ್

ಆಲ್‌ಟ್ರೊಜ್ ಕಾರು ಮಾದರಿಯು ಸದ್ಯ ಪ್ರತಿಸ್ಪರ್ಧಿ ಮಾದರಿಗಳಿಂತಲೂ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಕಂಪನಿಯು ಕೆಲವು ಪ್ರಮುಖ ಬದಲಾವಣೆಗಳನ್ನು ಪರಿಚಯಿಸಿದೆ. ಹೊಸ ಕಾರುಗಳಲ್ಲಿ ಪ್ರತಿ ಎರಡು ತಿಂಗಳಿಗೆ ಒಂದು ಬಾರಿ ಉನ್ನತೀಕರಿಸುವುದಾಗಿ ಹೇಳಿಕೊಂಡಿರುವ ಟಾಟಾ ಮೋಟಾರ್ಸ್ ಕಂಪನಿಯು ಹೊಸ ಬದಲಾವಣೆಗಳೊಂದಿಗೆ ಗ್ರಾಹಕರ ಬೇಡಿಕೆಯಲ್ಲಿ ಮುಂಚೂಣಿ ಸಾಧಿಸುತ್ತಿದೆ.

ಆಲ್‌ಟ್ರೊಜ್ ಕಾರಿನ ಎಕ್ಸ್ಇ ಮತ್ತು ಎಕ್ಸ್ಎಂ ಪ್ಲಸ್ ವೆರಿಯೆಂಟ್ ಉನ್ನತೀಕರಿಸಿದ ಟಾಟಾ ಮೋಟಾರ್ಸ್

ಟಾಟಾ ಕಂಪನಿಯು ಇದೀಗ ಆಲ್‌ಟ್ರೊಜ್ ಕಾರಿನ ಎಕ್ಸ್ಇ ಮತ್ತು ಎಕ್ಸ್ಎಂ ಪ್ಲಸ್ ವೆರಿಯೆಂಟ್‌ಗಳಲ್ಲಿ ಕೆಲವು ಹೆಚ್ಚುವರಿ ಫೀಚರ್ಸ್‌ಗಳನ್ನು ಉನ್ನತೀಕರಿಸಿದ್ದು, ಹೊಸ ಆವೃತ್ತಿಗಳಲ್ಲಿ ಮ್ಯಾನುವಲ್ ಆಗಿ ಎಸಿ ಸೌಲಭ್ಯವನ್ನು ಇದೀಗ ಆಟೋಮ್ಯಾಟಿಕ್ ಕಂಟ್ರೊಲ್ ನೀಡಲಾಗಿದೆ.

ಆಲ್‌ಟ್ರೊಜ್ ಕಾರಿನ ಎಕ್ಸ್ಇ ಮತ್ತು ಎಕ್ಸ್ಎಂ ಪ್ಲಸ್ ವೆರಿಯೆಂಟ್ ಉನ್ನತೀಕರಿಸಿದ ಟಾಟಾ ಮೋಟಾರ್ಸ್

ಜೊತೆಗೆ ಎಕ್ಸ್ಇ ಮತ್ತು ಎಕ್ಸ್ಎಂ ಪ್ಲಸ್ ವೆರಿಯೆಂಟ್‌ಗಳಲ್ಲಿ 4-ಸ್ಪೀಕರ್ ಹರ್ಮನ್ ಆಡಿಯೊ ಸಿಸ್ಟಂ ಸೌಲಭ್ಯವನ್ನು ಸ್ಟ್ಯಾಂಡರ್ಡ್‌ ನೀಡಲಾಗುತ್ತಿದ್ದು, ನವೀಕರಿಸಿದ ರೂಪಾಂತರಗಳಲ್ಲಿ ಕಂಪನಿಯಯು ಯಾವುದೇ ಬೆಲೆ ಹೆಚ್ಚಳ ಮಾಡಿಲ್ಲ ಎಂಬುವುದು ಗಮನಾರ್ಹವಾಗಿದೆ.

ಆಲ್‌ಟ್ರೊಜ್ ಕಾರಿನ ಎಕ್ಸ್ಇ ಮತ್ತು ಎಕ್ಸ್ಎಂ ಪ್ಲಸ್ ವೆರಿಯೆಂಟ್ ಉನ್ನತೀಕರಿಸಿದ ಟಾಟಾ ಮೋಟಾರ್ಸ್

ಇನ್ನು ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾದರಿಯು ಎಕ್ಸ್ಇ ಆವೃತ್ತಿಯೊಂದಿಗೆ ಖರೀದಿಗೆ ಲಭ್ಯವಿದ್ದು, ಇದೀಗ ಹೊಸದಾಗಿ ಎಕ್ಸ್ಇ ಪ್ಲಸ್ ರೂಪಾಂತರವನ್ನು ಬಿಡುಗಡೆ ಮಾಡಲಾಗಿದೆ. ಆಲ್‌ಟ್ರೊಜ್ ಕಾರಿನ ಎಕ್ಸ್ಇ ಮತ್ತು ಈ ಹಿಂದಿನ ಎಕ್ಸ್ಎಂ ರೂಪಾಂತರದ ನಡುವೆ ಗಮನಾರ್ಹ ಬೆಲೆಯ ಅಂತರವಿದ್ದ ಕಾರಣ ಟಾಟಾ ಮೋಟಾರ್ಸ್ ಕಂಪನಿಯು ಹೊಸ ಹೆಚ್ಚು ಕೈಗೆಟುಕುವ ಬೆಲೆಯ ಎಕ್ಸ್ಇ ಪ್ಲಸ್ ಆವೃತ್ತಿಯನ್ನು ಪರಿಚಯಿಸಿದೆ.

ಆಲ್‌ಟ್ರೊಜ್ ಕಾರಿನ ಎಕ್ಸ್ಇ ಮತ್ತು ಎಕ್ಸ್ಎಂ ಪ್ಲಸ್ ವೆರಿಯೆಂಟ್ ಉನ್ನತೀಕರಿಸಿದ ಟಾಟಾ ಮೋಟಾರ್ಸ್

ಹೊಸ ಮಾದರಿಯನ್ನು ಹೆಚ್ಚು ಕೈಗೆಟುಕುವಂತೆ ಮಾಡಲು ಖರೀದಿ ನಿರ್ಧಾರಗಳ ಮೇಲೆ ಪರಿಣಾಮ ಬೀರದ ಕೆಲವು ವೈಶಿಷ್ಟ್ಯಗಳನ್ನು ತೆಗೆದುಹಾಕಲಾಗಿದ್ದು, ಪ್ರಮುಖ ಪ್ರೀಮಿಯಂ ಫೀಚರ್ಸ್‌ಗಳನ್ನು ಕೈಬಿಡಲಾಗಿದೆ.

ಆಲ್‌ಟ್ರೊಜ್ ಕಾರಿನ ಎಕ್ಸ್ಇ ಮತ್ತು ಎಕ್ಸ್ಎಂ ಪ್ಲಸ್ ವೆರಿಯೆಂಟ್ ಉನ್ನತೀಕರಿಸಿದ ಟಾಟಾ ಮೋಟಾರ್ಸ್

ಆಲ್‌ಟ್ರೊಜ್ ಬೇಸ್ ಮಾದರಿಯಾದ ಎಕ್ಸ್ಇ ರೂಪಾಂತರಕ್ಕೆ ಹೋಲಿಸಿದರೆ ಹೊಸ ಆವೃತ್ತಿಯಲ್ಲಿ 4 ಸ್ಪೀಕರ್‌ಗಳು, ಬ್ಲೂಟೂತ್ ಸಂಪರ್ಕ, ಎಫ್ಎಂ/ ಎಎಂ ರೇಡಿಯೋ, ಯುಎಸ್‌ಬಿ ಪೋರ್ಟ್ ಮತ್ತು ಸ್ಪೀಡ್ ಯುಎಸ್‌ಬಿ ಚಾರ್ಜರ್‌ನೊಂದಿಗೆ ಬರುತ್ತದೆ.

ಆಲ್‌ಟ್ರೊಜ್ ಕಾರಿನ ಎಕ್ಸ್ಇ ಮತ್ತು ಎಕ್ಸ್ಎಂ ಪ್ಲಸ್ ವೆರಿಯೆಂಟ್ ಉನ್ನತೀಕರಿಸಿದ ಟಾಟಾ ಮೋಟಾರ್ಸ್

ಹಾಗೆಯೇ ಎಕ್ಸ್ಇ ಪ್ಲಸ್ ಆವೃತ್ತಿಯು ಹರ್ಮನ್‌ 8.89 ಸೆ.ಮೀ ಫ್ಲೋಟಿಂಗ್ ಡ್ಯಾಶ್‌ಬೋರ್ಡ್ ಟಾಪ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ಬರಲಿದ್ದು, ರಿಮೋಟ್ ಕೀಲೆಸ್ ಎಂಟ್ರಿ, ಮ್ಯಾನುವಲ್ ಹೊಂದಿರುವ ಆಟೋಫೋಲ್ಡ್ ರಿಯರ್ ವ್ಯೂ ಮಿರರ್‌ಗಳು, ವಿದ್ಯುತ್ ತಾಪಮಾನ ನಿಯಂತ್ರಣ, ಫಾಲೋ ಮಿ ಹೋಮ್ ಮತ್ತು ಫೈಂಡ್ ಮಿ ಫಂಕ್ಷನ್ ನೀಡಲಾಗಿದೆ.

ಆಲ್‌ಟ್ರೊಜ್ ಕಾರಿನ ಎಕ್ಸ್ಇ ಮತ್ತು ಎಕ್ಸ್ಎಂ ಪ್ಲಸ್ ವೆರಿಯೆಂಟ್ ಉನ್ನತೀಕರಿಸಿದ ಟಾಟಾ ಮೋಟಾರ್ಸ್

ಹೊಸ ಮಾದರಿಯಲ್ಲಿ ಬೇಸ್ ರೂಪಾಂತರದಲ್ಲಿರುವಂತೆಯೇ ಕೆಲವು ಹೆಚ್ಚುವರಿ ತಾಂತ್ರಿಕ ಸೌಲಭ್ಯಗಳನ್ನು ನೀಡಲಾಗಿದ್ದು, ಹೊಸ ಮಾದರಿಯ ಆಗಮನದ ಜೊತೆಗೆ ಟಾಟಾ ಮೋಟಾರ್ಸ್ ಆಲ್‌ಟ್ರೊಜ್ ಬೆಲೆ ಹೆಚ್ಚಿಸಿದೆ.

ಆಲ್‌ಟ್ರೊಜ್ ಕಾರಿನ ಎಕ್ಸ್ಇ ಮತ್ತು ಎಕ್ಸ್ಎಂ ಪ್ಲಸ್ ವೆರಿಯೆಂಟ್ ಉನ್ನತೀಕರಿಸಿದ ಟಾಟಾ ಮೋಟಾರ್ಸ್

ಆಲ್‌ಟ್ರೊಜ್ ಕಾರು ಮಾದರಿಯು ಹೊಸದಾಗಿ ಬಿಡುಗಡೆ ಮಾಡಲಾದ ಎಕ್ಸ್‌ಇ ಪ್ಲಸ್ ಜೊತೆಗೆ ಎಕ್ಸ್‌ಇ, ಎಕ್ಸ್ಎಂ, ಎಕ್ಸ್ಎಂ ಪ್ಲಸ್, ಎಕ್ಸ್‌ಟಿ, ಎಕ್ಸ್‌ಜೆಡ್, ಎಕ್ಸ್‌ಜೆಡ್ ಆಪ್ಷನ್ ಮತ್ತು ಎಕ್ಸ್‌ಜೆಡ್ ಅರ್ಬನ್ ವೆರಿಯೆಂಟ್‌‌ಗಳೊಂದಿಗೆ ಮಾರಾಟಗೊಳ್ಳುತ್ತಿದೆ.

ಆಲ್‌ಟ್ರೊಜ್ ಕಾರಿನ ಎಕ್ಸ್ಇ ಮತ್ತು ಎಕ್ಸ್ಎಂ ಪ್ಲಸ್ ವೆರಿಯೆಂಟ್ ಉನ್ನತೀಕರಿಸಿದ ಟಾಟಾ ಮೋಟಾರ್ಸ್

ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಎಲ್ಲಾ ರೂಪಾಂತರಗಳು 1.2 ಲೀಟರ್ ರೆವೊಟ್ರಾನ್ ಪೆಟ್ರೋಲ್ ಮತ್ತು 1.5 ಲೀಟರ್ ಟರ್ಬೊ ಚಾರ್ಜ್ಡ್ ರೆವೊಟಾರ್ಕ್ ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದ್ದು, ಬೆಲೆ ಹೆಚ್ಚಳದ ನಂತರ ಹೊಸ ಕಾರಿನ ಬೆಲೆಯು ಆರಂಭಿಕವಾಗಿ ರೂ. 5.89 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9.64 ಲಕ್ಷ ಬೆಲೆ ಹೊಂದಿದೆ.

ಆಲ್‌ಟ್ರೊಜ್ ಕಾರಿನ ಎಕ್ಸ್ಇ ಮತ್ತು ಎಕ್ಸ್ಎಂ ಪ್ಲಸ್ ವೆರಿಯೆಂಟ್ ಉನ್ನತೀಕರಿಸಿದ ಟಾಟಾ ಮೋಟಾರ್ಸ್

ಸದ್ಯಕ್ಕೆ ಆಲ್‌ಟ್ರೊಜ್ ಕಾರಿನಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ಮಾತ್ರವೇ ನೀಡಲಾಗಿದ್ದು, 1.2-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು 86-ಬಿಎಚ್‌ಪಿ, 113-ಎನ್ಎಂ ಟಾರ್ಕ್ ಮತ್ತು 1.5-ಲೀಟರ್ ಡೀಸೆಲ್ ಆವೃತ್ತಿಯು 90-ಬಿಎಚ್‌ಪಿ, 200-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಆಲ್‌ಟ್ರೊಜ್ ಕಾರಿನ ಎಕ್ಸ್ಇ ಮತ್ತು ಎಕ್ಸ್ಎಂ ಪ್ಲಸ್ ವೆರಿಯೆಂಟ್ ಉನ್ನತೀಕರಿಸಿದ ಟಾಟಾ ಮೋಟಾರ್ಸ್

ಹೊಸ ಟಾಟಾ ಆಲ್‌‌ಟ್ರೊಜ್ ಐಟರ್ಬೋ ಪೆಟ್ರೋಲ್ ಆವೃತ್ತಿಯಲ್ಲಿ ನೀಡಲಾಗಿರುವ 1.2-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ ಮಾದರಿಯು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಗರಿಷ್ಠ 108-ಬಿಹೆಚ್‍ಪಿ ಮತ್ತು 140-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಾಗುತ್ತದೆ.

ಆಲ್‌ಟ್ರೊಜ್ ಕಾರಿನ ಎಕ್ಸ್ಇ ಮತ್ತು ಎಕ್ಸ್ಎಂ ಪ್ಲಸ್ ವೆರಿಯೆಂಟ್ ಉನ್ನತೀಕರಿಸಿದ ಟಾಟಾ ಮೋಟಾರ್ಸ್

ಐ-ಟರ್ಬೊ ಮಾದರಿಯು ಸಿಟಿ ಮತ್ತು ಸ್ಟೋರ್ಟ್ ಡ್ರೈವಿಂಗ್ ಮೋಡ್‌ಗಳನ್ನು ನೀಡಲಾಗಿದ್ದು, ಸದ್ಯಕ್ಕೆ ಹೊಸ ಮಾದರಿಯಲ್ಲಿ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ನೀಡಿರುವ ಕಂಪನಿಯು ಶೀಘ್ರದಲ್ಲೇ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಸಹ ನೀಡಲಿದೆಯೆಂತೆ.

ಆಲ್‌ಟ್ರೊಜ್ ಕಾರಿನ ಎಕ್ಸ್ಇ ಮತ್ತು ಎಕ್ಸ್ಎಂ ಪ್ಲಸ್ ವೆರಿಯೆಂಟ್ ಉನ್ನತೀಕರಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ಆಲ್‌ಟ್ರೊಜ್ ಕಾರಿನ ಟರ್ಬೊ ಮಾದರಿಗಳಲ್ಲಿ ಮತ್ತು ಸಾಮಾನ್ಯ ಪೆಟ್ರೋಲ್ ಮಾದರಿಯ ಹೈ ಎಂಡ್ ವೆರಿಯೆಂಟ್‌ಗಳಲ್ಲಿ ಕನೆಕ್ಟೆಡ್ ಟೆಕ್ನಾಲಜಿ ಬಳಕೆ ಮಾಡಿದ್ದು, ಹೊಸ ತಂತ್ರಜ್ಞಾನವು ಕಾರಿಗೆ ಗರಿಷ್ಠ ಭದ್ರತೆ ನೀಡುತ್ತದೆ.

Most Read Articles

Kannada
English summary
Tata motors updated altroz xe xm plus variant details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X