ವಾಯ್ಸ್ ಕಮಾಂಡ್ ಸೌಲಭ್ಯದಲ್ಲಿ ಪ್ರಾದೇಶಿಕ ಭಾಷೆಗಳ ಬಳಕೆ ಹೆಚ್ಚಳಕ್ಕೆ ಟಾಟಾ ಹೊಸ ಯೋಜನೆ

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಕಾರು ಉತ್ಪನ್ನಗಳಲ್ಲಿ ಪ್ರತಿ ಎರಡು ತಿಂಗಳಿಗೆ ಒಂದು ಬಾರಿ ಹೊಸ ಬದಲಾವಣೆಗಳನ್ನು ಪರಿಚಯಿಸುವ ಯೋಜನೆಗೆ ಚಾಲನೆ ನೀಡಿದ್ದು, ಹೊಸ ಯೋಜನೆಯು ಗ್ರಾಹಕರ ಪ್ರಮುಖ ಆಕರ್ಷಣೆಯಾಗುತ್ತಿರುವುದಲ್ಲದೆ ಬೇಡಿಕೆ ಕಾಯ್ದುಕೊಳ್ಳಲು ನೆರವಾಗುತ್ತಿದೆ.

ವಾಯ್ಸ್ ಕಮಾಂಡ್ ಸೌಲಭ್ಯದಲ್ಲಿ ಪ್ರಾದೇಶಿಕ ಭಾಷೆಗಳ ಬಳಕೆಗೆ ಟಾಟಾ ಹೊಸ ಯೋಜನೆ

ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಹೊಸ ಬದಲಾವಣೆಗಳೊಂದಿಗೆ ಕಾರು ಉತ್ಪನ್ನಗಳನ್ನು ಉನ್ನತೀಕರಿಸುತ್ತಿರುವ ಟಾಟಾ ಕಂಪನಿಯು ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ವಿಭಿನ್ನವಾಗಿ ಗುರುತಿಸಿಕೊಳ್ಳುತ್ತಿದ್ದು, ಶೀಘ್ರದಲ್ಲೇ ತನ್ನ ಜನಪ್ರಿಯ ಕಾರು ಮಾದರಿಗಳಾದ ಆಲ್‌ಟ್ರೊಜ್ ಮತ್ತು ನೆಕ್ಸಾನ್ ಕಾರು ಮಾದರಿಗಳ ವಾಯ್ಸ್ ಅಸಿಸ್ಟ್ ಸಿಸ್ಟಂ ಸೌಲಭ್ಯದಲ್ಲಿ ಗುರುತರ ಬದಲಾವಣೆ ತರಲು ಸಿದ್ದವಾಗಿದೆ.

ವಾಯ್ಸ್ ಕಮಾಂಡ್ ಸೌಲಭ್ಯದಲ್ಲಿ ಪ್ರಾದೇಶಿಕ ಭಾಷೆಗಳ ಬಳಕೆಗೆ ಟಾಟಾ ಹೊಸ ಯೋಜನೆ

ಟಾಟಾ ಕಂಪನಿಯು ಆಲ್‌ಟ್ರೊಜ್ ಮತ್ತು ನೆಕ್ಸಾನ್ ಕಾರು ಮಾದರಿಗಳ ವಾಯ್ಸ್ ಅಸಿಸ್ಟ್ ಸಿಸ್ಟಂ ಸೌಲಭ್ಯದಲ್ಲಿ ಪ್ರಾದೇಶಿಕ ಭಾಷೆಗಳಿಗೆ ಮನ್ನಣೆ ನೀಡುವ ಮೂಲಕ ಪ್ರತಿಯೊಬ್ಬ ಕಾರು ಮಾಲೀಕನು ಹೊಸ ತಂತ್ರಜ್ಞಾನ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಲು ಹೊಸ ಯೋಜನೆ ಆರಂಭಿಸಿದೆ.

ವಾಯ್ಸ್ ಕಮಾಂಡ್ ಸೌಲಭ್ಯದಲ್ಲಿ ಪ್ರಾದೇಶಿಕ ಭಾಷೆಗಳ ಬಳಕೆಗೆ ಟಾಟಾ ಹೊಸ ಯೋಜನೆ

ಆಲ್‌ಟ್ರೊಜ್ ಮತ್ತು ನೆಕ್ಸಾನ್ ಕಾರು ಮಾದರಿಗಳಲ್ಲಿ ಸದ್ಯ ಜೋಡಣೆ ಮಾಡಲಾಗಿರುವ ಅವಾ(Ava) ವಾಯ್ಸ್ ಅಸಿಸ್ಟ್ ಕಮಾಂಡ್ ಸೌಲಭ್ಯದಲ್ಲಿ ಇಂಗ್ಲಿಷ್ ಮತ್ತು ಹಿಂಗ್ಲಿಷ್(ಇಂಗ್ಲಿಷ್ ಮತ್ತು ಹಿಂದಿ ಮಿಶ್ರಿತ) ಧ್ವನಿ ಗ್ರಹಿಸಿ ತಾಂತ್ರಿಕ ಸೌಲಭ್ಯಗಳನ್ನು ನಿಯಂತ್ರಣ ಮಾಡಬಹುದಾಗಿದ್ದು, ಹೊಸ ಯೋಜನೆ ಅಡಿ ವಾಯ್ಸ್ ಕಮಾಂಡ್ ಸೌಲಭ್ಯವನ್ನು ಉನ್ನತೀಕರಿಸಿ ಮತ್ತಷ್ಟು ಪ್ರಾದೇಶಿಕ ಭಾಷೆಗಳ ಬಳಕೆಗೆ ಉತ್ತೇಜಿಸಲು ನಿರ್ಧರಿಸಿದೆ.

ವಾಯ್ಸ್ ಕಮಾಂಡ್ ಸೌಲಭ್ಯದಲ್ಲಿ ಪ್ರಾದೇಶಿಕ ಭಾಷೆಗಳ ಬಳಕೆಗೆ ಟಾಟಾ ಹೊಸ ಯೋಜನೆ

ವಾಯ್ಸ್ ಅಸಿಸ್ಟ್ ಕಮಾಂಡ್ ಸೌಲಭ್ಯವನ್ನು ಉನ್ನತೀಕರಿಸುವ ಸೌಲಭ್ಯಕ್ಕಾಗಿ ಕೋಲ್ಕತ್ತಾ ಮೂಲದ ಮಿಹುಪ್ ಕಮ್ಯೂನಿಕೇಷನ್ ಮತ್ತು ಹರ್ಮಾನ್ ಇಂಟರ್‌ನ್ಯಾಷನ್ ಕಂಪನಿಗಳಿಗೊಂದಿಗೆ ಜೊತೆಗೂಡಿ ಸ್ಥಳೀಯವಾಗಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಭಾಷೆಗಳನ್ನು ಇಂಗ್ಲಿಷ್ ಮಿಶ್ರಿಣದೊಂದಿಗೆ ಧ್ವನಿ ನಿಯಂತ್ರಕಗಳನ್ನು ಅಭಿವೃದ್ದಿಗೊಳಿಸಲಾಗುತ್ತಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ವಾಯ್ಸ್ ಕಮಾಂಡ್ ಸೌಲಭ್ಯದಲ್ಲಿ ಪ್ರಾದೇಶಿಕ ಭಾಷೆಗಳ ಬಳಕೆಗೆ ಟಾಟಾ ಹೊಸ ಯೋಜನೆ

ಉದಾಹರಣೆ ಇಂಗ್ಲಿಷ್ ಮಿಶ್ರಿತ ಕನ್ನಡದಲ್ಲಿನ ವಾಯ್ಸ್ ಅಸಿಸ್ಟ್ ಸೌಲಭ್ಯವನ್ನು ಕಂಗ್ಲಿಷ್, ಇಂಗ್ಲಿಷ್ ಮಿಶ್ರಿತ ತಮಿಳಿನಲ್ಲಿ ವಾಯ್ಸ್ ಅಸಿಸ್ಟ್ ಸೌಲಭ್ಯವನ್ನು ತಂಗ್ಲಿಷ್ ಮತ್ತು ಬೆಂಗಾಲಿ ಮತ್ತು ಇಂಗ್ಲಿಷ್ ಮಿಶ್ರಿತ ಬ್ಯಾಂಗ್ಲಿಷ್ ಸೇರಿದಂತೆ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿಯೇ ವಾಯ್ಸ್ ಅಸ್ಟಿಸ್ ಸೌಲಭ್ಯ ದೊರೆಯಲಿದೆ.

ವಾಯ್ಸ್ ಕಮಾಂಡ್ ಸೌಲಭ್ಯದಲ್ಲಿ ಪ್ರಾದೇಶಿಕ ಭಾಷೆಗಳ ಬಳಕೆಗೆ ಟಾಟಾ ಹೊಸ ಯೋಜನೆ

ಸಮೀಕ್ಷೆಗಳ ಪ್ರಕಾರ, ಮುಂದಿನ ಎರಡು ವರ್ಷಗಳಲ್ಲಿ ಧ್ವನಿ ಸಹಾಯಕ ತಾಂತ್ರಿಕ ಸೌಲಭ್ಯವು ಹೊಸ ವಾಹನಗಳಲ್ಲಿ ಅತಿಹೆಚ್ಚು ಬಳಕೆಯಾಗುವ ನೀರಿಕ್ಷೆಯಿದ್ದು, ನ್ಯೂ ಜನರೇಷನ್ ಕಾರು ಬಳಕೆದಾರರು ಕಾರಿನ ತಾಂತ್ರಿಕ ಸೌಲಭ್ಯಗಳನ್ನು ಮ್ಯಾನುವಲ್‌ಗಿಂತಲೂ ಧ್ವನಿ ಮೂಲಕವೇ ನಿಯಂತ್ರಣ ಮಾಡಲು ಬಯಸುತ್ತಿದ್ದಾರೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ವಾಯ್ಸ್ ಕಮಾಂಡ್ ಸೌಲಭ್ಯದಲ್ಲಿ ಪ್ರಾದೇಶಿಕ ಭಾಷೆಗಳ ಬಳಕೆಗೆ ಟಾಟಾ ಹೊಸ ಯೋಜನೆ

ವಾಯ್ಸ್ ಕಮಾಂಡ್ ಮೂಲಕ ಎಸಿ, ಡ್ರೈವ್ ಮೋಡ್, ಮ್ಯೂಸಿಕ್ ಸಿಸ್ಟಂ ಸೇರಿದಂತೆ ಹಲವು ತಾಂತ್ರಿಕ ಸೌಲಭ್ಯಗಳನ್ನು ಮ್ಯಾನುವಲ್ ನಿಯಂತ್ರಣ ಮಾಡದೆ ಕೇವಲ ಧ್ವನಿ ಮೂಲಕ ನಿಯಂತ್ರಿಸಬಹುದಾಗಿದ್ದು, ಹಲವಾರು ಪ್ರಾದೇಶಿಕ ಭಾಷೆಗಳನ್ನು ಹೊಂದಿರುವ ಭಾರತದಲ್ಲಿ ಗ್ರಾಹಕರ ಬೇಡಿಕೆಯೆಂತೆ ಹೊಸ ವಾಯ್ಸ್ ಕಮಾಂಡ್ ಸೌಲಭ್ಯವನ್ನು ಅಭಿವೃದ್ದಿಗೊಳಿಸಲಾಗುತ್ತಿದೆ.

Most Read Articles

Kannada
English summary
Tata Nexon & Altroz Voice Assistant To Support Indian Languages. Read in Kannada.
Story first published: Wednesday, May 26, 2021, 23:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X