ಟಾಟಾ ಕಾರುಗಳ ಖರೀದಿ ಮೇಲೆ ರೂ.65 ಸಾವಿರ ತನಕ ಡಿಸ್ಕೌಂಟ್ ಆಫರ್

ಕೋವಿಡ್ ಎರಡನೇ ಅಲೆಯ ಪರಿಣಾಮ ತಗ್ಗಿರುವ ಹೊಸ ವಾಹನಗಳ ಖರೀದಿಯ್ನು ಸುಧಾರಿಸಲು ಮುಂದಾಗಿರುವ ವಿವಿಧ ಆಟೋ ಉತ್ಪಾದನಾ ಕಂಪನಿಗಳು ವಿವಿಧ ಆಫರ್‌ಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದು, ಟಾಟಾ ಮೋಟಾರ್ಸ್ ಕಂಪನಿಯು ಕೂಡಾ ಜೂನ್ ಅವಧಿಗಾಗಿ ವಿವಿಧ ಆಫರ್‌ಗಳನ್ನು ಘೋಷಣೆ ಮಾಡಿದೆ.

ಟಾಟಾ ಕಾರುಗಳ ಖರೀದಿ ಮೇಲೆ ರೂ.65 ಸಾವಿರ ತನಕ ಡಿಸ್ಕೌಂಟ್ ಆಫರ್

ಕಾರು ಮಾರಾಟ ಸುಧಾರಣೆಗಾಗಿ ಹೊಸ ವರ್ಷದ ಆರಂಭದಲ್ಲಿ ಹಲವಾರು ಹೊಸ ಆಫರ್‌ಗಳನ್ನು ಘೋಷಣೆ ಮಾಡುತ್ತಿದ್ದ ವಿವಿಧ ಆಟೋ ಉತ್ಪಾದನಾ ಕಂಪನಿಗಳು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಇದೀಗ ಕೋವಿಡ್ ಎರಡನೇ ಅಲೆಯಿಂದಾಗಿ ಮತ್ತೆ ಹೊಸ ವಾಹನ ಮಾರಾಟ ಸಾಕಷ್ಟು ಇಳಿಕೆಯಾಗಿದೆ. ಹೀಗಾಗಿ ಟಾಟಾ ಕಂಪನಿಯು ತನ್ನ ಪ್ರಮುಖ ಕಾರು ಮಾದರಿಗಳಾದ ಟಿಯಾಗೊ, ಟಿಗೋರ್, ನೆಕ್ಸಾನ್, ನೆಕ್ಸಾನ್ ಇವಿ ಮತ್ತು ಹ್ಯಾರಿಯರ್ ಕಾರು ಆಫರ್ ನೀಡುತ್ತಿದ್ದು, ಈ ತಿಂಗಳಾಂತ್ಯವರೆಗೂ ಹೊಸ ಆಫರ್‌ಗಳು ಲಭ್ಯವಿರಲಿವೆ.

ಟಾಟಾ ಕಾರುಗಳ ಖರೀದಿ ಮೇಲೆ ರೂ.65 ಸಾವಿರ ತನಕ ಡಿಸ್ಕೌಂಟ್ ಆಫರ್

ಟಾಟಾ ಮೋಟಾರ್ಸ್ ಕಂಪನಿಯು ಘೋಷಣೆ ಮಾಡಿರುವ ಹೊಸ ಆಫರ್‌ಗಳಲ್ಲಿ ಕ್ಯಾಶ್ ಡಿಸ್ಕೌಂಟ್, ಎಕ್ಸ್‌ಚೆಂಜ್ ಆಫರ್ ಜೊತೆಗೆ ವಿಶೇಷ ಪ್ಯಾಕೇಜ್ ನೀಡುತ್ತಿದ್ದು, ಕನಿಷ್ಠ ರೂ. 15 ಸಾವಿರದಿಂದ ಗರಿಷ್ಠ ರೂ. 65 ಸಾವಿರ ತನಕ ಉಳಿತಾಯ ಮಾಡಬಹುದಾಗಿದೆ.

ಟಿಯಾಗೋ ನಂತರ ಟಿಗೋರ್ ಕಂಪ್ಯಾಕ್ಟ್ ಸೆಡಾನ್ ಮಾದರಿಯ ಮೇಲೂ ಟಾಟಾ ಮೋಟಾರ್ಸ್ ಕಂಪನಿಯು ಆಕರ್ಷಕ ಡಿಸ್ಕೌಂಟ್ ನೀಡುತ್ತಿದ್ದು, ಟಿಗೋರ್ ಕಾರು ಖರೀದಿಯ ಮೇಲೆ ಗ್ರಾಹಕರು ರೂ.30 ಸಾವಿರ ತನಕ ಉಳಿತಾಯ ಮಾಡಬಹುದಾಗಿದೆ. ರೂ.30 ಸಾವಿರದಲ್ಲಿ ರೂ. 15 ಸಾವಿರ ಕ್ಯಾಶ್‌ಬ್ಯಾಕ್ ಮತ್ತು ರೂ.15 ಸಾವಿರ ಡಿಸ್ಕೌಂಟ್ ಒಳಗೊಂಡಿದ್ದು, ಟಿಗೋರ್ ಮತ್ತು ಟಿಯಾಗೋ ಎರಡು ಮಾದರಿಗಳಲ್ಲೂ ಒಂದೇ ಮಾದರಿಯ 1.2-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿವೆ.

ಟಾಟಾ ಕಾರುಗಳ ಖರೀದಿ ಮೇಲೆ ರೂ.65 ಸಾವಿರ ತನಕ ಡಿಸ್ಕೌಂಟ್ ಆಫರ್

ಟಿಗೋರ್ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 6.95 ಲಕ್ಷ ಬೆಲೆ ಹೊಂದಿದ್ದರೆ ಟಿಯಾಗೋ ಕಾರು ಮಾದರಿಯು ಆರಂಭಿಕವಾಗಿ ರೂ. 5.59 ಲಕ್ಷದಿಂದ ರೂ. 7.73 ಲಕ್ಷ ಬೆಲೆ ಹೊಂದಿದೆ.

ಟಾಟಾ ಕಾರುಗಳ ಖರೀದಿ ಮೇಲೆ ರೂ.65 ಸಾವಿರ ತನಕ ಡಿಸ್ಕೌಂಟ್ ಆಫರ್

ಇನ್ನು ಟಾಟಾ ಹೊಸ ಆಫರ್‌ಗಳಲ್ಲಿ ಜನಪ್ರಿಯ ಕಾರು ಮಾದರಿಯಾದ ನೆಕ್ಸಾನ್ ಆವೃತ್ತಿಯ ಮೇಲೆ ಕಂಪನಿಯು ರೂ. 15 ಸಾವಿರ ಎಕ್ಸ್‌ಚೆಂಜ್ ಆಫರ್ ಮಾತ್ರ ನೀಡುತ್ತಿದೆ. ಸದ್ಯ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಲ್ಲಿ ಅತಿ ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿರುವ ನೆಕ್ಸಾನ್ ಕಾರು ಮಾದರಿಯು ಪ್ರತಿಸ್ಪರ್ಧಿ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದೆ.

ಟಾಟಾ ಕಾರುಗಳ ಖರೀದಿ ಮೇಲೆ ರೂ.65 ಸಾವಿರ ತನಕ ಡಿಸ್ಕೌಂಟ್ ಆಫರ್

ನೆಕ್ಸಾನ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.19 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 12.95 ಲಕ್ಷ ಬೆಲೆ ಹೊಂದಿರುವ ನೆಕ್ಸಾನ್ ಕಾರು ಮಾದರಿಯು 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಂಡಿದೆ.

MOST READ: ಲಾಕ್‌ಡೌನ್ ಹಿನ್ನಲೆ ವಾಹನ ದಾಖಲೆಗಳ ಮಾನ್ಯತಾ ಅವಧಿ ಕುರಿತು ಸಾರಿಗೆ ಇಲಾಖೆಯಿಂದ ಹೊಸ ಆದೇಶ

ಟಾಟಾ ಕಾರುಗಳ ಖರೀದಿ ಮೇಲೆ ರೂ.65 ಸಾವಿರ ತನಕ ಡಿಸ್ಕೌಂಟ್ ಆಫರ್

ಹ್ಯಾರಿಯರ್ ಎಸ್‌ಯುವಿ ಕಾರು ಮಾದರಿಯ ಮೇಲೂ ಟಾಟಾ ಕಂಪನಿಯು ರೂ. 65 ಸಾವಿರ ಆಫರ್ ನೀಡುತ್ತಿದ್ದು, ರೂ.65 ಸಾವಿರದಲ್ಲಿ ರೂ. 25 ಸಾವಿರ ಕ್ಯಾಶ್ ಡಿಸ್ಕೌಂಟ್ ಮತ್ತು ರೂ. 40 ಸಾವಿರ ಎಕ್ಸ್‌ಚೆಂಜ್ ಆಫರ್ ಒಳಗೊಂಡಿದೆ.

ಟಾಟಾ ಕಾರುಗಳ ಖರೀದಿ ಮೇಲೆ ರೂ.65 ಸಾವಿರ ತನಕ ಡಿಸ್ಕೌಂಟ್ ಆಫರ್

ಹ್ಯಾರಿಯರ್ ಕಾರು ಮಾದರಿಯು 2.0-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 14.29 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.20.81 ಲಕ್ಷ ಬೆಲೆ ಹೊಂದಿದ್ದು, ಹೊಸ ಕಾರು ಖರೀದಿ ಮೇಲೆ ಗ್ರಾಹಕರಿಗೆ ಅತ್ಯುತ್ತಮ ಆಫರ್ ನೀಡಲಾಗುತ್ತದೆ.

MOST READ: ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನ ಖರೀದಿಸುವ ಮುನ್ನ ತಿಳಿದಿರಬೇಕಾದ ಪ್ರಮುಖ ಅಂಶಗಳಿವು

ಟಾಟಾ ಕಾರುಗಳ ಖರೀದಿ ಮೇಲೆ ರೂ.65 ಸಾವಿರ ತನಕ ಡಿಸ್ಕೌಂಟ್ ಆಫರ್

ಇನ್ನು ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಖರೀದಿಯ ಮೇಲೆ ರೂ. 10 ಸಾವಿರ ಕ್ಯಾಶ್‌ಬ್ಯಾಕ್ ಮತ್ತು ರೂ. 15 ಸಾವಿರ ಎಕ್ಸ್‌ಚೆಂಜ್ ಬೋನಸ್ ಒಳಗೊಂಡು ರೂ.25 ಸಾವಿರದಷ್ಟು ಆಫರ್ ಲಭ್ಯವಿದ್ದು, ಆಲ್‌ಟ್ರೊಜ್ ಮತ್ತು ಸಫಾರಿ ಎಸ್‌ಯುವಿ ಮಾದರಿಯ ಮೇಲೆ ಯಾವುದೇ ಆಫರ್ ನೀಡುತ್ತಿಲ್ಲ.

Article Published On: Sunday, June 6, 2021, 10:00 [IST]
English summary
Tata Offering Cash And Exchange Benefits Across Most Of Its Model Range In June 2021.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+