ಸುಂದರಂ ಫೈನಾನ್ಸ್ ಮೂಲಕ ವಿಶೇಷ ಸಾಲ ಸೌಲಭ್ಯ ಪರಿಚಯಿಸಿದ ಟಾಟಾ ಮೋಟಾರ್ಸ್
ದೇಶಿಯ ಮಾರುಕಟ್ಟೆಯಲ್ಲಿ ಹೊಸ ವಾಹನ ಮಾರಾಟವು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ದೇಶದ ಮುಂಚೂಣಿ ಕಾರು ತಯಾರಿಕಾ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಪ್ರಮುಖ ಕಾರುಗಳ ಖರೀದಿಯನ್ನು ಉತ್ತೇಜಿಸಲು ಹಲವಾರು ಆಫರ್‌ಗಳನ್ನು ಘೋಷಣೆ ಮಾಡಿದೆ.

ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ಸದ್ಯ ಮೂರನೇ ಸ್ಥಾನದಲ್ಲಿರುವ ಟಾಟಾ ಮೋಟಾರ್ಸ್ ಕಂಪನಿಯು ಕಳೆದ ವರ್ಷಕ್ಕಿಂತಲೂ ಈ ವರ್ಷ ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕೋವಿಡ್ 2ನೇ ಅಲೆ ಪರಿಣಾಮ ತಗ್ಗಿರುವ ವಾಹನಗಳ ಮಾರಾಟವನ್ನು ಸುಧಾರಿಸಲು ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿದೆ.

ಟಾಟಾ ಮೋಟಾರ್ಸ್ ಕಂಪನಿಯು ಈಗಾಗಗಲೇ ವಿವಿಧ ಬ್ಯಾಂಕ್‌ಗಳ ಜೊತೆಗೂಡಿ ಹಲವು ಸರಳ ಸಾಲಸೌಲಭ್ಯಗಳ ಆಯ್ಕೆ ನೀಡುತ್ತಿದ್ದು, ಇದೀಗ ಸುಂದರಂ ಫೈನಾನ್ಸ್ ಜೊತೆಗೂಡಿ ಹೊಸ ಮಾದರಿಯ ಸಾಲಸೌಲಭ್ಯಗಳನ್ನು ಘೋಷಿಸಿದೆ.

ಆರ್ಥಿಕ ಸಂಕಷ್ಟ ಪರಿಸ್ಥಿತಿಯಲ್ಲಿ ಹೊಸ ವಾಹನಗಳ ಖರೀದಿಗೆ ಹಿಂದೇಟು ಹಾಕುತ್ತಿರುವ ಗ್ರಾಹಕರನ್ನು ಸೆಳೆಯಲು ವಿವಿಧ ಬ್ಯಾಂಕ್‌ಗಳ ಜೊತೆಗೂಡಿ ಹಲವಾರು ಆಕರ್ಷಕ ಲೋನ್ ಆಫರ್‌ಗಳನ್ನು ನೀಡುತ್ತಿರುವ ಟಾಟಾ ಕಂಪನಿಯು ಸುಂದರಂ ಫೈನಾನ್ಸ್ ಮೂಲಕ ಪ್ರಮುಖ ಕಾರುಗಳಿಗೆ ಸರಳ ಸಾಲ ಸೌಲಭ್ಯಗಳೊಂದಿಗೆ ಅತಿ ಕಡಿಮೆ ಇಎಂಐ ಆಯ್ಕೆಗಳನ್ನು ನೀಡುತ್ತಿದೆ.

ಹಲವಾರು ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್‌ಗಳ ಜೊತೆಗೂಡಿ ವಿವಿಧ ಲೋನ್ ಆಫರ್‌ಗಳನ್ನು ನೀಡುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಸುಂದರಂ ಫೈನಾನ್ಸ್ ಮೂಲಕ ಗರಿಷ್ಠ 7 ವರ್ಷಗಳ ಅವಧಿಗೆ ಶೇ.100 ರಷ್ಟು ಎಕ್ಸ್‌ಶೋರೂಂ ದರದ ಮೇಲೆ ಲೋನ್ ಆಫರ್ ನೀಡುತ್ತಿದೆ.

ಜೊತೆಗೆ ಕಿಸಾನ್ ಕಾರ್ ಸ್ಕೀಮ್ ಮೂಲಕ ರೈತ ಕುಟುಂಬದ ಹಿನ್ನಲೆಯುಳ್ಳ ಗ್ರಾಹಕರಿಗೆ 6 ಕಂತುಗಳ ಪಾವತಿಗೆ ಹೆಚ್ಚುವರಿ ಕಾಲಾವಕಾಶ ನೀಡಿದ್ದು, ಲೋನ್ ಮರುಪಾವತಿಯ ಸಂದರ್ಭ ಪ್ರತಿ ವರ್ಷ ಒಂದು ಕಂತನ್ನು ನೀವು ಅನುಕೂಲಕರವಾದ ಸಂದರ್ಭದಲ್ಲಿ ಮರುಪಾವತಿ ಮಾಡಬಹುದಾಗಿದೆ.

ಹಾಗೆಯೇ ಟಾಟಾ ಕಾರುಗಳನ್ನು ಖರೀದಿಸುವ ಗ್ರಾಹಕರು ಕ್ಲಿಕ್ ಟು ಡ್ರೈವ್ ಪ್ಲ್ಯಾಟ್‌ಫಾರ್ಮ್ ಮೂಲಕವು ಸಾಲ ಸೌಲಭ್ಯಕ್ಕೆ ಅರ್ಹತೆ ಪಡೆದುಕೊಳ್ಳಬಹುದಾಗಿದ್ದು, ಸಾಲ ಮರುಪಾವತಿ ಅವಧಿಯು ಸಾಲದ ಮೊತ್ತ ಮತ್ತು ವಿವಿಧ ವೆರಿಯೆಂಟ್‌ಗಳನ್ನು ಆಧರಿಸಿ ಬದಲಾಗಲಿದೆ.

ಇನ್ನು ಟಾಟಾ ಮೋಟಾರ್ಸ್ ಕಂಪನಿಯು ವಾಹನಗಳ ಉತ್ಪಾದನೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಪ್ರಯಾಣಿಕ ವಾಹನಗಳ ಜೊತೆಗೆ ವಾಣಿಜ್ಯ ವಾಹನಗಳ ಉತ್ಪಾದನೆಯಲ್ಲೂ ಹಲವಾರು ಹೊಸತನದೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ.

ಕೋವಿಡ್ 2ನೇ ಅಲೆಯ ಪರಿಣಾಮ ಮೇ ಮತ್ತು ಜೂನ್ ಆರಂಭದಲ್ಲಿ ಆರ್ಥಿಕ ಚಟುವಟಿಕೆಗಳು ಸಂಪೂರ್ಣವಾಗಿ ನೆಲಕಚ್ಚಿದ ಪರಿಣಾಮ ಆಟೋ ಉದ್ಯಮವು ಸಹ ಹಿನ್ನಡೆ ಅನುಭವಿಸಿದ್ದು, ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಹೊಸ ವಾಹನಗಳ ಮಾರಾಟದಲ್ಲಿ ತುಸು ಚೇತರಿಕೆ ಕಂಡುಬಂದಿದೆ.

ಟಾಟಾ ಮೋಟಾರ್ಸ್ ಕಂಪನಿಯು ಕೋವಿಡ್ ಪರಿಣಾಮ ಹೊಸ ಕಾರುಗಳ ಮಾರಾಟದಲ್ಲಿ ಕುಸಿತ ಕಂಡಿದ್ದರೂ ಜೂನ್ ಮತ್ತು ಜುಲೈ ಅವಧಿಯ ಕಾರು ಮಾರಾಟದಲ್ಲಿ ತುಸು ಸುಧಾರಣೆ ಕಂಡಿದ್ದು, ಜುಲೈ ತಿಂಗಳ ಕಾರು ಮಾರಾಟವು ಕಳೆದ ವರ್ಷದ ಜುಲೈ ಅವಧಿಯಲ್ಲಿನ ಕಾರು ಮಾರಾಟಕ್ಕಿಂತಲೂ ಶೇ. 92 ರಷ್ಟು ಬೆಳವಣಿಗೆ ಸಾಧಿಸಿದೆ.

ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ಸದ್ಯ ಮೂರನೇ ಸ್ಥಾನದಲ್ಲಿರುವ ಟಾಟಾ ಮೋಟಾರ್ಸ್ ಕಂಪನಿಯು ಕಳೆದ ವರ್ಷಕ್ಕಿಂತಲೂ ಈ ವರ್ಷ ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಳೆದ ತಿಂಗಳು ಕೋವಿಡ್ 2ನೇ ಅಲೆ ಪರಿಣಾಮ ತಗ್ಗಿರುವ ವಾಹನಗಳ ಮಾರಾಟವನ್ನು ಸುಧಾರಿಸಲು ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡಿರುವ ಮಾರಾಟ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.


Click it and Unblock the Notifications