ಹೊಚ್ಚ ಹೊಸ Tata Punch ಮೈಕ್ರೊ ಎಸ್‌ಯುವಿ ವಿಡಿಯೋ ರಿವ್ಯೂ
ಟಾಟಾ ಮೋಟಾರ್ಸ್(Tata Motors) ಕಂಪನಿಯು ಶೀಘ್ರದಲ್ಲೇ ತನ್ನ ಹೊಚ್ಚ ಹೊಸ ಪಂಚ್(Punch) ಮೈಕ್ರೊ ಎಸ್‌ಯುವಿ ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಕಂಪನಿಯು ಹೊಸ ಕಾರು ಬಿಡುಗಡೆಗೂ ಮುನ್ನ ಕಾರಿನ ಕಾರ್ಯಕ್ಷಮತೆ ಕುರಿತಾಗಿ ಫಸ್ಟ್ ಡ್ರೈವ್ ಆಯೋಜಿಸಿತ್ತು. ಡ್ರೈವ್‌ಸ್ಪಾರ್ಕ್ ತಂಡಕ್ಕೂ ವಿಶೇಷ ಆಹ್ವಾನ ನೀಡಿದ್ದ ಟಾಟಾ ಮೋಟಾರ್ಸ್ ಕಂಪನಿಯು ಹೊಸ ಕಾರಿನ ಮೂಲಕ ಎಂಟ್ರಿ ಲೆವಲ್ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನ ಮೂಡಿಸುವ ವಿಶ್ವಾಸದಲ್ಲಿದೆ. ಹಾಗಾದ್ರೆ ಹೊಸ ಕಾರಿನ ವಿಶೇಷತೆಗಳೇನು? ಪ್ರತಿಸ್ಪರ್ಧಿ ಮಾದರಿಗಳಿಂತ ಪಂಚ್ ಹೇಗೆ ವಿಶೇಷವಾಗಿರಲಿದೆ? ಕಾರಿನ ಹೊಸ ತಾಂತ್ರಿಕ ಸೌಲಭ್ಯಗಳು ಏನು? ಎನ್ನುವುದನ್ನು ಈ ವಿಡಿಯೋದಲ್ಲಿ ತಿಳಿಯೋಣ.
ಪಂಚ್ ಕಾರು ಮಾದರಿಯನ್ನು ಸದ್ಯ ಅನಾವರಣಗೊಳಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಇದೇ ತಿಂಗಳಾಂತ್ಯಕ್ಕೆ ಅಧಿಕೃತವಾಗಿ ಬಿಡುಗಡೆ ಮಾಡಲಿದ್ದು, ಹೊಸ ಕಾರು ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ಪ್ಯೂರ್, ಅಡ್ವೆಂಚರ್, ಅಕಾಂಪ್ಲಿಶೆಡ್ ಮತ್ತು ಕ್ರಿಯೆಟಿವ್ ಎನ್ನುವ ನಾಲ್ಕು ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿರಲಿದೆ. ಪಂಚ್ ಹೊಸ ಕಾರು ಮಾದರಿಯು ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಅತ್ಯುತ್ತಮ ವಿನ್ಯಾಸ, ಬಲಿಷ್ಠ ಎಂಜಿನ್ ಆಯ್ಕೆ ಮತ್ತು ಬೆಲೆ ವಿಚಾರವಾಗಿ ಗ್ರಾಹಕರನ್ನು ಸೆಳೆಯಲಿದ್ದು, ಹೊಸ ಕಾರು ಕೇವಲ ಒಂದೇ ಪೆಟ್ರೋಲ್ ಎಂಜಿನ್‌ನಲ್ಲಿ ಮಾತ್ರವೇ ಖರೀದಿಗೆ ಲಭ್ಯವಿರಲಿದೆ.
ಹೊಸ ಪಂಚ್ ಮೈಕ್ರೊ ಎಸ್‌ಯುವಿ ಕಾರಿನಲ್ಲಿ ಟಾಟಾ ಕಂಪನಿಯು 1.2-ಲೀಟರ್ ತ್ರಿ ಸಿಲಿಂಡರ್ ನ್ಯಾಚುರಲ್ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿರುವ ಮಾದರಿಯನ್ನು ಖರೀದಿಸಬಹುದಾಗಿದೆ.
ಅತ್ಯುತ್ತಮ ಎಂಜಿನ್ ಆಯ್ಕೆಯೊಂದಿಗೆ ಹೊಸ ಕಾರು 83 ಬಿಎಚ್‌ಪಿ ಉತ್ಪಾದನಾ ಗುಣದೊಂದಿಗೆ ಸೆಗ್ಮೆಂಟ್ ಬೆಸ್ಟ್ ಗ್ರೌಂಡ್ ಕ್ಲಿಯೆರೆನ್ಸ್ ಸೇರಿದಂತೆ ಹಲವು ವಿಶೇಷತೆಗಳನ್ನು ಪಡೆದುಕೊಂಡಿದ್ದು, ಹಲವಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಸುರಕ್ಷತೆಯಲ್ಲೂ ಈ ಕಾರು ಉತ್ತಮ ಮಾದರಿಯಾಗಲಿದೆ.

ಹೊಸ ಕಾರಿನಲ್ಲಿ ಸ್ಮಾರ್ಟ್‌ಫೋನ್ ಸಂಪರ್ಕಿತ ಐರಾ ಕಾರ್ ಕನೆಕ್ಟ್ ತಂತ್ರಜ್ಞಾನವನ್ನು ಸಹ ಸೇರ್ಪಡೆ ಮಾಡಲಾಗಿದ್ದು, ಒಂದೇ ಸೂರಿನಡಿ 27 ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಳ್ಳಲು ಐರಾ ತಂತ್ರಜ್ಞಾನವು ಸಹಕಾರಿಯಾಗಿದೆ.
ಹಾಗೆಯೇ ಹೊಸ ಕಾರು ಟೊರಾರ್ನಾಡೊ ಬ್ಲ್ಯೂ, ಟೊಪಿಕಲ್ ಮಿಸ್ಟ್, ಡೇ ಟೋನಾ ಗ್ರೆ, ಮಿಟಿಯೊರ್ ಬ್ರೊನ್ಜ್, ಆಟೊಮಿಕ್ ಆರೇಂಜ್, ಆರ್ಕಸ್ ವೈಟ್ ಮತ್ತು ಕ್ಯಾಲಿಪ್ಸೊ ರೆಡ್ ಸೇರಿ ಪ್ರಮುಖ ಏಳು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿರಲಿದ್ದು, ಹೊಸ ಕಾರು ಖರೀದಿಗೆ ಈಗಾಗಲೇ ಕಂಪನಿಯು 21 ಸಾವಿರ ಮುಂಗಡದೊಂದಿಗೆ ಬುಕ್ಕಿಂಗ್ ಆರಂಭಿಸಿದೆ. ಹೊಸ ಕಾರು ದಹೆಲಿ ಎಕ್ಸ್‌ಶೋರೂಂ ಪ್ರಕಾರ ರೂ. 5.50 ಲಕ್ಷದಿಂದ ರೂ. 8 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯ ನೀರಿಕ್ಷೆಯಿದ್ದು, ಎಂಟ್ರಿ ಲೆವಲ್ ಕಾರು ಖರೀದಿದಾರರಿಗೆ ಖಂಡಿತವಾಗಿಯೂ ಈ ಕಾರು ಉತ್ತಮ ಆಯ್ಕೆಯಾಗಿರಲಿದೆ.


Click it and Unblock the Notifications