ಡಿಫೆನ್ಸ್ ಕ್ಯಾಂಟಿನ್‌ಗಳಲ್ಲೂ ಖರೀದಿಗೆ ಲಭ್ಯ ಟಾಟಾ ಹೊಸ ಪಂಚ್

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಜನಪ್ರಿಯ ಕಾರು ಮಾದರಿಗಳಾದ ಪಂಚ್ ಮೈಕ್ರೊ ಎಸ್‌ಯುವಿಯನ್ನು ಕ್ಯಾಂಟಿನ್ ಸ್ಟೋರ್ ಡಿರ್ಪಾಟ್ಮೆಂಟ್(ಸಿಎಸ್‌ಡಿ) ಮಳಿಗೆಗಳಲ್ಲೂ ಮಾರಾಟ ಆರಂಭಿಸಿದ್ದು, ವಿಶೇಷವಾಗಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮತ್ತು ನಿವೃತ್ತಿ ಹೊಂದಿರುವ ಸೇನಾಧಿಕಾರಿಗಳಿಗಾಗಿ ಮಾರಾಟಗೊಳ್ಳಲಿದೆ.

ಡಿಫೆನ್ಸ್ ಕ್ಯಾಂಟಿನ್‌ಗಳಲ್ಲೂ ಖರೀದಿಗೆ ಲಭ್ಯ ಟಾಟಾ ಹೊಸ ಪಂಚ್

ಡಿಫೆನ್ಸ್ ಕ್ಯಾಂಟಿನ್‌ಗಳಲ್ಲಿ ಸರ್ಕಾರವು ಸೇನಾಧಿಕಾರಿಗಳಿಗಾಗಿಯೇ ವಿಶೇಷ ರಿಯಾಯತಿ ದರದಲ್ಲಿ ದಿನನಿತ್ಯದ ಸಾಮಾಗ್ರಿಗಳನ್ನು ಮಾರಾಟ ಮಾಡುವ ಸೌಲಭ್ಯವನ್ನು ಹೊಂದಿದ್ದು, ಟಾಟಾ ಮೋಟಾರ್ಸ್ ಕಂಪನಿಯು ಕ್ಯಾಂಟಿನ್ ಸ್ಟೋರ್ ಡಿರ್ಪಾಟ್ಮೆಂಟ್ ಮಳಿಗೆಗಳಲ್ಲಿ ತನ್ನ ಹೊಸ ಪಂಚ್ ಕಾರು ಮಾದರಿಯನ್ನು ರಿಯಾಯ್ತಿ ದರದಲ್ಲಿ ಮಾರಾಟ ಆರಂಭಿಸಿದೆ.

ಡಿಫೆನ್ಸ್ ಕ್ಯಾಂಟಿನ್‌ಗಳಲ್ಲೂ ಖರೀದಿಗೆ ಲಭ್ಯ ಟಾಟಾ ಹೊಸ ಪಂಚ್

ಕ್ಯಾಂಟಿನ್ ಸ್ಟೋರ್ ಡಿರ್ಪಾಟ್ಮೆಂಟ್(ಸಿಎಸ್‌ಡಿ) ಮಳಿಗೆಗಳಲ್ಲಿ ಖರೀದಿ ಲಭ್ಯವಿರುವ ಪಂಚ್ ಕಾರು ಸಾಮಾನ್ಯ ಡೀಲರ್ಸ್‌ಗಳಲ್ಲಿ ಖರೀದಿಗೆ ಲಭ್ಯವಿರುವ ಮಾದರಿಗಿಂತಲೂ ರೂ.1 ಲಕ್ಷದಷ್ಟು ಕಡಿಮೆ ಬೆಲೆಗೆ ಮಾರಾಟಗೊಳ್ಳಲಿದೆ.

ಡಿಫೆನ್ಸ್ ಕ್ಯಾಂಟಿನ್‌ಗಳಲ್ಲೂ ಖರೀದಿಗೆ ಲಭ್ಯ ಟಾಟಾ ಹೊಸ ಪಂಚ್

ಸಿಎಸ್‌ಡಿ ಮಳಿಗೆಗಳಲ್ಲಿ ಖರೀದಿ ಲಭ್ಯವಿರುವ ಪಂಚ್ ಕಾರು ಮಾದರಿಯು ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4,86,631 ಮತ್ತು ಟಾಪ್ ಎಂಡ್ ಮಾದರಿಯು ರೂ. 8,05,733 ಬೆಲೆ ಹೊಂದಿದೆ. ಟಾಟಾ ಮೋಟಾರ್ಸ್ ಸೇರಿದಂತೆ ಕಾರು ತಯಾಕ ಕಂಪನಿಗಳು ಸಿಎಸ್‌ಡಿ ಮಾರಾಟ ಮಳಿಗೆಗಳಲ್ಲಿ ತಮ್ಮ ಹೊಸ ಕಾರುಗಳ ಮಾರಾಟ ಆರಂಭಿಸಿದ್ದು, ಸಾಮಾನ್ಯ ಮಾದರಿಗಳಿಂತಲೂ ಸಿಎಸ್‌ಡಿ ಕಾರು ಮಾದರಿಗಳು ಉತ್ತಮ ಬೆಲೆ ಹೊಂದಿರಲಿವೆ.

ಡಿಫೆನ್ಸ್ ಕ್ಯಾಂಟಿನ್‌ಗಳಲ್ಲೂ ಖರೀದಿಗೆ ಲಭ್ಯ ಟಾಟಾ ಹೊಸ ಪಂಚ್

ಪಂಚ್ ಕಾರು ಮಾದರಿಯು ವಿಶೇಷ ಫೀಚರ್ಸ್, ಬಜೆಟ್ ಬೆಲೆ ಮತ್ತು ಅತ್ಯುತ್ತಮ ಎಂಜಿನ್ ಆಯ್ಕೆಯೊಂದಿಗೆ ಮೈಕ್ರೊ ಎಸ್‌ಯುವಿ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಪಂಚ್ ಕಾರಿನ ಮೂಲಕ ಟಾಟಾ ಮೋಟಾರ್ಸ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಶೇ.10ರಷ್ಟು ಪಾಲು ಹೊಂದುವ ವಿಶ್ವಾಸದಲ್ಲಿದೆ.

ಡಿಫೆನ್ಸ್ ಕ್ಯಾಂಟಿನ್‌ಗಳಲ್ಲೂ ಖರೀದಿಗೆ ಲಭ್ಯ ಟಾಟಾ ಹೊಸ ಪಂಚ್

ಪಂಚ್ ಕಾರು ಪ್ಯೂರ್, ಅಡ್ವೆಂಚರ್, ಅಕಾಂಪ್ಲಿಶೆಡ್ ಮತ್ತು ಕ್ರಿಯೆಟಿವ್ ಎನ್ನುವ ನಾಲ್ಕು ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿದ್ದು, ವಿವಿಧ ಮಾದರಿಗಳ ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ಹೊಸ ಕಾರು ಸಾಮಾನ್ಯ ಗ್ರಾಹಕರಿಗೆ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.49 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9.09 ಲಕ್ಷ ಬೆಲೆ ಹೊಂದಿದೆ.

ಡಿಫೆನ್ಸ್ ಕ್ಯಾಂಟಿನ್‌ಗಳಲ್ಲೂ ಖರೀದಿಗೆ ಲಭ್ಯ ಟಾಟಾ ಹೊಸ ಪಂಚ್

ಪಂಚ್ ಕಾರಿನಲ್ಲಿ ಪ್ಯೂರ್ ವೆರಿಯೆಂಟ್ ಆರಂಭಿಕ ಮಾದರಿಯಾಗಿ ಮಾರಾಟಗೊಳ್ಳಲಿದ್ದರೆ ಕ್ರಿಯೆಟಿವ್ ಮಾದರಿಯು ಟಾಪ್ ಎಂಡ್ ಮಾದರಿಯಾಗಿ ಮಾರಾಟಗೊಳ್ಳಲಿದ್ದು, ಬೆಸ್ ವೆರಿಯೆಂಟ್‌ನಲ್ಲೂ ಕಂಪನಿಯು ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್‌ಗಳೊಂದಿಗೆ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಹೊಂದಿದೆ.

ಡಿಫೆನ್ಸ್ ಕ್ಯಾಂಟಿನ್‌ಗಳಲ್ಲೂ ಖರೀದಿಗೆ ಲಭ್ಯ ಟಾಟಾ ಹೊಸ ಪಂಚ್

ಸೆಗ್ಮೆಂಟ್ ಬೆಸ್ಟ್ ಫಿಚರ್ಸ್‌ಗಳೊಂದಿಗೆ ಅತ್ಯುತ್ತಮ ಎಂಜಿನ್ ಆಯ್ಕೆ ಹೊಂದಿರುವ ಟಾಟಾ ಪಂಚ್ ಕಾರಿನಲ್ಲಿ ಕಂಪನಿಯು 1.2-ಲೀಟರ್ ರಿವೊಟ್ರಾನ್ ತ್ರಿ ಸಿಲಿಂಡರ್ ನ್ಯಾಚುರಲ್ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಪರಿಚಯಿಸಿದೆ. 1.2-ಲೀಟರ್ ಪೆಟ್ರೋಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 83 ಬಿಎಚ್‌ಪಿ ಉತ್ಪಾದನಾ ಗುಣಹೊಂದಿದೆ.

ಡಿಫೆನ್ಸ್ ಕ್ಯಾಂಟಿನ್‌ಗಳಲ್ಲೂ ಖರೀದಿಗೆ ಲಭ್ಯ ಟಾಟಾ ಹೊಸ ಪಂಚ್

ಹೊಸ ಕಾರು 3840 ಎಂಎಂ ಉದ್ದ, 1800 ಎಂಎಂ ಅಗಲ ಮತ್ತು 1635 ಎಂಎಂ ಎತ್ತರದೊಂದಿಗೆ 2450 ಎಂಎಂ ವ್ಹೀಲ್ ಬೇಸ್, 187 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್‌ನೊಂದಿಗೆ ಪ್ರತಿ ಮಾದರಿಯಲ್ಲೂ ಕಂಪನಿಯು ಅತ್ಯುತ್ತಮ ಫೀಚರ್ಸ್‌ ಹೊಂದಿದೆ.

ಡಿಫೆನ್ಸ್ ಕ್ಯಾಂಟಿನ್‌ಗಳಲ್ಲೂ ಖರೀದಿಗೆ ಲಭ್ಯ ಟಾಟಾ ಹೊಸ ಪಂಚ್

ಪ್ಯೂರ್ ಮಾದರಿಯಲ್ಲಿ ಕಂಪನಿಯು ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಬ್ರೇಕ್ ಸ್ಯಾವಿ ಕಂಟ್ರೋಲ್, ಆರ್‌ಪಿಎಎಸ್, ಸೆಂಟ್ರೇಲ್ ಲಾಕಿಂಗ್ ಜೊತೆ ಕೀ, ಐಎಸಿ ಮತ್ತು ಇಎಸ್ಎಸ್ ಟೆಕ್ನಾಲಜಿ, ಫ್ರಂಟ್ ಪವರ್ ವಿಂಡೋ, ಟಿಲ್ಟ್ ಸ್ಟೀರಿಂಗ್, 90 ಡಿಗ್ರಿ ಡೋರ್ ಓಪನ್, ರಿಯರ್ ಪ್ಲ್ಯಾಟ್ ಫ್ಲೊರ್, ಬ್ಲ್ಯಾಕ್ ಒಡಿಹೆಚ್, ಹ್ಯುಮಿನಿಟಿ ಕ್ರೊಮ್ ಲೈನ್, ಪೆಟೆಂಡ್ ಬಂಪರ್, ಡೋರ್, ವೀಲ್ಹ್ ಆರ್ಚ್, ಸಿಲ್ ಕ್ಲಾಡಿಂಗ್ ಜೋಡಣೆ ಮಾಡಿದೆ.

ಡಿಫೆನ್ಸ್ ಕ್ಯಾಂಟಿನ್‌ಗಳಲ್ಲೂ ಖರೀದಿಗೆ ಲಭ್ಯ ಟಾಟಾ ಹೊಸ ಪಂಚ್

ಅಡ್ವೆಂಚರ್ ಮಾದರಿಯಲ್ಲಿ 4 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, 4 ಸ್ಪೀಕರ್ಸ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್, ಯುಎಸ್‌ಬಿ ಚಾರ್ಜಿಂಗ್ ಫೋರ್ಟ್, ಎಲೆಕ್ಟ್ರಿಕ್ ಮೂಲಕ ಹೊಂದಾಣಿಕೆ ಮಾಡಿಕೊಳ್ಳಬಹುದಾದ ರಿಯರ್ ವ್ಯೂ ಮಿರರ್, ಆಲ್ ಪವರ್ ವಿಂಡೋ, ಫಾಲೋ ಮಿ ಹೋಂ ಹೆಡ್‌ಲ್ಯಾಂಪ್, ಆಂಟಿ ಗ್ಲೆರ್ ಐಆರ್‌ಎಂವಿ, ಸೆಂಟ್ರಲ್ ರಿಮೋಟ್ ಲಾಕಿಂಗ್ ಜೊತೆ ಫ್ಲಿಪ್ ಕೀ, ಫುಲ್ ವ್ಹೀಲ್ ಕವರ್ ಮತ್ತು ಬಾಡಿ ಕಲರ್ ರಿಯರ್ ವ್ಯೂ ಮಿರರ್ ನೀಡಲಾಗಿದೆ.

ಡಿಫೆನ್ಸ್ ಕ್ಯಾಂಟಿನ್‌ಗಳಲ್ಲೂ ಖರೀದಿಗೆ ಲಭ್ಯ ಟಾಟಾ ಹೊಸ ಪಂಚ್

ಅಕಾಂಪ್ಲಿಶೆಡ್ ಆವೃತ್ತಿಯಲ್ಲಿ ಹೊಂದಾಣಿಕೆ ಮಾಡಬಹುದಾದ 7 ಇಂಚಿನ ಹರ್ಮನ್ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಅಂಡ್ರಾಯಿಡ್ ಆಟೋ ಮತ್ತು ಆಟೋ ಕಾರ್ ಪ್ಲೇ, 4 ಸ್ಪೀಕರ್ಸ್ ಮತ್ತು 2 ಟ್ವಿಟರ್, ರಿಯರ್ ವ್ಯೂ ಕ್ಯಾಮೆರಾ, ಎಲ್ಇಡಿ ಟೈಲ್ ಲ್ಯಾಂಪ್ಸ್, ಫ್ರಂಟ್ ಫಾಗ್ ಲ್ಯಾಂಪ್ಸ್, ಆರ್15 ಹೈಪರ್ ಸ್ಟೈಲ್ ವ್ಹೀಲ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, ಒನ್ ಟಚ್ ಡೋರ್ ವಿಂಡೋ ಡೌನ್, ಕ್ರೂಸ್ ಕಂಟ್ರೋಲ್, ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್ ಮತ್ತು ಸಿಟಿವಿ ಮಾದರಿಯಾಗಿ ಟ್ರಾಕ್ಷನ್ ಕಂಟ್ರೋಲ್ ಸೌಲಭ್ಯವಿದೆ.

ಡಿಫೆನ್ಸ್ ಕ್ಯಾಂಟಿನ್‌ಗಳಲ್ಲೂ ಖರೀದಿಗೆ ಲಭ್ಯ ಟಾಟಾ ಹೊಸ ಪಂಚ್

ಹೈ ಎಂಡ್ ಮಾದರಿಯಲ್ಲಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್ಎಸ್, ಆರ್16 ಡೈಮಂಡ್ ಕಟ್ ಅಲಾಯ್ ವ್ಹೀಲ್, ರೂಫ್ ರೈಲ್ಸ್, 7 ಇಂಚಿನ ಟಿಎಫ್‌ಟಿ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಆಟೋ ಹೆಡ್‌ಲ್ಯಾಂಪ್, ರೈನ್ ಸೆನ್ಸಿಂಗ್ ವೈಪರ್, ಆಟೋ ಫೋಡ್ಲಿಂಗ್ ರಿಯರ್ ವ್ಯೂ ಮಿರರ್, ಆಟೋಮ್ಯಾಟಿಕ್ ಎಸಿ ಕಂಟ್ರೋಲ್ ಸಿಸ್ಟಂ, ಕೂಲ್ಡ್ ಗ್ಲೊ ಬಾಕ್ಸ್, ರಿಯರ್ ವೈಪರ್ ಪ್ಲಸ್ ವಾಷ್, ರಿಯರ್ ಡಿಫಾಗರ್, ಪೆಡಲ್ ಲ್ಯಾಂಪ್ಸ್, ಹಿಂಬದಿಯ ಆಸನದಲ್ಲಿ ಆರ್ಮ್ ರೆಸ್ಟ್ ಮತ್ತು ಲೆದರ್ ಕೊಟಿಂಗ್ ಹೊಂದಿರುವ ಸ್ಟೀರಿಂಗ್ ಮತ್ತು ಗೇರ್ ನಾಬ್ ನೀಡಲಾಗಿದೆ.

Article Published On: Thursday, December 16, 2021, 12:38 [IST]
English summary
Tata punch micro suv now available in csd canteen details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+