ಹೊಸ ಸಫಾರಿ ಎಸ್‍ಯುವಿಯ ಉತ್ಪಾದನೆ ಆರಂಭಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸಫಾರಿ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಟಾಟಾ ಸಫಾರಿ ಎಸ್‍ಯುವಿಯು ಇದೇ ತಿಂಗಳ ಅಂತ್ಯದಲ್ಲಿ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

ಹೊಸ ಸಫಾರಿ ಎಸ್‍ಯುವಿಯ ಉತ್ಪಾದನೆ ಆರಂಭಿಸಿದ ಟಾಟಾ ಮೋಟಾರ್ಸ್

ಹೊಸ ಟಾಟಾ ಸಫಾರಿ ವರ್ಷನ್ ಬ್ರ್ಯಾಂಡ್‌ನ ಹ್ಯಾರಿಯರ್ ಎಸ್‌ಯುವಿ 7-ಸೀಟರ್ ಮಾದರಿಯಾಗಿದೆ. ಈ ಎಸ್‍ಯುವಿಗಾಗಿ ಬುಕ್ಕಿಂಗ್ ಅನ್ನು ಶೀಘ್ರದಲ್ಲೇ ಪ್ರಾರಂಭಿಸಲಿದೆ. ಇನ್ನು ಈ ಹೊಸ ಸಫಾರಿ ಎಸ್‍ಯುವಿಯ ಉತ್ಪಾದನೆಯನ್ನು ಪ್ರಾರಂಭಿಸಲಾಗಿದೆ. ಉತ್ಪದನಾ ಘಟಕದಲ್ಲಿ ಕಾಣಿಸಿಕೊಂಡ ಸಫಾರಿ ಎಸ್‍ಯುವಿಯ ಸ್ಪೈ ಚಿತ್ರಗಳನ್ನು ಗಾಡಿಫೈ ಬಹಿರಂಗಪಡಿಸಿದೆ. ಚಿತ್ರದಲ್ಲಿ ಎಸ್‍ಯುವಿಯ ಅಂತಿಮ ವಿನ್ಯಾಸದ ವಿವರಗಳನ್ನು ಬಹಿರಂಗಪಡಿಸುತ್ತದೆ.

ಹೊಸ ಸಫಾರಿ ಎಸ್‍ಯುವಿಯ ಉತ್ಪಾದನೆ ಆರಂಭಿಸಿದ ಟಾಟಾ ಮೋಟಾರ್ಸ್

ಇದೀಗ ಟಾಟಾ ಹೊಸ ಸಫಾರಿ ಎಸ್‍ಯುವಿಯ ಅಧಿಕೃತ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಟೀಸರ್ ಚಿತ್ರದಲ್ಲಿ ಆಕರ್ಷಕವಾಗಿದ್ದು, ಈ ಎಸ್‍ಯುವಿಯ ಹೊಸ ಫ್ರಂಟ್ ಗ್ರಿಲ್ ಹ್ಯಾರಿಯರ್ ಮಾದರಿಗಿಂತ ಭಿನ್ನವಾಗಿದೆ. ಆದರೆ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು ಒಂದೇ ರೀತಿಯಲ್ಲಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಹೊಸ ಸಫಾರಿ ಎಸ್‍ಯುವಿಯ ಉತ್ಪಾದನೆ ಆರಂಭಿಸಿದ ಟಾಟಾ ಮೋಟಾರ್ಸ್

ಚಿತ್ರದಿಂದ ನೋಡಿದಂತೆ, ಹೊಸ ಟಾಟಾ ಸಫಾರಿ ಎಸ್‌ಯುವಿ ತನ್ನ ಗ್ರಿಲ್‌ನಲ್ಲಿ ಹೊಸ ಟ್ರೈ-ಏರೋ ವಿನ್ಯಾಸವನ್ನು ಹೊಂದಿದ್ದು, ಈ ಫ್ರಂಟ್ ಗ್ರಿಲ್ ಹ್ಯಾರಿಯರ್ ಮಾದರಿಗಿಂತ ಭಿನ್ನವಾಗಿದೆ. ಉಳಿದಂತೆ ಮುಂಭಾಗವು ಹ್ಯಾರಿಯರ್ ಎಸ್‍ಯುವಿಗೆ ಹೋಲುತ್ತದೆ.

ಹೊಸ ಸಫಾರಿ ಎಸ್‍ಯುವಿಯ ಉತ್ಪಾದನೆ ಆರಂಭಿಸಿದ ಟಾಟಾ ಮೋಟಾರ್ಸ್

ಆರಂಭದಲ್ಲಿ 7-ಸೀಟರ್ ಎಸ್‍ಯುವಿಯನ್ನು ಗ್ರಾವಿಟಾಸ್ ಎಂದು ಕರೆಯಲಾಗುತ್ತಿತ್ತು, ಆದರೆ ಎಸ್‌ಯುವಿಗೆ ಅಧಿಕೃತವಾಗಿ ಸಫಾರಿ ಎಂದು ಹೆಸರಿಡಲಾಗಿದೆ. ಈ ಹೊಸ ಎಸ್‍ಯುವಿಯು ಭಾರತದಲ್ಲಿ ಹಲವು ಬಾರಿ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ. ಆದರೆ ಈ ಹೊಸ ಎಸ್‍ಯುವಿಗೆ ಐಕಾನಿಕ್ ಆದ ಸಫಾರಿ ಹೆಸರನ್ನು ನೀಡವ ಮೂಲಕ ಕುತೂಹಲವನ್ನು ಮೂಡಿಸಿದೆ.

MOST READ: 2020ರ ಡಿಸೆಂಬರ್‌ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

ಹೊಸ ಸಫಾರಿ ಎಸ್‍ಯುವಿಯ ಉತ್ಪಾದನೆ ಆರಂಭಿಸಿದ ಟಾಟಾ ಮೋಟಾರ್ಸ್

ಕಂಪನಿಯ ಪ್ರಕಾರ, ಭಾರತದಲ್ಲಿ ಟಾಟಾ ಸಫಾರಿ ಲೈಫ್ ಸ್ಟೈಲ್ ಎಸ್‍ಯುವಿಯಾಗಿರಲಿದೆ ಮತ್ತು ಈ ವಿಭಾಗದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಬಹುದು. ಸಫಾರಿ ಭಾರತದಲ್ಲಿ ಎರಡು ದಶಕಗಳವರೆಗೆ ಮಾರಾಟವಾದ ಎಸ್‍ಯುವಿಯಾಗಿದೆ.

ಹೊಸ ಸಫಾರಿ ಎಸ್‍ಯುವಿಯ ಉತ್ಪಾದನೆ ಆರಂಭಿಸಿದ ಟಾಟಾ ಮೋಟಾರ್ಸ್

ಇದೀಗ ಹೊಸ ರೂಪಾತಾಳಿ ಮತ್ತೆ ಈ ಐಕಾನಿಕ್ ಸಫಾರಿ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಗ್ರಾಹಕರ ಗಮನಸೆಳೆಯಲು ಸಫಾರಿ ಎಸ್‍ಯುವಿಯ ಟ್ಯಾಗ್ ಲೈನ್ ‘ರಿಕ್ಲೈಮ್ ದೇರ್ ಲೈಫ್' ತರಲು ಕಂಪನಿಯು ಸಜ್ಜಾಗಿದೆ. ಹೊಸ ಸಫಾರಿ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಹೊಂದಿರುತ್ತದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಹೊಸ ಸಫಾರಿ ಎಸ್‍ಯುವಿಯ ಉತ್ಪಾದನೆ ಆರಂಭಿಸಿದ ಟಾಟಾ ಮೋಟಾರ್ಸ್

ಲ್ಯಾಂಡ್ ರೋವರ್‌ನಿಂದ ಹೆಸರಾಂತ ಡಿ8 ಪ್ಲಾಟ್‌ಫಾರ್ಮ್‌ನಿಂದ ಪಡೆದ ಒಮೆಗಾರ್ಕ್ ಪ್ಲಾಟ್‌ಫಾರ್ಮ್ ಜೊತೆಗೆ ಎಸ್‌ಯುವಿ ಇಂಪ್ಯಾಕ್ಟ್ 2.0 ವಿನ್ಯಾಸ ಶೈಲಿಯನ್ನು ಹೊಂದಿರುತ್ತದೆ.

ಹೊಸ ಸಫಾರಿ ಎಸ್‍ಯುವಿಯ ಉತ್ಪಾದನೆ ಆರಂಭಿಸಿದ ಟಾಟಾ ಮೋಟಾರ್ಸ್

ಟಾಟಾ ಸಫಾರಿ 2.0-ಲೀಟರ್, ನಾಲ್ಕು ಸಿಲಿಂಡರ್, ‘ಕ್ರಯೋಟೆಕ್' ಡೀಸೆಲ್ ಎಂಜಿನ್‌ ಅನ್ನು ಹೊಂದಿರುತ್ತದೆ. ಈ ಎಂಜಿನ್ 168 ಬಿಹೆಚ್‌ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ನೀಡಲಾಗುತ್ತದೆ.

ಹೊಸ ಸಫಾರಿ ಎಸ್‍ಯುವಿಯ ಉತ್ಪಾದನೆ ಆರಂಭಿಸಿದ ಟಾಟಾ ಮೋಟಾರ್ಸ್

ಈ ಹೊಸ ಟಾಟಾ ಸಫಾರಿ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಪಾರುಪತ್ಯ ಸಾಧಿಸಲು ಸಜಾಗುತ್ತಿದೆ. ಈ ಸಫಾರಿ ಎಸ್‍ಯುವಿಯು ಇತ್ತೀಚೆಗೆ ಬಿಡುಗಡೆಯಾದ ಎಂಜಿ ಹೆಕ್ಟರ್ ಪ್ಲಸ್ ಮತ್ತು ಮುಂಬರುವ ಹ್ಯುಂಡೈ ಕ್ರೆಟಾ 7-ಸೀಟರ್ ಮತ್ತು ಜೀಪ್ ಕಂಪಾಸ್-7 ಸೀಟರ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Article Published On: Sunday, January 10, 2021, 13:00 [IST]
English summary
Tata Safari Production Begins Ahead Of Its Launch. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+