ಸಫಾರಿ ಕಾರಿನ ಅತಿದೊಡ್ಡ ಜಾಹೀರಾತು ಫಲಕ ನಿರ್ಮಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ನ್ಯೂ ಸಫಾರಿ ಎಸ್‌ಯುವಿ ಕಾರಿನ ಮೂಲಕ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಮತ್ತಷ್ಟು ಗ್ರಾಹಕರನ್ನು ಸೆಳೆಯಲು ಆಕರ್ಷಕ ಜಾಹೀರಾತುಗಳನ್ನು ಪ್ರಕಟಿಸುವ ಮೂಲಕ ಪ್ರತಿಸ್ಪರ್ಧಿ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದೆ.

ಸಫಾರಿ ಕಾರಿನ ಅತಿದೊಡ್ಡ ಜಾಹೀರಾತು ಫಲಕ ನಿರ್ಮಿಸಿದ ಟಾಟಾ ಮೋಟಾರ್ಸ್

ಯಾವುದೇ ಒಂದು ಹೊಸ ಉತ್ಪನ್ನದ ಕುರಿತು ಗ್ರಾಹಕರನ್ನು ಸೆಳೆಯಲು ಪ್ರತಿಯೊಂದು ಕಂಪನಿಗಳು ವಿವಿಧ ಮಾದರಿಯ ಹಲವಾರು ರೀತಿಯ ಜಾಹೀರಾತು ವಿಧಾನಗಳನ್ನು ಬಳಸಿಕೊಳ್ಳುವುದು ಸಾಮಾನ್ಯ. ಅತ್ಯುತ್ತಮ ಜಾಹೀರಾತುಗಳು ಯಾವುದೇ ಮಾದರಿಯ ಹೊಸ ಉತ್ಪನ್ನಗಳ ಬಗೆಗೆ ಗ್ರಾಹಕರಿಗೆ ಮಾಹಿತಿ ನೀಡಲು ಸಾಕಷ್ಟು ಸಹಕಾರಿಯಾಗಿದ್ದು, ಇತ್ತೀಚೆಗೆ ಜನಪ್ರಿಯ ಕಾರು ಉತ್ಪಾದನಾ ಕಂಪನಿ ಟಾಟಾ ಮೋಟಾರ್ಸ್ ಕೂಡಾ ಜಾಹೀರಾತು ವಿಚಾರವಾಗಿ ಗಮನಸೆಳೆಯುತ್ತಿದೆ.

ಸಫಾರಿ ಕಾರಿನ ಅತಿದೊಡ್ಡ ಜಾಹೀರಾತು ಫಲಕ ನಿರ್ಮಿಸಿದ ಟಾಟಾ ಮೋಟಾರ್ಸ್

ಸಾಮಾಜಿಕ ಜಾಲತಾಣಗಳ ಮೂಲಕ ಆಕರ್ಷಕ ಜಾಹೀರಾತುಗಳನ್ನು ಪ್ರಕಟಿಸುವ ಮೂಲಕ ಇತ್ತೀಚೆಗೆ ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಳ್ಳುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ನ್ಯೂ ಜನರೇಷನ್ ಸಫಾರಿ ಎಸ್‌ಯುವಿಗಾಗಿ ದೇಶದಲ್ಲೇ ಅತಿ ದೊಡ್ಡ ಜಾಹೀರಾತು ಫಲಕ ನಿರ್ಮಾಣ ಮಾಡಿದೆ.

ಸಫಾರಿ ಕಾರಿನ ಅತಿದೊಡ್ಡ ಜಾಹೀರಾತು ಫಲಕ ನಿರ್ಮಿಸಿದ ಟಾಟಾ ಮೋಟಾರ್ಸ್

ಮುಂಬೈ-ಪುಣೆ ಎಕ್ಸ್‌ಪ್ರೆಸ್ ವೇ ನಲ್ಲಿ ಟಾಟಾ ಮೋಟಾರ್ಸ್ ಕಂಪನಿಯ ಸಫಾರಿ ಕಾರಿನ ಜಾಹೀರಾತು ಫಲಕವು ನಿರ್ಮಾಣವಾಗಿದ್ದು, ಬರೋಬ್ಬರಿ 125 ಅಡಿ ಎತ್ತರ ಮತ್ತು 225 ಅಡಿ ಅಗಲವಾಗಿದೆ.

ಸಫಾರಿ ಕಾರಿನ ಅತಿದೊಡ್ಡ ಜಾಹೀರಾತು ಫಲಕ ನಿರ್ಮಿಸಿದ ಟಾಟಾ ಮೋಟಾರ್ಸ್

ಸಫಾರಿ ಕಾರಿನ ಹೊಸ ಜಾಹೀರಾತು ಫಲಕ ನಿರ್ಮಾಣಕ್ಕಾಗಿ ಬರೋಬ್ಬರಿ 265 ಟನ್ ಕಬ್ಬಿಣ ಬಳಕೆ ಮಾಡಲಾಗಿದ್ದು, ರಾತ್ರಿ ವೇಳೆಯು ಜಾಹೀರಾತು ಫಲಕ ಗೋಚರಿಸುವಂತೆ ಭಾರೀ ಪ್ರಮಾಣದ ಲೈಟಿಂಗ್ಸ್ ಬಳಕೆ ಮಾಡಲಾಗಿದೆ. ಮತ್ತೊಂದು ವಿಶೇಷ ಅಂದರೆ, ಹೈವೇ ಪ್ರಯಾಣಿಕರಿಗೆ ಜಾಹೀರಾತು ಫಲಕದಿಂದ ಯಾವುದೇ ರೀತಿಯ ಗೊಂದಲಗಳಾದಂತೆ ಮತ್ತು ಸ್ಪಷ್ಟವಾಗಿ ಜಾಹೀರಾತು ವೀಕ್ಷಿಸಬಹುದಾದ ರೀತಿಯಲ್ಲಿ ನಿರ್ಮಾಣ ಮಾಡಿದ್ದು, ಹೊಸ ಜಾಹೀರಾತು ಮೂಲಕ ನ್ಯೂ ಜನರೇಷನ್ ಸಫಾರಿ ಕಾರಿಗಾಗಿ ಹೆಚ್ಚಿನ ಮಟ್ಟದ ಬೇಡಿಕೆ ನೀರಿಕ್ಷೆಯಲ್ಲಿದೆ.

ಟಾಟಾ ಮೋಟಾರ್ಸ್ ತನ್ನ ಜನಪ್ರಿಯ ಸಫಾರಿ ಕಾರಿನ ನ್ಯೂ ಜನರೇಷನ್ ಮಾದರಿಯನ್ನು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಅಭಿವೃದ್ದಿಗೊಳಿಸಿ ಬಿಡುಗಡೆ ಮಾಡಿದ್ದು, ಹೊಸ ಕಾರು ಸ್ಟ್ಯಾಂಡರ್ಡ್ ಮತ್ತು ಅಡ್ವೆಂಚರ್ ಆವೃತ್ತಿಯೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಸಫಾರಿ ಕಾರಿನ ಅತಿದೊಡ್ಡ ಜಾಹೀರಾತು ಫಲಕ ನಿರ್ಮಿಸಿದ ಟಾಟಾ ಮೋಟಾರ್ಸ್

2021ರ ಸಫಾರಿ ಆವೃತ್ತಿಯು ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಟಿ, ಎಕ್ಸ್‌ಟಿ ಪ್ಲಸ್, ಎಕ್ಸ್‌ಜೆಡ್, ಎಕ್ಸ್‌ಜೆಡ್ ಪ್ಲಸ್ ಮತ್ತು ಎಕ್ಸ್‌ಜೆಡ್ ಪ್ಲಸ್ ಅಡ್ವೆಂಚರ್ ಪೆರಸೊನಾ ಮಾದರಿಗಳೊಂದಿಗೆ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.14.69 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ. 21.45 ಲಕ್ಷ ಬೆಲೆ ಹೊಂದಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಸಫಾರಿ ಕಾರಿನ ಅತಿದೊಡ್ಡ ಜಾಹೀರಾತು ಫಲಕ ನಿರ್ಮಿಸಿದ ಟಾಟಾ ಮೋಟಾರ್ಸ್

ಒಮೆಗಾ ಪ್ಲ್ಯಾಟ್‌ಫಾರ್ಮ್‌ನಿಂದಾಗಿ ಟಾಟಾ ಹೊಸ ಕಾರಿಗೆ ಐಷಾರಾಮಿ ವಿನ್ಯಾಸ, ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ನೀಡುವುದರ ಜೊತೆಗೆ ಎಂಜಿನ್ ಕಾರ್ಯಕ್ಷಮತೆಯಲ್ಲೂ ಗಮನಸೆಳೆಯಲಿದ್ದು, ಹೊಸ ಕಾರಿನಲ್ಲಿ ಹಲವಾರು ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಸಫಾರಿ ಕಾರಿನ ಅತಿದೊಡ್ಡ ಜಾಹೀರಾತು ಫಲಕ ನಿರ್ಮಿಸಿದ ಟಾಟಾ ಮೋಟಾರ್ಸ್

ಸಫಾರಿ ಎಸ್‌ಯುವಿಯಲ್ಲಿ ಆರು ಸ್ಪೀಡ್ ಮ್ಯಾನುವಲ್ ಅಥವಾ ಆರು ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಗೇರ್‌ಬಾಕ್ಸ್ ಆಯ್ಕೆ ಹೊಂದಿರುವ 2.0-ಲೀಟರ್ ಕ್ರಿಯೊಟೆಕ್ ಡೀಸೆಲ್ ಎಂಜಿನ್ ಆಯ್ಕೆ ನೀಡಲಾಗಿದ್ದು, ಫ್ರಂಟ್ ವೀಲ್ಹ್ ಡ್ರೈವ್ ಸಿಸ್ಟಂನೊಂದಿಗೆ 168-ಬಿಎಚ್‌ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದೆ.

Most Read Articles

Kannada
English summary
Tata Safari’s Biggest Hoarding In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X