ಹೊಸ ಸಫಾರಿ ಎಸ್‌ಯುವಿ ಕಾರು ಖರೀದಿಗೆ ಬುಕ್ಕಿಂಗ್ ಆರಂಭಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಐಕಾನಿಕ್ ಕಾರು ಮಾದರಿಯಾದ ಸಫಾರಿ ಎಸ್‌ಯುವಿ ಆವೃತ್ತಿಯನ್ನು ಹೊಸ ರೂಪದಲ್ಲಿ ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಜನವರಿ 26ರಂದು ಬಿಡುಗಡೆಯಾಗಲಿರುವ ಹೊಸ ಕಾರು ಖರೀದಿಗಾಗಿ ಈಗಾಗಲೇ ಪ್ರಮುಖ ಟಾಟಾ ಡೀಲರ್ಸ್‌ಗಳಲ್ಲಿ ಬುಕ್ಕಿಂಗ್ ಪ್ರಕ್ರಿಯೆ ಆರಂಭವಾಗಿದೆ.

ಹೊಸ ಸಫಾರಿ ಎಸ್‌ಯುವಿ ಕಾರು ಖರೀದಿಗೆ ಬುಕ್ಕಿಂಗ್ ಆರಂಭಿಸಿದ ಟಾಟಾ

2020ರ ಫೆಬ್ರುವರಿಯಲ್ಲಿ ನಡೆದಿದ್ದ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡಿದ್ದ ಗ್ರಾವಿಟಾಸ್ ಎಸ್‌ಯುವಿ ಮಾದರಿಯನ್ನೇ ಇದೀಗ ಸಫಾರಿ ಹೆಸರಿನೊಂದಿಗೆ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿರುವ ಟಾಟಾ ಕಂಪನಿಯು ಶೀಘ್ರದಲ್ಲೇ ಹೊಸ ಕಾರನ್ನು ರಸ್ತೆಗಿಳಿಸುತ್ತಿದ್ದು, ಎಸ್‌ಯುವಿ ಕಾರು ಮಾರಾಟದಲ್ಲಿ ತನ್ನದೆ ಜನಪ್ರಿಯತೆ ಹೊಂದಿದ್ದ ಸಫಾರಿ ಕಾರು ಮಾದರಿಯನ್ನೇ ಮತ್ತೊಮ್ಮೆ ಮಾರುಕಟ್ಟೆಗೆ ಪರಿಚಯಿಸುತ್ತಿದೆ.

ಹೊಸ ಸಫಾರಿ ಎಸ್‌ಯುವಿ ಕಾರು ಖರೀದಿಗೆ ಬುಕ್ಕಿಂಗ್ ಆರಂಭಿಸಿದ ಟಾಟಾ

1998ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿದ್ದ ಮೊದಲ ತಲೆಮಾರಿನ ಸಫಾರಿ ಕಾರು ಮಾದರಿಯು ಗ್ರಾಹಕರ ಬೇಡಿಕೆಯೆಂತೆ 2003, 2009, 2013 ಮತ್ತು 2018ರಲ್ಲಿ ಉನ್ನತೀಕರಣ ಆವೃತ್ತಿಗಳೊಂದಿಗೆ ಬಿಡುಗಡೆಗೊಳ್ಳುವ ಮೂಲಕ ಉತ್ತಮ ಬೇಡಿಕೆ ಕಾಯ್ದುಕೊಂಡಿತ್ತು.

ಹೊಸ ಸಫಾರಿ ಎಸ್‌ಯುವಿ ಕಾರು ಖರೀದಿಗೆ ಬುಕ್ಕಿಂಗ್ ಆರಂಭಿಸಿದ ಟಾಟಾ

ಆದರೆ ಪ್ರತಿಸ್ಪರ್ಧಿ ಕಾರುಗಳ ಪೈಪೋಟಿ ನಡುವೆ ಸಫಾರಿ ಕಾರು ಮಾದರಿಯ ಉತ್ಪಾದನೆಯನ್ನು 2019ರಲ್ಲಿ ಸ್ಥಗಿತಗೊಳಿಸಿದ ಟಾಟಾ ಮೋಟಾರ್ಸ್ ಕಂಪನಿಯು ಹೊಸ ಕಾರುಗಳತ್ತ ಗಮನಹರಿಸಿತ್ತು. ಇದಕ್ಕೆ ಪೂರಕವಾಗಿ 2020ರ ದೆಹಲಿ ಎಕ್ಸ್‌ಪೋದಲ್ಲಿ ಗ್ರಾವಿಟಾಸ್ 7 ಸೀಟರ್ ಎಸ್‌ಯುವಿ ಅನಾವರಣಗೊಳಿಸಿತ್ತು.

ಹೊಸ ಸಫಾರಿ ಎಸ್‌ಯುವಿ ಕಾರು ಖರೀದಿಗೆ ಬುಕ್ಕಿಂಗ್ ಆರಂಭಿಸಿದ ಟಾಟಾ

2020ರ ಕೊನೆಯ ತನಕವೂ ಹೊಸ ಎಸ್‌ಯುವಿ ಕಾರು ಮಾದರಿಯನ್ನು ಗ್ರಾವಿಟಾಸ್ ಹೆಸರಿನಲ್ಲೇ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದ ಟಾಟಾ ಕಂಪನಿಯು ಕೊನೆ ಗಳಿಗೆಯಲ್ಲಿ ಹೊಸ ಕಾರನ್ನು ಈ ಹಿಂದಿನ ಜನಪ್ರಿಯ ಸಫಾರಿ ಮಾದರಿಯ ರೀ ಬ್ರಾಂಡ್ ಮಾದರಿಯಾಗಿ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ. ಹೊಸ ಸಫಾರಿ ಮಾದರಿಯು ಎಸ್‌ಯುವಿ ಕಾರು ಮಾದರಿಯಲ್ಲೇ ಅತ್ಯುತ್ತಮ ಫೀಚರ್ಸ್‌ಗಳನ್ನು ಒಳಗೊಂಡಿರಲಿದ್ದು, ಹ್ಯಾರಿಯರ್ ಮುಂದುವರಿದ ಭಾಗವಾಗಿರುವ ಸಫಾರಿ ಕಾರು ಮೂರನೇ ಸಾಲಿನ ಆಸದೊಂದಿಗೆ ಫುಲ್ ಸೈಜ್ ಎಸ್‌ಯುವಿ ಪ್ರಿಯರನ್ನು ಸೆಳೆಯಲಿದೆ.

ಹೊಸ ಸಫಾರಿ ಎಸ್‌ಯುವಿ ಕಾರು ಖರೀದಿಗೆ ಬುಕ್ಕಿಂಗ್ ಆರಂಭಿಸಿದ ಟಾಟಾ

OMEGA ಕಾರು ಉತ್ಪಾದನಾ ತಂತ್ರಜ್ಞಾನದ ಮೂಲಕ ಹೊಸ ಕಾರುಗಳ ಅಭಿವೃದ್ದಿಯಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಿರುವ ಟಾಟಾ ಕಂಪನಿಯು ಹೊಸ ಪ್ಲ್ಯಾಟ್‌ಫಾರ್ಮ್ ಮೂಲಕ ಕಾರುಗಳಲ್ಲಿ ಐಷಾರಾಮಿ ವಿನ್ಯಾಸ, ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ನೀಡುವುದರ ಜೊತೆಗೆ ಎಂಜಿನ್ ಕಾರ್ಯಕ್ಷಮತೆಯಲ್ಲೂ ಗಮನಸೆಳಯುತ್ತಿವೆ.

ಹೊಸ ಸಫಾರಿ ಎಸ್‌ಯುವಿ ಕಾರು ಖರೀದಿಗೆ ಬುಕ್ಕಿಂಗ್ ಆರಂಭಿಸಿದ ಟಾಟಾ

ಹೀಗಾಗಿ ಬಿಡುಗಡೆಯಾಗಲಿರುವ ಸಫಾರಿ ಎಸ್‌ಯುವಿ ಹೊಸ ಕಾರು ಕೂಡಾ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಲಿದ್ದು, ಪ್ರೀಮಿಯಂ ಫೀಚರ್ಸ್‌ನಲ್ಲೂ ಗಮನಸೆಳೆಯಲಿದೆ.

ಹೊಸ ಸಫಾರಿ ಎಸ್‌ಯುವಿ ಕಾರು ಖರೀದಿಗೆ ಬುಕ್ಕಿಂಗ್ ಆರಂಭಿಸಿದ ಟಾಟಾ

ಹಾಗೆಯೇ ಹೊಸ ಕಾರಿನಲ್ಲಿ ಸ್ಪೋರ್ಟಿ ಮಾದರಿಯ ಆಸನಗಳೊಂದಿಗೆ ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್ಹ್ ಮೌಂಟೆಡ್, ತ್ರೀ ಜೋನ್ ಕ್ಲೈಮೆಟ್ ಕಂಟ್ರೋಲ್, ವಿವಿಧ ಡ್ರೈವ್ ಮೋಡ್, ಕನ್ವರ್ಷನಲ್ ಸನ್‌ರೂಫ್ ಸೇರಿದಂತೆ ಹಲವು ಪ್ರೀಮಿಯಂ ಫೀಚರ್ಸ್‌ಗಳಿವೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಹೊಸ ಸಫಾರಿ ಎಸ್‌ಯುವಿ ಕಾರು ಖರೀದಿಗೆ ಬುಕ್ಕಿಂಗ್ ಆರಂಭಿಸಿದ ಟಾಟಾ

ಈ ಮೂಲಕ ಹೊಸ ಕಾರು ಆವೃತ್ತಿಯು ಪ್ರತಿಸ್ಪರ್ಧಿ ಕಾರು ಮಾದರಿಗಳಾದ ಹ್ಯುಂಡೈ ಟ್ಯೂಸಾನ್, ಮಹೀಂದ್ರಾ ಅಲ್ಟುರಾಸ್ ಜಿ4, ಫೋರ್ಡ್ ಎಂಡೀವರ್ ಜೊತೆಗೆ ಟೊಯೊಟಾ ಫಾರ್ಚೂನರ್‌ ಕಾರಿಗೂ ಪೈಪೋಟಿ ನೀಡಲಿದ್ದು, ಉತ್ತಮ ಸ್ಥಳಾವಕಾಶದೊಂದಿಗೆ ಎಸ್‌ಯುವಿ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ.

ಹೊಸ ಸಫಾರಿ ಎಸ್‌ಯುವಿ ಕಾರು ಖರೀದಿಗೆ ಬುಕ್ಕಿಂಗ್ ಆರಂಭಿಸಿದ ಟಾಟಾ

ಹೊಸ ಸಫಾರಿ ಕಾರಿನಲ್ಲಿ ಹ್ಯಾರಿಯರ್ ಮಾದರಿಯಲ್ಲೇ 2.0-ಲೀಟರ್(1,956 ಸಿಸಿ) 4 ಸಿಲಿಂಡರ್, ಕ್ರೆಯೊಟೆಕ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದ್ದು, 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 170-ಬಿಹೆಚ್‍ಪಿ, 350-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಹೊಸ ಸಫಾರಿ ಎಸ್‌ಯುವಿ ಕಾರು ಖರೀದಿಗೆ ಬುಕ್ಕಿಂಗ್ ಆರಂಭಿಸಿದ ಟಾಟಾ

ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಗಮನಸೆಳೆಯಲಿರುವ ಹೊಸ ಸಫಾರಿ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 19 ಲಕ್ಷದಿಂದ ಟಾಪ್ ಎಂಡ್ ಆವೃತ್ತಿಯು ರೂ.23 ಲಕ್ಷ ಬೆಲೆ ಹೊಂದಿರಬಹುದೆಂದು ನೀರಿಕ್ಷಿಸಲಾಗಿದೆ.

Article Published On: Monday, January 11, 2021, 20:37 [IST]
English summary
Tata Safari Unofficial Bookings Commences Before Launch. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+