ಮಾರಾಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ Tata Starbus

ಭಾರತದ ಅತಿ ದೊಡ್ಡ ವಾಣಿಜ್ಯ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ (Tata Motors) 1 ಲಕ್ಷ ಯುನಿಟ್ ಟಾಟಾ ಸ್ಟಾರ್‌ಬಸ್ ಗಳನ್ನು ಮಾರಾಟ ಮಾಡಿರುವುದಾಗಿ ತಿಳಿಸಿದೆ. ಟಾಟಾ ಸ್ಟಾರ್‌ಬಸ್ ದೇಶದಲ್ಲೇ ಅತಿ ಹೆಚ್ಚು ಮಾರಾಟವಾಗುತ್ತಿರುವ ಸಂಪೂರ್ಣ ನಿರ್ಮಾಣದ ಬಸ್ ಬ್ರಾಂಡ್ ಆಗಿದೆ. ಈ ಬಸ್ ಪ್ರಯಾಣಿಕರ ಅನುಕೂಲತೆ, ವಿಶ್ವಾಸಾರ್ಹತೆ ಹಾಗೂ ಚಾಲನಾ ಸೌಕರ್ಯಕ್ಕೆ ಸಮಾನಾರ್ಥಕವಾಗಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ Tata Starbus

ಟಾಟಾ ಸ್ಟಾರ್‌ಬಸ್ ಅನ್ನು ವಿವಿಧ ಕಾನ್ಫಿಗರೇಶನ್‌ಗಳಲ್ಲಿ ಮಾರಾಟ ಮಾಡಲಾಗುತ್ತದೆ. ಸ್ಟಾರ್ ಬಸ್ ಸಿಬ್ಬಂದಿ, ಶಾಲಾ ಸಾರಿಗೆ ಸೇರಿದಂತೆ ಹಲವು ಕೆಲಸಗಳಿಗೆ ಸೂಕ್ತವಾಗಿದೆ. ಸ್ಟಾರ್ ಬಸ್ ದೇಶದ ಸಾರ್ವಜನಿಕ ಸಾರಿಗೆ ವಲಯದಲ್ಲಿರುವ ಪ್ರಮುಖ ವಾಹನವಾಗಿದೆ. ಟಾಟಾ ಸ್ಟಾರ್‌ಬಸ್ ಅನ್ನು ಎಲೆಕ್ಟ್ರಿಕ್ ಬಸ್ ಆಗಿ ಮಾರಾಟ ಮಾಡಲಾಗುತ್ತದೆ. ಈ ಬಸ್ ಭಾರತದಾದ್ಯಂತ ಹಲವು ನಗರಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ Tata Starbus

ಟಾಟಾ ಸ್ಟಾರ್‌ಬಸ್ ತನ್ನ ಕಡಿಮೆ ವೆಚ್ಚದ ಮಾಲೀಕತ್ವ ಹಾಗೂ ಹೆಚ್ಚಿನ ಲಾಭದಾಯಕತೆಯ ಕಾರಣದಿಂದಾಗಿ ಅನೇಕ ಫ್ಲೀಟ್ ನಿರ್ವಾಹಕರಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಟಾಟಾ ಮೋಟಾರ್ಸ್‌ ಕಂಪನಿಯ ಬಸ್‌ಗಳ ಉತ್ಪನ್ನ ಲೈನ್‌ನ ಉಪಾಧ್ಯಕ್ಷರಾದ ರೋಹಿತ್ ಶ್ರೀವಾಸ್ತವರವರು ಈ ಕುರಿತು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಭಾರತೀಯ ರಸ್ತೆಗಳಲ್ಲಿ ಟಾಟಾ ಸ್ಟಾರ್‌ಬಸ್'ನ 1 ಲಕ್ಷ ಯುನಿಟ್ ಮಾರಾಟದ ಮೈಲಿಗಲ್ಲನ್ನು ಆಚರಿಸುತ್ತಿರುವುದು ಹೆಮ್ಮೆಯ ಕ್ಷಣವಾಗಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ Tata Starbus

ಈ ಮೂಲಕ ಟಾಟಾ ಸ್ಟಾರ್‌ಬಸ್, ಬಸ್ ಉದ್ಯಮದಲ್ಲಿ ಅತ್ಯಂತ ಪ್ರಮುಖ ಬಸ್ ಎಂದು ಸಾಬೀತಾಗಿದೆ. ಈ ಬಸ್ ಸಿಬ್ಬಂದಿ ಸಾರಿಗೆ ಅಪ್ಲಿಕೇಶನ್‌ನಲ್ಲಿ ಐಷಾರಾಮಿ ಪ್ರಯಾಣದ ಅನುಭವವನ್ನು ನೀಡುತ್ತದೆ. ಜೊತೆಗೆ ಶಾಲಾ ಬಸ್‌ನಂತೆ ಸುರಕ್ಷಿತ ಹಾಗೂ ವಿಶ್ವಾಸಾರ್ಹ ಪ್ರಯಾಣವನ್ನು ಒದಗಿಸುತ್ತದೆ. ಟಾಟಾ ಸ್ಟಾರ್‌ಬಸ್ ವಾಣಿಜ್ಯ ವಾಹನ ಉದ್ಯಮದಲ್ಲಿರುವ ಪ್ರಬಲ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ ಹಾಗೂ ಭಾರತದ ಸಾರಿಗೆ ಕ್ಷೇತ್ರದ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿದರು.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ Tata Starbus

ಟಾಟಾ ಮೋಟಾರ್ಸ್‌ನಲ್ಲಿ ನಿರಂತರ ನಂಬಿಕೆ ಇಟ್ಟ ನಮ್ಮ ಎಲ್ಲಾ ಗ್ರಾಹಕರಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಅವರು ಹೇಳಿದರು. ಟಾಟಾ ಸ್ಟಾರ್‌ಬಸ್‌ನೊಂದಿಗೆ, ಟಾಟಾ ಮೋಟಾರ್ಸ್ ಕಂಪನಿಯು ಭಾರತದಲ್ಲಿ OEM ನಿರ್ಮಿತ ಬಸ್ ಪರಿಕಲ್ಪನೆಯನ್ನು ಪರಿಚಯಿಸಿದೆ. ಟಾಟಾ ಮಾರ್ಕೊಪೋಲೊ ಗಟ್ಟಿಮುಟ್ಟಾದ ಬಾಡಿಯನ್ನು ಹೊಂದಿದೆ. ಟಾಟಾ ಸ್ಟಾರ್‌ಬಸ್‌ನ ಸುಂದರವಾಗಿ ವಿನ್ಯಾಸಗೊಳಿಸಲಾದ ಬಾಡಿ ಹಾಗೂ ಮಾಡ್ಯುಲರ್ ಆರ್ಕಿಟೆಕ್ಚರ್ ಉತ್ತಮ ಗ್ರಾಹಕ ಅನುಭವವನ್ನು ಖಾತರಿಪಡಿಸುತ್ತದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ Tata Starbus

ಈ ಬಸ್ ಫ್ಲೀಟ್ ಮಾಲೀಕರಿಗೆ ಆದಾಯದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಧಾರವಾಡದಲ್ಲಿರುವ ಅತ್ಯಾಧುನಿಕ ಉತ್ಪಾದನಾ ಘಟಕದಲ್ಲಿ ಈ ಬಸ್ ಅನ್ನು ಉತ್ಪಾದಿಸಲಾಗಿದೆ. ಟಾಟಾ ಸ್ಟಾರ್‌ಬಸ್, ಹೆಚ್ಚಿನ ವಿಶ್ವಾಸಾರ್ಹತೆ ಹಾಗೂ ನಿರ್ಮಾಣ ಗುಣಮಟ್ಟವನ್ನು ನೀಡುತ್ತದೆ. ಟಾಟಾ ಸ್ಟಾರ್‌ಬಸ್ ಪ್ಲಾಟ್‌ಫಾರಂ ಹಲವು ವರ್ಷಗಳಿಂದ ನಿರಂತರವಾಗಿ ವಿಕಸನಗೊಳ್ಳುತ್ತಿದೆ. ಅದರ ಸಮಯಕ್ಕಿಂತ ಮುಂಚಿತವಾಗಿ ಉದ್ಯಮದಲ್ಲಿ ವೈಟ್‌ಸ್ಪೇಸ್ ಅನ್ನು ಕಾರ್ಯತಂತ್ರವಾಗಿ ಗುರುತಿಸಿ, ತುಂಬುತ್ತಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ Tata Starbus

ಟಾಟಾ ಸ್ಟಾರ್‌ಬಸ್ ಕುಟುಂಬವು ಗ್ರಾಹಕರ ಅಭಿವೃದ್ಧಿ ಹೊಂದುತ್ತಿರುವ ಅಗತ್ಯಗಳನ್ನು ಪೂರೈಸಲು ಅನುಭವದ ಪರಿಹಾರಗಳನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರಿಸುತ್ತದೆ. ಟಾಟಾ ಸ್ಟಾರ್‌ಬಸ್ ಕುಟುಂಬವು ಟಾಟಾ ಮೋಟಾರ್ಸ್‌ನ ಪವರ್ ಆಫ್ 6 ಫಿಲಾಸಫಿಯನ್ನು ಅನುಸರಿಸುತ್ತದೆ. ಈ ತತ್ವಶಾಸ್ತ್ರವು ಹೆಚ್ಚಿನ ಪ್ರಯೋಜನಗಳನ್ನು, ಉತ್ತಮ ಕಾರ್ಯಕ್ಷಮತೆ, ಉತ್ತಮ ಸೌಕರ್ಯ ಮತ್ತು ಅನುಕೂಲತೆ, ಉತ್ತಮ ವಿನ್ಯಾಸ ಮತ್ತು ಹೆಚ್ಚಿನ ಮೌಲ್ಯವನ್ನು ನೀಡುತ್ತದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ Tata Starbus

ಟಾಟಾ ಮೋಟಾರ್ಸ್‌ನಿಂದ ಉತ್ತಮವಾದ ಫ್ಲೀಟ್ ನಿರ್ವಹಣೆಗಾಗಿ ಮುಂದಿನ ಪೀಳಿಗೆಯ ಡಿಜಿಟಲ್ ಪರಿಹಾರವು ಫ್ಲೀಟ್ ಎಡ್ಜ್‌ನ ಪ್ರಮಾಣಿತ ಫಿಟ್‌ಮೆಂಟ್‌ನೊಂದಿಗೆ ಅಪ್‌ಟೈಮ್ ಅನ್ನು ಇನ್ನಷ್ಟು ಹೆಚ್ಚಿಸಲು ಹಾಗೂ ಮಾಲೀಕತ್ವದ ಒಟ್ಟು ವೆಚ್ಚವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ವಾಣಿಜ್ಯ ವಾಹನ ಚಾಲಕ ಕಲ್ಯಾಣ, ಅಪ್ಟೈಮ್ ಗ್ಯಾರಂಟಿ, ಆನ್ ಸೈಟ್ ಸೇವೆ, ಕಸ್ಟಮೈಸ್ ಮಾಡಿದ ವಾರ್ಷಿಕ ನಿರ್ವಹಣೆ ಮತ್ತು ಫ್ಲೀಟ್ ಮ್ಯಾನೇಜ್ಮೆಂಟ್ ಪರಿಹಾರಗಳಿಗೆ ಜೊತೆಗೆ, ಟಾಟಾ ಮೋಟಾರ್ಸ್ ಸಂಪೂರ್ಣ ಸೇವೆ ಹಾಗೂ ಟಾಟಾ ಸಕ್ರಿಯಗೊಳಿಸುವಿಕೆಯನ್ನು ನೀಡುತ್ತದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ Tata Starbus

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಜಮ್ಶೆಡ್‌ಪುರ ಉತ್ಪಾದನಾ ಘಟಕವನ್ನು ಡಿಸೆಂಬರ್ 13 ರಿಂದ ಡಿಸೆಂಬರ್ 15 ರವರೆಗೆ ಮೂರು ದಿನಗಳ ಕಾಲ ಮುಚ್ಚಿತ್ತು. ಕಂಪನಿಯು ಯಾವ ಕಾರಣಕ್ಕೆ ಈ ಉತ್ಪಾದನಾ ಘಟಕವನ್ನು ಮುಚ್ಚಿತ್ತು ಎಂಬ ಮಾಹಿತಿ ಬಹಿರಂಗವಾಗದೇ ಇದ್ದರೂ ಭಾರೀ ವಾಣಿಜ್ಯ ವಾಹನಗಳಿಗೆ ಬೇಡಿಕೆಯ ಕೊರತೆಯಿಂದಾಗಿ ಮುಚ್ಚಲಾಗಿತ್ತು ಎಂದು ಹೇಳಲಾಗಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ Tata Starbus

ಇದಕ್ಕೂ ಮುನ್ನ ನವೆಂಬರ್ 29ರಂದು ಸಹ ಈ ಉತ್ಪಾದನಾ ಘಟಕವನ್ನು ಮುಚ್ಚಲಾಗಿತ್ತು. ಒಕ್ಕೂಟದ ಮೂಲಗಳ ಪ್ರಕಾರ, ಸಾಮಾನ್ಯವಾಗಿ ಪ್ರತಿ ವರ್ಷ ಈ ಸಮಯದಲ್ಲಿ ಭಾರೀ ವಾಣಿಜ್ಯ ವಾಹನಗಳಿಗೆ ಬೇಡಿಕೆ ಕಡಿಮೆ ಇರುತ್ತದೆ, ಈ ಕಾರಣದಿಂದಾಗಿ ಉತ್ಪಾದನೆಯನ್ನು ನಿಲ್ಲಿಸಲಾಗುತ್ತಿದೆ. ಕಂಪನಿಯು ಡಿಸೆಂಬರ್ ತಿಂಗಳಲ್ಲಿ ಸುಮಾರು 5500 ಯೂನಿಟ್ ಭಾರೀ ವಾಹನಗಳನ್ನು ಉತ್ಪಾದಿಸಲಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ Tata Starbus

ಇನ್ನು ಟಾಟಾ ಮೋಟಾರ್ಸ್ ತನ್ನ ಎಲ್ಲಾ ವಾಣಿಜ್ಯ ವಾಹನಗಳ ಬೆಲೆಯನ್ನು 2022ರ ಜನವರಿ 1 ರಿಂದ ಹೆಚ್ಚಿಸಲಿದೆ. ಕಂಪನಿಯು ಜನವರಿ 1 ರಿಂದ ತನ್ನ ವಾಣಿಜ್ಯ ವಾಹನಗಳ ಬೆಲೆಯಲ್ಲಿ 2.5% ನಷ್ಟು ಹೆಚ್ಚಳವಾಗುವುದು ಎಂದು ಘೋಷಿಸಿದೆ. ವಾಹನ ತಯಾರಿಕೆಯಲ್ಲಿ ಬಳಸುವ ಸ್ಟೀಲ್, ಅಲ್ಯೂಮಿನಿಯಂ ಹಾಗೂ ಇತರ ಲೋಹಗಳ ಬೆಲೆಯಲ್ಲಿ ಹೆಚ್ಚಳವಾಗಿರುವುದರಿಂದ ಕಂಪನಿಯು ವಾಣಿಜ್ಯ ವಾಹನಗಳ ಬೆಲೆ ಹೆಚ್ಚಿಸಲು ನಿರ್ಧರಿಸಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ Tata Starbus

ಉತ್ಪಾದನಾ ವೆಚ್ಚ ನಿರಂತರವಾಗಿ ಹೆಚ್ಚುತ್ತಿರುವುದರಿಂದ ಈ ಹೊರೆಯನ್ನು ಕಡಿಮೆ ಮಾಡಲು ಬೆಲೆಗಳನ್ನು ಹೆಚ್ಚಿಸಲಾಗುತ್ತಿದೆ ಎಂದು ಟಾಟಾ ಮೋಟಾರ್ಸ್ ಕಂಪನಿ ಹೇಳಿದೆ. ದೇಶದಲ್ಲಿ ಕಚ್ಚಾ ವಸ್ತುಗಳ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ. ಇದರಿಂದ ಕಂಪನಿಗಳು ಸಹ ಬೆಲೆಯನ್ನು ಹೆಚ್ಚಿಸಬೇಕಾಗಿದೆ. ದೇಶದ ಬಹುತೇಕ ವಾಹನ ತಯಾರಕ ಕಂಪನಿಗಳು ತಮ್ಮ ಕಾರುಗಳ ಬೆಲೆಯನ್ನು ಎರಡರಿಂದ ಮೂರು ಪಟ್ಟು ಹೆಚ್ಚಿಸಿವೆ.

Most Read Articles

Kannada
English summary
Tata starbus crosses one lakh units milestone in sales details
Story first published: Friday, December 17, 2021, 17:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X