ಜಿಪ್‌ಟ್ರಾನ್ ತಂತ್ರಜ್ಞಾನ ಪ್ರೇರಿತ ಟಾಟಾ ಟಿಗೋರ್ ಇವಿ ಟೀಸರ್ ಬಿಡುಗಡೆ

ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯಲ್ಲಿ ಮುಂಚೂಣಿ ಸಾಧಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಶೀಘ್ರದಲ್ಲೇ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಟಿಗೋರ್ ಇವಿ ಮಾದರಿಯನ್ನು ಉನ್ನತೀಕರಣದೊಂದಿಗೆ ಬಿಡುಗಡೆ ಮಾಡುತ್ತಿದೆ.

ಜಿಪ್‌ಟ್ರಾನ್ ತಂತ್ರಜ್ಞಾನ ಹೊಂದಿರುವ ಟಾಟಾ ಮೋಟಾರ್ಸ್ ಹೊಸ ಟಿಗೋರ್ ಇವಿ ಕಾರಿನ ಟೀಸರ್ ಬಿಡುಗಡೆ

ನೆಕ್ಸಾನ್ ಇವಿ ಮೂಲಕ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಹೊಸ ಸಂಚಲನ ಮೂಡಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್‌ನಲ್ಲಿ ಬಳಕೆ ಮಾಡುತ್ತಿರುವ ಜಿಪ್‌ಟ್ರಾನ್ ತಂತ್ರಜ್ಞಾನವನ್ನು ಟಿಗೋರ್ ಮಾದರಿಯಲ್ಲೂ ಪರಿಚಯಿಸುವ ಯೋಜನೆಯಲ್ಲಿದ್ದು, ಹೊಸ ತಂತ್ರಜ್ಞಾನ ಪ್ರೇರಿತ ಪವರ್‌ಟ್ರೈನ್ ಹೊಂದಿರುವ ಟಿಗೋರ್ ಇವಿ ಕೂಡಾ ಕಂಪ್ಯಾಕ್ಟ್ ಸೆಡಾನ್ ಪ್ರಿಯರನ್ನು ಸೆಳೆಯಲಿದೆ.

ಜಿಪ್‌ಟ್ರಾನ್ ತಂತ್ರಜ್ಞಾನ ಹೊಂದಿರುವ ಟಾಟಾ ಮೋಟಾರ್ಸ್ ಹೊಸ ಟಿಗೋರ್ ಇವಿ ಕಾರಿನ ಟೀಸರ್ ಬಿಡುಗಡೆ

ಟಾಟಾ ಮೋಟಾರ್ಸ್ ಕಂಪನಿಯು ಸದ್ಯ ಟಿಗೋರ್ ಇವಿ ಕಾರಿನಲ್ಲಿ ಲೋ-ವೊಲ್ಟೆಜ್ ಆರ್ಕಿಟೆಕ್ಚರ್ ಹೊಂದಿರುವ ಎಲೆಕ್ಟ್ರಾ ಪವರ್‌ಟ್ರೈನ್ ಬಳಕೆ ಮಾಡುತ್ತಿದ್ದು, ನವೀಕೃತ ಮಾದರಿಯಲ್ಲಿ ನೆಕ್ಸಾನ್ ಕಾರಿನ ಬಳಕೆ ಮಾಡಲಾಗುತ್ತಿರುವ ಹೈ-ವೊಲ್ಟೆಜ್ ಆರ್ಕಿಟೆಕ್ಚರ್ ಪ್ರೇರಿತ ಜಿಪ್‌ಟ್ರಾನ್ ತಂತ್ರಜ್ಞಾನವನ್ನು ಪಡೆದುಕೊಳ್ಳಲಿದೆ.

ಜಿಪ್‌ಟ್ರಾನ್ ತಂತ್ರಜ್ಞಾನ ಹೊಂದಿರುವ ಟಾಟಾ ಮೋಟಾರ್ಸ್ ಹೊಸ ಟಿಗೋರ್ ಇವಿ ಕಾರಿನ ಟೀಸರ್ ಬಿಡುಗಡೆ

ಜಿಪ್‌ಟ್ರಾನ್ ಪವರ್‌ಟ್ರೈನ್ ತಂತ್ರಜ್ಞಾನವನ್ನು ಹಲವು ಸುಧಾರಿತ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ದಿಗೊಳಿಸಲಾಗಿದ್ದು, ಹೈ ವೊಲ್ಟೆಜ್ ಸಿಸ್ಟಂ, ದೀರ್ಘಕಾಲಿಕ ಬ್ಯಾಟರಿ ಸಾಮಾರ್ಥ್ಯ, ಅತಿಕಡಿಮೆ ಅವಧಿಯಲ್ಲಿ ಹೆಚ್ಚು ಚಾರ್ಜಿಂಗ್ ಸಿಸ್ಟಂ ಮತ್ತು ಸೂಪಿರಿಯರ್ ಪರ್ಫಾಮೆನ್ಸ್ ವೈಶಿಷ್ಟ್ಯತೆಗಳನ್ನು ಈ ಪವರ್‌ಟ್ರೈನ್‌ನಲ್ಲಿ ಅಳವಡಿಸಲಾಗಿದೆ.

ಜಿಪ್‌ಟ್ರಾನ್ ತಂತ್ರಜ್ಞಾನ ಹೊಂದಿರುವ ಟಾಟಾ ಮೋಟಾರ್ಸ್ ಹೊಸ ಟಿಗೋರ್ ಇವಿ ಕಾರಿನ ಟೀಸರ್ ಬಿಡುಗಡೆ

ಟಾಟಾ ಮೋಟಾರ್ಸ್ ಕಂಪನಿಯು ಹೊಸ ಇವಿ ಡ್ರೈವ್ ತಂತ್ರಜ್ಞಾನದ ಸಾಧಕ-ಬಾಧಕಗಳ ಕುರಿತಾಗಿ ಪರೀಕ್ಷಿಸಲು ಸುಮಾರು 10 ಲಕ್ಷ ಕಿ.ಮಿ ವಿಶ್ವಪರ್ಯಟನೆ ಪೂರ್ಣಗೊಳಿಸಿ ನೆಕ್ಸಾನ್ ಮಾದರಿಯಲ್ಲಿ ಅಳವಡಿಸಿದ್ದು, ನೆಕ್ಸಾನ್ ನಂತರ ಇದೀಗ ಟಿಗೋರ್ ಇವಿ ವಿವಿಧ ಮಾದರಿಗಳಲ್ಲಿ ಅಳವಡಿಸಲಾಗುತ್ತಿದೆ.

ಜಿಪ್‌ಟ್ರಾನ್ ತಂತ್ರಜ್ಞಾನ ಹೊಂದಿರುವ ಟಾಟಾ ಮೋಟಾರ್ಸ್ ಹೊಸ ಟಿಗೋರ್ ಇವಿ ಕಾರಿನ ಟೀಸರ್ ಬಿಡುಗಡೆ

ಜಿಪ್‌ಟ್ರಾನ್ ತಂತ್ರಜ್ಞಾನದ ಮೂಲಕ ಟಾಟಾ ಮೋಟಾರ್ಸ್ ಕಂಪನಿಯು ಜಾಗತಿಕ ಮಟ್ಟದಲ್ಲಿ ಗಮನಸೆಳೆಯುತ್ತಿದ್ದು, ಎಲೆಕ್ಟ್ರಿಕ್ ಕಾರುಗಳ ಕಾರ್ಯಕ್ಷಮತೆ, ಬ್ಯಾಟರಿ ದಕ್ಷತೆ ಮತ್ತು ಗ್ರಾಹಕರ ಸ್ನೇಹಿ ಎಲೆಕ್ಟ್ರಿಕ್ ಕಾರುಗಳ ಅಭಿವೃದ್ದಿಗೊಳಿಸುತ್ತಿದೆ.

ಜಿಪ್‌ಟ್ರಾನ್ ತಂತ್ರಜ್ಞಾನ ಹೊಂದಿರುವ ಟಾಟಾ ಮೋಟಾರ್ಸ್ ಹೊಸ ಟಿಗೋರ್ ಇವಿ ಕಾರಿನ ಟೀಸರ್ ಬಿಡುಗಡೆ

ಜೊತೆಗೆ ಜಿಪ್‌ಟ್ರಾನ್ ತಂತ್ರಜ್ಞಾನವು ರೀಜನರೇಟಿವ್ ಬ್ರೇಕಿಂಗ್ ಸಿಸ್ಟಂ ಅಳವಡಿಕೆ ಹಿನ್ನಲೆಯಲ್ಲಿ ಕಾರು ಚಾಲನೆ ವೇಳೆ ನೀರ್ದಿಷ್ಟ ಪ್ರಮಾಣದಲ್ಲಿ ಬ್ಯಾಟರಿ ಚಾರ್ಜಿಂಗ್ ಪ್ರಕ್ರಿಯೆಯು ಮರಳಿ ಪಡೆಯಬಹುದಾಗಿದ್ದು, ಇದೇ ಕಾರಣಕ್ಕೆ ಹೊಸ ತಂತ್ರಜ್ಞಾನವು ಬ್ಯಾಟರಿ ದೀರ್ಘಕಾಲದ ಬಾಳಿಕೆಗೆ ಸಹಕರಿಸಲಿದೆ.

ಜಿಪ್‌ಟ್ರಾನ್ ತಂತ್ರಜ್ಞಾನ ಹೊಂದಿರುವ ಟಾಟಾ ಮೋಟಾರ್ಸ್ ಹೊಸ ಟಿಗೋರ್ ಇವಿ ಕಾರಿನ ಟೀಸರ್ ಬಿಡುಗಡೆ

ಹೀಗಾಗಿ ಹೊಸ ಜಿಪ್‌ಟ್ರಾನ್ ತಂತ್ರಜ್ಞಾನವನ್ನು ನೆಕ್ಸಾನ್ ಇವಿ ನಂತರ ಟಿಗೋರ್ ಇವಿಯಲ್ಲೂ ಅಳವಡಿಸಲಾಗುತ್ತಿದ್ದು, ಜಿಪ್‌ಟ್ರಾನ್ ತಂತ್ರಜ್ಞಾನ ಹೊಂದಿರುವ ಟಿಗೋರ್ ಇವಿ ಪರ್ಫಾಮೆನ್ಸ್ ವಿಡಿಯೋ ಪ್ರಕಟಗೊಳಿಸಿ ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಟಾಟಾ ಸುಳಿವು ನೀಡಿದೆ.

ಜಿಪ್‌ಟ್ರಾನ್ ಹೊಂದಿರುವ ಟಿಗೋರ್ ಇವಿ ಕಾರಿನ ಪರ್ಫಾಮೆನ್ಸ್ ವಿಡಿಯೋದಲ್ಲಿ ಭಾರತದ ಮೊದಲ ಫಾರ್ಮ್ಯುಲಾ ಒನ್ ಮೋಟಾರ್ ರೇಸರ್ ನರೇನ್ ಕಾರ್ತಿಕೇಯನ್ ಕಾಣಿಸಿಕೊಂಡಿದ್ದು, ಹೊಸ ಕಾರು ನೆಕ್ಸಾನ್ ಇವಿ ಮಾದರಿಯಲ್ಲೇ ಟಿಗೋರ್ ಇವಿ ಕೂಡಾ ಅತ್ಯುತ್ತಮ ಪರ್ಫಾಮೆನ್ಸ್‌ನೊಂದಿಗೆ ಮೈಲೇಜ್‌ನಲ್ಲೂ ಗಮನಸೆಳೆಯಲಿದೆ.

ಜಿಪ್‌ಟ್ರಾನ್ ತಂತ್ರಜ್ಞಾನ ಹೊಂದಿರುವ ಟಾಟಾ ಮೋಟಾರ್ಸ್ ಹೊಸ ಟಿಗೋರ್ ಇವಿ ಕಾರಿನ ಟೀಸರ್ ಬಿಡುಗಡೆ

ಉನ್ನತೀಕರಿಸಿದ ಟಿಗೋರ್ ಇವಿಯಲ್ಲಿ ಜಿಪ್‌ಟ್ರಾನ್ ತಂತ್ರಜ್ಞಾನದೊಂದಿಗೆ ಫಾಸ್ಟ್ ಚಾರ್ಜಿಂಗ್ ಕೂಡಾ ನೀಡಲಾಗುತ್ತಿದ್ದು, ಹೊಸ ಕಾರು ಪ್ರತಿ ಚಾರ್ಜ್‌ಗೆ ಕನಿಷ್ಠ 250 ಕಿ.ಮೀ ನೀಡುವ ಬ್ಯಾಟರಿ ಪ್ಯಾಕ್ ಪಡೆದುಕೊಂಡಿದೆ.

ಜಿಪ್‌ಟ್ರಾನ್ ತಂತ್ರಜ್ಞಾನ ಹೊಂದಿರುವ ಟಾಟಾ ಮೋಟಾರ್ಸ್ ಹೊಸ ಟಿಗೋರ್ ಇವಿ ಕಾರಿನ ಟೀಸರ್ ಬಿಡುಗಡೆ

ಹೊಸ ಟಿಗೋರ್ ಇವಿಯಲ್ಲಿರುವ ಬ್ಯಾಟರಿ ಪ್ಯಾಕ್ ಪೂರ್ಣ ಪ್ರಮಾಣದ ಚಾರ್ಜ್ ಮಾಡಲು ಹೋಂ ಚಾರ್ಜರ್ ಮೂಲಕ 7ರಿಂದ 8 ಗಂಟೆಗಳ ಕಾಲ ಸಮಯಾವಕಾಶ ತೆಗೆದುಕೊಳ್ಳಲಿದ್ದರೆ ಫಾಸ್ಟ್ ಚಾರ್ಜರ್ ಮೂಲಕ ಒಂದು ಗಂಟೆಯ ಅವಧಿಯಲ್ಲಿ ಶೇ.80 ಚಾರ್ಜಿಂಗ್ ಮಾಡಬಹುದಾಗಿದೆ.

ಜಿಪ್‌ಟ್ರಾನ್ ತಂತ್ರಜ್ಞಾನ ಹೊಂದಿರುವ ಟಾಟಾ ಮೋಟಾರ್ಸ್ ಹೊಸ ಟಿಗೋರ್ ಇವಿ ಕಾರಿನ ಟೀಸರ್ ಬಿಡುಗಡೆ

ಹಾಗೆಯೇ ಹೊಸ ಟಿಗೋರ್ ಇವಿ ಮಾದರಿಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ನವೀಕೃತ ವಿನ್ಯಾಸವನ್ನು ನೀಡಲಾಗುತ್ತಿದ್ದು, ಹೊರ ಭಾಗದಲ್ಲಿ ಮಾತ್ರವಲ್ಲ ಒಳಭಾಗದ ವಿನ್ಯಾಸದಲ್ಲೂ ಹೊಸ ಕಾರು ಗ್ರಾಹಕರನ್ನು ಸೆಳೆಯಲಿದೆ.

ಜಿಪ್‌ಟ್ರಾನ್ ತಂತ್ರಜ್ಞಾನ ಹೊಂದಿರುವ ಟಾಟಾ ಮೋಟಾರ್ಸ್ ಹೊಸ ಟಿಗೋರ್ ಇವಿ ಕಾರಿನ ಟೀಸರ್ ಬಿಡುಗಡೆ

ಸುರಕ್ಷತೆಗೂ ಹೊಸ ಕಾರಿನಲ್ಲಿ ಸಾಕಷ್ಟು ಗಮನಹರಿಸಲಾಗಿದ್ದು, ಪ್ರೀಮಿಯಂ ಫೀಚರ್ಸ್‌ಗಳಾದ ಟ್ವಿನ್ ಪಾಡ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಡ್ಯುಯಲ್ ಟೋನ್ ಸೀಟುಗಳ ಜೊತೆಗೆ ಕ್ಲೈಮೆಟ್ ಕಂಟ್ರೋಲ್, ರಿಮೋಟ್ ಲಾಕಿಂಗ್, ಡ್ಯುಯಲ್ ಏರ್‌ಬ್ಯಾಗ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಎಬಿಎಸ್ ಜೊತೆ ಇಬಿಡಿ ಸೌಲಭ್ಯ ಹೊಂದಿದೆ.

ಜಿಪ್‌ಟ್ರಾನ್ ತಂತ್ರಜ್ಞಾನ ಹೊಂದಿರುವ ಟಾಟಾ ಮೋಟಾರ್ಸ್ ಹೊಸ ಟಿಗೋರ್ ಇವಿ ಕಾರಿನ ಟೀಸರ್ ಬಿಡುಗಡೆ

ಸದ್ಯ ಜಿಪ್‌ಟ್ರಾನ್ ತಂತ್ರಜ್ಞಾನ ಹೊಂದಿರುವ ನೆಕ್ಸಾನ್ ಇವಿ ಕಾರು ಪ್ರತಿ ಚಾರ್ಜ್‌ಗೆ 312 ಕಿ.ಮೀ ಮೈಲೇಜ್ ಪ್ರೇರಿತ 30.2kWh ಲೀಥಿಯಂ ಅಯಾನ್ ಬ್ಯಾಟರಿಯೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.14 ಲಕ್ಷದಿಂದ ರೂ. 16.65 ಲಕ್ಷ ಬೆಲೆ ಹೊಂದಿದ್ದು, ಹೊಸದಾಗಿ ಬಿಡುಗಡೆಯಾಗುತ್ತಿರುವ ಟಿಗೋರ್ ಇವಿ ಕೂಡಾ ಹೊಸ ತಂತ್ರಜ್ಞಾನ ಪ್ರೇರಣೆಯೊಂದಿಗೆ ಗ್ರಾಹಕರ ಸೆಳೆಯುವ ನೀರಿಕ್ಷೆಯಲ್ಲಿದೆ.

ಜಿಪ್‌ಟ್ರಾನ್ ತಂತ್ರಜ್ಞಾನ ಹೊಂದಿರುವ ಟಾಟಾ ಮೋಟಾರ್ಸ್ ಹೊಸ ಟಿಗೋರ್ ಇವಿ ಕಾರಿನ ಟೀಸರ್ ಬಿಡುಗಡೆ

ಹೊಸ ಟಿಗೋರ್ ಇವಿ ಕಾರು ಜಿಪ್‌ಟ್ರಾನ್ ತಂತ್ರಜ್ಞಾನದ ನಂತರ ತುಸು ದುಬಾರಿಯಾಗಿರಲಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.10 ಲಕ್ಷದಿಂದ ರೂ. 12 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಬಹುದಾಗಿದೆ.

Article Published On: Wednesday, August 11, 2021, 20:08 [IST]
English summary
Tata tigor ev ziptron india launch teased expected price range details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+