ಹೊಸ ಕಾರುಗಳಿಗೆ ಗರಿಷ್ಠ ಭದ್ರತೆ ಒದಗಿಸುವ ಐರಾ ಕನೆಕ್ಟೆಡ್ ಫೀಚರ್ಸ್ ಜೋಡಿಸಲಿದೆ ಟಾಟಾ ಮೋಟಾರ್ಸ್

ಹೊಸ ಕಾರುಗಳ ಉತ್ಪಾದನೆಯಲ್ಲಿ ಭಾರೀ ಬದಲಾವಣೆಗೆ ಕಾರಣವಾಗಿರುವ ಟಾಟಾ ಮೋಟಾರ್ಸ್ ಕಂಪನಿಯು ಪ್ರಯಾಣಿಕರಿಗೆ ಗರಿಷ್ಠ ಭದ್ರತೆ ಒದಗಿಸುವುದರ ಜೊತೆಗೆ ಐಷಾರಾಮಿ ಫೀಚರ್ಸ್‌ಗಳನ್ನು ನೀಡುತ್ತಿರುವುದು ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ.

ಹೊಸ ಕಾರುಗಳಿಗೆ ಗರಿಷ್ಠ ಭದ್ರತೆ ಒದಗಿಸುವ ಐರಾ ಕನೆಕ್ಟೆಡ್ ಫೀಚರ್ಸ್ ಜೋಡಿಸಲಿದೆ ಟಾಟಾ ಮೋಟಾರ್ಸ್

ಹೊಸ ಕಾರುಗಳಲ್ಲಿನ ಫೀಚರ್ಸ್‌ಗಳಲ್ಲಿ ಕಾಲಾನುಸಾರವಾಗಿ ಸಾಕಷ್ಟು ಬದಲಾವಣೆ ತಂದಿರುವ ಟಾಟಾ ಮೋಟಾರ್ಸ್ ಕಂಪನಿಯು ಮೊದಲ ಬಾರಿಗೆ ತನ್ನದೇ ನಿರ್ಮಾಣದ ಐರಾ(iRA) ಕನೆಕ್ಟೆಡ್ ಫೀಚರ್ಸ್ ಅನ್ನು ಆಲ್‌ಟ್ರೊಜ್ ಐಟರ್ಬೋ ಆವೃತ್ತಿಯಲ್ಲಿ ಜೋಡಣೆ ಮಾಡುವ ಮೂಲಕ ಆಟೋ ಉದ್ಯಮದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಹೊಸ ಕನೆಕ್ಟೆಡ್ ಫೀಚರ್ಸ್ ಹಲವು ಹೊಸ ವೈಶಿಷ್ಟ್ಯತೆಗಳೊಂದಿಗೆ ಕಾರುಗಳಿಗೆ ಗರಿಷ್ಠ ಭದ್ರತೆ ನೀಡುತ್ತದೆ.

ಹೊಸ ಕಾರುಗಳಿಗೆ ಗರಿಷ್ಠ ಭದ್ರತೆ ಒದಗಿಸುವ ಐರಾ ಕನೆಕ್ಟೆಡ್ ಫೀಚರ್ಸ್ ಜೋಡಿಸಲಿದೆ ಟಾಟಾ ಮೋಟಾರ್ಸ್

ಹೊಸ ಐರಾ ಕನೆಕ್ಟೆಡ್ ಫೀಚರ್ಸ್‌ನಲ್ಲಿ ಸುಮಾರು 70ಕ್ಕೂ ಹೆಚ್ಚು ವಾಯ್ಸ್ ಕಮಾಂಡ್ ಸೌಲಭ್ಯವಿದ್ದು, ಒಂದೇ ಸೂರಿನಡಿ ಕಾರಿನ ಬಹುತೇಕ ತಾಂತ್ರಿಕ ಅಂಶಗಳನ್ನು ನಿಯಂತ್ರಣ ಮಾಡಬಹುದಲ್ಲದೆ ತಾಂತ್ರಿಕ ದೋಷಗಳನ್ನು ಅತಿ ಸುಲಭವಾಗಿ ಪತ್ತೆ ಮಾಡಬಹುದಾಗಿದೆ.

ಹೊಸ ಕಾರುಗಳಿಗೆ ಗರಿಷ್ಠ ಭದ್ರತೆ ಒದಗಿಸುವ ಐರಾ ಕನೆಕ್ಟೆಡ್ ಫೀಚರ್ಸ್ ಜೋಡಿಸಲಿದೆ ಟಾಟಾ ಮೋಟಾರ್ಸ್

ಐರಾ ಕಾರ್ ಕನೆಕ್ಟೆಡ್ ಫೀಚರ್ಸ್‌ನಲ್ಲಿ ರಿಮೋಟ್ ಕಂಟ್ರೋಲ್ ಲಾಕ್/ ಅನ್‌ಲಾಕ್, ರಿಮೋಟ್ ಹೆಡ್‌ಲೈಟ್ಸ್ ಆನ್/ಆಫ್, ರಿಮೋಟ್ ಡಿಟಿಇ, ಸ್ಟೊಲನ್ ವೆಹಿಕಲ್ ಟ್ರ್ಯಾಕಿಂಗ್, ರಿಮೋಟ್ ಇಂಮೊಬಿಲೈಝಷನ್(ವಾಹನದ ಎಂಜಿನ್ ನಿಷ್ಕಯಗೊಳಿಸಿಸುವುದು), ಎಮರ್ಜೆನ್ಸಿ ಎಸ್ಎಂಎಸ್, ಜಿಯೋ ಫೆನ್ಸಿಂಗ್, ಟೈಮ್ ಫೆನ್ಸಿಂಗ್ ಅಲರ್ಟ್ ಮತ್ತು ವ್ಯಾಲೆಟ್ ಮೋಡ್ ಸೇರಿ ಹಲವಾರು ಫೀಚರ್ಸ್‌ಗಳಿವೆ.

ಹೊಸ ಕಾರುಗಳಿಗೆ ಗರಿಷ್ಠ ಭದ್ರತೆ ಒದಗಿಸುವ ಐರಾ ಕನೆಕ್ಟೆಡ್ ಫೀಚರ್ಸ್ ಜೋಡಿಸಲಿದೆ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ಹೊಸ ಕನೆಕ್ಟೆಡ್ ಫೀಚರ್ಸ್ ಅನ್ನು ಈಗಾಗಲೇ ನೆಕ್ಸಾನ್ ಎಲೆಕ್ಟ್ರಿಕ್ ಮಾದರಿಯಲ್ಲಿ ಪರೀಕ್ಷಾರ್ಥವಾಗಿ ಜೋಡಣೆ ಮಾಡಿದ್ದು, ಇದೀಗ ಮತ್ತಷ್ಟು ಹೊಸ ವೈಶಿಷ್ಟ್ಯತೆಗಳನ್ನು ಸೇರ್ಪಡೆಗೊಳಿಸುವ ಮೂಲಕ ಆಲ್‌ಟ್ರೊಜ್ ಐಟರ್ಬೊ ಮಾದರಿಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಐಟರ್ಬೋ ನಂತರ ಹೊಸ ಕನೆಕ್ಟೆಡ್ ಫೀಚರ್ಸ್ ಹ್ಯಾರಿಯರ್ ಹೊಸ ಮಾದರಿಯ ಜೊತೆಗೆ ಬಿಡುಗಡೆಗೆ ಸಿದ್ದವಾಗಿರುವ ಸಫಾರಿ ಎಸ್‌ಯುವಿಯಲ್ಲೂ ಜೋಡಣೆ ಮಾಡಲು ನಿರ್ಧರಿಸಿದೆ.

ಹೊಸ ಕಾರುಗಳಿಗೆ ಗರಿಷ್ಠ ಭದ್ರತೆ ಒದಗಿಸುವ ಐರಾ ಕನೆಕ್ಟೆಡ್ ಫೀಚರ್ಸ್ ಜೋಡಿಸಲಿದೆ ಟಾಟಾ ಮೋಟಾರ್ಸ್

ಹೊಸ ಕನೆಕ್ಟೆಡ್ ಫೀಚರ್ಸ್‌ನಿಂದಾಗಿ ವಾಹನ ಕಳ್ಳತನಗಳಿಗೆ ಪರಿಣಾಮಕಾರಿಯಾಗಿ ಬ್ರೇಕ್ ಹಾಕಬಹುದಾಗಿದ್ದು, ಒಂದು ವೇಳೆ ಕಾರು ಕಳ್ಳತನವಾದರೂ ಕೆಲವೇ ಗಂಟೆಗಳಲ್ಲಿ ಕಾರಿನ ಸ್ಥಳವನ್ನು ಅತಿ ಸುಲಭವಾಗಿ ಪತ್ತೆಮಾಡಬಹುದಾದ ಫೀಚರ್ಸ್ ಈ ತಂತ್ರಜ್ಞಾನದಲ್ಲಿದೆ.

ಹೊಸ ಕಾರುಗಳಿಗೆ ಗರಿಷ್ಠ ಭದ್ರತೆ ಒದಗಿಸುವ ಐರಾ ಕನೆಕ್ಟೆಡ್ ಫೀಚರ್ಸ್ ಜೋಡಿಸಲಿದೆ ಟಾಟಾ ಮೋಟಾರ್ಸ್

ಸದ್ಯಕ್ಕೆ ಟಾಟಾ ಮೋಟಾರ್ಸ್ ಕಂಪನಿಯು ಹೊಸ ಫೀಚರ್ಸ್ ಅನ್ನು ಆಲ್‌ಟ್ರೊಜ್, ನೆಕ್ಸಾನ್, ಹ್ಯಾರಿಯರ್ ಮತ್ತು ಹೊಸದಾಗಿ ಬಿಡುಗಡೆಯಾಗುತ್ತಿರುವ ಸಫಾರಿ ಕಾರುಗಳಲ್ಲಿ ಮಾತ್ರ ನೀಡಲಿದ್ದು, ಬಜೆಟ್ ಕಾರು ಮಾದರಿಗಳಾದ ಟಿಗೋರ್, ಟಿಯಾಗೋ ಕಾರುಗಳಲ್ಲಿ ಹೊಸ ಫೀಚರ್ಸ್ ಅಳವಡಿಕೆ ಮಾಡಲಾಗುತ್ತಿಲ್ಲ.

ಹೊಸ ಕಾರುಗಳಿಗೆ ಗರಿಷ್ಠ ಭದ್ರತೆ ಒದಗಿಸುವ ಐರಾ ಕನೆಕ್ಟೆಡ್ ಫೀಚರ್ಸ್ ಜೋಡಿಸಲಿದೆ ಟಾಟಾ ಮೋಟಾರ್ಸ್

ಒಂದು ವೇಳೆ ಟಿಗೋರ್ ಮತ್ತು ಟಿಯಾಗೋ ಕಾರುಗಳಲ್ಲೂ ಕನೆಕ್ಟೆಡ್ ಫೀಚರ್ಸ್ ಅಳವಡಿಕೆ ಮಾಡಿದ್ದಲ್ಲಿ ಕಾರಿನ ಬೆಲೆಯು ಮತ್ತಷ್ಟು ಹೆಚ್ಚಳವಾಗಲಿದ್ದು, ಈ ಹಿನ್ನಲೆಯಲ್ಲಿ ಸದ್ಯಕ್ಕೆ ಆಯ್ದ ಕಾರು ಮಾದರಿಗಳಲ್ಲಿ ಮಾತ್ರವೇ ಕನೆಕ್ಟೆಡ್ ಫೀಚರ್ಸ್ ನೀಡಲು ನಿರ್ಧರಿಸಲಾಗಿದೆ.

ಹೊಸ ಕಾರುಗಳಿಗೆ ಗರಿಷ್ಠ ಭದ್ರತೆ ಒದಗಿಸುವ ಐರಾ ಕನೆಕ್ಟೆಡ್ ಫೀಚರ್ಸ್ ಜೋಡಿಸಲಿದೆ ಟಾಟಾ ಮೋಟಾರ್ಸ್

ಇನ್ನು ಹೊಸ ಕನೆಕ್ಟೆಡ್ ಫೀಚರ್ಸ್ ಹೊಂದಿರುವ ಹೊಸ ಐ-ಟರ್ಬೋ ಆಲ್‌ಟ್ರೊಜ್ ಕಾರು ಮಾದರಿಯು ಆಕರ್ಷಕ ಬೆಲೆಯೊಂದಿಗೆ ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಉತ್ತಮ ಪರ್ಫಾಮೆನ್ಸ್ ಮತ್ತು ವಿವಿಧ ಹೊಸ ತಾಂತ್ರಿಕ ಅಂಶಗಳನ್ನು ಹೊಂದಿದ್ದು, ಸಾಮಾನ್ಯ ಕಾರು ಮಾದರಿಗಿಂತಲೂ ಉತ್ತಮ ಮಟ್ಟದ ಎಂಜಿನ್ ಆಯ್ಕೆ ಮತ್ತು ಸುಧಾರಿತ ತಾಂತ್ರಿಕ ಅಂಶಗಳನ್ನು ಪಡೆದುಕೊಂಡಿದೆ.

ಹೊಸ ಕಾರುಗಳಿಗೆ ಗರಿಷ್ಠ ಭದ್ರತೆ ಒದಗಿಸುವ ಐರಾ ಕನೆಕ್ಟೆಡ್ ಫೀಚರ್ಸ್ ಜೋಡಿಸಲಿದೆ ಟಾಟಾ ಮೋಟಾರ್ಸ್

ಹೊಸ ಟಾಟಾ ಆಲ್‌‌ಟ್ರೊಜ್ ಐಟರ್ಬೋ ಪೆಟ್ರೋಲ್ ಆವೃತ್ತಿಯಲ್ಲಿ 1.2-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ ಅನ್ನು ಬಿಡುಗಡೆ ಮಾಡಲಾಗುತ್ತಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಗರಿಷ್ಠ 108-ಬಿಹೆಚ್‍ಪಿ ಮತ್ತು 140-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಾಗುತ್ತದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಹೊಸ ಕಾರುಗಳಿಗೆ ಗರಿಷ್ಠ ಭದ್ರತೆ ಒದಗಿಸುವ ಐರಾ ಕನೆಕ್ಟೆಡ್ ಫೀಚರ್ಸ್ ಜೋಡಿಸಲಿದೆ ಟಾಟಾ ಮೋಟಾರ್ಸ್

ಐಟರ್ಬೋ ಮಾದರಿಯು ಸಿಟಿ ಮತ್ತು ಸ್ಟೋರ್ಟ್ ಡ್ರೈವಿಂಗ್ ಮೋಡ್‌ಗಳನ್ನು ನೀಡಲಾಗಿದ್ದು, ಸದ್ಯಕ್ಕೆ ಹೊಸ ಮಾದರಿಯಲ್ಲಿ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ನೀಡಿರುವ ಕಂಪನಿಯು ಶೀಘ್ರದಲ್ಲೇ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಲಿದೆಯೆಂತೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಹೊಸ ಕಾರುಗಳಿಗೆ ಗರಿಷ್ಠ ಭದ್ರತೆ ಒದಗಿಸುವ ಐರಾ ಕನೆಕ್ಟೆಡ್ ಫೀಚರ್ಸ್ ಜೋಡಿಸಲಿದೆ ಟಾಟಾ ಮೋಟಾರ್ಸ್

ಹೊಸ ಎಂಜಿನ್ ಮೂಲಕ ಐಟರ್ಬೋ ಮಾದರಿಯು ಕೇವಲ 12 ಸೇಕೆಂಡುಗಳಲ್ಲಿ ಸೊನ್ನೆಯಿಂದ ನೂರು ಕಿಮೀ ವೇಗಪಡೆದುಕೊಳ್ಳಲಿದ್ದು, ಉತ್ತಮ ಪರ್ಫಾಮೆನ್ಸ್‌ನೊಂದಿಗೆ ಪ್ರತಿ ಲೀಟರ್ ಪೆಟ್ರೋಲ್‌ಗೆ ಗರಿಷ್ಠ 18.13 ಕಿಮೀ ಮೈಲೇಜ್ ಹಿಂದಿರುಗಿಸಲಿದೆ.

ಹೊಸ ಕಾರುಗಳಿಗೆ ಗರಿಷ್ಠ ಭದ್ರತೆ ಒದಗಿಸುವ ಐರಾ ಕನೆಕ್ಟೆಡ್ ಫೀಚರ್ಸ್ ಜೋಡಿಸಲಿದೆ ಟಾಟಾ ಮೋಟಾರ್ಸ್

ಐಟರ್ಬೋ ಮಾದರಿಯನ್ನು ಅನಾವರಣಗೊಳಿಸುವ ಮೂಲಕ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಿರುವ ಟಾಟಾ ಕಂಪನಿಯು ಇದೇ ತಿಂಗಳು 22ರಂದು ಬಿಡುಗಡೆ ಮಾಡಲಿದ್ದು, ಹೊಸ ಕಾರು ಸ್ಟ್ಯಾಂಡರ್ಡ್ ಮಾದರಿಗಿಂತಲೂ ತುಸು ದುಬಾರಿಯಾಗಿರಲಿದೆ.

Most Read Articles

Kannada
English summary
Tata Motors To Use iRA Connected Car Tech In Upcoming Cars. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X