ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಲಾದ ಟಾಪ್ 10 ಕಾರುಗಳಿವು

ಭಾರತದಿಂದ ಕಳೆದ ತಿಂಗಳು ಒಟ್ಟು 58,586 ಯುನಿಟ್ ಕಾರುಗಳನ್ನು ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ 39,126 ಯುನಿಟ್ ಕಾರುಗಳನ್ನು ರಫ್ತು ಮಾಡಲಾಗಿತ್ತು. ರಫ್ತು ಟಾಪ್ 10 ಕಾರುಗಳಲ್ಲಿ 3 ಕಾರುಗಳು Hyundai ಕಂಪನಿಗೆ ಸೇರಿವೆ. ಈ ಪಟ್ಟಿಯಲ್ಲಿ Maruti Suzuki ಕಂಪನಿಯ ಎರಡು ಕಾರುಗಳು, Nissan, Volkswagen, Honda, Renault ಹಾಗೂ Kia ಕಂಪನಿಗಳ ತಲಾ ಒಂದು ಕಾರುಗಳು ಸ್ಥಾನ ಪಡೆದಿವೆ.

ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಲಾದ ಟಾಪ್ 10 ಕಾರುಗಳಿವು

ಈ ಟಾಪ್ 10 ಪಟ್ಟಿಯಲ್ಲಿರುವ Kia Seltos ಕಾರು ಮಾತ್ರ 2020ರ ಸೆಪ್ಟೆಂಬರ್ ತಿಂಗಳಿಗಿಂತ ಕಡಿಮೆ ಪ್ರಮಾಣದಲ್ಲಿ ರಫ್ತು ಆಗಿದ್ದರೆ, ಉಳಿದ ಕಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ರಫ್ತಾಗಿವೆ. ಭಾರತದಿಂದ ರಫ್ತು ಮಾಡಲಾಗುತ್ತಿದ್ದ ಕಾರುಗಳಲ್ಲಿ Ford ಕಂಪನಿಯ Ecosport ಕಾರು ಮೊದಲ ಸ್ಥಾನದಲ್ಲಿತ್ತು. Ford ಕಂಪನಿಯು ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿರುವುದರಿಂದ ಕಳೆದ ತಿಂಗಳು Ford ಕಂಪನಿಯ ಯಾವುದೇ ಕಾರುಗಳನ್ನು ರಫ್ತು ಮಾಡಲಾಗಿಲ್ಲ.

ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಲಾದ ಟಾಪ್ 10 ಕಾರುಗಳಿವು

ಭಾರತದಲ್ಲಿ Ecosport ಕಾರಿನ ಉತ್ಪಾದನೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಕಳೆದ ತಿಂಗಳಲ್ಲಿ ಹೆಚ್ಚು ರಫ್ತು ಮಾಡಲಾದ ಕಾರುಗಳ ಪಟ್ಟಿಯಲ್ಲಿ Hyundai Verna ಅಗ್ರ ಸ್ಥಾನದಲ್ಲಿದೆ. ಕಳೆದ ತಿಂಗಳು Hyundai Verna ಕಾರಿನ ಒಟ್ಟು 4,604 ಯುನಿಟ್ ಗಳನ್ನು ರಫ್ತು ಮಾಡಲಾಗಿದೆ. ಈ ಪ್ರಮಾಣವು 2020 ರ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ 64.14% ನಷ್ಟು ಹೆಚ್ಚಳವಾಗಿದೆ.

ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಲಾದ ಟಾಪ್ 10 ಕಾರುಗಳಿವು

ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ Hyundai Verna ಕಾರಿನ 2,805 ಯುನಿಟ್ ಗಳನ್ನು ರಫ್ತು ಮಾಡಲಾಗಿತ್ತು. ಕಳೆದ ತಿಂಗಳು ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಿದ ಒಟ್ಟು ಕಾರುಗಳಲ್ಲಿ Verna ಕಾರಿನ ಪ್ರಮಾಣವು 8.59% ಗಳಾಗಿದೆ. Hyundai Verna ಕಾರು ದೇಶಿಯ ಮಾರುಕಟ್ಟೆಯಲ್ಲಿ Honda City ಹಾಗೂ Maruti Suzuki Dzire ಕಾರುಗಳಿಗೆ ಪೈಪೋಟಿ ನೀಡುತ್ತದೆ.

ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಲಾದ ಟಾಪ್ 10 ಕಾರುಗಳಿವು

Hyundai ಕಂಪನಿಯು ಕಳೆದ ಮೇ ತಿಂಗಳಲ್ಲಿ Verna ಕಾರಿನ ಅಪ್ ಡೇಟ್ ಮಾಡಲಾದ ಆವೃತ್ತಿಯನ್ನು ಬಿಡುಗಡೆಗೊಳಿಸಿತ್ತು. ಕಂಪನಿಯು ಹೊಸ ಆವೃತ್ತಿಯನ್ನು ಎಸ್ ಪ್ಲಸ್ ಹಾಗೂ ಎಸ್‌ಎಕ್ಸ್ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡುತ್ತಿದೆ. ಹೊಸ ಮಾದರಿಗಳು ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್‌ಪ್ಲೇ ಯಂತಹ ಫೀಚರ್ ಗಳನ್ನು ಹೊಂದಿವೆ.

ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಲಾದ ಟಾಪ್ 10 ಕಾರುಗಳಿವು

ಈ ಪಟ್ಟಿಯಲ್ಲಿ Maruti Suzuki Dzire ಎರಡನೇ ಸ್ಥಾನದಲ್ಲಿದೆ. ಕಳೆದ ತಿಂಗಳು Dzire ಕಾರಿನ ಸುಮಾರು 4,000 ಯುನಿಟ್ ಗಳನ್ನು ರಫ್ತು ಮಾಡಲಾಗಿದೆ. ಸೆಮಿ ಕಂಡಕ್ಟರ್ ಗಳ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ Maruti Suzuki ಕಂಪನಿಯು ಕಾರುಗಳನ್ನು ಉತ್ಪಾದಿಸಲು ಹೆಣಗಾಡುತ್ತಿದೆ. ಕಂಪನಿಯು ತನ್ನ ಉತ್ಪಾದನಾ ಪ್ರಮಾಣವನ್ನು ತಿಂಗಳಿಗೆ 40% ನಿಂದ 60% ಗಳಿಗೆ ಇಳಿಸಿದೆ ಎಂದು ವರದಿಯಾಗಿದೆ.

ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಲಾದ ಟಾಪ್ 10 ಕಾರುಗಳಿವು

ಆದರೂ Dzire ಕಾರಿನ ರಫ್ತು ಪ್ರಮಾಣವು 2020ರ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಸೆಪ್ಟೆಂಬರ್‌ ತಿಂಗಳಿನಲ್ಲಿ ಸುಮಾರು 354.52% ನಷ್ಟು ಹೆಚ್ಚಾಗಿದೆ. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಸಾವಿರಕ್ಕಿಂತ ಕಡಿಮೆ Dzire ಕಾರುಗಳು ರಫ್ತಾಗಿದ್ದವು. ಈ ಪಟ್ಟಿಯಲ್ಲಿ Nissan ಕಂಪನಿಯ Sunny ಕಾರು ಮೂರನೇ ಸ್ಥಾನದಲ್ಲಿದೆ. ಈ ಕಾರು ಹಿಂದೆ ಭಾರತದಲ್ಲಿಯೂ ಮಾರಾಟವಾಗುತ್ತಿತ್ತು.

ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಲಾದ ಟಾಪ್ 10 ಕಾರುಗಳಿವು

ಜಪಾನ್ ಮೂಲದ Nissan ಕಂಪನಿಯು ಕಳೆದ ತಿಂಗಳು Sunny ಸೆಡಾನ್ ಕಾರಿನ 3,891 ಯುನಿಟ್‌ಗಳನ್ನು ಭಾರತದಿಂದ ರಫ್ತು ಮಾಡಿದೆ. 2020ರ ಸೆಪ್ಟೆಂಬರ್ ತಿಂಗಳಿನಲ್ಲಿ ಈ ಕಾರಿನ ಒಂದೇ ಒಂದು ಯುನಿಟ್ ಅನ್ನು ಸಹ ರಫ್ತು ಮಾಡಿರಲಿಲ್ಲ. Maruti Suzuki Baleno ಹ್ಯಾಚ್‌ಬ್ಯಾಕ್ ಕಾರು ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಕಳೆದ ತಿಂಗಳು ಈ ಕಾರಿನ ಒಟ್ಟು 3,231 ಯುನಿಟ್‌ಗಳನ್ನು ರಫ್ತು ಮಾಡಲಾಗಿದೆ.

ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಲಾದ ಟಾಪ್ 10 ಕಾರುಗಳಿವು

ಈ ಪಟ್ಟಿಯಲ್ಲಿ Hyundai Creta 5 ನೇ ಸ್ಥಾನದಲ್ಲಿದ್ದರೆ, Volkswagen Vento 6 ನೇ ಸ್ಥಾನದಲ್ಲಿದೆ. ಇನ್ನು ಪ್ಯಾಸೆಂಜರ್ ಕಾರುಗಳ ಮಾರಾಟದ ಬಗ್ಗೆಹೇಳುವುದಾದರೆ, ಕಳೆದ ತಿಂಗಳು ಒಟ್ಟು 1,85,636 ಯುನಿಟ್ ಪ್ಯಾಸೆಂಜರ್ ಕಾರುಗಳು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗಿವೆ. 2020ರ ಸೆಪ್ಟೆಂಬರ್‌ ತಿಂಗಳಿನಲ್ಲಿ 2,92,858 ಯುನಿಟ್ ಪ್ಯಾಸೆಂಜರ್ ಕಾರುಗಳು ಮಾರಾಟವಾಗಿದ್ದವು.

ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಲಾದ ಟಾಪ್ 10 ಕಾರುಗಳಿವು

ಕಳೆದ ತಿಂಗಳ ಮಾರಾಟ ಪ್ರಮಾಣವು ಈ ವರ್ಷದ ಆಗಸ್ಟ್ ತಿಂಗಳ ಮಾರಾಟ ಪ್ರಮಾಣಕ್ಕಿಂತ 28.5% ನಷ್ಟು ಕಡಿಮೆಯಾಗಿದೆ. ಭಾರತದ ಪ್ರಮುಖ ಕಾರು ತಯಾರಕ ಕಂಪನಿಗಳಲ್ಲಿ ಒಂದಾದ Maruti Suzuki ಇಂಡಿಯಾದ ಕಾರು ಮಾರಾಟ ಪ್ರಮಾಣವು ಕಳೆದ ತಿಂಗಳು ಅರ್ಧಕ್ಕಿಂತಲೂ ಕಡಿಮೆಯಾಗಿದೆ. Maruti Suzuki ಕಾರುಗಳ ಮಾರಾಟ ಪ್ರಮಾಣವು 2020ರ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ 57.3% ನಷ್ಟು ಕಡಿಮೆಯಾಗಿದೆ.

ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಲಾದ ಟಾಪ್ 10 ಕಾರುಗಳಿವು

2020ರ ಸೆಪ್ಟೆಂಬರ್ ತಿಂಗಳಿನಲ್ಲಿ Maruti Suzuki ಕಂಪನಿಯ 1,47,912 ಯುನಿಟ್ ಕಾರುಗಳು ಮಾರಾಟವಾಗಿದ್ದರೆ, ಕಳೆದ ತಿಂಗಳು ಕೇವಲ 63,111 ಯುನಿಟ್ ಕಾರುಗಳು ಮಾರಾಟವಾಗಿವೆ. ಅದೇ ರೀತಿ ಮತ್ತೊಂದು ಪ್ರಮುಖ ಕಾರು ತಯಾರಕ ಕಂಪನಿಯಾದ Hyundai ಕಾರುಗಳ ಮಾರಾಟವು ಸಹ ಕಳೆದ ತಿಂಗಳು 34.2% ನಷ್ಟು ಕುಸಿದಿದೆ. ಕಳೆದ ತಿಂಗಳು ದೇಶಿಯ ಹಾಗೂ ವಿದೇಶಿ ಮಾರುಕಟ್ಟೆಯಲ್ಲಿ Hyundai ಕಂಪನಿಯ ಒಟ್ಟು 33,087 ಯುನಿಟ್ ಕಾರುಗಳು ಮಾರಾಟವಾಗಿವೆ.

ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Top 10 cars exported to overseas market in september 2021 details
Story first published: Saturday, October 23, 2021, 17:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X