ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು!

ಕೋವಿಡ್ ಭೀತಿಯ ನಡುವೆಯೂ ಭಾರತೀಯ ಆಟೋ ಉದ್ಯಮವು ಇದೀಗ ಸಾಕಷ್ಟು ಸುಧಾರಣೆ ಕಂಡಿದ್ದು, ವೈರಸ್ ಪರಿಣಾಮ ಬಿಡುಗಡೆ ಪ್ರಕ್ರಿಯೆಯಿಂದ ಹಿಂದೆ ಸರಿದಿದ್ದ ಪ್ರಮುಖ ಆಟೋ ಉತ್ಪಾದನಾ ಕಂಪನಿಗಳು ತಮ್ಮ ವಿವಿಧ ಹೊಸ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು!

ಹೊಸ ವಾಹನ ಮಾರಾಟವು ಕಳೆದ ಕೆಲ ತಿಂಗಳಿನಿಂದ ತ್ವರಿತವಾಗಿ ಹೆಚ್ಚಳವಾಗಿದ್ದು, ಗ್ರಾಹಕರ ಬೇಡಿಕೆ ಆಧರಿಸಿ ಸೆಪ್ಟೆಂಬರ್ ತಿಂಗಳಿನಲ್ಲಿ ವಿವಿಧ ಕಾರು ಉತ್ಪಾದನಾ ಕಂಪನಿಗಳು ತಮ್ಮ ಬಹುನೀರಿಕ್ಷಿತ ಕಾರುಗಳನ್ನು ಮಾದರಿಗಳನ್ನು ಬಿಡುಗಡೆ ಮಾಡಿವೆ. ಹಾಗಾದರೆ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಯಾಗಿರುವ ಹೊಸ ಕಾರುಗಳು ಯಾವುವು? ಮತ್ತು ಅವುಗಳ ವಿಶೇಷತೆ, ಬೆಲೆ ಮತ್ತು ಎಂಜಿನ್ ಮಾಹಿತಿಯನ್ನು ಇಲ್ಲಿ ತಿಳಿಯೋಣ.

ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು!

ಹ್ಯುಂಡೈ ಐ20 ಎನ್ ಲೈನ್

ಹ್ಯುಂಡೈ ಇಂಡಿಯಾ ಕಂಪನಿಯು ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾದರಿಯಲ್ಲಿ ಪರ್ಫಾಮೆನ್ಸ್ ಪ್ರಿಯರಿಗಾಗಿ ಎನ್ ಲೈನ್(N Line) ವರ್ಷನ್ ಬಿಡುಗಡೆ ಮಾಡಿದ್ದು, ಹೊಸ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 9.84 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.11.75 ಲಕ್ಷ ಬೆಲೆ ಹೊಂದಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು!

ಹೊಸ ಕಾರು ಮಾದರಿಯು ಸ್ಟ್ಯಾಂಡರ್ಡ್ ಮಾದರಿಗಿಂತ ರೂ. 95 ಸಾವಿರದಷ್ಟು ದುಬಾರಿಯಾಗಿದ್ದು, ಪರ್ಫಾಮೆನ್ಸ್ ಮಾದರಿಗೆ ಪೂರಕವಾಗಿ ಹೊಸ ಕಾರಿನಲ್ಲಿ ಹಲವಾರು ಸ್ಪೋರ್ಟಿ ವಿನ್ಯಾಸಗಳನ್ನು ಮತ್ತು ಪ್ರೀಮಿಯಂ ಇಂಟಿರಿಯರ್ ಸೌಲಭ್ಯಗಳನ್ನು ನೀಡಲಾಗಿದೆ. ಹೊಸ ಕಾರಿನಲ್ಲಿ ಹಲವಾರು ಸ್ಪೋರ್ಟಿ ವಿನ್ಯಾಸಗಳಿದ್ದು, ಡ್ಯುಯಲ್ ಟೋನ್ ಫ್ರಂಟ್ ಬಂಪರ್, ಸ್ಪೋರ್ಟಿಯಾಗಿರುವ ರೆಡ್ ಆಕ್ಸೆಂಟ್, ಫ್ರಂಟ್ ಫಾಸಿಯಾದಲ್ಲಿ N Line ಬ್ಯಾಡ್ಜ್ ಸೇರಿದಂತೆ ಹಲವು ಹೊಸ ತಾಂತ್ರಿಕ ಸೌಲಭ್ಯಗಳನ್ನು ನೀಡಲಾಗಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು!

ಫೋಕ್ಸ್‌ವ್ಯಾಗನ್ ಟೈಗುನ್ ಕಂಪ್ಯಾಕ್ಟ್ ಎಸ್‌ಯುವಿ

ಟೈಗುನ್ ಹೊಸ ಕಾರು ಗ್ರಾಹಕರ ಬೇಡಿಕೆ ಅನುಸಾರವಾಗಿ ಡೈನಾಮಿಕ್ ಲೈನ್(ಕಂಫರ್ಟ್ ಲೈನ್, ಹೈ ಲೈನ್ ಮತ್ತು ಟಾಪ್ ಲೈನ್) ಮತ್ತು ಜಿಟಿ ಲೈನ್(ಜಿಟಿ ಮತ್ತು ಜಿಟಿ ಪ್ಲಸ್) ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ವಿವಿಧ ವೆರಿಯೆಂಟ್‌ಗಳಲ್ಲಿರುವ ತಾಂತ್ರಿಕ ಸೌಲಭ್ಯಕ್ಕೆ ಅನುಗುಣವಾಗಿ ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.10.49 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 17.50 ಲಕ್ಷ ಬೆಲೆ ಹೊಂದಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು!

ಹೊಸ ಟೈಗುನ್ ಕಾರು ಸಹಭಾಗೀತ್ವ ಸಂಸ್ಥೆಯಾದ ಸ್ಕೋಡಾ ಹೊಸ ಕುಶಾಕ್ ಕಾರು ಮಾದರಿಯಲ್ಲಿರುವಂತೆ ಎರಡು ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದ್ದು, ಡೈನಾಮಿಕ್ ಮಾದರಿಗಳಲ್ಲಿ 1.0-ಲೀಟರ್ ಟಿಎಸ್ಐ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಿದ್ದಲ್ಲಿ ಟಾಪ್ ಎಂಡ್ ಮಾದರಿಯಾದ ಜಿಟಿ ಲೈನ್‌ನಲ್ಲಿ 1.5-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಲಾಗಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು!

ಬಿಎಸ್ 6 ಫೋರ್ಸ್ ಗೂರ್ಖಾ

ನವೀಕೃತ ಗೂರ್ಖಾ ಎಸ್‌ಯುವಿ ಕಾರು ಮಾದರಿಯು ಪ್ರತಿಸ್ಪರ್ಧಿ ಮಾದರಿಗಿಂತಲೂ ಹಲವಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಿದ್ದು,ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 13.59 ಲಕ್ಷ ಬೆಲೆ ಹೊಂದಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು!

ಹೊಸ ಗೂರ್ಖಾ ಮಾದರಿಯು ನ್ಯೂ ಜನರೇಷನ್ ಆಫ್-ರೋಡ್ ಪ್ರಿಯರನ್ನು ಸೆಳೆಯಲಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 90 ಬಿಎಚ್‌ಪಿ ಮತ್ತು 250 ಎನ್ಎಂ ಟಾರ್ಕ್ ಉತ್ಪಾದನಾ ವೈಶಿಷ್ಟ್ಯತೆಯ 2.6 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆ ಪಡೆದುಕೊಂಡಿದೆ. ಫೋರ್ಸ್ ಮೋಟಾರ್ಸ್ ಕಂಪನಿಯು ಸ್ಟ್ಯಾಂಡರ್ಡ್ ಆಕ್ಸೆಸರಿಸ್ ಫೀಚರ್ಸ್ ಹೊರತುಪಡಿಸಿ ಹೆಚ್ಚುವರಿ ಮೊತ್ತದಲ್ಲಿ ಆಫ್-ರೋಡ್ ಚಾಲನೆ ಪೂರಕವಾದ ಮತ್ತಷ್ಟು ಹೊಸ ಸೌಲಭ್ಯಗಳನ್ನು ಆಕ್ಸೆಸರಿಸ್ ಪ್ಯಾಕೇಜ್ ಮೂಲಕ ಪಡೆದುಕೊಳ್ಳಬಹುದು.

ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು!

ಕಿಯಾ ಸೆಲ್ಟೊಸ್ ಎಕ್ಸ್ ಲೈನ್

ಕಿಯಾ ಇಂಡಿಯಾ ಕಂಪನಿಯು ಸೆಲ್ಟೊಸ್ ಮಾದರಿಯಲ್ಲಿ ಎಕ್ಸ್ ಲೈನ್(X Line) ವೆರಿಯೆಂಟ್ ಬಿಡುಗಡೆಗೊಳಿಸಿದ್ದು, ಎಕ್ಸ್ ಶೋರೂಂ ಪ್ರಕಾರ ಈ ಕಾರು ಆರಂಭಿಕವಾಗಿ ರೂ.17.79 ಲಕ್ಷ ಬೆಲೆ ಹೊಂದಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು!

ಸೆಲ್ಟೊಸ್ ಎಸ್‍ಯುವಿಯ ಲೈನ್‌ಅಪ್‌ನಲ್ಲಿ ಹೊಸ ಟಾಪ್-ಆಫ್-ಲೈನ್ ವೆರಿಯೆಂಟ್ ಆಗಿದೆ. ಇದು ಟಾಪ್-ಸ್ಪೆಕ್ ಜಿಟಿ ಲೈನ್ ರೂಪಾಂತರವನ್ನು ಆಧರಿಸಿದೆ, ಹೊಸ ಟಾಪ್-ಆಫ್-ಲೈನ್ X Line ರೂಪಾಂತರವು ಕಾಸ್ಮೆಟಿಕ್ ವಿನ್ಯಾಸ ಮತ್ತು ಆಂತರಿಕ ಬದಲಾವಣೆಗಳೊಂದಿಗೆ ಬರುತ್ತದೆ. ಬಾನೆಟ್ ಅಡಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ. ಈ ಹೊಸ ವೆರಿಯೆಂಟ್ ನಲ್ಲಿ ಸೆಗ್ಮೆಂಟ್‌ನಲ್ಲಿಯೇ ಅತಿದೊಡ್ಡ 18-ಇಂಚಿನ ಕ್ರಿಸ್ಟಲ್-ಕಟ್ ಮ್ಯಾಟ್ ಗ್ರ್ಯಾಫೈಟ್ ಅಲಾಯ್ ವ್ಹೀಲ್‍ಗಳನ್ನು ಅಳವಡಿಸಲಾಗಿದೆ. ಇದು ಹೊಸ ಇಂಡಿಗೋ ಪೆರಾ ಲೆಥೆರೆಟ್ ಅಪ್‌ಹೋಲ್ಸ್ಟರಿ ಮೂಲಕ ಸ್ಪೋರ್ಟಿ ಲುಕ್ ಅನ್ನು ಹೊಂದಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು!

ಬಿಎಂಡಬ್ಲ್ಯು ಎಕ್ಸ್5 ಎಕ್ಸ್‌ಡ್ರೈವ್ ಸ್ಪೋರ್ಟ್ಎಕ್ಸ್ ಎಸ್‍ಯುವಿ

ಜರ್ಮನ್ ಮೂಲದ ಕಾರು ಉತ್ಪದನಾ ಕಂಪನಿಯಾದ ಬಿಎಂಡಬ್ಲ್ಯು(BMW) ತನ್ನ ಹೊಸ X5 xDrive SportX Plus ಎಸ್‍ಯುವಿ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ BMW X5 xDrive SportX Plus ಎಸ್‍ಯುವಿಯು X5 xDrive30d SportX Plus ಮತ್ತು X5 xDrive40i SportX Plus ವೆರಿಯೆಂಟ್ ಗಳಲ್ಲಿ ಲಭ್ಯವಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು!

ಬಿಎಂಡಬ್ಲ್ಯು X5 xDrive30d SportX Plus ವೆರಿಯೆಂಟ್ ಬೆಲೆಯು ರೂ,79.50 ಲಕ್ಷಗಳಾದರೆ, xDrive40i SportX Plus ವೆರಿಯೆಂಟ್ ಬೆಲೆಯು ರೂ.77.90 ಲಕ್ಷಗಳಾಗಿದೆ. ಈ ಎಲ್ಲಾ ಎಕ್ಸ್ ಶೋರೂಂ ಪ್ರಕಾರವಾಗಿದೆ. ಈ ಐಷಾರಾಮಿ ಎಸ್‍ಯುವಿಯನ್ನು ಚೆನ್ನೈನ ಬಿಎಂಡಬ್ಲ್ಯು ಸ್ಥಾವರದಲ್ಲಿ ಉತ್ಪಾದಿಸಲಾಗುತ್ತದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು!

ಟಾಟಾ ಸಫಾರಿ ಗೋಲ್ಡ್ ಎಡಿಷನ್

ಯುಎಇನಲ್ಲಿ ಆರಂಭವಾಗಿರುವ 14ನೇ ಆವೃತ್ತಿಯ ವಿವೊ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಬಿಸಿಸಿಐ ಜೊತೆಗೆ ಸತತ ನಾಲ್ಕನೇ ವರ್ಷವೂ ಪಾಲುದಾರಿಕೆ ಪ್ರಕಟಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಬ್ರಾಂಡ್ ನ್ಯೂ ಸಫಾರಿ ಎಸ್‌ಯುವಿ ಮಾದರಿಯನ್ನು ಟೂರ್ನಿಯಲ್ಲಿ ಪ್ರದರ್ಶನಗೊಳಿಸುತ್ತಿದೆ. ಐಪಿಎಲ್ ಉದ್ದೇಶಕ್ಕಾಗಿ ಕಂಪನಿಯು ಸಫಾರಿ ಎಸ್‌ಯುವಿ ಗೋಲ್ಡ್ ಎಡಿಷನ್ ಪರಿಚಯಿಸಿದ್ದು, ಹೊಸ ಕಾರು ಮೊದಲು ಟೂರ್ನಿಯಲ್ಲಿ ಪ್ರದರ್ಶನಗೊಂಡ ನಂತರಷ್ಟೇ ಗ್ರಾಹಕರ ಕೈಸೇರಲಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು!

ಟಾಟಾ ಮೋಟಾರ್ಸ್ ಕಂಪನಿಯು ವಿಶೇಷ ಬಣ್ಣಗಳ ಆಯ್ಕೆ ಹೊಂದಿರುವ ಸಫಾರಿ ಗೋಲ್ಡ್ ಆವೃತ್ತಿಯನ್ನು ಪ್ರಮುಖ ಆವೃತ್ತಿಗಳಲ್ಲಿ ಬಿಡುಗಡೆ ಮಾಡಿದ್ದು, ಎಕ್ಸ್‌ಜೆಡ್ ಪ್ಲಸ್ ಮ್ಯಾನುವಲ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 21.89 ಲಕ್ಷಕ್ಕೆ ಮತ್ತು ಎಕ್ಸ್‌ಜೆಡ್ಎ ಪ್ಲಸ್ ಆಟೋಮ್ಯಾಟಿಕ್ ಮಾದರಿಯು ರೂ. 23.17 ಲಕ್ಷ ಬೆಲೆ ಹೊಂದಿವೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು!

ಟಾಟಾ ಎಕ್ಸ್‌ಪ್ರೆಸ್ ಟಿ ವಾಣಿಜ್ಯ ಬಳಕೆಯ ಇವಿ ಕಾರು ಬಿಡುಗಡೆ

ಟಾಟಾ ಮೋಟಾರ್ಸ್(Tata Motors) ಕಂಪನಿಯು ವಾಣಿಜ್ಯ ಬಳಕೆಗಾಗಿಯೇ ವಿಶೇಷವಾಗಿ ಎಕ್ಸ್‌ಪ್ರೆಸ್ ಟಿ(Express T) ಎಂಬ ಹೊಸ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಎಲೆಕ್ಟ್ರಿಕ್ ಕಾರಿನ ಆರಂಭಿಕ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 9.54 ಲಕ್ಷಗಳಾಗಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು!

21.5 ಕಿ.ವ್ಯಾ ಬ್ಯಾಟರಿ ಹೊಂದಿರುವ ಇತರ ಎರಡು ಮಾದರಿಗಳ ಬೆಲೆ ಕ್ರಮವಾಗಿ ರೂ. 10.14 ಲಕ್ಷ ಹಾಗೂ ರೂ.10.64 ಲಕ್ಷಗಳಾಗಿದೆ. 16.5 ಕಿ.ವ್ಯಾ ಬ್ಯಾಟರಿಯನ್ನು ಹೊಂದಿರುವ ಮಾದರಿಯು ಪೂರ್ತಿಯಾಗಿ ಚಾರ್ಜ್ ಆದ ನಂತರ 165 ಕಿ.ಮೀಗಳವರೆಗೆ ಚಲಿಸುತ್ತದೆ. ಇನ್ನು 21.5 ಕಿ.ವ್ಯಾ ಬ್ಯಾಟರಿಯನ್ನು ಹೊಂದಿರುವ ಮಾದರಿಯು ಪೂರ್ತಿಯಾಗಿ ಚಾರ್ಜ್ ಆದ ನಂತರ 213 ಕಿ.ಮೀಗಳವರೆಗೆ ಚಲಿಸುತ್ತದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು!

2021ರ ಕಿಯಾ ಕಾರ್ನಿವಾಲ್ ಬಿಡುಗಡೆ

ಕಿಯಾ ಇಂಡಿಯಾ(Kia India) ಕಂಪನಿಯು ತನ್ನ 2021ರ ಕಾರ್ನಿವಾಲ್(Carnival) ಎಂಪಿವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಎಂಪಿವಿಯ ಆರಂಭಿಕ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ. 24.95 ಲಕ್ಷಗಳಾಗಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು!

ಹೊಸ ಎಂಪಿವಿಯನ್ನು ಗ್ರಾಹಕರ ಬೇಡಿಕೆಯೆಂತೆ ಅಪ್ ಗ್ರೇಡ್ ಮಾಡಲಾಗಿದ್ದು, ಹಳೆಯ ಮಾದರಿಗಿಂತ ಒಂದೆರಡು ಹೊಸ ಅಪ್ ಡೇಟ್ ಗಳನ್ನು ಹೊಂದಿದೆ. Kia ಕಂಪನಿಯು Carnival ಎಂಪಿವಿಯ ಹೊಸ Limousine + ಟಾಪ್ ಎಂಡ್ ಮಾದರಿಯನ್ನು ಪರಿಚಯಿಸಿದೆ. ಹೊಸ ಎಂಪಿವಿಗಾಗಿ ಬುಕ್ಕಿಂಗ್ ಗಳನ್ನು ಆರಂಭಿಸಲಾಗಿದೆ. ಈ ಎಂಪಿವಿಯ ವಿತರಣೆ ಶೀಘ್ರದಲ್ಲಿಯೇ ಶುರುವಾಗುವ ಸಾಧ್ಯತೆಗಳಿವೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು!

ಆಡಿ ಇ-ಟ್ರಾನ್ ಜಿಟಿ ಎಲೆಕ್ಟ್ರಿಕ್ ಕಾರು ಬಿಡುಗಡೆ

ಜರ್ಮನಿ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ ಆಡಿ(Audi) ದೇಶಿಯ ಮಾರುಕಟ್ಟೆಯಲ್ಲಿ ತನ್ನ ನಾಲ್ಕು ಡೋರುಗಳ ಇ-ಟ್ರಾನ್ ಜಿಟಿ (e-tron GT) ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆಗೊಳಿಸಿದೆ. ಹೊಸ ಕಾರಿನ ಬೆಲೆ ಎಕ್ಸ್ ಶೋರೂಂ ದರವು ಆರಂಭಿಕವಾಗಿ ರೂ. 1.80 ಕೋಟಿಗಳಾದರೆ ಟಾಪ್ ಎಂಡ್ ಆರ್‌ಎಸ್ (RS) ಮಾದರಿಯ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ. 2.05 ಕೋಟಿಗಳಾಗಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು!

85 ಕಿ.ವ್ಯಾ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್‌ ಮೂಲಕ ಸ್ಟ್ಯಾಂಡರ್ಡ್ e-tron GT ಕ್ವಾಟ್ರೊ ಮಾದರಿಯು 350 ಕಿ.ವ್ಯಾ ಅಥವಾ 469 ಬಿಹೆಚ್‌ಪಿ ಪವರ್ ಹಾಗೂ ಗರಿಷ್ಠ ಟಾರ್ಕ್ 630 ಎನ್ಎಂ ಉತ್ಪಾದಿಸುತ್ತದೆ. ಇನ್ನು e-tron GT RS ಮಾದರಿಯು 490 ಕಿ.ವ್ಯಾ ಅಥವಾ 590 ಬಿಹೆಚ್‌ಪಿ ಪವರ್ ಹಾಗೂ 830 ಎನ್ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು!

ನವೀಕೃತ ಸ್ಕೋಡಾ ಕುಶಾಕ್ ಸ್ಟೈಲ್ ವೆರಿಯೆಂಟ್ ಬಿಡುಗಡೆ

ಸ್ಕೋಡಾ ಕಂಪನಿಯು ಕುಶಾಕ್ ಪ್ರೀಮಿಯಂ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಬಿಡುಗಡೆಗೊಳಿಸಿದ ನಂತರ ಕೆಲವು ಪ್ರಮುಖ ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಇದೀಗ ಹೊಸ ಕಾರಿನ ಟಾಪ್ ಎಂಡ್ ವೆರಿಯೆಂಟ್‌ಗಳಲ್ಲಿ ಕೆಲವು ಸೇಫ್ಟಿ ಫೀಚರ್ಸ್‌ಗಳನ್ನು ಉನ್ನತೀಕರಿಸಿ ಬಿಡುಗಡೆ ಮಾಡಿದೆ. ಕುಶಾಕ್ ಕಾರಿನ ಸ್ಟೈಲ್ ವೆರಿಯೆಂಟ್‌ನಲ್ಲಿರುವ 1.0 ಲೀಟರ್ ಟಿಎಸ್ಐ ಎಟಿ ಮತ್ತು 1.5 ಲೀಟರ್ ಟಿಎಸ್ಐ ಡಿಜಿಎಸ್ ಮಾದರಿಗಳನ್ನು ಉನ್ನತೀಕರಿಸಲಾಗಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು!

ಕುಶಾಕ್ ಕಾರಿನ 1.0 ಲೀಟರ್ ಟಿಎಸ್ಐ ಎಟಿ ಮತ್ತು 1.5 ಲೀಟರ್ ಟಿಎಸ್ಐ ಡಿಜಿಎಸ್ ಮಾದರಿಗಳಲ್ಲಿ ಈ ಹಿಂದೆ ನಾಲ್ಕು ಏರ್‌ಬ್ಯಾಗ್ ಜೋಡಣೆ ಮಾಡಿದ್ದ ಕಂಪನಿಯು ಇದೀಗ ಎರಡು ಮಾದರಿಯಲ್ಲೂ ಆರು ಏರ್‌ಬ್ಯಾಗ್ ಜೋಡಣೆ ಮಾಡಿದ್ದು, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಸೌಲಭ್ಯವನ್ನು ಸಹ ಹೊಸದಾಗಿ ಸೇರಿಸಿದೆ. ಹೊಸ ಫೀಚರ್ಸ್ ಸೇರ್ಪಡೆ ನಂತರ ಎಕ್ಸ್‌ಶೋರೂಂ ಪ್ರಕಾರ ರೂ. 15.80 ಲಕ್ಷದಿಂದ ರೂ. 16.20 ಲಕ್ಷಕ್ಕೆ ಮತ್ತು ರೂ.17.60 ಲಕ್ಷದಿಂದ ರೂ.18 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ.

Most Read Articles

Kannada
English summary
Top 10 cars launched in september 2021 force gurkha volkswagen taigun audi e tron gt and more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X