ನವೆಂಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ ಎಸ್‌ಯುವಿಗಳಿವು

ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗವು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಜನಪ್ರಿಯವಾದ ಮತ್ತು ಹೆಚ್ಚು ಪೈಪೋಟಿಯಿಂದ ಕೂಡಿದ ವಿಭಾಗವಾಗಿದೆ, ಬಹುತೇಕ ಎಲ್ಲಾ ಜನಪ್ರಿಯ ಕಾರು ತಯಾರಕ ಕಂಪನಿಗಳು ತಮ್ಮ ವಾಹನಗಳನ್ನು ಈ ವಿಭಾಗದಲ್ಲಿ ಬಿಡುಗಡೆಗೊಳಿಸಿವೆ.

ನವೆಂಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ ಎಸ್‌ಯುವಿಗಳಿವು

ಹೊಸ ಕಾರನ್ನು ಖರೀದಿಸಲು ಸೇರುವ ಗ್ರಾಹಕರು ಕಾಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಕಾಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಅತ್ಯುತ್ತಮ ಪೀಚರ್ಸ್, ಪ್ರಾಯೋಗಿಕತೆ, ಕಾರ್ಯಕ್ಷಮತೆ ಮತ್ತು ಹೆಚ್ಚಿನ ಸ್ಪೇಸ್ ನಿಂದ ಕೂಡಿರುತ್ತದೆ. ಈ ಕಾರಣದಿಂದ ಕಾಂಪ್ಯಾಕ್ಟ್ ಎಸ್‌ಯುವಿ ಮಾದರಿಗಳು ಹೆಚ್ಚು ಜನಪ್ರಿಯತೆಗಳಿಸುತ್ತಿದೆ, ಇನ್ನು ಸಣ್ಣ ಕಾರುಗಳಿಂದ ಕಾಂಪ್ಯಾಕ್ಟ್ ಎಸ್‌ಯುವಿಗಳಲ್ಲಿ ಸೀಟ್ ಎತ್ತರ ಇರುವುದರಿಂದ ಲಾಂಗ್ ರೈಡ್ ತೆರಳಲು ಉತ್ತಮವಾಗಿದೆ. ಕಳೆದ ತಿಂಗಳಿನಲ್ಲಿ ಈ ಜನಪ್ರಿಯ ವಿಭಾಗದಲ್ಲಿ ಅತಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ ಎಸ್‌ಯುವಿಗಳ ಮಾಹಿತಿ ಇಲ್ಲಿದೆ.

ನವೆಂಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ ಎಸ್‌ಯುವಿಗಳಿವು

ಮಾರುತಿ ವಿಟಾರಾ ಬ್ರೆಝಾ

2021ರ ನವೆಂಬರ್ ತಿಂಗಳಿನಲ್ಲಿ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಅತಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ ಎಸ್‌ಯುವಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ, 2020ರ ನವೆಂಬರ್ ತಿಂಗಳಿನಲ್ಲಿ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಮಾದರಿಯ 7,838 ಯುನಿಟ್‌ಗಳು ಮಾರಾಟವಾಗಿತ್ತು. ಈ ವರ್ಷದ ನವೆಂಬರ್ ತಿಂಗಳಿನಲ್ಲಿ 10,760 ಯುನಿಟ್‌ಗಳು ಮಾರಾಟವಾಗಿದೆ. ಇದನ್ನು ವರ್ಷದಿಂದ ವರ್ಷದ ಮಾರಾಟಕ್ಕೆ ಹೋಲಿಸಿದರೆ ಶೇ.37.2 ರಷ್ಟು ಹೆಚ್ಚಳವಾಗಿದೆ.

ನವೆಂಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ ಎಸ್‌ಯುವಿಗಳಿವು

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ದೇಶೀಯ ಮಾರುಕಟ್ಟೆಯಲ್ಲಿ 2016ರ ಆರಂಭದಿಂದಲೂ ವಿಟಾರಾ ಬ್ರೆಝಾವನ್ನು ಮಾರಾಟ ಮಾಡುತ್ತಿದೆ. ಈ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮರಾಟವಾಗುವ ಕಾಂಪ್ಯಾಕ್ಟ್ ಎಸ್‍ಯುವಿಗಳಲ್ಲಿ ಒಂದಾಗಿದೆ. ಈ ವಿಟಾರಾ ಬ್ರೆಝಾವನ್ನು ನವೀಕರಿಸಲಾಗುತ್ತಿದೆ. ನ್ಯೂ ಜನರೇಷನ್ ಮಾರುತಿ ವಿಟಾರಾ ಬ್ರೆಝಾ ಚಿತ್ರಗಳು ಆನ್‌ಲೈನ್‌ನಲ್ಲಿ ಇತ್ತೀಚೆಗೆ ಸೋರಿಕೆಯಾಗಿವೆ. ಹೊಸ ಬ್ರೆಝಾದಲ್ಲಿ ಕಂಡುಬರುವ ಪ್ರಮುಖ ಬದಲಾವಣೆಗಳೆಂದರೆ ರಿಫ್ರೆಶ್ ಮಾಡಿದ ಬಾಹ್ಯ ಪ್ರೊಫೈಲ್, ನವೀಕರಿಸಿದ ಕ್ಯಾಬಿನ್ ಪಡೆಯುತ್ತದೆ.

ನವೆಂಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ ಎಸ್‌ಯುವಿಗಳಿವು

ಟಾಟಾ ನೆಕ್ಸಾನ್

2021ರ ನವೆಂಬರ್ ತಿಂಗಳಿನಲ್ಲಿ ಟಾಟಾ ನೆಕ್ಸಾನ್ ಅತಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ ಎಸ್‌ಯುವಿಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. 2020ರ ನವೆಂಬರ್ ತಿಂಗಳಿನಲ್ಲಿ ಟಾಟಾ ನೆಕ್ಸಾನ್ ಮಾದರಿಯ 6,021 ಯುನಿಟ್‌ಗಳು ಮಾರಾಟವಾಗಿತ್ತು. ಈ ವರ್ಷದ ನವೆಂಬರ್ ತಿಂಗಳಿನಲ್ಲಿ 9,831 ಯುನಿಟ್‌ಗಳು ಮಾರಾಟವಾಗಿದೆ. ಇದನ್ನು ವರ್ಷದಿಂದ ವರ್ಷದ ಮಾರಾಟಕ್ಕೆ ಹೋಲಿಸಿದರೆ ಶೇ.63.2 ರಷ್ಟು ಹೆಚ್ಚಳವಾಗಿದೆ.

ನವೆಂಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ ಎಸ್‌ಯುವಿಗಳಿವು

ಹುಂಡೈ ವೆನ್ಯೂ

ಕಳೆದ ತಿಂಗಳು ಭಾರತದಲ್ಲಿ ಮೂರನೇ ಅತಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ ಎಸ್‍ಯುವಿ ಹುಂಡೈ ವೆನ್ಯೂ ಆಗಿದೆ. 2020ರ ನವೆಂಬರ್ ತಿಂಗಳಿನಲ್ಲಿ ಹುಂಡೈ ವೆನ್ಯೂ ಮಾದರಿಯ 7,932 ಯುನಿಟ್‌ಗಳು ಮಾರಾಟವಾಗಿತ್ತು. ಈ ವರ್ಷದ ನವೆಂಬರ್ ತಿಂಗಳಿನಲ್ಲಿ 9,265 ಯುನಿಟ್‌ಗಳು ಮಾರಾಟವಾಗಿದೆ. ಇದನ್ನು ವರ್ಷದಿಂದ ವರ್ಷದ ಮಾರಾಟಕ್ಕೆ ಹೋಲಿಸಿದರೆ ಶೇ.14.3 ರಷ್ಟು ಹೆಚ್ಚಳವಾಗಿದೆ.

ನವೆಂಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ ಎಸ್‌ಯುವಿಗಳಿವು

ಟಾಟಾ ಪಂಚ್

ಈ ಟಾಟಾ ಪಂಚ್ ಮೈಕ್ರೋ ಎಸ್‍ಯುವಿಯನ್ನು ಈ ವರ್ಷದ ಅಕ್ಟೋಬರ್‌ ತಿಂಗಳಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು, ಈ ಟಾಟಾ ಪಂಚ್ ಕಾರು ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಕೈಗೆಟುಕುವ ಮೈಕ್ರೋ ಎಸ್‌ಯುವಿಗಳಲ್ಲಿ ಒಂದಾಗಿದೆ.

ನವೆಂಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ ಎಸ್‌ಯುವಿಗಳಿವು

ಈ ಟಾಟಾ ಪಂಚ್ ಮೈಕ್ರೋ ಎಸ್‌ಯುವಿ ಮಾದರಿಗೆ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಪಡೆದುಕೊಂಡಿದೆ. ಕಳೆದ ತಿಂಗಳು, ಟಾಟಾ ಮೋಟಾರ್ಸ್ ಕಂಪನಿಯು ಭಾರತದಲ್ಲಿ ಮೈಕ್ರೋ-ಎಸ್‌ಯುವಿಯ ಒಟ್ಟು 6,110 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಕುತೂಹಲಕಾರಿಯಾಗಿ, ಪಂಚ್ ಮಾರುಕಟ್ಟೆಗೆ ಬಂದ ನಂತರ ಅಲ್ಟ್ರೋಜ್ ಕಾರಿನ ಮಾರಾಟವು ಕುಸಿತ ಕಂಡಿದೆ.

ನವೆಂಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ ಎಸ್‌ಯುವಿಗಳಿವು

ಕಿಯಾ ಸೊನೆಟ್

2021ರ ನವೆಂಬರ್ ತಿಂಗಳಿನಲ್ಲಿ ಕಿಯಾ ಸೊನೆಟ್ ಅತಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ ಎಸ್‌ಯುವಿಗಳ ಪಟ್ಟಿಯಲ್ಲಿ ಐದನೇ ಸ್ಥಾನವನ್ನು ಪಡೆದುಕೊಂಡಿದೆ. 2020ರ ನವೆಂಬರ್ ತಿಂಗಳಿನಲ್ಲಿ ಕಿಯಾ ಸೊನೆಟ್ ಮಾದರಿಯ 11,417 ಯುನಿಟ್‌ಗಳು ಮಾರಾಟವಾಗಿತ್ತು. ಈ ವರ್ಷದ ನವೆಂಬರ್ ತಿಂಗಳಿನಲ್ಲಿ 4,719 ಯುನಿಟ್‌ಗಳು ಮಾರಾಟವಾಗಿದೆ. ಇದನ್ನು ವರ್ಷದಿಂದ ವರ್ಷದ ಮಾರಾಟಕ್ಕೆ ಹೋಲಿಸಿದರೆ ಶೇ.58.6 ರಷ್ಟು ಕುಸಿತವನ್ನು ಕಂಡಿದೆ.

ನವೆಂಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ ಎಸ್‌ಯುವಿಗಳಿವು

ಮಹೀಂದ್ರಾ ಎಕ್ಸ್‌ಯುವಿ300

ಮಹೀಂದ್ರಾ ಎಕ್ಸ್‌ಯುವಿ300 ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಎಕ್ಸ್‌ಯುವಿ 300 ಈ ಪಟ್ಟಿಯಲ್ಲಿ ಆರನೇ ಸ್ಥಾನವನ್ನು ಪಡೆದುಕೊಂಡಿದೆ. ಮಹೀಂದ್ರಾ ಕಂಪನಿಯು ನವೆಂಬರ್ ತಿಂಗಳಿನಲ್ಲಿ ಎಕ್ಸ್‌ಯುವಿ 300ನ 4,006ಯುನಿಟ್‌ಗಳನ್ನು ಮಾರಾಟ ಮಾಡಿದೆ, ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ಈ ಎಸ್‌ಯುವಿಯ 4,458 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಈ ಎಸ್‌ಯುವಿಯ ಮಾರಾಟ ಪ್ರಮಾಣವು ಈ ಬಾರಿ ಶೇ.10 ರಷ್ಟು ಹೆಚ್ಚಾಗಿದೆ.

ನವೆಂಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ ಎಸ್‌ಯುವಿಗಳಿವು

ಟೊಯೊಟಾ ಅರ್ಬನ್ ಕ್ರೂಸರ್

ಕಳೆದ ತಿಂಗಳು ಟೊಯೊಟಾ ಅರ್ಬನ್ ಕ್ರೂಸರ್ ಎಸ್‍ಯುವಿ ಮಾದರಿಯ 2,850 ಯುನಿಟ್‌ಗಳೊಂದಿಗೆ ಭಾರತದಲ್ಲಿ ಏಳನೇ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ ಎಸ್‍ಯುವಿಯಾಗಿದೆ. ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ಈ ಎಸ್‌ಯುವಿಯ 2,832 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಇದನ್ನು ವರ್ಷದಿಂದ ವರ್ಷದ ಮಾರಾಟಕ್ಕೆ ಹೋಲಿಸಿದರೆ ಶೇ.0.6 ರಷ್ಟು ಬೆಳವಣಿಗೆಯನ್ನು ಕಂಡಿದೆ,

ನವೆಂಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ ಎಸ್‌ಯುವಿಗಳಿವು

ಉಳಿದಂತೆ ಕಳೆದ ತಿಂಗಳು ನಿಸ್ಸಾನ್ ಮ್ಯಾಗ್ನೈಟ್ ಮಾದರಿಯ 2,292 ಯುನಿಟ್‌ಗಳು, ರೆನಾಲ್ಟ್ ಕಿಗರ್ 2,062 ಯುನಿಟ್‌ಗಳು ಮತ್ತು ಹೋಂಡಾ ಡಬ್ಲ್ಯು-ಆರ್ವಿ 120 ಯುನಿಟ್ ಗಳೊಂದಿಗೆ ಉಳಿದ ಮೂರು ಸ್ಥಾನಗಳನ್ನು ಪಡೆದುಕೊಂಡಿದೆ.

Most Read Articles

Kannada
English summary
Top 10 compact suv sales november 2021 maruti vitara brezza hyundai nexon more details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X