ವಿಶ್ವದಾದ್ಯಂತ ಅತಿ ಹೆಚ್ಚು ಮಾರಾಟವಾಗುವ ಟಾಪ್ 10 ಎಲೆಕ್ಟ್ರಿಕ್ ಕಾರುಗಳಿವು

ಎಲೆಕ್ಟ್ರಿಕ್ ವಾಹನಗಳಿಗೆ ವಿಶ್ವಾದ್ಯಂತ ಬೇಡಿಕೆ ಹೆಚ್ಚಾಗುತ್ತಿದೆ. ಭಾರತದಲ್ಲಿಯೂ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಸಬ್ಸಿಡಿ ಹಾಗೂ ತೆರಿಗೆ ವಿನಾಯಿತಿ ನೀಡುತ್ತಿರುವುದರಿಂದ ಎಲೆಕ್ಟ್ರಿಕ್ ವಾಹನಗಳ ಮಾರಾಟವು ಹಿಂದಿಗಿಂತ ಈಗ ಹಲವು ಪಟ್ಟು ಹೆಚ್ಚಾಗಿದೆ.

ವಿಶ್ವದಾದ್ಯಂತ ಅತಿ ಹೆಚ್ಚು ಮಾರಾಟವಾಗುವ ಟಾಪ್ 10 ಎಲೆಕ್ಟ್ರಿಕ್ ಕಾರುಗಳಿವು

ಪ್ರಪಂಚದ ಹಲವು ದೇಶಗಳಲ್ಲಿ ಇದೇ ಪರಿಸ್ಥಿತಿ ಕಂಡು ಬರುತ್ತಿದೆ. ಕೆಲವು ಕಂಪನಿಗಳ ಕೆಲವು ಮಾದರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. LeaseLoco ಇತ್ತೀಚಿಗೆ ವಿಶ್ವಾದ್ಯಂತ ಅಧ್ಯಯನ ನಡೆಸಿ ಯಾವ ಎಲೆಕ್ಟ್ರಿಕ್ ಕಾರುಗಳು ಹೆಚ್ಚು ಮಾರಾಟವಾಗುತ್ತದೆ ಎಂಬುದರ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿದೆ. ವಿಶ್ವಾದ್ಯಂತ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಕಾರುಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ವಿಶ್ವದಾದ್ಯಂತ ಅತಿ ಹೆಚ್ಚು ಮಾರಾಟವಾಗುವ ಟಾಪ್ 10 ಎಲೆಕ್ಟ್ರಿಕ್ ಕಾರುಗಳಿವು

Tesla Model 3:

Tesla Model 3 ವಿಶ್ವಾದ್ಯಂತ ಅತಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಕಾರುಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಈ ಕಾರು ಭಾರತದಲ್ಲಿ ಮಾರಾಟವಾಗುತ್ತಿಲ್ಲ ಎಂಬುದು ಗಮನಾರ್ಹ. ಟೆಸ್ಲಾ ಕಂಪನಿಯು ಶೀಘ್ರದಲ್ಲೇ ಈ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಪ್ರಯತ್ನದಲ್ಲಿದೆ.

ವಿಶ್ವದಾದ್ಯಂತ ಅತಿ ಹೆಚ್ಚು ಮಾರಾಟವಾಗುವ ಟಾಪ್ 10 ಎಲೆಕ್ಟ್ರಿಕ್ ಕಾರುಗಳಿವು

ಭಾರತದಲ್ಲಿ ಆಮದು ಮಾಡಿಕೊಳ್ಳುವ ಕಾರುಗಳ ಮೇಲೆ ಹೆಚ್ಚು ತೆರಿಗೆಯನ್ನು ವಿಧಿಸಲಾಗುತ್ತದೆ. ಈ ತೆರಿಗೆ ಪ್ರಮಾಣವನ್ನು ಕಡಿಮೆಗೊಳಿಸಬೇಕು ಎಂದು Tesla ಕಂಪನಿ ಒತ್ತಾಯಿಸುತ್ತಿದೆ. ಕಂಪನಿಯು ಈ ಹಿಂದೆ ತನ್ನ ಪ್ರಯತ್ನದಲ್ಲಿ ವಿಫಲವಾಗಿತ್ತು. ಆದರೂ ಮತ್ತೊಮ್ಮೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದೆ.

ವಿಶ್ವದಾದ್ಯಂತ ಅತಿ ಹೆಚ್ಚು ಮಾರಾಟವಾಗುವ ಟಾಪ್ 10 ಎಲೆಕ್ಟ್ರಿಕ್ ಕಾರುಗಳಿವು

ಪ್ರತಿ ವರ್ಷ ಟೆಸ್ಲಾ ಮಾಡೆಲ್ 3 ಕಾರಿನ 2 ಲಕ್ಷಕ್ಕೂ ಹೆಚ್ಚು ಯುನಿಟ್‌ಗಳನ್ನು ಮಾರಾಟ ಮಾಡಲಾಗುತ್ತದೆ. ಈ ಕಾರು ಒಂದು ಬಾರಿ ಪೂರ್ತಿಯಾಗಿ ಚಾರ್ಜ್ ಆದ ನಂತರ 568 ಕಿ.ಮೀಗಳಗಿಂತಲೂ ಹೆಚ್ಚು ದೂರ ಚಲಿಸುತ್ತದೆ. ಈ ಕಾರ್ ಅನ್ನು ಸೂಪರ್‌ಫಾಸ್ಟ್ ಚಾರ್ಜಿಂಗ್ ಸ್ಟೇಷನ್‌ನಲ್ಲಿ ಚಾರ್ಜ್ ಮಾಡಿದರೆ, ಕೇವಲ 15 ನಿಮಿಷಗಳಲ್ಲಿ 175 ಮೈಲಿ ಚಲಿಸುವಷ್ಟು ಚಾರ್ಜ್ ಮಾಡಬಹುದು ಎಂಬುದು ಗಮನಾರ್ಹ.

ವಿಶ್ವದಾದ್ಯಂತ ಅತಿ ಹೆಚ್ಚು ಮಾರಾಟವಾಗುವ ಟಾಪ್ 10 ಎಲೆಕ್ಟ್ರಿಕ್ ಕಾರುಗಳಿವು

Wuling Hongguang Mini EV:

Wuling Hongguang Mini EV ಸಣ್ಣ ಎಲೆಕ್ಟ್ರಿಕ್ ಕಾರ್ ಆಗಿದೆ. ಈ ಕಾರ್ ಅನ್ನು ಒಂದು ಬಾರಿ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ ಸುಮಾರು 300 ಕಿ.ಮೀಗಳಷ್ಟು ದೂರ ಚಲಿಸಬಹುದು. ಚೀನಾ ಮೂಲದ ಈ ಎಲೆಕ್ಟ್ರಿಕ್ ಕಾರ್ ಅನ್ನು ಪ್ರಪಂಚದ ಕೆಲವು ದೇಶಗಳಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ.

ವಿಶ್ವದಾದ್ಯಂತ ಅತಿ ಹೆಚ್ಚು ಮಾರಾಟವಾಗುವ ಟಾಪ್ 10 ಎಲೆಕ್ಟ್ರಿಕ್ ಕಾರುಗಳಿವು

ಟೆಸ್ಲಾ ಮಾಡೆಲ್ 3 ಎಲೆಕ್ಟ್ರಿಕ್ ಕಾರಿನ ನಂತರ Wuling Hongguang Mini EV ಅತಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಕಾರುಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಎಲೆಕ್ಟ್ರಿಕ್ ಕಾರು ಇತ್ತೀಚೆಗೆ ನಾಲ್ಕು ಲಕ್ಷ ಯುನಿಟ್‌ಗಳ ಮಾರಾಟ ದಾಖಲೆಯನ್ನು ಸಾಧಿಸಿದೆ.

ವಿಶ್ವದಾದ್ಯಂತ ಅತಿ ಹೆಚ್ಚು ಮಾರಾಟವಾಗುವ ಟಾಪ್ 10 ಎಲೆಕ್ಟ್ರಿಕ್ ಕಾರುಗಳಿವು

Tesla Model Y:

Tesla Model Y ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಕಾರುಗಳಲ್ಲಿ ಒಂದಾಗಿದೆ. ಈ ಕಾರು Model 3 ಕಾರಿನ ನಂತರ ಹೆಚ್ಚು ಮಾರಾಟವಾಗುವ Tesla ಕಂಪನಿಯ ಎಲೆಕ್ಟ್ರಿಕ್ ಕಾರ್ ಆಗಿದೆ. ಟೆಸ್ಲಾ ಮಾಡೆಲ್ ವೈ ಕಾರ್ ಅನ್ನು ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಎಲೆಕ್ಟ್ರಿಕ್ ಕಾರು ಸಂಪೂರ್ಣವಾಗಿ ಚಾರ್ಜ್ ಆದ ನಂತರ ಗರಿಷ್ಠ 455 ಕಿ.ಮೀಗಳವರೆಗೆ ಚಲಿಸುತ್ತದೆ.

ವಿಶ್ವದಾದ್ಯಂತ ಅತಿ ಹೆಚ್ಚು ಮಾರಾಟವಾಗುವ ಟಾಪ್ 10 ಎಲೆಕ್ಟ್ರಿಕ್ ಕಾರುಗಳಿವು

Nissan Leaf:

Nissan Leaf ಎಲೆಕ್ಟ್ರಿಕ್ ಕಾರು ಸಹ ಭಾರತದಲ್ಲಿ ಮಾರಾಟಕ್ಕೆ ಲಭ್ಯವಿಲ್ಲ. ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ರವರಿಗೆ ಉಡುಗೊರೆಯಾಗಿ ನೀಡಲಾಗಿರುವ ಈ ಎಲೆಕ್ಟ್ರಿಕ್ ಕಾರ್ ಅನ್ನು ಇತ್ತೀಚೆಗಷ್ಟೇ ಆಮದು ಮಾಡಿಕೊಳ್ಳಲಾಗಿದೆ. ಲೀಫ್ ವಿಶ್ವದ ಅತ್ಯಂತ ಹಳೆಯ ಹಾಗೂ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಕಾರಿನ ಹೆಸರನ್ನು ಹೊಂದಿದೆ.

ವಿಶ್ವದಾದ್ಯಂತ ಅತಿ ಹೆಚ್ಚು ಮಾರಾಟವಾಗುವ ಟಾಪ್ 10 ಎಲೆಕ್ಟ್ರಿಕ್ ಕಾರುಗಳಿವು

BAIC EU Series:

ಚೀನಾ ಮೂಲದ ಈ ಎಲೆಕ್ಟ್ರಿಕ್ ಕಾರು ವಿಶ್ವದಲ್ಲಿ ಅತಿ ವೇಗವಾಗಿ ಮಾರಾಟವಾಗುವ ಎಲೆಕ್ಟ್ರಿಕ್ ಕಾರುಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಕಂಪನಿಯು ಪ್ರತಿ ವರ್ಷ ಈ ಎಲೆಕ್ಟ್ರಿಕ್ ಕಾರಿನ ಸುಮಾರು 65,333 ಯುನಿಟ್‌ಗಳನ್ನು ಮಾರಾಟ ಮಾಡುತ್ತದೆ. ಈ ಎಲೆಕ್ಟ್ರಿಕ್ ಕಾರು ಬಜೆಟ್ ಬೆಲೆಯಲ್ಲಿ ಮಾರಾಟವಾಗುವ ಅತ್ಯುತ್ತಮ ಎಲೆಕ್ಟ್ರಿಕ್ ಕಾರುಗಳಲ್ಲಿ ಒಂದಾಗಿದೆ.

ವಿಶ್ವದಾದ್ಯಂತ ಅತಿ ಹೆಚ್ಚು ಮಾರಾಟವಾಗುವ ಟಾಪ್ 10 ಎಲೆಕ್ಟ್ರಿಕ್ ಕಾರುಗಳಿವು

Volkswagen ID.3:

ಪ್ರತಿ ವರ್ಷ Volkswagen ID.3 ಎಲೆಕ್ಟ್ರಿಕ್ ಕಾರಿನ 54,495 ಯೂನಿಟ್‌ಗಳು ಮಾರಾಟವಾಗುತ್ತವೆ. ಅಂದರೆ, ಈ ಎಲೆಕ್ಟ್ರಿಕ್ ಕಾರು ಆಕರ್ಷಕ ವಿನ್ಯಾಸ ಹಾಗೂ ಸೊಗಸಾದ ನೋಟವನ್ನು ಹೊಂದಿದೆ.

ವಿಶ್ವದಾದ್ಯಂತ ಅತಿ ಹೆಚ್ಚು ಮಾರಾಟವಾಗುವ ಟಾಪ್ 10 ಎಲೆಕ್ಟ್ರಿಕ್ ಕಾರುಗಳಿವು

SAIC Baojun E Series EV:

ಪ್ರತಿ ವರ್ಷ Baojun E Series ಎಲೆಕ್ಟ್ರಿಕ್ ಕಾರಿನ 53,877 ಯುನಿಟ್‌ಗಳು ಮಾರಾಟವಾಗುತ್ತವೆ. SAIC Boujan e Series EV ಪ್ರತಿ ವರ್ಷ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಕಾರುಗಳ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.

ವಿಶ್ವದಾದ್ಯಂತ ಅತಿ ಹೆಚ್ಚು ಮಾರಾಟವಾಗುವ ಟಾಪ್ 10 ಎಲೆಕ್ಟ್ರಿಕ್ ಕಾರುಗಳಿವು

Hyundai Kona:

Kona, ಹ್ಯುಂಡೈ ಕಂಪನಿಯ ಮೊದಲ ಎಲೆಕ್ಟ್ರಿಕ್ ಕಾರು. ಹ್ಯುಂಡೈ ಕಂಪನಿಯು ಈ ಎಲೆಕ್ಟ್ರಿಕ್ ಕಾರ್ ಅನ್ನು ಭಾರತದಲ್ಲಿ ಮಾರಾಟ ಮಾಡುತ್ತದೆ. ಪ್ರತಿ ವರ್ಷ ವಿಶ್ವಾದ್ಯಂತ ಈ ಎಲೆಕ್ಟ್ರಿಕ್ ಕಾರಿನ ಸುಮಾರು 52 ಸಾವಿರ ಯೂನಿಟ್‌ಗಳು ಮಾರಾಟವಾಗುತ್ತವೆ ಎಂದು ಹೇಳಲಾಗಿದೆ.

ವಿಶ್ವದಾದ್ಯಂತ ಅತಿ ಹೆಚ್ಚು ಮಾರಾಟವಾಗುವ ಟಾಪ್ 10 ಎಲೆಕ್ಟ್ರಿಕ್ ಕಾರುಗಳಿವು

Audi e Tron:

Audi e Tron ಭಾರತದಲ್ಲಿ ಮಾರಾಟವಾಗುವ ಮತ್ತೊಂದು ಎಲೆಕ್ಟ್ರಿಕ್ ಕಾರು. ಈ ಐಷಾರಾಮಿ ಎಲೆಕ್ಟ್ರಿಕ್ ಕಾರ್ ಅನ್ನು ಸ್ಟ್ಯಾಂಡರ್ಡ್, ಸ್ಪೋರ್ಟ್ ಬ್ಯಾಕ್, ಜಿಟಿ ಹಾಗೂ ಆರ್‌ಎಸ್ ಎಂಬ ನಾಲ್ಕು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಪ್ರತಿ ವರ್ಷ ವಿಶ್ವಾದ್ಯಂತ ಈ ಎಲೆಕ್ಟ್ರಿಕ್ ಕಾರಿನ 47,324 ಯುನಿಟ್‌ಗಳು ಮಾರಾಟವಾಗುತ್ತವೆ ಎಂದು ವರದಿಯಾಗಿದೆ.

ವಿಶ್ವದಾದ್ಯಂತ ಅತಿ ಹೆಚ್ಚು ಮಾರಾಟವಾಗುವ ಟಾಪ್ 10 ಎಲೆಕ್ಟ್ರಿಕ್ ಕಾರುಗಳಿವು

Renault Zoe:

Renault Zoe ಆಕರ್ಷಕವಾದ ಎಲೆಕ್ಟ್ರಿಕ್ ಕಾರು. ಈ ಕಾರ್ ಅನ್ನು ಭಾರತದಲ್ಲಿ ನಡೆದಿದ್ದ 2020 ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಲಾಗಿತ್ತು. ಈ ಎಲೆಕ್ಟ್ರಿಕ್ ಕಾರ್ ಅನ್ನು ಭಾರತೀಯರು ಕಾತುರದಿಂದ ನಿರೀಕ್ಷಿಸುತ್ತಿದ್ದಾರೆ. ಈ ಕಾರು ಶೀಘ್ರದಲ್ಲಿಯೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಗಳಿವೆ. ಆದರೆ Renault ಈ ಬಗ್ಗೆ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಪ್ರತಿ ವರ್ಷ ವಿಶ್ವಾದ್ಯಂತ Renault Zoe ಎಲೆಕ್ಟ್ರಿಕ್ ಕಾರಿನ ಸುಮಾರು 35 ಸಾವಿರ ಯುನಿಟ್ ಗಳು ಮಾರಾಟವಾಗುತ್ತವೆ.

Most Read Articles

Kannada
English summary
Top 10 fastest selling electric cars in the world details
Story first published: Saturday, October 23, 2021, 12:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X