ಸೆಪ್ಟೆಂಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಟಾಪ್ 10 ಹ್ಯಾಚ್‌ಬ್ಯಾಕ್ ಕಾರುಗಳಿವು
ಭಾರತದಲ್ಲಿ ಕಾರು ಮಾರಾಟವು ಕಳೆದ ತಿಂಗಳು ಅಂದರೆ ಸೆಪ್ಟೆಂಬರ್ ತಿಂಗಳಿನಲ್ಲಿ 36.6% ರಷ್ಟು ಕುಸಿದಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಪ್ರಪಂಚದಾದ್ಯಂತ ವಾಹನಗಳಿಗೆ ಅಗತ್ಯವಿರುವ ಸೆಮಿ ಕಂಡಕ್ಟರ್ ಗಳ ಕೊರತೆ ಉಂಟಾಗಿರುವುದು. ಕಳೆದ ತಿಂಗಳು ಹ್ಯಾಚ್‌ಬ್ಯಾಕ್ ಕಾರುಗಳ ವಿಭಾಗದಲ್ಲಿ ಹಲವಾರು ಮಾದರಿಗಳ ಮಾರಾಟ ತೀವ್ರವಾಗಿ ಕುಸಿದಿದೆ.

ಎಂದಿನಂತೆ Maruti Suzuki ಕಂಪನಿಯ ಹ್ಯಾಚ್‌ಬ್ಯಾಕ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿವೆ. ಕಳೆದ ತಿಂಗಳ ಮಾರಾಟದಲ್ಲಿ Maruti Suzuki Alto ಕಾರು Maruti Suzuki Baleno ಕಾರ್ ಅನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದೆ. ಕಳೆದ ತಿಂಗಳು Maruti Suzuki Alto ಹ್ಯಾಚ್‌ಬ್ಯಾಕ್ ಕಾರಿನ 12,143 ಯುನಿಟ್ ಗಳು ಮಾರಾಟವಾಗಿವೆ.

ಈ ಪ್ರಮಾಣವು 2020ರ ಸೆಪ್ಟೆಂಬರ್ ತಿಂಗಳಿಗೆ ಶೇಕಡಾ 33 ರಷ್ಟು ಕುಸಿದಿದೆ. 2020ರ ಸೆಪ್ಟೆಂಬರ್ ತಿಂಗಳಿನಲ್ಲಿ ಈ ಅಗ್ಗದ ಬೆಲೆಯ ಹ್ಯಾಚ್ ಬ್ಯಾಕ್ ಕಾರಿನ ಒಟ್ಟು 18,246 ಯುನಿಟ್ ಗಳನ್ನು ಮಾರಾಟ ಮಾಡಲಾಗಿತ್ತು. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳ ಮಾರಾಟದಲ್ಲಿ Alto ಕಾರು ಸ್ಥಾನದಲ್ಲಿತ್ತು ಎಂಬುದು ಗಮನಾರ್ಹ. ಇನ್ನು ಈ ವರ್ಷದ ಪಟ್ಟಿಯಲ್ಲಿ Maruti Suzuki ಕಂಪನಿಯ Baleno ಕಾರು ಎರಡನೇ ಸ್ಥಾನದಲ್ಲಿದೆ.

ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರಿನ 19,433 ಯುನಿಟ್‌ಗಳು ಮಾರಾಟವಾಗಿದ್ದವು. ಆದರೆ ಈ ಬಾರಿ ಈ ಕಾರಿನ ಕೇವಲ 8,077 ಯುನಿಟ್‌ಗಳು ಮಾರಾಟವಾಗಿವೆ. Baleno ಕಾರಿನ ಮಾರಾಟ ಪ್ರಮಾಣವು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ 58% ನಷ್ಟು ಕಡಿಮೆಯಾಗಿದೆ.

2020ರ ಸೆಪ್ಟೆಂಬರ್ ತಿಂಗಳಿನಲ್ಲಿ 22,643 ಯುನಿಟ್‌ಗಳ ಮಾರಾಟದೊಂದಿಗೆ ಅಗ್ರಸ್ಥಾನದಲ್ಲಿದ್ದ Maruti Suzuki Swift ಕಾರು ಈ ಬಾರಿ 10 ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ತಿಂಗಳು ಈ ಕಾರಿನ ಕೇವಲ 2,520 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಕಳೆದ ತಿಂಗಳು Maruti Suzuki ಇಂಡಿಯಾ ಪ್ರಮುಖ ಕಾರು ಮಾದರಿಗಳಲ್ಲಿ ಒಂದಾದ ಹಾಗೂ ಭಾರತೀಯರ ನೆಚ್ಚಿನ ಕಾರುಗಳಲ್ಲಿ ಒಂದಾದ Swift ಕಾರು 88.87% ನಷ್ಟು ಇಳಿಕೆ ಕಂಡಿದೆ.

7,632 ಯುನಿಟ್‌ಗಳ ಮಾರಾಟದೊಂದಿಗೆ Maruti Suzuki WagonR ಕಾರು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. 2020ರ ಸೆಪ್ಟೆಂಬರ್ ತಿಂಗಳಿನಲ್ಲಿ ಈ ಕಾರಿನ 17,581 ಯುನಿಟ್ ಗಳು ಮಾರಾಟವಾಗಿದ್ದವು. WagonR ಕಾರಿನ ಮಾರಾಟವು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 57% ನಷ್ಟು ಕುಸಿದಿದೆ. ಇನ್ನು ಕಳೆದ ತಿಂಗಳು Tata Altroz ಕಾರಿನ 5,775 ಯುನಿಟ್ ಗಳು ಮಾರಾಟವಾಗಿವೆ.

ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಈ ಕಾರಿನ 5,952 ಯುನಿಟ್ ಗಳು ಮಾರಾಟವಾಗಿದ್ದವು. ಈ ಕಾರಿನ ಮಾರಾಟವು ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ 3% ನಷ್ಟು ಕಡಿಮೆಯಾಗಿದೆ. ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ Hyundai i 20 ಕಾರಿನ ಒಟ್ಟು 5,153 ಯುನಿಟ್ ಗಳು ಕಳೆದ ತಿಂಗಳು ಮಾರಾಟವಾಗಿವೆ. 2020ರ ಸೆಪ್ಟೆಂಬರ್ ತಿಂಗಳಿನಲ್ಲಿ ಈ ಕಾರಿನ 9,852 ಯುನಿಟ್ ಗಳು ಮಾರಾಟವಾಗಿದ್ದವು.

Hyundai i 20 ಕಾರಿನ ಮಾರಾಟ ಪ್ರಮಾಣವು 2020ರ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ 48% ನಷ್ಟು ಕಡಿಮೆಯಾಗಿದೆ. ಕಳೆದ ತಿಂಗಳು Tata Motors ಕಂಪನಿಯ Tiago ಕಾರಿನ 5,121 ಯುನಿಟ್ ಗಳು ಮಾರಾಟವಾಗಿವೆ. 2020ರ ಸೆಪ್ಟೆಂಬರ್ ತಿಂಗಳಿನಲ್ಲಿ ಈ ಕಾರಿನ 6,080 ಯುನಿಟ್ ಗಳು ಮಾರಾಟವಾಗಿದ್ದವು. ಈ ಕಾರಿನ ಮಾರಾಟ ಪ್ರಮಾಣವು ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ 16% ನಷ್ಟು ಕಡಿಮೆಯಾಗಿದೆ.

ಈ ಪಟ್ಟಿಯಲ್ಲಿ Hyundai ಕಂಪನಿಯ Grand i 10 ಹ್ಯಾಚ್ ಬ್ಯಾಕ್ ಕಾರು ಏಳನೇ ಸ್ಥಾನದಲ್ಲಿದೆ. ಕಳೆದ ತಿಂಗಳು ಈ ಕಾರಿನ ಒಟ್ಟು 4,168 ಯುನಿಟ್ ಗಳು ಮಾರಾಟವಾಗಿವೆ. 2020ರ ಸೆಪ್ಟೆಂಬರ್ ತಿಂಗಳಿನಲ್ಲಿ ಈ ಕಾರಿನ ಒಟ್ಟು 10,385 ಯುನಿಟ್ ಗಳು ಮಾರಾಟವಾಗಿದ್ದವು. ಈ ಕಾರಿನ ಮಾರಾಟ ಪ್ರಮಾಣವು 2020ರ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಒಟ್ಟು 60% ನಷ್ಟು ಕಡಿಮೆಯಾಗಿದೆ.

ಇನ್ನು Maruti Suzuki ಕಂಪನಿಯ S Presso ಕಾರು ಈ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಕಳೆದ ತಿಂಗಳು ಈ ಕಾರಿನ 2,793 ಯುನಿಟ್ ಕಾರುಗಳು ಮಾರಾಟವಾಗಿದ್ದರೆ, 2020ರ ಸೆಪ್ಟೆಂಬರ್ ತಿಂಗಳಿನಲ್ಲಿ ಈ ಕಾರಿನ 9,000 ಯುನಿಟ್ ಗಳು ಮಾರಾಟವಾಗಿದ್ದವು. ಈ ಕಾರಿನ ಮಾರಾಟ ಪ್ರಮಾಣವು ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ 69% ನಷ್ಟು ಕಡಿಮೆಯಾಗಿದೆ.

Renault ಕಂಪನಿಯ ಕ್ವಿಡ್ ಕಾರು ಈ ಪಟ್ಟಿಯಲ್ಲಿ ಒಂಭತ್ತನೇ ಸ್ಥಾನದಲ್ಲಿದೆ. ಕಳೆದ ತಿಂಗಳು ಈ ಕಾರಿನ ಒಟ್ಟು 2,710 ಯುನಿಟ್ ಕಾರುಗಳು ಮಾರಾಟವಾಗಿವೆ. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಈ ಕಾರಿನ 4,513 ಯುನಿಟ್ ಕಾರುಗಳು ಮಾರಾಟವಾಗಿದ್ದವು. ಈ ಈ ಕಾರಿನ ಮಾರಾಟ ಪ್ರಮಾಣವು 2020ರ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಒಟ್ಟು 40% ನಷ್ಟು ಕಡಿಮೆಯಾಗಿದೆ.


Click it and Unblock the Notifications