2021ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಟಾಪ್ 10 ಐಷಾರಾಮಿ ಕಾರುಗಳಿವು!

ಭಾರತದಲ್ಲಿ ಐಷಾರಾಮಿ ಕಾರುಗಳ ಮಾರಾಟವು ಕಳೆದ ಒಂದು ದಶಕದ ಅವಧಿಯಯಲ್ಲಿ ಸಾಕಷ್ಟು ಬೆಳವಣಿಗೆ ಕಂಡಿದ್ದು, 2021ರಲ್ಲೂ ಹಲವಾರು ಹೊಸ ಐಷಾರಾಮಿ ಕಾರು ಮಾದರಿಗಳು ಮಾರುಕಟ್ಟೆ ಪ್ರವೇಶಿಸಿವೆ.

2021ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಟಾಪ್ 10 ಐಷಾರಾಮಿ ಕಾರುಗಳಿವು!

ಐಷಾರಾಮಿ ಕಾರುಗಳ ವಿಭಾಗವು ಕೋವಿಡ್ ಆರ್ಥಿಕ ಸಂಕಷ್ಟದ ನಡುವೆಯೂ ಉತ್ತಮ ಬೇಡಿಕೆ ಕಾಯ್ದುಕೊಂಡಿದ್ದು, ಕಳೆದ ಮೂರು ವರ್ಷಗಳಲ್ಲಿ ಹಲವಾರು ಹೊಸ ಐಷಾರಾಮಿ ಕಾರು ಮಾದರಿಗಳು ಭಾರತದಲ್ಲಿ ಬಿಡುಗಡೆಯಾಗಿವೆ. ಹಾಗಾದರೆ 2021ರಲ್ಲಿ ಬಿಡುಗಡೆಯಾಗಿರುವ ಟಾಪ್ 10 ಐಷಾರಾಮಿ ಕಾರುಗಳು ಯಾವುವು? ಮತ್ತು ಅವುಗಳ ವಿಶೇಷತೆ ಬಗೆಗೆ ಇಲ್ಲಿ ತಿಳಿಯೋಣ.

2021ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಟಾಪ್ 10 ಐಷಾರಾಮಿ ಕಾರುಗಳಿವು!

ಮರ್ಸಿಡಿಸ್-ಎಎಂಜಿ ಎ 45 ಎಸ್ 4ಮ್ಯಾಟಿಕ್ ಪ್ಲಸ್

ಮರ್ಸಿಡಿಸ್ ಬೆಂಝ್ ಇಂಡಿಯಾ ಕಂಪನಿಯು ತನ್ನ ಬಹುನೀರಿಕ್ಷಿತ ಮರ್ಸಿಡಿಸ್-ಎಎಂಜಿ ಎ 45 ಎಸ್ 4ಮ್ಯಾಟಿಕ್ ಪ್ಲಸ್ ಪರ್ಫಾಮೆನ್ಸ್ ಆವೃತ್ತಿಯನ್ನು ಭಾರತದಲ್ಲೂ ಬಿಡುಗಡೆ ಮಾಡಿದ್ದು, ಪವರ್‌ಫುಲ್ ಎಂಜಿನ್ ಪ್ರೇರಿತ ಹೊಸ ಕಾರು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 79.50 ಲಕ್ಷ ಬೆಲೆ ಹೊಂದಿದೆ.

2021ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಟಾಪ್ 10 ಐಷಾರಾಮಿ ಕಾರುಗಳಿವು!

ಮರ್ಸಿಡಿಸ್-ಎಎಂಜಿ ಎ 45 ಎಸ್ ಮಾದರಿಯು ಮರ್ಸಿಡಿಸ್ ಬೆಂಝ್ ಕಂಪನಿಯ ಅತ್ಯಂತ ಶಕ್ತಿಯುತವಾದ ಫೋರ್ ಸಿಲಿಂಡರ್ ಮೋಟಾರ್ ಪ್ರೇರಿತ 2.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 412 ಬಿಎಚ್‌ಪಿ ಮತ್ತು 500 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು.

2021ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಟಾಪ್ 10 ಐಷಾರಾಮಿ ಕಾರುಗಳಿವು!

ರೇಂಜ್ ರೋವರ್ ಸ್ಪೋರ್ಟ್ ಎಸ್‌ವಿಆರ್

ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ ಕಂಪನಿಯು ತನ್ನ ಹೊಸ ರೇಂಜ್ ರೋವರ್ ಸ್ಪೋರ್ಟ್ ಎಸ್‌ವಿಆರ್ ಎಸ್‍ಯುವಿಯನ್ನು ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ಹೊಸ ಕಾರು ಎಕ್ಸ್ ಶೋರೂಂ ಪ್ರಕಾರ ರೂ.2.19 ಕೋಟಿ ಬೆಲೆ ಹೊಂದಿದೆ.

2021ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಟಾಪ್ 10 ಐಷಾರಾಮಿ ಕಾರುಗಳಿವು!

ಹೊಸ ಕಾರಿನಲ್ಲಿ 5.0-ಲೀಟರ್(4,998 ಸಿಸಿ) ಸೂಪರ್ ಚಾರ್ಜ್ಡ್ ವಿ8 ಎಂಜಿನ್ ಅನ್ನು ಅಳವಡಿಸಲಾಗಿದ್ದು, ರೇಂಜ್ ರೋವರ್ ಇತರೆ ಮಾದರಿಗೆ ಹೋಲಿಸಿದರೆ ಎಸ್‌ವಿಆರ್ ವೆರಿಯೆಂಟ್‌ಗಳು ಹೆಚ್ಚಿನ ಮಟ್ಟದ ಎಂಜಿನ್ ಆಯ್ಕೆಯೊಂದಿಗೆ ಸ್ಪೋರ್ಟಿ ಲುಕ್ ಅನ್ನು ಹೊಂದಿವೆ.

2021ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಟಾಪ್ 10 ಐಷಾರಾಮಿ ಕಾರುಗಳಿವು!

ಮರ್ಸಿಡಿಸ್-ಮೇಬ್ಯಾಚ್ ಜಿಎಲ್ಎಸ್600

ಮರ್ಸಿಡಿಸ್ ಬೆಂಝ್ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಬಹುನೀರಿಕ್ಷಿತ ಮರ್ಸಿಡಿಸ್-ಮೇಬ್ಯಾಚ್ ಜಿಎಲ್ಎಸ್600 ಅಲ್ಟ್ರಾ ಲಗ್ಷುರಿ ಎಸ್‌ಯುವಿ ಬಿಡುಗಡೆ ಮಾಡಿದ್ದು, ಹೊಸ ಕಾರು ದುಬಾರಿ ಬೆಲೆಯೊಂದಿಗೆ ಹಲವಾರು ಆಧುನಿಕ ತಾಂತ್ರಿಕ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

2021ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಟಾಪ್ 10 ಐಷಾರಾಮಿ ಕಾರುಗಳಿವು!

ಮರ್ಸಿಡಿಸ್-ಮೇಬ್ಯಾಚ್ ಜಿಎಲ್ಎಸ್600 ಅಲ್ಟ್ರಾ ಲಗ್ಷುರಿ ಎಸ್‌ಯುವಿ ಮಾದರಿಯು 4 ಮ್ಯಾಟಿಕ್ ಎನ್ನುವ ಒಂದೇ ಒಂದು ವೆರಿಯೆಂಟ್ ಹೊಂದಿದ್ದು, ಕಾರಿನ ಬೆಲೆಯನ್ನು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 2.43 ಕೋಟಿಗೆ ನಿಗದಿಪಡಿಸಲಾಗಿದೆ. ಹೊಸ ಕಾರಿನಲ್ಲಿ 4.0 ಲೀಟರ್ ವಿ8 ಪೆಟ್ರೋಲ್ ಎಂಜಿನ್ ಜೋಡಿಸಿದ್ದು, ಇದು 9 ಜಿ-ಟ್ರಾನಿಕ್ ಸ್ವಯಂಚಾಲಿತ ಗೇರ್‌ಬಾಕ್ಸ್‌ನೊಂದಿಗೆ 550ಬಿಎಚ್‌ಪಿ ಮತ್ತು 730ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

2021ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಟಾಪ್ 10 ಐಷಾರಾಮಿ ಕಾರುಗಳಿವು!

ನ್ಯೂ ಜನರೇಷನ್ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್

ಮರ್ಸಿಡಿಸ್ ಬೆಂಝ್ ತನ್ನ ಜನಪ್ರಿಯ ಎಸ್-ಕ್ಲಾಸ್ ಸೆಡಾನ್ ಮಾದರಿಯನ್ನು ಭಾರತದಲ್ಲಿ ನ್ಯೂ ಜನರೇಷನ್ ಆವೃತ್ತಿಯೊಂದಿಗೆ ಬಿಡುಗಡೆ ಮಾಡಿದ್ದು, ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 2.17 ಕೋಟಿ ಬೆಲೆ ಹೊಂದಿದೆ. ಹೊಸ ಕಾರು ಎಸ್ 400ಡಿ ಲಾಂಚ್ ಎಡಿಷನ್ (ರೂ. 2.17 ಕೋಟಿ) ಮತ್ತು ಎಸ್ 450 ಲಾಂಚ್ ಎಡಿಷನ್ (ರೂ. 2.19 ಕೋಟಿ) ಎನ್ನುವ ವೆರಿಯೆಂಟ್‌ ಹೊಂದಿದೆ.

2021ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಟಾಪ್ 10 ಐಷಾರಾಮಿ ಕಾರುಗಳಿವು!

ಎಸ್ 450 ಪೆಟ್ರೋಲ್ ಮಾದರಿಯು 3.0-ಲೀಟರ್(2,999 ಸಿಸಿ) 6 ಸಿಲಿಂಡರ್ ಎಂಜಿನ್‌ನೊಂದಿಗೆ 362-ಬಿಎಚ್‌ಪಿ, 500-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಎಸ್ 400ಡಿ ಡೀಸೆಲ್ ಮಾದರಿಯು 3.0-ಲೀಟರ್(2,925 ಸಿಸಿ) 6 ಸಿಲಿಂಡರ್ ಎಂಜಿನ್‌ನೊಂದಿಗೆ 362-ಬಿಎಚ್‌ಪಿ, 700-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿದೆ.

2021ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಟಾಪ್ 10 ಐಷಾರಾಮಿ ಕಾರುಗಳಿವು!

ಆಡಿ ಕ್ಯೂ5 ಫೇಸ್‌ಲಿಫ್ಟ್ ಎಸ್‍ಯುವಿ

ಐಷಾರಾಮಿ ಕಾರು ತಯಾರಕ ಕಂಪನಿಯಾದ ಆಡಿ ಇಂಡಿಯಾ ತನ್ನ ಬಹುನಿರೀಕ್ಷಿತ ಕ್ಯೂ5 ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಆಡಿ ಕ್ಯೂ5 ಫೇಸ್‌ಲಿಫ್ಟ್ ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ. 58.93 ಲಕ್ಷಗಳಾಗಿದೆ.

2021ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಟಾಪ್ 10 ಐಷಾರಾಮಿ ಕಾರುಗಳಿವು!

ಹೊಸ ಆಡಿ ಕ್ಯೂ5 ಫೇಸ್‌ಲಿಫ್ಟ್ ಎಸ್‍ಯುವಿಯ ಟಾಪ್-ಎಂಡ್ ರೂಪಾಂತರದ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ. 63.77 ಲಕ್ಷಗಳಾಗಿದೆ. ಈ ಹೊಸ ಆಡಿ ಕ್ಯೂ5 ಫೇಸ್‌ಲಿಫ್ಟ್ ಅನ್ನು ಭಾರತದಲ್ಲಿ ಸಂಪೂರ್ಣವಾಗಿ ನಾಕ್ಡ್ ಡೌನ್ ಯುನಿಟ್ ಆಗಿ ನೀಡಲಾಗುವುದು ಮತ್ತು ಔರಂಗಾಬಾದ್‌ನಲ್ಲಿರುವ ಅದರ ಮೂಲ ಕಂಪನಿಯಾದ ವಿಡಬ್ಲ್ಯು ಗ್ರೂಪ್‌ನ ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸ್ಥಾವರದಲ್ಲಿ ಸ್ಥಳೀಯವಾಗಿ ಜೋಡಿಸಲಾಗುತ್ತದೆ.

2021ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಟಾಪ್ 10 ಐಷಾರಾಮಿ ಕಾರುಗಳಿವು!

ಮೈಲ್ಡ್ ಹೈಬ್ರಿಡ್ ವೊಲ್ವೊ ಎಕ್ಸ್‌ಸಿ90

ಮಾಲಿನ್ಯ ತಗ್ಗಿಸುವ ಉದ್ದೇಶದಿಂದ ಡೀಸೆಲ್ ಕಾರುಗಳ ಮಾರಾಟವನ್ನು ಹಂತ-ಹಂತವಾಗಿ ಕಡಿತಗೊಳಿಸುತ್ತಿರುವ ವೊಲ್ವೊ ಕಂಪನಿಯು ಪ್ರಮುಖ ಕಾರುಗಳನ್ನು ಹೊಸ ಪೆಟ್ರೋಲ್ ಹೈಬ್ರಿಡ್ ಎಂಜಿನ್‌ಗೆ ಉನ್ನತೀಕರಿಸುತ್ತಿದ್ದು, ಇದೀಗ ಹೊಸದಾಗಿ ಬಿಡುಗಡೆಯಾಗಿರುವ ಎಕ್ಸ್‌ಸಿ90 ಕಾರು ಮಾದರಿಯಲ್ಲೂ ಕೂಡಾ ಕಂಪನಿಯು ಕೇವಲ 2.0 ಲೀಟರ್ ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಮಾತ್ರ ನೀಡಿದೆ.

2021ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಟಾಪ್ 10 ಐಷಾರಾಮಿ ಕಾರುಗಳಿವು!

ಹೊಸ ಪ್ಲ್ಯಾಟ್‌ಫಾರ್ಮ್ ಆಧರಿಸಿರುವ ಎಕ್ಸ್‌ಸಿ90 ಎಸ್‌ಯುವಿ ಮಾದರಿಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 89.90 ಲಕ್ಷ ಬೆಲೆ ಹೊಂದಿದ್ದು, ಹೊಸ ಕಾರಿನಲ್ಲಿ ಕಂಪನಿಯು 2.0 ಲೀಟರ್ (1,969 ಸಿಸಿ) 48 ವಿ ಮೈಲ್ಡ್ ಹೈಬ್ರಿಡ್ ಟೆಕ್ನಾಲಜಿ ಹೊಂದಿರುವ ಪೆಟ್ರೋಲ್ ಎಂಜಿನ್ ನೀಡಿದೆ.

2021ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಟಾಪ್ 10 ಐಷಾರಾಮಿ ಕಾರುಗಳಿವು!

2021ರ ಜಾಗ್ವಾರ್ ಎಕ್ಸ್ಎಫ್

ಐಷಾರಾಮಿ ಕಾರು ತಯಾರಕ ಕಂಪನಿಯಾದ ಜಾಗ್ವಾರ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಎಕ್ಸ್ಎಫ್ ಐಷಾರಾಮಿ ಸೆಡಾನ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಜಾಗ್ವಾರ್ ಎಕ್ಸ್ಎಫ್ (Jaguar XF) ಐಷಾರಾಮಿ ಸೆಡಾನ್ ಕಾರಿನ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.71.60 ಲಕ್ಷಗಳಾಗಿದೆ.

2021ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಟಾಪ್ 10 ಐಷಾರಾಮಿ ಕಾರುಗಳಿವು!

ಹೊಸ ಜಾಗ್ವಾರ್ ಎಕ್ಸ್ಎಫ್ ಸೆಡಾನ್‌ನ ಫೇಸ್‌ಲಿಫ್ಟ್ ಮಾದರಿಯು ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ಆರ್-ಡೈನಾಮಿಕ್ ಮತ್ತು ಎಸ್ ಎಂದು ಕರೆಯಲ್ಪಡುವ ಎರಡು ರೂಪಂತರಗಳಲ್ಲಿ ಲಭ್ಯವಿರಲಿದೆ. ಈ ಜಾಗ್ವಾರ್ ಎಕ್ಸ್ಎಫ್ ಸೆಡಾನ್ 2.0-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮುಂದುವರಿಯುತ್ತದೆ. ಈ ಎಂಜಿನ್ 247 ಬಿಹೆಚ್‍ಪಿ ಪವರ್ ಮತ್ತು 365 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

2021ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಟಾಪ್ 10 ಐಷಾರಾಮಿ ಕಾರುಗಳಿವು!

ಬಿಎಂಡಬ್ಲ್ಯು ಎಕ್ಸ್5 ಎಕ್ಸ್‌ಡ್ರೈವ್ ಸ್ಪೋರ್ಟ್ಎಕ್ಸ್ ಎಸ್‍ಯುವಿ

ಜರ್ಮನ್ ಮೂಲದ ಕಾರು ಉತ್ಪದನಾ ಕಂಪನಿಯಾದ ಬಿಎಂಡಬ್ಲ್ಯು(BMW) ತನ್ನ ಹೊಸ X5 xDrive SportX Plus ಎಸ್‍ಯುವಿ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ BMW X5 xDrive SportX Plus ಎಸ್‍ಯುವಿಯು X5 xDrive30d SportX Plus ಮತ್ತು X5 xDrive40i SportX Plus ವೆರಿಯೆಂಟ್ ಗಳಲ್ಲಿ ಲಭ್ಯವಿದೆ.

2021ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಟಾಪ್ 10 ಐಷಾರಾಮಿ ಕಾರುಗಳಿವು!

ಬಿಎಂಡಬ್ಲ್ಯು X5 xDrive30d SportX Plus ವೆರಿಯೆಂಟ್ ಬೆಲೆಯು ರೂ,79.50 ಲಕ್ಷಗಳಾದರೆ, xDrive40i SportX Plus ವೆರಿಯೆಂಟ್ ಬೆಲೆಯು ರೂ.77.90 ಲಕ್ಷಗಳಾಗಿದೆ. ಈ ಎಲ್ಲಾ ಎಕ್ಸ್ ಶೋರೂಂ ಪ್ರಕಾರವಾಗಿದೆ. ಈ ಐಷಾರಾಮಿ ಎಸ್‍ಯುವಿಯನ್ನು ಚೆನ್ನೈನ ಬಿಎಂಡಬ್ಲ್ಯು ಸ್ಥಾವರದಲ್ಲಿ ಉತ್ಪಾದಿಸಲಾಗುತ್ತದೆ.

2021ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಟಾಪ್ 10 ಐಷಾರಾಮಿ ಕಾರುಗಳಿವು!

V8 ಎಂಜಿನ್ ಪ್ರೇರಿತ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿ

ಜಾಗ್ವಾರ್ ಲ್ಯಾಂಡ್ ರೋವರ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಹೊಚ್ಚ ಹೊಸ v8 ಎಂಜಿನ್ ಪ್ರೇರಿತ Defender SUV ಮಾದರಿಗಳನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ರೂ. 1.82 ಕೋಟಿ ಬೆಲೆ ಹೊಂದಿವೆ. V8 ಎಂಜಿನ್ ಹೊಂದಿರುವ ಟಾಪ್ ಎಂಡ್ ಮಾದರಿಗಳನ್ನು ಸಹ ಬಿಡುಗಡೆ ಮಾಡಿದ್ದು, ಹೊಸ ಕಾರು ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹೆಚ್ಚು ಪ್ರೀಮಿಯಂ ಮತ್ತು ಪವರ್‌ಫುಲ್ ಎಂಜಿನ್ ಆಯ್ಕೆ ಹೊಂದಿದೆ.

2021ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಟಾಪ್ 10 ಐಷಾರಾಮಿ ಕಾರುಗಳಿವು!

Defender SUV ಮಾದರಿಯನ್ನು Defender 90 ಮತ್ತು Defender 110 ಮಾದರಿಗಳಲ್ಲಿ ಮಾರಾಟ ಮಾಡುತ್ತಿದ್ದು, 5.0-ಲೀಟರ್(4998 ಸಿಸಿ) ಪೆಟ್ರೋಲ್ ಎಂಜಿನ್ ಹೊಂದಿದೆ. ಆಲ್ ವ್ಹೀಲ್ ಡ್ರೈವ್ ಟೆಕ್ನಾಲಜಿಯೊಂದಿಗೆ 525-ಬಿಎಚ್‌ಪಿ ಮತ್ತು 625-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, V8 ಮಾದರಿಗಳಲ್ಲಿ ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ತಾಂತ್ರಿಕ ಅಂಶಗಳನ್ನು ನೀಡಲಾಗಿದೆ.

2021ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಟಾಪ್ 10 ಐಷಾರಾಮಿ ಕಾರುಗಳಿವು!

ಮರ್ಸಿಡಿಸ್ ಎಎಂಜಿ ಜಿಎಲ್ಇ 63 ಎಸ್ ಕೂಪೆ

Mercedes-Benz ಕಂಪನಿಯು ಭಾರತದಲ್ಲಿನ ತನ್ನ AMG ಸರಣಿಯಲ್ಲಿ ಹೊಸದಾಗಿ ಎಎಂಜಿ ಜಿಎಲ್ಇ 63 ಎಸ್ ಕೂಪೆ ಎಸ್‌ಯುವಿ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 2.07 ಕೋಟಿ ಬೆಲೆ ಹೊಂದಿದೆ.

2021ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಟಾಪ್ 10 ಐಷಾರಾಮಿ ಕಾರುಗಳಿವು!

ಹೊಸ ಕಾರುಗಳಲ್ಲಿ ಕಂಪನಿಯು V8 4.0-ಲೀಟರ್ ಟ್ವಿನ್-ಟರ್ಬೊ ಪೆಟ್ರೋಲ್ ಎಂಜಿನ್ ಬಳಕೆ ಮಾಡಿದ್ದು, ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಹೊಸ ಕಾರು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 612-ಬಿಎಚ್‌ಪಿ ಮತ್ತು 850-ಎನ್ಎಂ ಟಾರ್ಕ್ ಉತ್ಪಾದಿಸಲಿದೆ.

2021ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಟಾಪ್ 10 ಐಷಾರಾಮಿ ಕಾರುಗಳಿವು!

ಮರ್ಸಿಡಿಸ್-ಎಎಂಜಿ ಇ53 ಮತ್ತು ಇ63 ಎಸ್

ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ ಜನಪ್ರಿಯ ಪರ್ಫಾಮೆನ್ಸ್ ಸೆಡಾನ್ ಕಾರು ಮಾದರಿಗಳಾದ ಮರ್ಸಿಡಿಸ್-ಎಎಂಜಿ ಇ53 ಮತ್ತು ಇ63 ಎಸ್ ಆವೃತ್ತಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರುಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 1.02 ಕೋಟಿ ಬೆಲೆ ನಿಗದಿಪಡಿಸಲಾಗಿದೆ.

2021ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಟಾಪ್ 10 ಐಷಾರಾಮಿ ಕಾರುಗಳಿವು!

ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಆರಂಭಿಕ ಆವೃತ್ತಿಯಾದ ಇ53 ಮಾದರಿಯ ಎಕ್ಸ್‌ಶೋರೂಂ ಪ್ರಕಾರ ರೂ. 1.02 ಕೋಟಿ ಮತ್ತು ಇ63 ಎಸ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 1.70 ಕೋಟಿ ಬೆಲೆ ಹೊಂದಿವೆ.

2021ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಟಾಪ್ 10 ಐಷಾರಾಮಿ ಕಾರುಗಳಿವು!

ಬಿಎಂಡಬ್ಲ್ಯು ಎಂ5 ಕಾಂಪಿಟೇಶನ್

ಜರ್ಮನ್ ಮೂಲದ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ ಎಂ5 ಕಾಂಪಿಟೇಶನ್ ಫೇಸ್‌ಲಿಫ್ಟ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಬಿಎಂಡಬ್ಲ್ಯು ಎಂ5 ಕಾಂಪಿಟೇಶನ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.62 ಕೋಟಿಯಾಗಿದೆ.

2021ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಟಾಪ್ 10 ಐಷಾರಾಮಿ ಕಾರುಗಳಿವು!

ಎಂ5 ಕಾರು ನವೀಕರಿಸಿದ ವಿನ್ಯಾಸ, ಸುಧಾರಿತ ಕಾರ್ಯಕ್ಷಮತೆ, ಡೈನಾಮಿಕ್ಸ್ ಮತ್ತು ಇತರ ಅಂಶಗಳನ್ನು ಒಳಗೊಂಡಿದ್ದು, 4.4-ಲೀಟರ್, ಟ್ವಿನ್-ಟರ್ಬೊ ವಿ8 ಎಂಜಿನ್ ಮೂಲಕ 625 ಹೆಚ್‌ಪಿ ಪವರ್ ಮತ್ತು 750 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

2021ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಟಾಪ್ 10 ಐಷಾರಾಮಿ ಕಾರುಗಳಿವು!

ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ

ಇಟಲಿಯ ಐಷಾರಾಮಿ ಕಾರು ತಯಾರಕ ಕಂಪನಿಯಾದ ಲ್ಯಾಂಬೊರ್ಗಿನಿ ತನ್ನ ಹೊಸ ಹುರಾಕನ್ ಎಸ್‌ಟಿಒ ಸುಪರ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ (ಸೂಪರ್ ಟ್ರೋಫಿಯೋ ಓಮೊಲೊಗಾಟಾ) ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.4.99 ಕೋಟಿಯಾಗಿದೆ.

2021ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಟಾಪ್ 10 ಐಷಾರಾಮಿ ಕಾರುಗಳಿವು!

5.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರ ಹೊಸ ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ ಕಾರು ಮಾದರಿಯು ಹುರಾಕನ್ ಪರ್ಫಾರ್ಮೆಂಟೆ ಮತ್ತು ಹುರಾಕನ್ ಇವೊ ಮಾದರಿಗಳಂತೆಯೇ ಒಂದೇ ರೀತಿಯ ಎಂಜಿನ್ ಅನ್ನು ಬಳಸುತ್ತದೆ. ಕಡಿಮೆ ಟಾರ್ಕ್ ಅನ್ನು ಸರಿದೂಗಿಸಲು ಹುರಾಕನ್ ಎಸ್‌ಟಿಒ ಹುರಾಕನ್ ಪರ್ಫಾರ್ಮೆಂಟೆಗಿಂತ 43 ಕಿ.ಗ್ರಾಂ ಹಗುರವಾಗಿರುತ್ತದೆ. ಟ್ರ್ಯಾಕ್ ಕಾರ್ಯಕ್ಷಮತೆಗೆ ಮತ್ತಷ್ಟು ಸಹಾಯ ಮಾಡಲು, ಹುರಾಕನ್ ರೋಡೈನಾನಿಕ್ ಅನ್ನು ಮತ್ತಷ್ಟು ತಿರುಚಲಾಗಿದೆ. ಇದು ಕ್ರಮವಾಗಿ ಶೇ.37 ಮತ್ತು ಶೇ.53 ಏರೋಡೈನಾನಿಕ್ ದಕ್ಷತೆ ಮತ್ತು ಡೌನ್‌ಫೋರ್ಸ್‌ನಲ್ಲಿ ಹೆಚ್ಚಾಗುತ್ತದೆ.

Most Read Articles

Kannada
English summary
Top 10 luxury cars launched in 2021 mercedes amg a 45 s volvo xc90 hybrid and more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X