ಭಾರತದಲ್ಲಿ ದೈನಂದಿನ ಪ್ರಯಾಣಕ್ಕಾಗಿ ಅತ್ಯುತ್ತಮ ಕಾರುಗಳಿವು..

ವಿಶ್ವದ ಕಾರು ತಯಾರಕರ ದೊಡ್ಡ ಮಾರುಕಟ್ಟೆಯಲ್ಲಿ ಭಾರತದ ವಾಹನ ಮಾರುಕಟ್ಟೆ ಕೂಡ ಒಂದಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಕಾರುಗಳು ಮಾರಾಟವಾಗುತ್ತಿವೆ. ಕಡಿಮೆ ಬೆಲೆಯ ಕಾರುಗಳಿಂದ ಬಹುಕೋಟಿ ಬೆಲೆಯ ಐಷಾರಾಮಿ ಸೂಪರ್ ಕಾರುಗಳು ಕೂಡ ಮಾರಾಟವಾಗುತ್ತಿವೆ.

ಭಾರತದಲ್ಲಿ ದೈನಂದಿನ ಪ್ರಯಾಣಕ್ಕಾಗಿ ಅತ್ಯುತ್ತಮ ಕಾರುಗಳಿವು..

ಕಾರು ಖರೀದಿಸುವುದು ನಾವು ಭಾರತೀಯರು ತೆಗೆದುಕೊಳ್ಳುವ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ. ಸರಿಯಾದ ಕಾರನ್ನು ಆಯ್ಕೆಮಾಡುವಾಗ ಹಲವಾರು ಅಂಶಗಳಿವೆ. ಅದರಲ್ಲಿಯು ದೈನಂದಿನ ಪ್ರಯಾಣಕ್ಕಾಗಿ ಕಾರು ಖರೀದಿಸುವವರಿಗೆ ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ಆಯ್ಜೆಗಳಿವೆ. ಇದರಿಂದ ಖರೀದಿದಾರರು ಯಾವ ಕಾರು ಖರೀದಿಸಬೇಕೆಂಬ ಗೊಂದಲವಿರುತ್ತದೆ. ಇದರಿಂದ ಭಾರತದಲ್ಲಿ ದೈನಂದಿನ ಪ್ರಯಾಣಕ್ಕಾಗಿ ಅತ್ಯುತ್ತಮ ಕಾರುಗಳ ಬಗ್ಗೆ ಹೆಚ್ಚಿನ ಮಾಹಿತಿಗಳು ಇಲ್ಲಿದೆ.

ಭಾರತದಲ್ಲಿ ದೈನಂದಿನ ಪ್ರಯಾಣಕ್ಕಾಗಿ ಅತ್ಯುತ್ತಮ ಕಾರುಗಳಿವು..

ಮಾರುತಿ ಸೆಲೆರಿಯೊ

ಮಾರುತಿ ಸುಜುಕಿ ಈ ವರ್ಷದ ನವೆಂಬರ್‌ ತಿಂಗಳಿನಲ್ಲಿ ಈ ಎರಡನೇ ತಲೆಮಾರಿನ ಸೆಲೆರಿಯೊ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಕಂಪನಿಯ ಪ್ರಕಾರ, ಇದು ದೇಶದಲ್ಲಿ ಮಾರಾಟದಲ್ಲಿರುವ ಅತ್ಯಂತ ಹೆಚ್ಚು ಮೈಲೇಜ್ ನೀಡುವ ಪೆಟ್ರೋಲ್ ಕಾರು ಆಗಿದೆ. ARAI ಪ್ರಕಾರ 26.68 ಕಿ.ಮೀ ಮೈಲೇಜ್ ಹೊಂದಿದೆ. ಈ ಕಾರಿನ ಆರಂಬಿಕ ಬೆಲೆಯು ರೂ.4.99 ಲಕ್ಷವಾಗಿದೆ.

ಭಾರತದಲ್ಲಿ ದೈನಂದಿನ ಪ್ರಯಾಣಕ್ಕಾಗಿ ಅತ್ಯುತ್ತಮ ಕಾರುಗಳಿವು..

ಈ ಕಾರಿನಲ್ಲಿ 1.0-ಲೀಟರ್ ಎನ್ಎ ಪೆಟ್ರೋಲ್ ಎಂಜಿನ್ ಹೊಂದಿದೆ, ಈ ಎಂಜಿನ್ 66.6 ಬಿಹೆಚ್‌ಪಿ ಪವರ್ ಮತ್ತು 89 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 5-ಸ್ಪೀಡ್ ಎಎಂಟಿ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಭಾರತದಲ್ಲಿ ದೈನಂದಿನ ಪ್ರಯಾಣಕ್ಕಾಗಿ ಅತ್ಯುತ್ತಮ ಕಾರುಗಳಿವು..

ಟಾಟಾ ಟಿಯಾಗೋ

ಈ ಟಾಟಾ ಟಿಯಾಗೋ ಕಾರಿನ ಆರಂಭಿಕ ಬೆಲೆಯು ರೂ.5 ಲಕ್ಷವಾಗಿದೆ. ಈ ಟಿಯಾಗೊ ಕಾರು ಜಿಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ನಲ್ಲಿ 4 ಸ್ಟಾರ್ ರೇಟಿಂಗ್‌ ಅನ್ನು ಪಡೆದ ಸುರಕ್ಷಿತ ಕಾರು ಆಗಿದೆ. ಈ ಕಾರಿನಲ್ಲಿ 1.2 ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.

ಭಾರತದಲ್ಲಿ ದೈನಂದಿನ ಪ್ರಯಾಣಕ್ಕಾಗಿ ಅತ್ಯುತ್ತಮ ಕಾರುಗಳಿವು..

ಈ ಎಂಜಿನ್ 85 ಬಿಹೆಚ್‍ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತದೆ, ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನ್ಯುವಲ್ ಮತ್ತು AMT ಆಯ್ಕೆಗಳನ್ನು ಹೊಂದಿದೆ. ಈ ಕಾರಿನಲ್ಲಿ ಎಎಂಟಿ ಇರುವುದಿರುವುದರಿಂದ ಸುಲಭ ಡ್ರೈವಿಂಗ್ ಅನುಭವದೊಂದಿಗೆ ದೈನಂದಿನವಾಗಿ ಬಳಸಬಹುದು. ಅಲ್ಲದೇ ಗುಣಮಟ್ಟದ ಫೀಚರ್ಸ್ ಮತ್ತು ಉತ್ತಮ ಸುರಕ್ಷಿತ ಕಾರ್ ಆಗಿದೆ,

ಭಾರತದಲ್ಲಿ ದೈನಂದಿನ ಪ್ರಯಾಣಕ್ಕಾಗಿ ಅತ್ಯುತ್ತಮ ಕಾರುಗಳಿವು..

ಮಾರುತಿ ಸುಜುಕಿ ಸ್ವಿಫ್ಟ್

ಭಾರತದಲ್ಲಿ ಎಷ್ಟೇ ಅತ್ಯಾಧುನಿಕ ಕಾರುಗಳು ಬಿಡುಗಡೆಯಾದರೂ ಮಾರುತಿ ಸ್ವಿಫ್ಟ್ ಮಾದರಿಯು ಕಳೆದ 15 ವರ್ಷದಿಂದ ದೇಶಿಯ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಬಹುಬೇಡಿಕೆಯೊಂದಿಗೆ ದಾಖಲೆಯ ಮಟ್ಟದಲ್ಲಿ ಜನಪ್ರಿಯ ಸ್ವಿಫ್ಟ್ ಕಾರು ಮಾರಾಟವಾಗುತ್ತಿದೆ.

ಭಾರತದಲ್ಲಿ ದೈನಂದಿನ ಪ್ರಯಾಣಕ್ಕಾಗಿ ಅತ್ಯುತ್ತಮ ಕಾರುಗಳಿವು..

ಈ ಮಾರುತಿ ಸ್ವಿಫ್ಟ್ ಕಾರಿನಲ್ಲಿ 1.2 ಎಲ್ ಡ್ಯುಯಲ್‌ಜೆಟ್ ಪೆಟ್ರೋಲ್ ಇಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 89 ಬಿಹೆಚ್‌ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ, ಮೋಟಾರ್ ಅನ್ನು ಸ್ಟಾರ್ಟ್/ಸ್ಟಾಪ್ ಫಂಕ್ಷನ್ ಮೂಲಕ ಹೆಚ್ಚಿಸಲಾಗಿದ್ದು ಅದು ಇಂಧನ ಕ್ಷಮತೆಯನ್ನು ಹೆಚ್ಚಿಸುತ್ತದೆ. ಇದು ARAI- ಪ್ರಮಾಣೀಕೃತ ಮೈಲೇಜ್ ಅನ್ನು 23.20 ಕಿ.ಮೀ ಆಗಿದೆ.

ಭಾರತದಲ್ಲಿ ದೈನಂದಿನ ಪ್ರಯಾಣಕ್ಕಾಗಿ ಅತ್ಯುತ್ತಮ ಕಾರುಗಳಿವು..

ಇನ್ನು ಈ ಎಂಜಿನ್ ನೊಂದಿಗೆ ಮ್ಯಾನುಯಲ್ ಗೇರ್ ಬಾಕ್ಸ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಸ್ವಿಫ್ಟ್ ಕಾರು ಮಾರುತಿ ಸುಜುಕಿ ಕಂಪನಿಗೆ ಮಾರಾಟದಲ್ಲಿ ಹೆಚ್ಚಿನ ಕೊಡುಗೆಯನ್ನು ನೀಡುತ್ತಿದೆ. ಹಲವು ವರ್ಷಗಳಿಂದ ತನ್ನ ಜನಪ್ರಿಯತೆಯನ್ನು ಅದೇ ರೀತಿ ಉಳಿಸಿಕೊಂಡಿರುವ ಖ್ಯಾತಿಯನ್ನು ಸ್ವಿಫ್ಟ್ ಕಾರು ಹೊಂದಿದೆ.

ಭಾರತದಲ್ಲಿ ದೈನಂದಿನ ಪ್ರಯಾಣಕ್ಕಾಗಿ ಅತ್ಯುತ್ತಮ ಕಾರುಗಳಿವು..

ಹುಂಡೈ ಗ್ರ್ಯಾಂಡ್ ಐ10 ನಿಯೋಸ್

ಇದು ದೇಶದಲ್ಲಿ ಹೆಚ್ಚು ಮಾರಾಟವಾಗುವ ಹ್ಯಾಚ್‌ಬ್ಯಾಕ್‌ಗಳಲ್ಲಿ ಒಂದಾಗಿದೆ. ಈ ಹುಂಡೈ ಗ್ರ್ಯಾಂಡ್ ಐ10 ನಿಯೋಸ್ ಕಾರನ್ನು ಎರಡು ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ಇದು 1.2 ಲೀಟರ್ ನ್ಯಾಚುರಲ್ ಪೆಟ್ರೋಲ್ ಮತ್ತು 1.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಗಳಾಗಿವೆ.

ಭಾರತದಲ್ಲಿ ದೈನಂದಿನ ಪ್ರಯಾಣಕ್ಕಾಗಿ ಅತ್ಯುತ್ತಮ ಕಾರುಗಳಿವು..

1.2 ಲೀಟರ್ ಎಂಜಿನ್ 82 ಬಿಹೆಚ್‍ಪಿ ಪವರ್ ಮತ್ತು 114 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದರೆ, 1.0-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ 99 ಬಿಹೆಚ್‍ಪಿ ಪವರ್ ಮತ್ತು 172 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಈ ಕಾರಿನ ಆರಂಭಿಕ ಬೆಲೆಯು ರೂ,5.28 ಲಕ್ಷವಾಗಿದೆ.

ಭಾರತದಲ್ಲಿ ದೈನಂದಿನ ಪ್ರಯಾಣಕ್ಕಾಗಿ ಅತ್ಯುತ್ತಮ ಕಾರುಗಳಿವು..

ಟಾಟಾ ನೆಕ್ಸಾನ್ ಎಲೆಕ್ಟ್ರಿಕ್

ಈ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಹೆಚ್ಚು ಮಾರಾಟವಾದ ಪ್ರಯಾಣಿಕರ ಎಲೆಕ್ಟ್ರಿಕ್ ಕಾರು ಆಗಿದೆ. ಅಲ್ಲದೇ ಇದು ಜಿಪ್ಟ್ರಾನ್ ತಂತ್ರಜ್ಞಾನವನ್ನು ಆಧರಿಸಿದ ಮೊದಲ ವಾಹನವಾಗಿದ್ದು, ಮುಂಬರುವ ಟಾಟಾ ಇವಿಗಳಿಗೆ ಕಾರಣವಾಗಿದೆ. ಈ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಆರಂಭಿಕ ಬೆಲೆಯು ರೂ.13.99 ಲಕ್ಷವಾಗಿದೆ.

ಭಾರತದಲ್ಲಿ ದೈನಂದಿನ ಪ್ರಯಾಣಕ್ಕಾಗಿ ಅತ್ಯುತ್ತಮ ಕಾರುಗಳಿವು..

ನೆಕ್ಸಾನ್ ಎಲೆಕ್ಟ್ರಿಕ್ ಕಾರಿನಲ್ಲಿ ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್, ಸನ್‌ರೂಫ್, ರೈನ್ ಸೆನ್ಸಾಸಿಂಗ್, ಇಂಟಿಗ್ರೇಟೆಡ್ ಟರ್ನ್ ಇಂಡೀಕೇಟರ್, ಎಲ್ಲಾ ಪವರ್ ವಿಂಡೋಸ್, ಕೀಲೆಸ್ ಎಂಟ್ರಿ ಅಂಡ್ ಗೋ, ಕೂಲ್ಡ್ ಗ್ಲೋವ್ ಬಾಕ್ಸ್, ಹ್ಯಾಂಡ್ಸ್-ಫ್ರೀ ಟೈಲ್‌ಗೇಟ್, ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು ಮತ್ತು ಎಲ್ಇಡಿ ಟೈಲ್‌ಲ್ಯಾಂಪ್‌ಗಳನ್ನು ಹೊಂದಿದೆ,

ಭಾರತದಲ್ಲಿ ದೈನಂದಿನ ಪ್ರಯಾಣಕ್ಕಾಗಿ ಅತ್ಯುತ್ತಮ ಕಾರುಗಳಿವು..

ಈ ಎಲೆಕ್ಟ್ರಿಕ್ ಕಾರಿನಲ್ಲಿ ಸಿಂಕ್ರೊನಸ್ ಮೋಟರ್ ಅನ್ನು ಹೊಂದಿದೆ. ಇದರಲ್ಲಿ 30.2 ಕಿಲೋವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದೆ. ಈ ಇವಿ ಮಾದರಿಯು ಒಟ್ಟು 127 ಬಿಹೆಚ್‌ಪಿ ಮತ್ತು 245 ಎನ್‌ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಲೆಕ್ಟ್ರಿಕ್ ಕಾರು ಕೇವಲ 9.9 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಎಆರ್ಎಐ ಪ್ರಕಾರ ಈ ನೆಕ್ಸಾನ್ ಇವಿ ಮಾದರಿಯು 312 ಕಿ.ಮೀ ರೇಂಜ್ ಅನ್ನು ಹೊಂದಿದೆ, ಮುಖ್ಯ ಸಿಟಿಗಳನ್ನು ಹೊರತುಪಡಿಸಿ ಉಳಿದ ಕಡೆ ಎಲೆಕ್ಟ್ರಾನಿಕ್‌ ಚಾರ್ಜಿಂಗ್‌ ಸ್ಟೇಷನ್‌ ಕೊರತೆ ಇದೆ. ಇದರಿಂದ ಈ ಕಾರು ಹೆಚ್ಚು ಸಿಟಿಗಳಿಗೆ ಸುಕ್ತವಾಗಿದೆ.

Most Read Articles

Kannada
English summary
Top 5 best cars for daily commute in india read to find more details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X