ಭಾರತೀಯರು ತಮ್ಮ ಕಾರುಗಳಲ್ಲಿ ಹೆಚ್ಚು ಬಳಸುವ ಫೀಚರ್'ಗಳಿವು

ಈಗ ಮಾರಾಟವಾಗುತ್ತಿರುವ ಬಹುತೇಕ ಕಾರುಗಳಲ್ಲಿ ಅತ್ಯಾಧುನಿಕ ಫೀಚರ್ ಗಳನ್ನು ನೀಡಲಾಗುತ್ತಿದೆ. ಈ ಫೀಚರ್ ಗಳು ಪ್ರಯಾಣ ಹಾಗೂ ಚಾಲನೆಯನ್ನು ಹೆಚ್ಚು ಆಸಕ್ತಿಕರವಾಗಿಸುತ್ತವೆ. ನಿರ್ದಿಷ್ಟವಾಗಿ ಹೇಳುವುದಾದರೆ, 2020 ರ ನಂತರ ಮಾರಾಟವಾಗುತ್ತಿರುವ ಕಾರುಗಳಲ್ಲಿ ಆಧುನಿಕ ಫೀಚರ್ ಗಳನ್ನು ನೀಡಲಾಗುತ್ತಿದೆ.

ಭಾರತೀಯರು ತಮ್ಮ ಕಾರುಗಳಲ್ಲಿ ಹೆಚ್ಚು ಬಳಸುವ ಫೀಚರ್'ಗಳಿವು

ವಾಹನ ಚಾಲನೆ ಅನುಭವವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಈ ಫೀಚರ್ ಗಳನ್ನು ನೀಡಲಾಗುತ್ತಿದೆ. ಈಗ ಬಿಡುಗಡೆಯಾಗುತ್ತಿರುವ ಕಾರುಗಳಲ್ಲಿ ಹಲವು ಫೀಚರ್ ಗಳು ಲಭ್ಯವಿದ್ದರೂ ಭಾರತೀಯರು ನಿರ್ದಿಷ್ಟವಾಗಿ ಐದು ಫೀಚರ್ ಗಳನ್ನು ಮಾತ್ರ ಬಯಸುತ್ತಾರೆ. ಈ ಲೇಖನದಲ್ಲಿ ಭಾರತೀಯರು ಹೆಚ್ಚು ಬಯಸುವ ಫೀಚರ್ ಗಳು ಯಾವುವು ಎಂಬುದನ್ನು ನೋಡೋಣ.

ಭಾರತೀಯರು ತಮ್ಮ ಕಾರುಗಳಲ್ಲಿ ಹೆಚ್ಚು ಬಳಸುವ ಫೀಚರ್'ಗಳಿವು

ಪವರ್ ವಿಂಡೋಸ್

ಆಧುನಿಕ ಕಾರುಗಳಲ್ಲಿ ವಿಂಡೋ ಗ್ಲಾಸ್ ಗಳನ್ನು ಮೇಲಕ್ಕೆ ಎತ್ತುವುದು, ಇಳಿಸುವುದು ತುಂಬಾ ಸುಲಭವಾಗಿದೆ. ಒಂದು ಬಟನ್ ಪ್ರೆಸ್ ಮಾಡುವ ಮೂಲಕ, ವಿಂಡೋ ಗ್ಲಾಸ್ ಅನ್ನು ಕೆಳಕ್ಕೆ ಇಳಿಸುವುದು, ಮೇಲಕ್ಕೆ ಎತ್ತುವುದನ್ನು ಮಾಡಬಹುದು. ಇವುಗಳನ್ನು ಪವರ್ ವಿಂಡೋಸ್ ಎಂದು ಕರೆಯಲಾಗುತ್ತದೆ.

ಭಾರತೀಯರು ತಮ್ಮ ಕಾರುಗಳಲ್ಲಿ ಹೆಚ್ಚು ಬಳಸುವ ಫೀಚರ್'ಗಳಿವು

ಹಳೆಯ ಕಾರುಗಳಲ್ಲೂ ವಿಂಡೋ ಗ್ಲಾಸುಗಳನ್ನು ಮೇಲಕ್ಕೆ ಎತ್ತುವ ಕೆಳಕ್ಕೆ ಇಳಿಸುವ ಫೀಚರ್ ನೀಡಲಾಗುತ್ತಿತ್ತು. ಹಿಂದೆ ಬಿಡುಗಡೆಯಾಗುತ್ತಿದ್ದ ಕಾರುಗಳಲ್ಲಿ ವಿಂಡೋ ಗ್ಲಾಸುಗಳನ್ನು ಎತ್ತುವುದಕ್ಕೆ, ಇಳಿಸುವುದಕ್ಕೆ ಹ್ಯಾಂಡಲ್ ತರಹದ ರಚನೆಯನ್ನು ನೀಡಲಾಗುತ್ತಿತ್ತು. ಗಮನಿಸಬೇಕಾದ ಸಂಗತಿಯೆಂದರೆ ಈ ಫೀಚರ್ ಅನ್ನು ಈಗಲೂ ಕೆಲವು ಕಾರುಗಳಲ್ಲಿ ನೀಡಲಾಗುತ್ತದೆ.

ಭಾರತೀಯರು ತಮ್ಮ ಕಾರುಗಳಲ್ಲಿ ಹೆಚ್ಚು ಬಳಸುವ ಫೀಚರ್'ಗಳಿವು

ಆಟೋಮ್ಯಾಟಿಕ್ ಎಸಿ

ಆಟೋಮ್ಯಾಟಿಕ್ ಎಸಿ ತಂತ್ರಜ್ಞಾನವು ಭಾರತೀಯರ ಅತಿ ಹೆಚ್ಚು ಬೇಡಿಕೆಯ ಫೀಚರ್ ಗಳಲ್ಲಿ ಒಂದಾಗಿದೆ. ಈ ಫೀಚರ್ ಕಾರಿನ ಒಳಭಾಗವನ್ನು ಹೆಚ್ಚು ಆರಾಮದಾಯಕವಾಗಿಸಲು ನೆರವಾಗುತ್ತದೆ. ಈ ಆಟೋಮ್ಯಾಟಿಕ್ ಎಸಿಗಳು ಕಾರಿನೊಳಗಿನ ತಾಪಮಾನವನ್ನು ಆಟೋಮ್ಯಾಟಿಕ್ ಆಗಿ ಬದಲಾಯಿಸುವ ಕೆಲಸವನ್ನು ಮಾಡುತ್ತವೆ. ಈ ಕಾರಣಕ್ಕಾಗಿಯೇ ಭಾರತೀಯರು ಈ ಸೌಲಭ್ಯವನ್ನು ಹೆಚ್ಚು ಇಷ್ಟಪಡುತ್ತಾರೆ.

ಭಾರತೀಯರು ತಮ್ಮ ಕಾರುಗಳಲ್ಲಿ ಹೆಚ್ಚು ಬಳಸುವ ಫೀಚರ್'ಗಳಿವು

ಟಚ್ ಸ್ಕ್ರೀನ್ ಇನ್ಫೋಟೇನ್ ಮೆಂಟ್ ಸಿಸ್ಟಂ

ಟಚ್ ಸ್ಕ್ರೀನ್ ಸೌಲಭ್ಯವಿರುವ ಇನ್ಫೋಟೈನ್ಮೆಂಟ್ ಸಿಸ್ಟಮ್ ನಾವು ಪ್ರತಿ ದಿನ ಬಳಸುತ್ತಿದ್ದರೂ ಪ್ರತಿ ದಿನ ಹೊಸ ಅನುಭವವನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಸಿಸ್ಟಂ 7 ಇಂಚಿನಿಂದ 12 ಇಂಚುಗಳವರೆಗಿನ ಸ್ಕ್ರೀನ್ ಹೊಂದಿರುತ್ತದೆ. ಭಾರತೀಯರಲ್ಲಿ ಈ ತಂತ್ರಜ್ಞಾನವು ಹೆಚ್ಚು ಜನಪ್ರಿಯವಾಗಿರುವುದರಿಂದ ವಾಹನ ತಯಾರಕ ಕಂಪನಿಗಳು ಈ ಫೀಚರ್ ಅನ್ನು ಮೂಲ ಮಾದರಿಯ ಕಾರುಗಳಲ್ಲಿಯೂ ನೀಡುತ್ತಿದ್ದಾರೆ.

ಭಾರತೀಯರು ತಮ್ಮ ಕಾರುಗಳಲ್ಲಿ ಹೆಚ್ಚು ಬಳಸುವ ಫೀಚರ್'ಗಳಿವು

ಗ್ಲೌಸ್ ಬಾಕ್ಸ್

ಹಿಂದೆ ಹ್ಯಾಂಡ್ ಗ್ಲೌಸ್ ಗಳನ್ನು ಸುರಕ್ಷಿತವಾಗಿಡಲು ಈ ಬಾಕ್ಸ್ ಗಳನ್ನು ನೀಡಲಾಗುತ್ತಿತ್ತು. ಈ ಕಾರಣಕ್ಕೆ ಈ ಬಾಕ್ಸ್ ಗಳಿಗೆ ಗ್ಲೋವ್ ಬಾಕ್ಸ್ ಎಂಬ ಹೆಸರು ಬಂದಿದೆ. ಆರಂಭದ ದಿನಗಳಲ್ಲಿ ಮಾರಾಟವಾಗುತ್ತಿದ್ದ ಬಹುತೇಕ ಕಾರುಗಳು ರೂಫ್ ಹೊಂದುತ್ತಿರಲಿಲ್ಲ. ಇದರಿಂದ ಕಾರು ಚಾಲಕರು ಶೀತ ಭಾದೆಗೆ ಒಳಗಾಗುತ್ತಿದ್ದರು.

ಭಾರತೀಯರು ತಮ್ಮ ಕಾರುಗಳಲ್ಲಿ ಹೆಚ್ಚು ಬಳಸುವ ಫೀಚರ್'ಗಳಿವು

ಇಂತಹ ವಾತಾವರಣದಿಂದ ಪಾರಾಗಲು ಕಾರು ಚಾಲಕರು ಹ್ಯಾಂಡ್ ಗ್ಲೌಸ್ ಗಳನ್ನು ಬಳಸಲು ಮುಂದಾಗುತ್ತಿದ್ದರು. ಬೆಚ್ಚಗಿರಲು ಹಾಗೂ ಸ್ಟೀಯರಿಂಗ್ ವ್ಹೀಲ್ ಗಳನ್ನು ನಿರ್ವಹಿಸಲು ಹ್ಯಾಂಡ್ ಗ್ಲೌಸ್ ಗಳನ್ನು ಬಳಸುತ್ತಿದ್ದರು. ಬಳಕೆಯ ನಂತರ ಅವುಗಳನ್ನು ಸುರಕ್ಷಿತವಾಗಿಡಲು ಈ ಹ್ಯಾಂಡ್ ಗ್ಲೌಸ್ ಬಾಕ್ಸ್ ಗಳನ್ನು ನೀಡಲಾಗುತ್ತಿತ್ತು.

ಭಾರತೀಯರು ತಮ್ಮ ಕಾರುಗಳಲ್ಲಿ ಹೆಚ್ಚು ಬಳಸುವ ಫೀಚರ್'ಗಳಿವು

ಆದರೆ ಈ ಗ್ಲೌಸ್ ಬಾಕ್ಸ್ ಗಳು ಈಗ ದಾಖಲೆ ಹಾಗೂ ಇನ್ನಿತರ ಪ್ರಮುಖ ಸಲಕರಣೆಗಳನ್ನು ಸಂಗ್ರಹಿಸುವ ಸ್ಥಳವಾಗಿ ಬದಲಾಗಿವೆ. ಕಾರು ಮಾಲೀಕರು ಈ ಬಾಕ್ಸ್ ನಲ್ಲಿ ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಕಾರಿನ ವಿವಿಧ ದಾಖಲೆಗಳನ್ನು ಇಡುತ್ತಾರೆ.

ಭಾರತೀಯರು ತಮ್ಮ ಕಾರುಗಳಲ್ಲಿ ಹೆಚ್ಚು ಬಳಸುವ ಫೀಚರ್'ಗಳಿವು

ಸೀಟ್ ಅಡ್ಜಸ್ಟ್ ಮೆಂಟ್ ಕಂಟ್ರೋಲ್

ಕಾರಿನಲ್ಲಿ ಅತ್ಯಂತ ಆರಾಮದಾಯಕ ಸವಾರಿ ಅನುಭವವನ್ನು ಪಡೆಯಲು ಬಯಸುವವರು ಈ ಫೀಚರ್ ಅನ್ನು ಹೊಂದಿರಲೇ ಬೇಕು. ಈ ಫೀಚರ್ ಚಾಲಕನ ಆಸನದ ಎತ್ತರವನ್ನು ಸರಿ ಹೊಂದಿಸಲು ಅನುಮತಿ ನೀಡುತ್ತದೆ. ಈ ಕಾರಣಕ್ಕೆ ಭಾರತೀಯರು ಈ ಸೌಲಭ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ.

ಭಾರತೀಯರು ತಮ್ಮ ಕಾರುಗಳಲ್ಲಿ ಹೆಚ್ಚು ಬಳಸುವ ಫೀಚರ್'ಗಳಿವು

ಸೀಟ್ ಅಡ್ಜಸ್ಟ್ ಮೆಂಟ್ ಕಂಟ್ರೋಲ್ - ಎಲೆಕ್ಟ್ರಾನಿಕ್ ಹಾಗೂ ಮ್ಯಾನುಯಲ್ ಎಂಬ ಎರಡು ರೀತಿಯಲ್ಲಿ ಲಭ್ಯವಿದೆ. ಇವುಗಳಲ್ಲಿ ಎಲೆಕ್ಟ್ರಾನಿಕ್ ಅಡ್ಜಸ್ಟ್ ಮೆಂಟ್ ಕಂಟ್ರೋಲ್ ಭಾರತೀಯರಲ್ಲಿ ಹೆಚ್ಚು ಜನಪ್ರಿಯವಾಗಿದೆ.

ಭಾರತೀಯರು ತಮ್ಮ ಕಾರುಗಳಲ್ಲಿ ಹೆಚ್ಚು ಬಳಸುವ ಫೀಚರ್'ಗಳಿವು

ಕೇಂದ್ರ ಸರ್ಕಾರವು ರಸ್ತೆ ಅಪಘಾತಗಳನ್ನು ತಪ್ಪಿಸಲು ಹಾಗೂ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ರವರು ಎಲ್ಲಾ ಕಾರು ತಯಾರಕ ಕಂಪನಿಗಳು ತಮ್ಮ ಕಾರುಗಳಲ್ಲಿ ಕನಿಷ್ಠ 6 ಏರ್‌ಬ್ಯಾಗ್‌ಗಳನ್ನು ನೀಡಬೇಕು ಎಂದು ಹೇಳಿದ್ದಾರೆ. ಭಾರತದಲ್ಲಿ ಹೆಚ್ಚಿನ ಜನರು ಖರೀದಿಸುವ ಬಜೆಟ್ ಕಾರುಗಳನ್ನು ಹೆಚ್ಚು ಏರ್ ಬ್ಯಾಗ್ ಗಳೊಂದಿಗೆ ಉತ್ಪಾದಿಸಬೇಕೆಂದು ನಿತಿನ್ ಗಡ್ಕರಿ ಹೇಳಿದ್ದಾರೆ. ಸಣ್ಣ ಗಾತ್ರದ ಬಜೆಟ್ ಕಾರುಗಳಲ್ಲಿ ಹೆಚ್ಚಿನ ಏರ್ ಬ್ಯಾಗ್‌ಗಳನ್ನು ಅಳವಡಿಸುವ ಮೂಲಕ ಪ್ರಯಾಣಿಕರ ಸುರಕ್ಷತೆಯನ್ನು ಖಾತ್ರಿ ಪಡಿಸಿಕೊಳ್ಳಬಹುದು ಹಾಗೂ ರಸ್ತೆ ಅಪಘಾತಗಳಿಂದ ಉಂಟಾಗುವ ಸಾವುಗಳನ್ನು ತಡೆಯಬಹುದು ಎಂದು ಅವರು ಹೇಳಿದ್ದಾರೆ. ಇನ್ನು ಮುಂದೆ ಬಿಡುಗಡೆಯಾಗಲಿರುವ ಎಲ್ಲಾ ಕಾರುಗಳು ಏರ್ ಬ್ಯಾಗ್ ಗಳನ್ನು ಹೊಂದುವುದು ಕಡ್ಡಾಯವಾಗಲಿದೆ. ಇದರಿಂದ ಮುಂಬರುವ ದಿನಗಳಲ್ಲಿ ಏರ್ ಬ್ಯಾಗ್ ಗಳು ವಿಂಡೋ, ಮಿರರ್ ಗಳ ರೀತಿಯಲ್ಲಿ ಕಾರುಗಳ ಅವಿಭಾಜ್ಯ ಭಾಗಗಳಾಗಲಿವೆ. ಏರ್ ಬ್ಯಾಗ್ ಗಳ ಕಡ್ಡಾಯ ಅಳವಡಿಕೆಯ ಕಾರಣಕ್ಕೆ ಕಾರುಗಳ ಬೆಲೆಯಲ್ಲಿ ಏರಿಕೆಯಾಗುವುದು ಖಚಿತ.

Most Read Articles

Kannada
English summary
Top 5 car features used by indians details
Story first published: Wednesday, September 29, 2021, 17:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X