ವೆಂಟಿಲೇಟೆಡ್ ಸೀಟ್ ಫೀಚರ್ ಹೊಂದಿರುವ ಟಾಪ್ 5 ಕಾರುಗಳಿವು

ಕಾರು ತಯಾರಕ ಕಂಪನಿಗಳು ಹೊಸ ಹೊಸ ಕಾರುಗಳನ್ನು ಬಿಡುಗಡೆಗೊಳಿಸುತ್ತಿವೆ. ಕಂಪನಿಗಳು ಕೈಗೆಟಕುವ ದರದಲ್ಲಿ ಹೆಚ್ಚು ಆಕರ್ಷಕವಾದ ಹಾಗೂ ಹೆಚ್ಚು ಫೀಚರ್'ಗಳನ್ನು ಹೊಂದಿರುವ ಕಾರುಗಳನ್ನು ಮಾರಾಟ ಮಾಡುತ್ತಿವೆ.

ವೆಂಟಿಲೇಟೆಡ್ ಸೀಟ್ ಫೀಚರ್ ಹೊಂದಿರುವ ಟಾಪ್ 5 ಕಾರುಗಳಿವು

ಈಗ ಬಿಡುಗಡೆಗೆಯಾಗುತ್ತಿರುವ ಕಾರುಗಳಲ್ಲಿ ವೈರ್‌ಲೆಸ್ ಚಾರ್ಜಿಂಗ್, 360 ಡಿಗ್ರಿ ಪಾರ್ಕಿಂಗ್ ಕ್ಯಾಮೆರಾ, ವೆಂಟಿಲೇಟೆಡ್ ಸೀಟ್ ಸೇರಿದಂತೆ ಹಲವಾರು ಫೀಚರ್'ಗಳಿರುತ್ತವೆ. ದೇಶಿಯ ಮಾರುಕಟ್ಟೆಯಲ್ಲಿ ರೂ.18 ಲಕ್ಷದೊಳಗೆ ಲಭ್ಯವಿರುವ ವೆಂಟಿಲೇಟೆಡ್ ಸೀಟುಗಳನ್ನು ಹೊಂದಿರುವ ಕಾರುಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ವೆಂಟಿಲೇಟೆಡ್ ಸೀಟ್ ಫೀಚರ್ ಹೊಂದಿರುವ ಟಾಪ್ 5 ಕಾರುಗಳಿವು

1. ಕಿಯಾ ಸೊನೆಟ್

ಕಿಯಾ ಸೊನೆಟ್ ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ದೇಶಿಯ ಮಾರುಕಟ್ಟೆಯಲ್ಲಿರುವ ಅಗ್ಗದ ಕಾರುಗಳಲ್ಲಿ ಒಂದಾಗಿದ್ದು, ಹಲವಾರು ಫೀಚರ್'ಗಳನ್ನು ಹೊಂದಿದೆ. ಇವುಗಳಲ್ಲಿ ಸೆಗ್ ಮೆಂಟ್ ಫಸ್ಟ್ ವೆಂಟಿಲೇಟೆಡ್ ಸೀಟುಗಳು ಸೇರಿವೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ವೆಂಟಿಲೇಟೆಡ್ ಸೀಟ್ ಫೀಚರ್ ಹೊಂದಿರುವ ಟಾಪ್ 5 ಕಾರುಗಳಿವು

ಈ ಫೀಚರ್ ಸೊನೆಟ್ ಎಸ್‌ಯುವಿಯ ಹೆಚ್‌ಟಿಎಕ್ಸ್ ಪ್ಲಸ್ ಹಾಗೂ ಜಿಟಿಎಕ್ಸ್ ಪ್ಲಸ್ ಮಾದರಿಗಳಲ್ಲಿ ಮಾತ್ರ ಲಭ್ಯವಿದೆ. ಹೆಚ್‌ಟಿಎಕ್ಸ್ ಪ್ಲಸ್ ಮಾದರಿಗಳ ಬೆಲೆಎಕ್ಸ್ ಶೋರೂಂ ದರದಂತೆ ರೂ.11.75 ಲಕ್ಷಗಳಾದರೆ, ಜಿಟಿಎಕ್ಸ್ ಪ್ಲಸ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.13.25 ಲಕ್ಷಗಳಾಗಿದೆ.

ವೆಂಟಿಲೇಟೆಡ್ ಸೀಟ್ ಫೀಚರ್ ಹೊಂದಿರುವ ಟಾಪ್ 5 ಕಾರುಗಳಿವು

ಕಿಯಾ ಸೊನೆಟ್ ಎಸ್‌ಯುವಿಯನ್ನು 1.2 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 1.0 ಲೀಟರ್ ಟರ್ಬೊ ಟಿ-ಜಿಡಿ ಪೆಟ್ರೋಲ್ ಎಂಜಿನ್ ಹಾಗೂ 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಮಾರಾಟ ಮಾಡಲಾಗುತ್ತದೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ವೆಂಟಿಲೇಟೆಡ್ ಸೀಟ್ ಫೀಚರ್ ಹೊಂದಿರುವ ಟಾಪ್ 5 ಕಾರುಗಳಿವು

2. ಹ್ಯುಂಡೈ ವರ್ನಾ

ಈ ಪಟ್ಟಿಯಲ್ಲಿರುವ ಮತ್ತೊಂದು ಕಾರು ಹ್ಯುಂಡೈ ವರ್ನಾ ಸೆಡಾನ್. ಫ್ರಂಟ್ ವೆಂಟಿಲೇಟೆಡ್ ಸೀಟುಗಳನ್ನು ಹೊಂದಿರುವ ಈ ಕಾರು ಸೆಗ್ ಮೆಂಟಿನಲ್ಲಿರುವ ಅಗ್ಗದ ಬೆಲೆಯ ಸೆಡಾನ್ ಕಾರುಗಳಲ್ಲಿ ಒಂದಾಗಿದೆ.

ವೆಂಟಿಲೇಟೆಡ್ ಸೀಟ್ ಫೀಚರ್ ಹೊಂದಿರುವ ಟಾಪ್ 5 ಕಾರುಗಳಿವು

ವೆಂಟಿಲೇಟೆಡ್ ಸೀಟುಗಳನ್ನು ವರ್ನಾ ಕಾರಿನ ಟಾಪ್ ಎಂಡ್ ಮಾದರಿಗಳಾದ ಎಸ್‌ಎಕ್ಸ್ (ಒ) ಹಾಗೂ ಎಸ್‌ಎಕ್ಸ್ (ಒ) ಟರ್ಬೊಗಳಲ್ಲಿ ನೀಡಲಾಗುತ್ತದೆ. ಎಸ್‌ಎಕ್ಸ್ (ಒ) ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.12.84 ಲಕ್ಷಗಳಾದರೆ, ಎಸ್‌ಎಕ್ಸ್ (ಒ) ಟರ್ಬೊ ಬೆಲೆ ಎಕ್ಸ್ ಶೋರೂಂ ದರದಂತೆ ರೂ.15.25 ಲಕ್ಷಗಳಾಗಿದೆ.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ವೆಂಟಿಲೇಟೆಡ್ ಸೀಟ್ ಫೀಚರ್ ಹೊಂದಿರುವ ಟಾಪ್ 5 ಕಾರುಗಳಿವು

3. ಕಿಯಾ ಸೆಲ್ಟೋಸ್

ಕಿಯಾ ಮೋಟಾರ್ಸ್ ಕಂಪನಿಯು ತನ್ನ ಸೆಲ್ಟೋಸ್ ಕಾಂಪ್ಯಾಕ್ಟ್ ಎಸ್‌ಯುವಿಯಲ್ಲಿಯೂ ವೆಂಟಿಲೇಟೆಡ್ ಸೀಟುಗಳನ್ನು ನೀಡುತ್ತದೆ. ಈ ಫೀಚರ್ ಅನ್ನು ಸೆಲ್ಟೋಸ್ ಕಾರಿನ ಜಿಟಿಎಕ್ಸ್ (ಒ) ಹಾಗೂ ಹೆಚ್‌ಟಿಎಕ್ಸ್ ಪ್ಲಸ್ ಮಾದರಿಗಳಲ್ಲಿ ಮಾತ್ರ ನೀಡಲಾಗುತ್ತದೆ.

ವೆಂಟಿಲೇಟೆಡ್ ಸೀಟ್ ಫೀಚರ್ ಹೊಂದಿರುವ ಟಾಪ್ 5 ಕಾರುಗಳಿವು

ಜಿಟಿಎಕ್ಸ್ (ಒ) ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.15.35 ಲಕ್ಷಗಳಾದರೆ, ಹೆಚ್‌ಟಿಎಕ್ಸ್ ಪ್ಲಸ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.15.79 ಲಕ್ಷಗಳಾಗಿದೆ. ಅಪ್ ಡೇಟ್ ಮಾಡಲಾದ ಕಿಯಾ ಸೆಲ್ಟೋಸ್ ಕಾರಿನಲ್ಲಿ ಮೊದಲಿನಂತೆಯೇ ಎಂಜಿನ್ ಆಯ್ಕೆಗಳನ್ನು ನೀಡಲಾಗಿದೆ.

MOST READ:ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ವೆಂಟಿಲೇಟೆಡ್ ಸೀಟ್ ಫೀಚರ್ ಹೊಂದಿರುವ ಟಾಪ್ 5 ಕಾರುಗಳಿವು

ಇವುಗಳಲ್ಲಿ 1.5-ಲೀಟರ್ ಸ್ಮಾರ್ಟ್ ಸ್ಟ್ರೀಮ್ ಪೆಟ್ರೋಲ್, 1.4-ಲೀಟರ್ ಸ್ಮಾರ್ಟ್ ಸ್ಟ್ರೀಮ್ ಟಿ-ಜಿಡಿ ಪೆಟ್ರೋಲ್ ಹಾಗೂ 1.5-ಲೀಟರ್ ಸಿಆರ್‌ಡಿ ವಿಜಿಟಿ ಡೀಸೆಲ್ ಎಂಜಿನ್'ಗಳು ಸೇರಿವೆ. ಈ ಎಂಜಿನ್'ಗಳೊಂದಿಗೆ 6 ಸ್ಪೀಡ್ ಮ್ಯಾನುವಲ್ (ಐವಿಟಿ), 6 ಸ್ಪೀಡ್ ಟಾರ್ಕ್ ಕನ್ವರ್ಟರ್, 7 ಸ್ಪೀಡ್ ಡಿಸಿಟಿ ಆಟೋಮ್ಯಾಟಿಕ್ ಹಾಗೂ 6 ಸ್ಪೀಡ್ ಐಎಂಟಿ ಗೇರ್ ಬಾಕ್ಸ್ ನೀಡಲಾಗುತ್ತದೆ.

ವೆಂಟಿಲೇಟೆಡ್ ಸೀಟ್ ಫೀಚರ್ ಹೊಂದಿರುವ ಟಾಪ್ 5 ಕಾರುಗಳಿವು

4. ಹ್ಯುಂಡೈ ಕ್ರೆಟಾ

ಹ್ಯುಂಡೈ ಕಂಪನಿಯು ವರ್ನಾ ಸೆಡಾನ್ ಕಾರಿನ ಜೊತೆಗೆ ಕ್ರೆಟಾ ಕಾಂಪ್ಯಾಕ್ಟ್ ಎಸ್‌ಯುವಿಯಲ್ಲಿಯೂ ಫ್ರಂಟ್ ವೆಂಟಿಲೇಟೆಡ್ ಸೀಟುಗಳನ್ನು ನೀಡುತ್ತದೆ. ಈ ಫೀಚರ್ ಅನ್ನು ಕ್ರೆಟಾದ ಎಸ್‌ಎಕ್ಸ್ (ಒ) ಮಾದರಿಯಲ್ಲಿ ಮಾತ್ರ ನೀಡಲಾಗುತ್ತದೆ.

MOST READ:ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ವೆಂಟಿಲೇಟೆಡ್ ಸೀಟ್ ಫೀಚರ್ ಹೊಂದಿರುವ ಟಾಪ್ 5 ಕಾರುಗಳಿವು

ಪೆಟ್ರೋಲ್ ಎಂಜಿನ್ ಹೊಂದಿರುವ ಎಸ್‌ಎಕ್ಸ್ (ಒ) ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.16.65 ಲಕ್ಷಗಳಾದರೆ, ಡೀಸೆಲ್ ಎಂಜಿನ್ ಹೊಂದಿರುವ ಎಸ್‌ಎಕ್ಸ್ (ಒ) ಎಟಿ ಬೆಲೆ ಎಕ್ಸ್ ಶೋರೂಂ ದರದಂತೆ ರೂ.17.65 ಲಕ್ಷಗಳಾಗಿದೆ.

ವೆಂಟಿಲೇಟೆಡ್ ಸೀಟ್ ಫೀಚರ್ ಹೊಂದಿರುವ ಟಾಪ್ 5 ಕಾರುಗಳಿವು

5. ಎಂಜಿ ಹೆಕ್ಟರ್ 2021

ಎಂಜಿ ಮೋಟಾರ್ ಇಂಡಿಯಾ ಹೊಸ 2021 ಹೆಕ್ಟರ್ ಎಸ್‌ಯುವಿಯನ್ನು ಈ ವರ್ಷದ ಆರಂಭದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಈ ಎಸ್‌ಯುವಿಯಲ್ಲಿ ಅಪ್ ಡೇಟ್ ಮಾಡಲಾದ ಫೀಚರ್ ಆಗಿ ವೆಂಟಿಲೇಟೆಡ್ ಸೀಟುಗಳನ್ನು ಪರಿಚಯಿಸಲಾಗಿದೆ.

MOST READ:ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ವೆಂಟಿಲೇಟೆಡ್ ಸೀಟ್ ಫೀಚರ್ ಹೊಂದಿರುವ ಟಾಪ್ 5 ಕಾರುಗಳಿವು

ವೆಂಟಿಲೇಟೆಡ್ ಸೀಟ್ ಫೀಚರ್ ಅನ್ನು ಹೊಸ ಹೆಕ್ಟರ್ ಎಸ್‌ಯುವಿಯ ಶಾರ್ಪ್ ಮಾದರಿಯಲ್ಲಿ ಮಾತ್ರ ನೀಡಲಾಗುತ್ತದೆ. ಶಾರ್ಪ್ ಮಾದರಿಯ ಬೆಲೆ ಎಕ್ಸ್ ಶೋರೂ ದರದಂತೆ ರೂ.17.39 ಲಕ್ಷಗಳಿಂದ ರೂ.19.05 ಲಕ್ಷಗಳಾಗಿದೆ.

Most Read Articles

Kannada
English summary
Top 5 cars in India with ventilated seats. Read in Kannada.
Story first published: Thursday, May 20, 2021, 18:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X