ಈ ಜನಪ್ರಿಯ ಕಾರುಗಳ ಖರೀದಿಗೆ ಇಷ್ಟು ದಿನಗಳ ಕಾಯಲೇಬೇಕು..!

ಹೊಸ ವಾಹನ ಖರೀದಿಸುವ ಮುನ್ನ ಬುಕ್ಕಿಂಗ್ ಸಲ್ಲಿಕೆ ಮಾಡಿದ ನಂತರ ಲಭ್ಯತೆ ಆಧಾರದ ಮೇಲೆ ಇಂತಿಷ್ಟು ದಿನಗಳ ಕಾಲ ಕಾಯಬೇಕಾದ ಪ್ರಕ್ರಿಯೆ ಸಾಮಾನ್ಯವಾಗಿರುತ್ತದೆ. ಆದರೆ ಬುಕ್ಕಿಂಗ್ ನಂತರ ಕೆಲವು ವಾಹನಗಳು ಅತಿ ಕಡಿಮೆ ಅವಧಿಯಲ್ಲಿ ಗ್ರಾಹಕರಿಗೆ ವಿತರಣೆಯಾದಲ್ಲಿ ಇನ್ನು ಕೆಲವು ವಾಹನಗಳ ಕಾಯುವಿಕೆ ಅವಧಿಯು ಧೀರ್ಘವಾಗಿರುತ್ತದೆ.

ಈ ಜನಪ್ರಿಯ ಕಾರುಗಳ ಖರೀದಿಗೆ ಇಷ್ಟು ದಿನಗಳ ಕಾಯಲೇಬೇಕು..!

ಹೌದು, ಗ್ರಾಹಕರು ಹೊಸ ವಾಹನಗಳ ಖರೀದಿಗಾಗಿ ಬುಕ್ಕಿಂಗ್ ಮಾಡಿದ ನಂತರ ಕೆಲವು ವಾಹನಗಳ ವಿತರಣೆ ಪಡೆಯಲು ವರ್ಷಾನುಗಟ್ಟಲೇ ಕಾಯಲೇಬೇಕಾದ ಅನಿವಾರ್ಯತೆಗಳಿದ್ದು, ಅತಿ ಹೆಚ್ಚು ಕಾಯುವಿಕೆಯ ಪಟ್ಟಿಯಲ್ಲಿ ಹಲವಾರು ಜನಪ್ರಿಯ ಕಾರುಗಳಿವೆ. ವಾಹನಗಳ ಕಾಯುವಿಕೆ ಅವಧಿಯು ಉತ್ಪಾದನಾ ಪ್ರಮಾಣ ಮತ್ತು ಬೇಡಿಕೆ ಅವಲಂಭಿಸಿದ್ದು, ಅತಿ ಹೆಚ್ಚು ಕಾಯಲೇಬೇಕಾದ ಕೆಲವು ಕಾರುಗಳ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಈ ಜನಪ್ರಿಯ ಕಾರುಗಳ ಖರೀದಿಗೆ ಇಷ್ಟು ದಿನಗಳ ಕಾಯಲೇಬೇಕು..!

01. ನ್ಯೂ ಜನರೇಷನ್ ಹ್ಯುಂಡೈ ಕ್ರೆಟಾ

ಇ, ಇಎಕ್ಸ್, ಎಸ್, ಎಸ್‌ಎಕ್ಸ್ ಮತ್ತು ಎಸ್‌ಎಕ್ಸ್ (ಒ) ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರುವ ನ್ಯೂ ಜನರೇಷನ್ ಹ್ಯುಂಡೈ ಕ್ರೆಟಾ ಕಾರು ಮಾದರಿಯಲ್ಲಿ ಇ ಡೀಸೆಲ್ ಮ್ಯಾನುವಲ್ ಆವೃತ್ತಿಯ ಖರೀದಿಗೆ ಹೆಚ್ಚಿನ ಬೇಡಿಕೆಯಿದ್ದು, ಹೈ ಎಂಡ್ ಮಾದರಿಗಳು ಬುಕ್ಕಿಂಗ್ ಮಾಡಿದ ನಂತರ ಅತಿ ಕಡಿಮೆ ಅವಧಿಯಲ್ಲಿ ವಿತರಣೆಯಾದಲ್ಲಿ ಬೆಸ್ ವೆರಿಯೆಂಟ್‌ಗಾಗಿ ಕನಿಷ್ಠ ಏಳರಿಂದ ಒಂಬತ್ತು ತಿಂಗಳ ಕಾಲ ಕಾಯಬೇಕಾಗುತ್ತದೆ.

ಈ ಜನಪ್ರಿಯ ಕಾರುಗಳ ಖರೀದಿಗೆ ಇಷ್ಟು ದಿನಗಳ ಕಾಯಲೇಬೇಕು..!

ಕ್ರೆಟಾ ಕಂಪ್ಯಾಕ್ಟ್ ಎಸ್‌ಯವಿ ಮಾದರಿಯು ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 10 ಲಕ್ಷದಿಂದ ಟಾಪ್ ಎಂಡ್ ಆವೃತ್ತಿಯು ರೂ.17.54 ಲಕ್ಷ ಬೆಲೆ ಹೊಂದಿದ್ದು, ಲಾಭಾಂಶದ ದೃಷ್ಠಿಯಿಂದ ಕಂಪನಿಯು ಹೈ ಎಂಡ್ ಮಾದರಿಗಳನ್ನು ಅತಿ ಕಡಿಮೆ ಅವಧಿಯಲ್ಲಿ ವಿತರಿಸುತ್ತವೆ.

ಈ ಜನಪ್ರಿಯ ಕಾರುಗಳ ಖರೀದಿಗೆ ಇಷ್ಟು ದಿನಗಳ ಕಾಯಲೇಬೇಕು..!

02. ನ್ಯೂ ಜನರೇಷನ್ ಮಹೀಂದ್ರಾ ಥಾರ್

ಮಹೀಂದ್ರಾ ನ್ಯೂ ಜನರೇಷನ್ ಥಾರ್ ಎಸ್‌ಯುವಿ ಕಾರು ಮಾದರಿಯು ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಇದುವರೆಗೆ ಬರೋಬ್ಬರಿ ಸುಮಾರು 50 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡಿದ್ದು, ದಿನಂಪ್ರತಿ 200ರಿಂದ 250 ಗ್ರಾಹಕರು ಸರಾಸರಿಯಾಗಿ ಹೊಸ ಕಾರಿಗೆ ಬುಕ್ಕಿಂಗ್ ದಾಖಲಿಸುತ್ತಿದ್ದಾರೆ.

ಈ ಜನಪ್ರಿಯ ಕಾರುಗಳ ಖರೀದಿಗೆ ಇಷ್ಟು ದಿನಗಳ ಕಾಯಲೇಬೇಕು..!

ಗ್ಲೊಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 4 ಸ್ಟಾರ್ ಸೇಫ್ಚಿ ರೇಟಿಂಗ್ ಪಡೆದುಕೊಳ್ಳುವ ಮೂಲಕ ಸುರಕ್ಷಿತ ಕಾರು ಮಾದರಿಯಾಗಿ ಗುರುತಿಸಿಕೊಂಡ ನಂತರ ಹೊಸ ಥಾರ್ ಕಾರಿಗೆ ಮತ್ತಷ್ಟು ಬೇಡಿಕೆ ಪಡೆದುಕೊಂಡಿರುವ ಮಹೀಂದ್ರಾ ಕಂಪನಿಯು ಬೇಡಿಕೆ ತಕ್ಕಂತೆ ಉತ್ಪಾದನೆ ಹೆಚ್ಚಳ ಮಾಡಲಾಗಿದ್ದರೂ ಬುಕ್ಕಿಂಗ್ ನಂತರ ಹೊಸ ಕಾರು ಪಡೆದುಕೊಳ್ಳಲು ಕನಿಷ್ಠ ಎಂಟು ತಿಂಗಳಿನಿಂದ ಹತ್ತು ತಿಂಗಳ ತನಕ ಕಾಯಲೇಬೇಕಾಗುತ್ತದೆ.

ಈ ಜನಪ್ರಿಯ ಕಾರುಗಳ ಖರೀದಿಗೆ ಇಷ್ಟು ದಿನಗಳ ಕಾಯಲೇಬೇಕು..!

03. ನಿಸ್ಸಾನ್ ಮ್ಯಾಗ್ನೈಟ್

ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ನಿಸ್ಸಾನ್ ಮ್ಯಾಗ್ನೈಟ್ ಕಾರು ಮಾದರಿಯು ಬಿಡುಗಡೆಗೊಂಡ ಕೆಲವೇ ತಿಂಗಳ ಅವಧಿಯಲ್ಲಿ ಸುಮಾರು 60 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡಿದ್ದು, ಉತ್ಪಾದನೆಯ ಆಧಾರದ ಮೇಲೆ ಮತ್ತು ವೆರಿಯೆಂಟ್‌ಗಳಿಗೆ ಅನುಗುಣವಾಗಿ ಈ ಕಾರನ್ನು ಖರೀದಿಸಲು ಬುಕ್ಕಿಂಗ್ ನಂತರ ಕನಿಷ್ಠ 4 ತಿಂಗಳಿನಿಂದ ಏಳು ತಿಂಗಳು ಕಾಯಬೇಕಿದೆ.

ಈ ಜನಪ್ರಿಯ ಕಾರುಗಳ ಖರೀದಿಗೆ ಇಷ್ಟು ದಿನಗಳ ಕಾಯಲೇಬೇಕು..!

ಸೆಗ್ಮೆಂಟ್ ಇನ್ ಕ್ಲಾಸ್ ಫೀಚರ್ಸ್ ಹೊಂದಿರುವ ನಿಸ್ಸಾನ್ ಕಾರು ಮಾದರಿಯ ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಅತಿ ಕಡಿಮೆ ಬೆಲೆಯೊಂದಿಗೆ ಮಾರಾಟಗೊಳ್ಳುತ್ತಿದ್ದು, ಸಬ್ ಫೋರ್ ಮೀಟರ್ ಕಂಪ್ಯಾಕ್ಟ್ ಎಸ್‌‌ಯುವಿ ಜೊತೆಗೆ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಖರೀದಿದಾರರನ್ನು ಸಹ ತನ್ನತ್ತ ಸೆಳೆಯುತ್ತಿದೆ.

ಈ ಜನಪ್ರಿಯ ಕಾರುಗಳ ಖರೀದಿಗೆ ಇಷ್ಟು ದಿನಗಳ ಕಾಯಲೇಬೇಕು..!

04. ಕಿಯಾ ಸೊನೆಟ್

ಪ್ರೀಮಿಯಂ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾರಾಟದಲ್ಲಿ ಸದ್ಯ ಅಗ್ರಸ್ಥಾನದಲ್ಲಿರುವ ಕಿಯಾ ಸೊನೆಟ್ ಆವೃತ್ತಿಯು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಂಡಿದ್ದು, ಬಿಡುಗಡೆಯಾದ ಕೆಲ ತಿಂಗಳ ಅವಧಿಯಲ್ಲೇ ಬರೋಬ್ಬರಿ 1 ಲಕ್ಷಕ್ಕೂ ಅಧಿಕ ಬುಕ್ಕಿಂಗ್ ಪಡೆದುಕೊಂಡಿದೆ.

ಈ ಜನಪ್ರಿಯ ಕಾರುಗಳ ಖರೀದಿಗೆ ಇಷ್ಟು ದಿನಗಳ ಕಾಯಲೇಬೇಕು..!

ಸೊನೆಟ್ ಕಾರು ಹೊಸ ಆವೃತ್ತಿಯು ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.79 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.13.35 ಲಕ್ಷ ಬೆಲೆ ಹೊಂದಿದ್ದು, ಹೊಸ ಕಾರನ್ನು ಖರೀದಿಸಲು ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಮೂರರಿಂದ ಐದು ತಿಂಗಳ ಕಾಲ ಕಾಯಬೇಕಾಗುತ್ತದೆ.

ಈ ಜನಪ್ರಿಯ ಕಾರುಗಳ ಖರೀದಿಗೆ ಇಷ್ಟು ದಿನಗಳ ಕಾಯಲೇಬೇಕು..!

05. ಟಾಟಾ ನೆಕ್ಸಾನ್

ಕಾರು ಮಾರಾಟದಲ್ಲಿ ಸದ್ಯ ಮಾರುತಿ ಸುಜುಕಿ ಮತ್ತು ಹ್ಯುಂಡೈ ನಂತರ ಮೂರನೇ ಸ್ಥಾನಕ್ಕೇರಿರುವ ಟಾಟಾ ಕಂಪನಿಯು ನೆಕ್ಸಾನ್ ಕಾರು ಮಾದರಿಯ ಮೂಲಕ ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಸಾಕಷ್ಟು ಮುಂಚೂಣಿ ಸಾಧಿಸುತ್ತಿದೆ.

ಈ ಜನಪ್ರಿಯ ಕಾರುಗಳ ಖರೀದಿಗೆ ಇಷ್ಟು ದಿನಗಳ ಕಾಯಲೇಬೇಕು..!

2020ರ ಆರಂಭದಲ್ಲಿ ಪ್ರತಿ ತಿಂಗಳಿಗೆ 2500ರಿಂದ 3 ಸಾವಿರ ಯುನಿಟ್ ಮಾತ್ರ ಮಾರಾಟವಾಗಿದ್ದ ನೆಕ್ಸಾನ್ ಕಾರು ಮಾದರಿಯು ಇದೀಗ ಪ್ರತಿ ತಿಂಗಳು 6 ಸಾವಿರ 7 ಸಾವಿರ ಯುನಿಟ್ ಸರಾಸರಿಯಾಗಿ ಮಾರಾಟಗೊಳ್ಳುತ್ತಿದ್ದು, ಹೊಸ ಕಾರು ಖರೀದಿಗಾಗಿ ಬುಕ್ಕಿಂಗ್ ನಂತರ ಕನಿಷ್ಠ ಮೂರರಿಂದ ಐದು ತಿಂಗಳು ಕಾಲ ಕಾಯಬೇಕಾಗುತ್ತದೆ.

Most Read Articles

Kannada
English summary
Popular Cars With Highest Waiting Period In July. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X