ನಿಶ್ಚಿಂತೆಯಿಂದ ಸಂಚರಿಸಿ: ಇಲ್ಲಿವೆ ಗರಿಷ್ಠ ಸುರಕ್ಷತೆ ಹೊಂದಿರುವ ಟಾಪ್ 5 ಸುರಕ್ಷಿತ ಕಾರುಗಳು!

ಹೊಸ ಕಾರುಗಳ ಖರೀದಿಯ ವೇಳೆ ಗ್ರಾಹಕರು ಅಗ್ಗದ ಬೆಲೆಯ ಮಾದರಿಗಳಿಗೆ ಮಾದರಿಗಳಿಂತಲೂ ಸುರಕ್ಷಿತ ಮಾದರಿಗಳಿಗೆ ಒತ್ತು ನೀಡುತ್ತಿರುವುದು ಹಲವಾರು ಬದಲಾವಣೆಗಳಿಗೆ ಕಾರಣವಾಗಿದ್ದು, ಇತ್ತೀಚೆಗೆ ಬಿಡುಗಡೆಗೊಂಡ ಹೊಸ ಕಾರುಗಳು ಮತ್ತು ಅವುಗಳ ಸುರಕ್ಷಾ ವೈಶಿಷ್ಟ್ಯತೆ ಮತ್ತು ರೇಟಿಂಗ್ಸ್ ಕುರಿತಾದ ಮಾಹಿತಿಯನ್ನು ಇಲ್ಲಿ ಚರ್ಚಿಸಿದ್ದೇವೆ.

ಇಲ್ಲಿವೆ ಗರಿಷ್ಠ ಸುರಕ್ಷತೆ ಹೊಂದಿರುವ ಟಾಪ್ 5 ಸುರಕ್ಷಿತ ಕಾರುಗಳು!

ಆಧುನಿಕ ಕಾಲಘಟ್ಟದಲ್ಲಿ ಪ್ರಯಾಣಿಕರ ಸುರಕ್ಷತೆಗೂ ಅತಿ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಲಾಗುತ್ತಿದ್ದು, ಇದರ ಭಾಗವಾಗಿ ಕಾರುಗಳ ಸುರಕ್ಷತಾ ಗುಣಮಟ್ಟವು ಸಾಕಷ್ಟು ಸುಧಾರಿಸಿದೆ. ಇನ್ನೊಂದೆಡೆ ಯುರೋಪ್ ಎನ್‌ಸಿಎಪಿ ಮಾದರಿಯಲ್ಲಿ ಭಾರತೀಯ ಪ್ರಯಾಣಿಕ ಕಾರುಗಳಿಗೂ ಗರಿಷ್ಠ ಭದ್ರತೆಯನ್ನು ಖಾತ್ರಿಪಡಿಸಲು ಹೊರಟಿರುವ ಭಾರತ ಸರ್ಕಾರವು 2019ರ ಅಕ್ಟೋಬರ್ 1ರಿಂದ ಪ್ರತಿ ಕಾರಿಗೂ ನ್ಯೂ ಕಾರ್ ಅಸ್ಸೆಸ್ಮೆಂಟ್ ಪ್ರೋಗ್ರಾಂ (ಎನ್‌ಸಿಎಪಿ) ಕಡ್ಡಾಯಗೊಳಿಸಿದ್ದು, ಸುರಕ್ಷತೆ ಇಲ್ಲದ ಕಾರುಗಳಿಗೆ ಮಾರಾಟಕ್ಕೆ ಕ್ರಮಕೈಗೊಳ್ಳಲಾಗುತ್ತಿದೆ.

ಇಲ್ಲಿವೆ ಗರಿಷ್ಠ ಸುರಕ್ಷತೆ ಹೊಂದಿರುವ ಟಾಪ್ 5 ಸುರಕ್ಷಿತ ಕಾರುಗಳು!

ಕಳೆದ ಒಂದು ದಶಕದ ಅವಧಿಯಲ್ಲಿ ಪ್ರಯಾಣಿಕ ಕಾರುಗಳಲ್ಲಿ ಹಲವಾರು ಸುರಕ್ಷಾ ಮಾನದಂಡಗಳು ಸಾಕಷ್ಟು ಸುಧಾರಣೆಗೊಂಡಿದ್ದು, ಹೊಸ ವಾಹನಗಳಲ್ಲಿ ಗರಿಷ್ಠಿ ಸುರಕ್ಷತೆಗಾಗಿ ಅಂತರ್‌ರಾಷ್ಟ್ರೀಯ ಮಾನದಂಡಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ.

ಇಲ್ಲಿವೆ ಗರಿಷ್ಠ ಸುರಕ್ಷತೆ ಹೊಂದಿರುವ ಟಾಪ್ 5 ಸುರಕ್ಷಿತ ಕಾರುಗಳು!

ಪ್ರಸ್ತುತ ಮಾರುಕಟ್ಟೆಯಲ್ಲಿ ಬೆಲೆ ಆಧಾರದ ಮೇಲೆ ಅತ್ಯುತ್ತಮ ಸುರಕ್ಷಾ ಫೀಚರ್ಸ್ ಹೊಂದಿರುವ ಹಲವಾರು ಪ್ರಯಾಣಿಕ ಬಳಕೆಯ ವಾಹನಗಳು ಖರೀದಿ ಲಭ್ಯವಿದ್ದರೂ ಎಂಟ್ರಿ ಲೆವಲ್ ಮತ್ತು ಮಧ್ಯಮ ಗಾತ್ರದ ವಾಹನಗಳಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ.

ಇಲ್ಲಿವೆ ಗರಿಷ್ಠ ಸುರಕ್ಷತೆ ಹೊಂದಿರುವ ಟಾಪ್ 5 ಸುರಕ್ಷಿತ ಕಾರುಗಳು!

ಹೀಗಾಗಿ ಪ್ರಯಾಣಿಕ ವಾಹನಗಳ ಸುರಕ್ಷತೆ ಕುರಿತು ಜಾಗತಿಕ ಮಟ್ಟದ ಅಭಿಯಾನ ಕೈಗೊಂಡಿರುವ ಗ್ಲೊಬಲ್ ಎಸ್‌ಸಿಎಪಿ ಸಂಸ್ಥೆಯು ಭಾರತದಲ್ಲಿ #SAFERCARSFORINDIA ಅಭಿಯಾನದಡಿ ಹೊಸ ಕಾರುಗಳ ಸುರಕ್ಷತೆಯನ್ನು ಸುಧಾರಿಸುತ್ತಿದ್ದು, ಕ್ರ್ಯಾಶ್ ಟೆಸ್ಟಿಂಗ್ ಮೂಲಕ ರೇಟಿಂಗ್ಸ್ ನೀಡುತ್ತಿದೆ.

ಇಲ್ಲಿವೆ ಗರಿಷ್ಠ ಸುರಕ್ಷತೆ ಹೊಂದಿರುವ ಟಾಪ್ 5 ಸುರಕ್ಷಿತ ಕಾರುಗಳು!

ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಉತ್ತಮ ಸುರಕ್ಷಾ ಕಾರು ಮಾದರಿಯಾಗಿ ಗುರುತಿಸಲು ಕನಿಷ್ಠ 3 ಅಂಕಗಳ ಅವಶ್ಯಕತೆಯಿದ್ದು, 5 ಅಂಕಗಳನ್ನು ಗಿಟ್ಟಿಸಿಕೊಂಡಿರುವ ಕಾರುಗಳು ಅತ್ಯುತ್ತಮ ಕಾರು ಮಾದರಿಯಾಗಿ ಹೊರಹೊಮ್ಮಿವೆ. 5 ಅಂಕಗಳನ್ನು ಪಡೆಯುವಲ್ಲಿ ಬಜೆಟ್ ಬೆಲೆಯ ಕಾರುಗಳು ಸಹ ಯಶಸ್ವಿಯಾಗಿದ್ದು, ದೇಶದ ಜನಪ್ರಿಯ ಕಾರು ಉತ್ಪಾದನಾ ಕಂಪನಿಗಳಾದ ಮಹೀಂದ್ರಾ ಮತ್ತು ಟಾಟಾ ಅಗ್ರಸ್ಥಾನದಲ್ಲಿವೆ. ಹಾಗಾದ್ರೆ ಹೆಚ್ಚು ಸುರಕ್ಷಿತವಾಗಿರುವ ಕಾರುಗಳ ಪಟ್ಟಿಯಲ್ಲಿ ಯಾವೆಲ್ಲಾ ಕಾರುಗಳಿವೆ ಎಂದು ಇಲ್ಲಿ ತಿಳಿಯೋಣ.

ಇಲ್ಲಿವೆ ಗರಿಷ್ಠ ಸುರಕ್ಷತೆ ಹೊಂದಿರುವ ಟಾಪ್ 5 ಸುರಕ್ಷಿತ ಕಾರುಗಳು!

ಮಹೀಂದ್ರಾ ಎಕ್ಸ್‌ಯುವಿ700

ಮಹೀಂದ್ರಾ ನಿರ್ಮಾಣದ ಹೊಸ ಕಾರುಗಳು ಗ್ಲೊಬಲ್ ಎನ್‌ಸಿಎಪಿ ಕ್ರ್ಯಾಶ್‌ಟೆಸ್ಟಿಂಗ್‌ನಲ್ಲಿ ಹೊಸ ದಾಖಲೆಗೆ ಕಾರಣವಾಗುತ್ತಿದ್ದು, ಎಕ್ಸ್‌ಯುವಿ700 ಮಾದರಿಯು ವಯಸ್ಕ ಪ್ರಯಾಣಿಕರ ಸುರಕ್ಷತೆಗಾಗಿ ನೀಡುವ 17 ಅಂಕಗಳಲ್ಲಿ 16.03 ಅಂಕಗಳನ್ನು ಮತ್ತು ಮಕ್ಕಳ ಸುರಕ್ಷತೆಗಾಗಿ ನೀಡಲಾಗುವ 49 ಅಂಕಗಳಲ್ಲಿ 41.66 ಅಂಕಗಳೊಂದಿಗೆ 5 ಸ್ಟಾರ್ ರೇಟಿಂಗ್ಸ್ ಪಡೆದುಕೊಂಡಿದೆ.

ಇಲ್ಲಿವೆ ಗರಿಷ್ಠ ಸುರಕ್ಷತೆ ಹೊಂದಿರುವ ಟಾಪ್ 5 ಸುರಕ್ಷಿತ ಕಾರುಗಳು!

ಹೊಸ ಎಕ್ಸ್‌ಯುವಿ700 ಮಾದರಿಯಲ್ಲಿ ಸ್ಟ್ಯಾಂಡರ್ಡ್ ಏರ್‌ಬ್ಯಾಗ್, ಎಬಿಎಸ್ ಜೊತೆಗೆ ಇಬಿಡಿ, ಎಲೆಕ್ಟ್ರಾನಿಕ್ ಲಾಕಿಂಗ್, ಟ್ರಾಕ್ಷನ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಟೋ ಹೆಡ್‌ಲ್ಯಾಂಪ್ ಬೂಸ್ಟರ್, ವ್ಯಯಕ್ತಿಕರಣಗೊಳಿಸಿದ ಸೇಫ್ಟಿ ಅಲರ್ಟ್, ಡ್ರೈವರ್ ಡ್ರಾಸಿನೆಸ್ ಅಲರ್ಟ್, ಲೆನ್ ಕಿಪ್ ಅಸಿಸ್ಟ್ ಸೌಲಭ್ಯದೊಂದಿಗೆ ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ಖಾತ್ರಿಪಡಿಸಿದೆ.

ಇಲ್ಲಿವೆ ಗರಿಷ್ಠ ಸುರಕ್ಷತೆ ಹೊಂದಿರುವ ಟಾಪ್ 5 ಸುರಕ್ಷಿತ ಕಾರುಗಳು!

ಟಾಟಾ ಪಂಚ್

ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ನಂತರ ಎಲ್ಲಾ ಕಾರು ಮಾದರಿಗಳಲ್ಲೂ ಗರಿಷ್ಠ ಸುರಕ್ಷಾ ಫೀಚರ್ಸ್‌ಗಳೊಂದಿಗೆ ಅಭಿವೃದ್ದಿಗೊಳಿಸಿದ್ದು,ಇದೀಗ ಹೊಸದಾಗಿ ಬಿಡುಗಡೆಯಾಗಿರುವ ಪಂಚ್ ಮೈಕ್ರೊ ಎಸ್‌ಯುವಿ ಮಾದರಿಯಲ್ಲೂ ಸಹ ಗರಿಷ್ಠ ಮಟ್ಟದ ಸುರಕ್ಷಾ ಫೀಚರ್ಸ್ ಅಳವಡಿಸಿದೆ.

ಇಲ್ಲಿವೆ ಗರಿಷ್ಠ ಸುರಕ್ಷತೆ ಹೊಂದಿರುವ ಟಾಪ್ 5 ಸುರಕ್ಷಿತ ಕಾರುಗಳು!

ವಯಸ್ಕ ಪ್ರಯಾಣಿಕರ ಸುರಕ್ಷತೆಗಾಗಿ ಹೊಸ ಪಂಚ್ ಕಾರಿಗೆ 5 ಅಂಕಗಳನ್ನು ನೀಡಲಾಗಿದ್ದು, ಮಕ್ಕಳ ಸುರಕ್ಷತೆಗಾಗಿ 4 ಅಂಕಗಳನ್ನು ನೀಡಲಾಗಿದೆ. ಮಕ್ಕಳ ಸುರಕ್ಷತೆಗಾಗಿ ಹೊಸ ಕಾರಿನಲ್ಲಿ ಇನ್ನು ಕೆಲವು ಸುರಕ್ಷಾ ಸೌಲಭ್ಯಗಳನ್ನು ಅಳವಡಿಸಕೊಳ್ಳಬೇಕಿದ್ದು, ವಯಸ್ಕ ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆಯನ್ನು ಖಾತ್ರಿಪಡಿಸಿರುವುದು ಕಾರು ಮಾರಾಟ ಹೆಚ್ಚಳಕ್ಕೆ ಸಹಕಾರಿಯಾಗಲಿದೆ.

ಇಲ್ಲಿವೆ ಗರಿಷ್ಠ ಸುರಕ್ಷತೆ ಹೊಂದಿರುವ ಟಾಪ್ 5 ಸುರಕ್ಷಿತ ಕಾರುಗಳು!

ಮಹೀಂದ್ರಾ ಎಕ್ಸ್‌ಯುವಿ300

ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಲ್ಲೇ ಅತ್ಯುತ್ತಮ ತಾಂತ್ರಿಕ ಅಂಶಗಳನ್ನು ಹೊಂದಿರುವ ಎಕ್ಸ್‌ಯುವಿ300 ಮಾದರಿಯು ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ರೇಟಿಂಗ್ ಗಿಟ್ಟಿಸಿಕೊಂಡಿದ್ದು, ಬಜೆಟ್ ಬೆಲೆಗೆ ಖರೀದಿಗೆ ಲಭ್ಯವಿರುವ ಅತ್ಯುತ್ತಮ ಕಾರು ಮಾದರಿಯಾಗಿದೆ.

ಇಲ್ಲಿವೆ ಗರಿಷ್ಠ ಸುರಕ್ಷತೆ ಹೊಂದಿರುವ ಟಾಪ್ 5 ಸುರಕ್ಷಿತ ಕಾರುಗಳು!

ಮುಂಭಾಗದ ಪ್ರಯಾಣಿಕರ ಸೇಫ್ಟಿ ವಿಭಾಗದಲ್ಲಿ 5 ಸ್ಟಾರ್ ರೇಟಿಂಗ್ ಮತ್ತು ಚೈಲ್ಡ್ ಸೇಫ್ಟಿನಲ್ಲಿ 4 ಸ್ಟಾರ್ ರೇಟಿಂಗ್ ಪಡೆದುಕೊಂಡಿರುವ ಎಕ್ಸ್‌ಯುವಿ300 ಮಾದರಿಯು 1.2-ಲೀಟರ್ ಟರ್ಬೋ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್‌ಗಳನ್ನು ಹೊಂದಿದೆ.

ಇಲ್ಲಿವೆ ಗರಿಷ್ಠ ಸುರಕ್ಷತೆ ಹೊಂದಿರುವ ಟಾಪ್ 5 ಸುರಕ್ಷಿತ ಕಾರುಗಳು!

ಟಾಟಾ ನೆಕ್ಸಾನ್

ಟಾಟಾ ನಿರ್ಮಾಣದ ನೆಕ್ಸಾನ್ ಮಾದರಿಯು ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ರೇಟಿಂಗ್ ಗಿಟ್ಟಿಸಿಕೊಳ್ಳುವ ಮೂಲಕ ಅತ್ಯುತ್ತಮ ಬಜೆಟ್ ಕಾರು ಮಾದರಿಯಾಗಿ ಹೊರಹೊಮ್ಮಿದ್ದು, ಮುಂಭಾಗದ ಪ್ರಯಾಣಿಕರ ಸೇಫ್ಟಿ ವಿಭಾಗದಲ್ಲಿ 5 ಸ್ಟಾರ್ ಮತ್ತು ಚೈಲ್ಡ್ ಸೇಫ್ಟಿ ವಿಭಾಗದಲ್ಲಿ 3 ಸ್ಟಾರ್ ಪಡೆದುಕೊಂಡಿದೆ.

ಇಲ್ಲಿವೆ ಗರಿಷ್ಠ ಸುರಕ್ಷತೆ ಹೊಂದಿರುವ ಟಾಪ್ 5 ಸುರಕ್ಷಿತ ಕಾರುಗಳು!

ಸದ್ಯ ಬಿಎಸ್-6 ಎಂಜಿನ್‌ನೊಂದಿಗೆ 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಮಾರಾಟವಾಗುತ್ತಿರುವ ನೆಕ್ಸಾನ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಗುಣಮಟ್ಟದ ಬಿಡಿಭಾಗಗಳೊಂದಿಗೆ ಭೀಕರವಾದ ಅಪಘಾತ ಸಂದರ್ಭದಲ್ಲೂ ಹಲವಾರು ಪ್ರಕರಣಗಳಲ್ಲಿ ಕಾರು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳನ್ನು ಹೊರತುಪಡಿಸಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇಲ್ಲಿವೆ ಗರಿಷ್ಠ ಸುರಕ್ಷತೆ ಹೊಂದಿರುವ ಟಾಪ್ 5 ಸುರಕ್ಷಿತ ಕಾರುಗಳು!

ಟಾಟಾ ಆಲ್‌ಟ್ರೊಜ್

ನೆಕ್ಸಾನ್ ನಂತರ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ರೇಟಿಂಗ್ ಗಿಟ್ಟಿಸಿಕೊಂಡ ಟಾಟಾ ಕಾರುಗಳಲ್ಲಿ ಆಲ್‌ಟ್ರೊಜ್ ಕೂಡಾ ಪ್ರಮುಖ ಕಾರು ಮಾದರಿಯಾಗಿದ್ದು, ಇದು ಕೂಡಾ ನೆಕ್ಸಾನ್ ಮಾದರಿಯಲ್ಲೇ ಮುಂಭಾಗದ ಪ್ರಯಾಣಿಕರ ಸೇಫ್ಟಿ ವಿಭಾಗದಲ್ಲಿ 5 ಸ್ಟಾರ್ ಮತ್ತು ಚೈಲ್ಡ್ ಸೇಫ್ಟಿ ವಿಭಾಗದಲ್ಲಿ 3 ಸ್ಟಾರ್ ಪಡೆದುಕೊಂಡಿದೆ.

ಇಲ್ಲಿವೆ ಗರಿಷ್ಠ ಸುರಕ್ಷತೆ ಹೊಂದಿರುವ ಟಾಪ್ 5 ಸುರಕ್ಷಿತ ಕಾರುಗಳು!

ಮಹೀಂದ್ರಾ ಥಾರ್

ನ್ಯೂ ಜನರೇಷನ್ ಥಾರ್ ಎಸ್‌ಯುವಿ ಕಾರು ಮಾದರಿಯು ವಯಸ್ಕ ಪ್ರಯಾಣಿಕರ ಸುರಕ್ಷತೆಯಲ್ಲಿ 5ಕ್ಕೆ 4 ಸ್ಟಾರ್ ರೇಟಿಂಗ್ಸ್ ಮತ್ತು ಮಕ್ಕಳ ಸುರಕ್ಷತೆಗಾಗಿ 4 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಮೂಲಕ ಒಟ್ಟಾರೆ 4 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಪಡೆದುಕೊಂಡಿದೆ. ಥಾರ್ ಕಾರು ಮಾದರಿಯು ಎಕ್ಸ್‌ಯುವಿ300 ಮಾದರಿಗಿಂತಲೂ ವಯಸ್ಕ ಪ್ರಯಾಣಿಕರ ಸುರಕ್ಷತೆಯಲ್ಲಿ ತುಸು ಹಿನ್ನಡೆ ಅನುಭವಿಸಿದ್ದರೂ ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಉತ್ತಮ ಸೇಫ್ಟಿ ಫೀಚರ್ಸ್ ಪಡೆದುಕೊಂಡಿದೆ.

ಇಲ್ಲಿವೆ ಗರಿಷ್ಠ ಸುರಕ್ಷತೆ ಹೊಂದಿರುವ ಟಾಪ್ 5 ಸುರಕ್ಷಿತ ಕಾರುಗಳು!

ಟಾಟಾ ಟಿಗೋರ್ ಇವಿ/ರೆನಾಲ್ಟ್ ಟ್ರೈಬರ್/ಫೋಕ್ಸ್‌ವ್ಯಾಗನ್ ಪೊಲೊ

ಸುರಕ್ಷಿತ ಕಾರುಗಳ ಪಟ್ಟಿಯಲ್ಲಿ ಇತ್ತೀಚೆಗೆ ಬಿಡುಗಡೆಯಾದ 2021ರ ಟಾಟಾ ಟಿಗೋರ್ ಇವಿ ಕಾರು ಕೂಡಾ 4 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಪಡೆದುಕೊಂಡಿದ್ದು, ತದನಂತರದ ಸೇಫ್ಟಿ ರೇಟಿಂಗ್ಸ್ ಪಟ್ಟಿಯಲ್ಲಿ ಟಾಟಾ ಟಿಯಾಗೋ ಹ್ಯಾಚ್‌‌ಬ್ಯಾಕ್, ಫೋಕ್ಸ್‌ವ್ಯಾಗನ್ ಪೊಲೊ ಹ್ಯಾಚ್‌ಬ್ಯಾಕ್, ರೆನಾಲ್ಟ್ ಟ್ರೈಬರ್ ಮಿನಿ ಎಂಪಿವಿ ಕಾರುಗಳು 4 ಸ್ಟಾರ್ ರೇಟಿಂಗ್ಸ್ ಪಡೆದುಕೊಂಡಿವೆ.

Most Read Articles

Kannada
English summary
Top 5 safest made in india cars details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X