ಆಗಸ್ಟ್ ತಿಂಗಳ 7-ಸೀಟರ್ ಕಾರು ಮಾರಾಟದಲ್ಲಿ ಪಾರುಪತ್ಯ ಸಾಧಿಸಿದ Maruti Eeco

ಭಾರತೀಯ ಮಾರುಕಟ್ಟೆಯಲ್ಲಿ 7-ಸೀಟರ್ ಕಾರುಗಳು ಹೆಚ್ಚಿನ ಬೇಡಿಕೆಯನ್ನು ಪಡೆಯುತ್ತಿದೆ. ಕಳೆದ ತಿಂಗಳು ಭಾರತೀಯ ಮಾರುಕಟ್ಟೆಯಲ್ಲಿ ಕೆಲವು 7-ಸೀಟರ್ ಎಸ್‍ಯುವಿ ಮತ್ತು ಎಂಪಿವಿ ಮಾದರಿಗಳು ಮಾರಾಟದಲ್ಲಿ ಉತ್ತಮ ಬೆಳವಣಿಗೆಯನ್ನು ಸಾಧಿಸಿದೆ. ಕಳೆದ ತಿಂಗಳು ಅತಿ ಹೆಚ್ಚು ಮಾರಾಟವಾದ 7-ಸೀಟರ್ ಕಾರುಗಳ ಮಾಹಿತಿ ಇಲ್ಲಿದೆ.

ಆಗಸ್ಟ್ ತಿಂಗಳ 7-ಸೀಟರ್ ಕಾರು ಮಾರಾಟದಲ್ಲಿ ಪಾರುಪತ್ಯ ಸಾಧಿಸಿದ Maruti Eeco

ಮಾರಾಟದಲ್ಲಿ ಮಾರುತಿ ಇಕೋ

ಕಳೆದ ತಿಂಗಳ 7-ಸೀಟರ್ ಕಾರು ಮಾರಾಟದಲ್ಲಿ ಮಾರುತಿ ಇಕೋ ಮಾದರಿಯು ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಕಳೆದ ತಿಂಗಳು ಮಾರುತಿ ಇಕೋ ಮಾದರಿಯ 10,666 ಯುನಿಟ್‌ಗಳು ಮಾರಾಟವಾಗಿದೆ. ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ 9,115 ಯುನಿಟ್‌ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ,17 ರಷ್ಟು ಏರಿಕೆಯಾಗಿದೆ. ಮಾರುತಿ ಇಕೋ ಮಾದರಿಯಲ್ಲಿ ಹೆಚ್ಚು ಸ್ಪೇಸ್ ಹಾಗೂ ಅಲ್ಟ್ರಾ ಎಫಿಶಿಯನ್ಸಿ ಎಂಜಿನ್ ಇದರ ಜನಪ್ರಿಯತೆಗೆ ಮುಖ್ಯ ಕಾರಣಗಳಾಗಿವೆ.

ಆಗಸ್ಟ್ ತಿಂಗಳ 7-ಸೀಟರ್ ಕಾರು ಮಾರಾಟದಲ್ಲಿ ಪಾರುಪತ್ಯ ಸಾಧಿಸಿದ Maruti Eeco

ಇಕೋ ಮಾದರಿಯಲ್ಲಿ 5ರಿಂದ 7 ಸೀಟುಗಳನ್ನು ಹೊಂದಿದೆ. ಈ ಕಾರಿನಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 73 ಬಿಹೆಚ್‌ಪಿ ಮತ್ತು 101 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನಲ್ಲಿ 5 ಸ್ಪೀಡಿನ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ ಅಳವಡಿಸಲಾಗಿದೆ. ಇಕೋ ಸಿಎನ್‌ಜಿ ಮಾದರಿಯು ಪ್ರತಿ ಲೀಟರ್‌ಗೆ 21.8 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಆಗಸ್ಟ್ ತಿಂಗಳ 7-ಸೀಟರ್ ಕಾರು ಮಾರಾಟದಲ್ಲಿ ಪಾರುಪತ್ಯ ಸಾಧಿಸಿದ Maruti Eeco

ಮಾರುತಿ ಎರ್ಟಿಗಾ

ದೇಶದಲ್ಲಿ ಹೆಚ್ಚು ಮಾರಾಟವಾದ ಎಂಪಿವಿ ಎರ್ಟಿಗಾ ಎರಡನೇ ಸ್ಥಾನ ಗಳಿಸಿತು ಆದರೆ ಸಂಪುಟ ಸಂಖ್ಯೆಯಲ್ಲಿ ದೊಡ್ಡ ಇಳಿಕೆಯಾಗಿದೆ. ಕಳೆದ ತಿಂಗಳು ಎರ್ಟಿಗಾದ 6,251 ಯುನಿಟ್‌ಗಳು ಮಾರಾಟವಾಗಿವೆ. ಆದರೆ ಕಳೆದ ವರ್ಷದ ಇದೇ ತಿಂಗಳಿನಲ್ಲಿ 9,302 ಯುನಿಟ್‌ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.33 ರಷ್ಟು ಕುಸಿತವನ್ನು ಕಂಡಿದೆ.

ಆಗಸ್ಟ್ ತಿಂಗಳ 7-ಸೀಟರ್ ಕಾರು ಮಾರಾಟದಲ್ಲಿ ಪಾರುಪತ್ಯ ಸಾಧಿಸಿದ Maruti Eeco

ಎರ್ಟಿಗಾ ಎಂಪಿವಿಯು ಅರೆನಾ ಡೀಲರುಗಳ ಮೂಲಕ ಮಾರಾಟ ಮಾಡಲಾಗುತ್ತದೆ. ಈ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿಯಲ್ಲಿ ಏಕೈಕ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ, ಈ ಎಂಜಿನ್ 105 ಬಿಹೆಚ್‍ಪಿ ಪವರ್ ಮತ್ತು 138 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಜೊತೆಗೆ 4-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ನೀಡಲಾಗಿದೆ.

ಆಗಸ್ಟ್ ತಿಂಗಳ 7-ಸೀಟರ್ ಕಾರು ಮಾರಾಟದಲ್ಲಿ ಪಾರುಪತ್ಯ ಸಾಧಿಸಿದ Maruti Eeco

ಟೊಯೊಟಾ ಇನೋವಾ

ಕಳೆದ ತಿಂಗಳಿನಲ್ಲಿ ಟೊಯೊಟಾ ಇನೋವಾ ಮಾದರಿಯ 5,755 ಯುನಿಟ್‌ಗಳು ಮಾರಾಟವಾಗಿವೆ. ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ 2,943 ಯುನಿಟ್‌ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.96 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಕರೋನಾ ಸಂಕಷ್ಟದ ನಡುವೆಯು ಟೊಯೊಟಾ ಇನೋವಾ ಎಂಪಿವಿಯು ಉತ್ತಮ ಬೇಡಿಕೆಯನ್ನು ಪಡೆದುಕೊಂಡಿದೆ.

ಆಗಸ್ಟ್ ತಿಂಗಳ 7-ಸೀಟರ್ ಕಾರು ಮಾರಾಟದಲ್ಲಿ ಪಾರುಪತ್ಯ ಸಾಧಿಸಿದ Maruti Eeco

ರೆನಾಲ್ಟ್ ಟ್ರೈಬರ್

ಆಗಸ್ಟ್ ತಿಂಗಳಿನಲ್ಲಿ ರೆನಾಲ್ಟ್ ಟ್ರೈಬರ್ ಎಂಪಿವಿಯ 3,912 ಯುನಿಟ್‌ಗಳು ಮಾರಾಟವಾಗಿವೆ. ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ 3,906 ಯುನಿಟ್‌ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಸಣ್ಣ ಮಟ್ಟದ ಬೆಳವಣಿಗೆಯನ್ನು ಸಾಧಿಸಿದೆ.

ಆಗಸ್ಟ್ ತಿಂಗಳ 7-ಸೀಟರ್ ಕಾರು ಮಾರಾಟದಲ್ಲಿ ಪಾರುಪತ್ಯ ಸಾಧಿಸಿದ Maruti Eeco

ಹ್ಯುಂಡೈ ಅಲ್ಕಾಜರ್

ಇತ್ತೀಚೆಗೆ ಬಿಡುಗಡೆಗೊಂಡ ಹ್ಯುಂಡೈ ಅಲ್ಕಾಜರ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಪಡೆದುಕೊಂಡಿದೆ, ಕಳೆದ ತಿಂಗಳಿನಲ್ಲಿ ಹ್ಯುಂಡೈ ಅಲ್ಕಾಜರ್ ಮಾದರಿಯ 3,468 ಯುನಿಟ್‌ಗಳು ಮಾರಾಟವಾಗಿತ್ತು. ಹೊಸ ಹ್ಯುಂಡೈ ಅಲ್ಕಾಜರ್ 7-ಸೀಟರ್ ಮಾದರಿಯು ಪ್ರಸ್ತುತ ತಲೆಮಾರಿನ ಹ್ಯುಂಡೈ ಕ್ರೆಟಾವನ್ನು ಆಧರಿಸಿದೆ,

ಆಗಸ್ಟ್ ತಿಂಗಳ 7-ಸೀಟರ್ ಕಾರು ಮಾರಾಟದಲ್ಲಿ ಪಾರುಪತ್ಯ ಸಾಧಿಸಿದ Maruti Eeco

ಇನ್ನು ಈ ಹ್ಯುಂಡೈ ಅಲ್ಕಾಜಾರ್‌ನ ಒಳಭಾಗದಲ್ಲಿ ಉತ್ತಮ ಸ್ಪೇಸ್ ಅನ್ನು ಹೊಂದಿದ್ದು, 7 ಜನರು ಉತ್ತಮವಾಗಿ ಕುಳಿತು ಪ್ರಯಾಣಿಸಬಹುದು. ಈ ಹ್ಯುಂಡೈ ಅಲ್ಕಾಜರ್ 7-ಸೀಟರ್ ಆಕರ್ಷಕ ವಿನ್ಯಾಸ, ಅತ್ಯಾಧುನಿಕ ಫೀಚರ್ಸ್ ಗಳನ್ನು ಹೊಂದಿವೆ. ಹ್ಯುಂಡೈ ಅಲ್ಕಾಜರ್ 7-ಸೀಟರ್ ಮಾದರಿಯನ್ನು 6 ಮತ್ತು 7 ಆಸನಗಳ ಸಂರಚನೆಗಳಲ್ಲಿ ಅನ್ನು ನೀಡುತ್ತದೆ. ಈ ಅಲ್ಕಾಜಾರ್ ಎರಡನೇ ಸಾಲಿನಲ್ಲಿ ಕ್ಯಾಪ್ಟನ್ ಸೀಟುಗಳನ್ನು ಸೆಂಟರ್ ಕನ್ಸೋಲ್‌ನೊಂದಿಗೆ ಪಡೆಯುತ್ತದೆ.

ಆಗಸ್ಟ್ ತಿಂಗಳ 7-ಸೀಟರ್ ಕಾರು ಮಾರಾಟದಲ್ಲಿ ಪಾರುಪತ್ಯ ಸಾಧಿಸಿದ Maruti Eeco

ಮಹೀಂದ್ರಾ ಬೊಲೆರೊ

ಆಗಸ್ಟ್ ತಿಂಗಳಿನಲ್ಲಿ ಮಹೀಂದ್ರಾ ಬೊಲೆರೊ ಮಾದರಿಯ 3,218 ಯುನಿಟ್‌ಗಳು ಮಾರಾಟವಾಗಿವೆ. ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ 5,487 ಯುನಿಟ್‌ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.41 ರಷ್ಟು ಇಳಿಕೆಯಾಗಿದೆ. ಮಹೀಂದ್ರಾ ಬೊಲೆರೊ ಸಣ್ಣ ಪಟ್ಟಣ್ಣಗಳಲ್ಲಿ ಮತ್ತು ಗ್ರಾಮಿಣ ಭಾಗಗಲ್ಲಿ ಉತ್ತಮವಾಗಿ ಮಾರಾಟವಾಗುವೆ ಎಸ್‍ಯುವಿ ಮಾದರಿಯಾಗಿದೆ.

ಆಗಸ್ಟ್ ತಿಂಗಳ 7-ಸೀಟರ್ ಕಾರು ಮಾರಾಟದಲ್ಲಿ ಪಾರುಪತ್ಯ ಸಾಧಿಸಿದ Maruti Eeco

ಮಹೀಂದ್ರಾ ಬೊಲೆರೊ ಕೈಗೆಟುಕುವ ಬೆಲೆ ಮತ್ತು ಒರಟಾದ ಯುಟಿಲಿಟಿ ವಾಹನವಾಗಿದೆ. ಈ ಮಾದರಿಯು ಬಿ4, ಬಿ6 ಮತ್ತು ಬಿ6(ಒ) ಎಂಬ ರೂಪಾಂತರಗಳಲ್ಲಿ ಲಭ್ಯವಿದೆ. ಈ ಬೊಲೆರೊದಲ್ಲಿ 1.5 ಎಲ್ 3-ಸಿಲಿಂಡರ್ ಎಮ್ಹಾಕ್ 75 ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 75 ಬಿ‍‍ಹೆಚ್‍‍ಪಿ ಪವರ್ ಮತ್ತು 195 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 5 ಸ್ಪೀಡ್ ಮಾನ್ಯುವಲ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಆಗಸ್ಟ್ ತಿಂಗಳ 7-ಸೀಟರ್ ಕಾರು ಮಾರಾಟದಲ್ಲಿ ಪಾರುಪತ್ಯ ಸಾಧಿಸಿದ Maruti Eeco

ಮಹೀಂದ್ರಾ ಸ್ಕಾರ್ಪಿಯೋ

ಆಗಸ್ಟ್ ತಿಂಗಳಿನಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಮಾದರಿಯ 2,606 ಯುನಿಟ್‌ಗಳು ಮಾರಾಟವಾಗಿವೆ. ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ 3,327 ಯುನಿಟ್‌ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.41 ರಷ್ಟು ಇಳಿಕೆಯಾಗಿದೆ.

Most Read Articles

Kannada
English summary
Top 7 seater car sales august 2021 maruti eeco innova triber and more details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X