ವಾರದ ಸುದ್ದಿ: ಆಟೋ ಉದ್ಯಮಕ್ಕೆ ಸೆಮಿಕಂಡಕ್ಟರ್ ಕೊರತೆ, ಮಾರುತಿ ಸುಜುಕಿ ರಿಕಾಲ್, ರಸ್ತೆಗಿಳಿದ ಐ20 ಎನ್ ಲೈನ್..

ಆರ್ಥಿಕ ಸಂಕಷ್ಟದಲ್ಲೂ ಆಟೋ ಉದ್ಯಮವು ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ವಾಹನಗಳ ಬಿಡುಗಡೆ ಪ್ರಕ್ರಿಯೆ ಹೆಚ್ಚುತ್ತಿದ್ದಂತೆ ಬಿಡಿಭಾಗಗಳ ಕೊರತೆ ಆಟೋ ಉದ್ಯಮಕ್ಕೆ ಹೊಡೆತ ನೀಡುತ್ತಿದೆ. ಸೆಮಿಕಂಡಕ್ಟರ್ ಕೊರತೆಯು ಈ ವಾರದ ಸುದ್ದಿಗಳಲ್ಲಿ ಪ್ರಮುಖವಾಗಿದ್ದು, ಇದರ ಜೊತೆ ವಾಹನಗಳ ಹಾರ್ನ್ ಶಬ್ದವನ್ನು ಬದಲಿಸುವ ಕೇಂದ್ರದ ನಿರ್ಧಾರ, ಮಾರುತಿ ಸುಜುಕಿ ರಿಕಾಲ್ ಪ್ರಕ್ರಿಯೆ ಕೂಡಾ ಪ್ರಮುಖವಾಗಿದೆ.

ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಸೆಮಿಕಂಡಕ್ಟರ್ ಕೊರತೆಯಿಂದ ವಾಹನ ಉತ್ಪಾದನೆಯಲ್ಲಿ ಕುಸಿತ

ಕೋವಿಡ್ ಭೀತಿ ನಡುವೆಯೂ ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲೇ ಎಲೆಕ್ಟ್ರಾನಿಕ್ ಬಿಡಿಭಾಗಗಳ ಕೊರತೆ ಆಟೋ ಉದ್ಯಮಕ್ಕೆ ಭಾರೀ ಹೊಡೆತ ನೀಡಿದೆ. ಸೆಮಿಕಂಡಕ್ಟರ್ ಕೊರತೆಯು ಹೊಸ ವಾಹನಗಳ ಉತ್ಪಾದನೆಗೆ ಹೊಡೆತ ನೀಡಿದ್ದು, ದೇಶದ ಅಗ್ರಗಣ್ಯ ಕಾರು ಉತ್ಪದನಾ ಕಂಪನಿಯಾಗಿರುವ ಮಾರುತಿ ಸುಜುಕಿ ಉತ್ಪಾದನೆಯು ಶೇ.60 ರಷ್ಟು ಕುಸಿತ ಕಂಡಿದೆ.

ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಸೆಮಿಕಂಡಕ್ಟರ್ ಕೊರೆತೆಯಿಂದಾಗಿಯೇ ಒಂದು ವಾರಗಳ ಕಾಲ ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದ ಮಹೀಂದ್ರಾ ಕಂಪನಿಯು ಸಹ ಇದೀಗ ಮತ್ತೆ ಕಾರು ಉತ್ಪಾದನೆ ಸ್ಥಗಿತಗೊಳಿಸಲು ಮುಂದಾಗಿದೆ. ಎಲೆಕ್ಟ್ರಾನಿಕ್ ಚಿಪ್ ಇಲ್ಲದೆ ಕಾರಿನ ಪ್ರಮುಖ ಎಲೆಕ್ಟ್ರಾನಿಕ್ ಸಾಧನಗಳನ್ನು ಜೋಡಿಸಲು ಸಾಧ್ಯವಿಲ್ಲ. ಕಾರಿನಲ್ಲಿರುವ ಡಿಸ್ ಪ್ಲೇ, ಸ್ಪೀಕರ್, ಸ್ಟ್ಯಾಬಿಲಿಟಿ ಕಂಟ್ರೋಲ್, ಲೈಟಿಂಗ್, ಕಾರ್ ಕನೆಕ್ಟ್ ಫೀಚರ್ಸ್ ಸೇರಿ ಪ್ರಮುಖ ತಾಂತ್ರಿಕ ಸಾಧನಗಳು ಕಾರ್ಯನಿರ್ವಹಿಸಲು ಸೆಮಿ ಕಂಡಕ್ಟರ್ ಅವಶ್ಯವಾಗಿವೆ.

ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಆದರೆ ಕೋವಿಡ್ ಪರಿಣಾಮ ಬಿಡಿಭಾಗಗಳ ಪೂರೈಕೆಯ ಸರಪಳಿಯಲ್ಲಿ ಆಗಿರುವ ಸಮಸ್ಯೆಯೇ ಎಲೆಕ್ಟ್ರಾನಿಕ್ ಚಿಪ್ ಕೊರತೆಗೆ ಪ್ರಮುಖ ಕಾರಣವಾಗಿದ್ದು, ಆಟೋ ಉತ್ಪಾದನಾ ಕಂಪನಿಗಳಿಗೆ ಪೂರೈಕೆಯಾಗಬೇಕಿದ್ದ ಹೆಚ್ಚಿನ ಪ್ರಮಾಣದ ಎಲೆಕ್ಟ್ರಾನಿಕ್ ಚಿಪ್ ಸ್ಟಾಕ್ ಇದೀಗ ಲ್ಯಾಪ್‌ಟಾಪ್‌, ಮೊಬೈಲ್‌ಗಳು ಹಾಗೂ ಇತರ ಎಲೆಕ್ಟ್ರಾನಿಕ್ ಸಾಧನ ಉತ್ಪಾದನೆಗೆ ಹೆಚ್ಚಿನ ಮಟ್ಟದಲ್ಲಿ ಪೂರೈಕೆಯಾಗುತ್ತಿರುವುದು ಆಟೋ ಕಂಪನಿಗಳಿಗೆ ಹೊಡೆತ ನೀಡುತ್ತಿದೆ.

ಪ್ರಮುಖ ಆಟೋಮೊಬೈಲ್ ಸುದ್ದಿಗಳು

ವಾಹನಗಳ ಕರ್ಕಶ ಶಬ್ದ ತಡೆಯಲು ಕೇಂದ್ರದಿಂದ ಹೊಸ ಪ್ಲ್ಯಾನ್

ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿರವರು ಪ್ರಸ್ತುತ ಸಂಚಾರದಲ್ಲಿರುವ ಕಾರುಗಳಲ್ಲಿನ ಹಾರ್ನ್ ಕರ್ಕಶವಾದ ಶಬ್ದದ ಬಗೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಚಿವ ನಿತಿನ್ ಗಡ್ಕರಿ ತಮ್ಮ ಇಲಾಖೆಯು ಕಾರ್ ಹಾರ್ನ್ ಶಬ್ದವನ್ನು ಬದಲಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ಹೇಳಿದ್ದಾರೆ.

ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಕರ್ಕಶವಾದ ಶಬ್ದದ ಬದಲಾಗಿ ಸಂಗೀತ ವಾದ್ಯಗಳಂತೆ ಶಬ್ದ ಬರುವ ಹಾರ್ನ್ ಗಳನ್ನು ಬಳಸುವಂತೆ ಸೂಚಿಸುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ. ಕಾರಿನ ಹಾರ್ನ್ ಗಳ ಶಬ್ದವು ಭಾರತೀಯ ಸಂಗೀತ ವಾದ್ಯಗಳ ಧ್ವನಿಯಂತೆ ಇರಬೇಕು ಎಂದು ನಾವು ಯೋಚಿಸುತ್ತಿದ್ದೇವೆ ಎಂದು ಸಚಿವರು ಹೊಸ ಬದಲಾವಣೆ ಸುಳಿವು ನೀಡಿದ್ದಾರೆ.

ಪ್ರಮುಖ ಆಟೋಮೊಬೈಲ್ ಸುದ್ದಿಗಳು

1.81 ಲಕ್ಷ ಕಾರುಗಳನ್ನು ಹಿಂಪಡೆಯಲಿದೆ Maruti Suzuki

ಮಾರುತಿ ಸುಜುಕಿ ಕಂಪನಿಯು ಬಿಎಸ್-6 ಜಾರಿ ನಂತರವೇ ಸುಮಾರು 1 ಮಿಲಿಯನ್‌ಗೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ್ದು, ಕಳೆದ ಕೆಲ ದಿನಗಳ ಹಿಂದೆ ಉತ್ಪಾದನೆಗೊಂಡಿರುವ ಪ್ರಮುಖ ಕಾರುಗಳ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಪತ್ತೆಯಾಗಿದೆ. ಗ್ರಾಹಕರ ದೂರಗಳ ನಂತರ ಹೊಸ ಕಾರುಗಳ ಎಂಜಿನ್ ತಾಂತ್ರಿಕ ದೋಷವನ್ನು ಪತ್ತೆಹಚ್ಚಿರುವ ಕಂಪನಿಯು ಸುಮಾರು 1.80 ಲಕ್ಷ ಕಾರುಗಳನ್ನು ಹಿಂಪಡೆಯಲು ನಿರ್ಧರಿಸಿದೆ.

ಪ್ರಮುಖ ಆಟೋಮೊಬೈಲ್ ಸುದ್ದಿಗಳು

1.5-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಸಿಯಾಜ್, ವಿಟಾರಾ ಬ್ರೆಝಾ, ಎರ್ಟಿಗಾ, ಎಕ್ಸ್ಎಲ್6 ಮತ್ತು ಎಸ್-ಕ್ರಾಸ್ ಕಾರು ಮಾದರಿಗಳಲ್ಲಿ ತಾಂತ್ರಿಕ ದೋಷ ಪತ್ತೆಯಾಗಿದ್ದು, ಮೇ 4, 2018ರಿಂದ ಅಕ್ಟೋಬರ್ 27, 2020ರ ನಡುವೆ ತಯಾರಿಸಿದ ಪೆಟ್ರೋಲ್ ಮಾದರಿಗಳ ಎಂಜಿನ್ ಜನರೇಟರ್‌ನಲ್ಲಿ ಸಮಸ್ಯೆ ಕಂಡುಬಂದಿದೆ.

ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೆ ಅನುಮತಿ ಪಡೆದುಕೊಂಡ Tesla

ಅಮೆರಿಕದ ಜನಪ್ರಿಯ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿಯಾಗಿರುವ ಟೆಸ್ಲಾ(Tesla) ಇದೇ ವರ್ಷಾಂತ್ಯಕ್ಕೆ ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಮಾರಾಟ ಮಾಡುವ ಯೋಜನೆಯಲ್ಲಿದ್ದು, ಹೊಸ ಕಾರುಗಳ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಕೇಂದ್ರ ಸಾರಿಗೆ ಇಲಾಖೆಯಿಂದ ಪಡೆದುಕೊಂಡಿರುವ ಅನುಮತಿ ಪತ್ರದಲ್ಲಿ ಪ್ರಮುಖ ನಾಲ್ಕು ವೆರಿಯೆಂಟ್‌ಗಳನ್ನು ಬಿಡುಗಡೆ ಮಾಡುವ ಸುಳಿವು ನೀಡಿರುವ ಟೆಸ್ಲಾ ಕಂಪನಿಯು ಆರಂಭಿಕವಾಗಿ ಮಾಡೆಲ್ 3 ಮಾದರಿಯನ್ನು ರಸ್ತೆಗಿಳಿಸುವ ಸಾಧ್ಯತೆಗಳಿವೆ. ವಾಣಿಜ್ಯ ನಗರಿ ಮುಂಬೈನಲ್ಲಿ ತನ್ನ ಕೇಂದ್ರ ಕಚೇರಿ ತೆರೆಯಲು ಉದ್ದೇಶಿಸಿರುವ ಟೆಸ್ಲಾ(Tesla) ಕಂಪನಿಯು ಮಾಡೆಲ್ 3(Model 3) ಮತ್ತು ಮಾಡೆಲ್ ವೈ(Model Y) ಕಾರು ಮಾದರಿಗಳ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಎರಡು ಕಾರು ಮಾದರಿಗಳಿಂದ ತಲಾ ಎರಡು ವೆರಿಯೆಂಟ್ ಬಿಡುಗಡೆ ಮಾಡುವ ನೀರಿಕ್ಷೆಯಿದೆ.

ಪ್ರಮುಖ ಆಟೋಮೊಬೈಲ್ ಸುದ್ದಿಗಳು

Hyundai i20 N Line ಆವೃತ್ತಿ ಬಿಡುಗಡೆ

ಹ್ಯುಂಡೈ ಇಂಡಿಯಾ(Hyundai India) ಕಂಪನಿಯು i20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾದರಿಯಲ್ಲಿ ಪರ್ಫಾಮೆನ್ಸ್ ಪ್ರಿಯರಿಗಾಗಿ ಎಲ್ ಲೈನ್(N Line) ವರ್ಷನ್ ಬಿಡುಗಡೆ ಮಾಡಿದ್ದು, ಹೊಸ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 9.84 ಲಕ್ಷ ಬೆಲೆ ಹೊಂದಿದೆ.

ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಹೊಸ i20 N Line ಕಾರು ಮಾದರಿಯು ಗ್ರಾಹಕರು ತಮ್ಮ ಬೇಡಿಕೆಗೆ ಪ್ರಮುಖ ಮೂರು ವೆರಿಯೆಂಟ್‌‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಗೇರ್‌ಬಾಕ್ಸ್ ಆಯ್ಕೆಯನ್ನು ಆಧರಿಸಿ N6 iMT, N8 iMT ಮತ್ತು N8 DCT ಆವೃತ್ತಿಗಳನ್ನು ಹೊಂದಿದೆ. ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 9.84 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 11.75 ಲಕ್ಷ ಬೆಲೆ ಹೊಂದಿದೆ.

ಪ್ರಮುಖ ಆಟೋಮೊಬೈಲ್ ಸುದ್ದಿಗಳು

Kia Seltos X Line ವೆರಿಯೆಂಟ್ ಬಿಡುಗಡೆ

ಕೊರಿಯಾ ಮೂಲದ ಜನಪ್ರಿಯ ವಾಹನ ತಯಾರಕ ಕಂಪನಿಯಾದ ಕಿಯಾ(Kia) ತನ್ನ ಹೊಸ ಹೊಸ ಸೆಲ್ಟೊಸ್ ಎಕ್ಸ್ ಲೈನ್(Seltos X Line) ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಕಾರು ಎಕ್ಸ್ ಶೋರೂಂ ಪ್ರಕಾರ ರೂ.17.79 ಲಕ್ಷಗಳಾಗಿದ್ದು, ಹೊಸ ಟಾಪ್-ಆಫ್-ಲೈನ್ X Line ರೂಪಾಂತರವು ಕಾಸ್ಮೆಟಿಕ್ ವಿನ್ಯಾಸ ಮತ್ತು ಆಂತರಿಕ ಬದಲಾವಣೆಗಳೊಂದಿಗೆ ಬರುತ್ತದೆ.

ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಬಾನೆಟ್ ಅಡಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ. ಈ ಹೊಸ Kia Seltos X Line ವೆರಿಯೆಂಟ್ ನಲ್ಲಿ ಸೆಗ್ಮೆಂಟ್-ಅತಿದೊಡ್ಡ 18-ಇಂಚಿನ ಕ್ರಿಸ್ಟಲ್-ಕಟ್ ಮ್ಯಾಟ್ ಗ್ರ್ಯಾಫೈಟ್ ಅಲಾಯ್ ವ್ಹೀಲ್‍ಗಳನ್ನು ಅಳವಡಿಸಲಾಗಿದೆ.ಇದು ಹೊಸ ಇಂಡಿಗೋ ಪೆರಾ ಲೆಥೆರೆಟ್ ಅಪ್‌ಹೋಲ್ಸ್ಟರಿಯನ್ನು ಪಡೆಯುತ್ತದೆ. ಈ X Line ಸ್ಪೋರ್ಟಿ ಲುಕ್ ಅನ್ನು ಹೊಂದಿದೆ.

ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಪ್ರತಿ ಚಾರ್ಜ್‌ಗೆ 306 ಕಿ.ಮೀ ಮೈಲೇಜ್ ನೀಡುವ 2021ರ Tigor EV ಬಿಡುಗಡೆ

ಜಿಪ್‌ಟ್ರಾನ್ ತಂತ್ರಜ್ಞಾನ ಹೊಂದಿರುವ 2021ರ ಹೊಸ Tigor EV ಮಾದರಿಯು XE, XM, XZ+ ಮತ್ತು XZ+ ಡ್ಯುಯಲ್ ಟೋನ್ ವೆರಿಯೆಂಟ್ ಒಳಗೊಂಡಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.99 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು 12.99 ಲಕ್ಷ ಬೆಲೆ ಹೊಂದಿದೆ.

ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಹೊಸ ತಂತ್ರಜ್ಞಾನ ಪ್ರೇರಿತ 55kW ಎಲೆಕ್ಟ್ರಿಕ್ ಮೋಟಾರ್‌ ಮತ್ತು 26kWh ಲೀಥಿಯಂ ಅಯಾನ್ ಬ್ಯಾಟರಿ ಜೋಡಣೆಯು ಕಾರಿನ ಕಾರ್ಯಕ್ಷಮತೆ ಹೆಚ್ಚಳದೊಂದಿಗೆ ಮೈಲೇಜ್‌ನಲ್ಲೂ ಸಾಕಷ್ಟು ಸುಧಾರಣೆಗೊಂಡಿದ್ದು, ಹೊಸ ಕಾರು ಪ್ರತಿ ಚಾರ್ಜ್‌ಗೆ ಗರಿಷ್ಠ 306 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಪ್ರಮುಖ ಆಟೋಮೊಬೈಲ್ ಸುದ್ದಿಗಳು

2021ರ Renault Kwid ಹ್ಯಾಚ್‌ಬ್ಯಾಕ್ ಬಿಡುಗಡೆ

ರೆನಾಲ್ಟ್ ಇಂಡಿಯಾ(Renault India) ಕಂಪನಿಯು ತನ್ನ ನವೀಕೃತ ಕ್ವಿಡ್(Kwid) ಹ್ಯಾಚ್‌ಬ್ಯಾಕ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕ್ವಿಡ್ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 4.06 ಲಕ್ಷ ಬೆಲೆ ಹೊಂದಿದೆ.

ಪ್ರಮುಖ ಆಟೋಮೊಬೈಲ್ ಸುದ್ದಿಗಳು

2021ರ ಕ್ವಿಡ್ ಮಾದರಿಯು ಪ್ರಮುಖ ನಾಲ್ಕು ವೆರಿಯೆಂಟ್‌ಗಳನ್ನು ಹೊಂದಿದ್ದು, ಗ್ರಾಹಕರ ಬೇಡಿಕೆಯೆಂತೆ 0.8-ಲೀಟರ್ ಮತ್ತು 1.0-ಲೀಟರ್ ಮಾದರಿಗಳನ್ನು ಒಳಗೊಂಡಿದೆ. ಹೊಸ ಕಾರಿನ ಬೆಲೆ ಆಧರಿಸಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 4.06 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 5.51 ಲಕ್ಷ ಬೆಲೆ ಹೊಂದಿದೆ.

ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಹೊಸ ವೆರಿಯೆಂಟ್ ಪಡೆದುಕೊಂಡ Hyundai Alcazar

ಹ್ಯುಂಡೈ(Hyundai) ಕಂಪನಿಯು ಕಳೆದ ಜೂನ್‌ನಲ್ಲಿ ತನ್ನ ಬಹುನೀರಿಕ್ಷಿತ ಅಲ್ಕಾಜರ್(Alcazar) ಎಸ್‌ಯುವಿ ಮಾದರಿಯನ್ನು ಬಿಡುಗಡೆಗೊಳಿಸುವ ಮೂಲಕ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಂಪನಿಯು ಹೊಸ ಕಾರಿನಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ವೆರಿಯೆಂಟ್ ಒಂದನ್ನು ಪರಿಚಯಿಸಿದೆ.

ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಹೊಸ ಅಲ್ಕಾಜರ್(Alcazar) ಕಾರು ಮಾದರಿಯು ಪ್ರತಿಸ್ಪರ್ಧಿ ಮಾದರಿಗಳಿಗೆ ಪೈಪೋಟಿ ಹಲವಾರು ಹೊಸ ತಾಂತ್ರಿಕ ಸೌಲಭ್ಯ, ಅತ್ಯುತ್ತಮ ಎಂಜಿನ್ ಆಯ್ಕೆ ಮತ್ತು ಆಕರ್ಷಕ ಬೆಲೆಯೊಂದಿಗೆ ಮಾರಾಟ ಮಾರಾಟವಾಗುತ್ತಿದ್ದು, ಹೊಸ ಕಾರಿ ಪ್ಲ್ಯಾಟಿನಂ ಆವೃತ್ತಿಯಲ್ಲಿ ಡೀಸೆಲ್ ಎಂಜಿನ್ ಆಯ್ಕೆ ಹೊಂದಿರುವ 7 ಸೀಟರ್ ಸೌಲಭ್ಯದ ಪ್ಲ್ಯಾಟಿನಂ(ಆಪ್ಷನ್) ಮಾದರಿಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 19.63 ಲಕ್ಷಕ್ಕೆ ಬಿಡುಗಡೆ ಮಾಡಲಾಗಿದೆ.

Most Read Articles

Kannada
English summary
Top auto news of the week.
Story first published: Sunday, September 5, 2021, 0:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X