ವಾರದ ಸುದ್ದಿ: BH ಸೀರಿಸ್ ಪರಿಚಯಿಸಿದ ಸಾರಿಗೆ ಇಲಾಖೆ, Maruti Suzuki ಕಂಪನಿಗೆ ರೂ. 200 ಕೋಟಿ ದಂಡ!

ಆರ್ಥಿಕ ಮುಗ್ಗಟ್ಟಿನ ನಡುವೆಯೂ ಹೊಸ ವಾಹನಗಳ ಮಾರಾಟವು ಸಾಕಷ್ಟು ಸುಧಾರಣೆ ಕಂಡಿದ್ದು, ಪ್ರಮುಖ ಕಾರು ಕಂಪನಿಗಳು ವಿವಿಧ ಹೊಸ ವಾಹನಗಳನ್ನು ಬಿಡುಗಡೆ ಮಾಡಿವೆ. ಇನ್ನು ಕೆಲವು ವಾಹನಗಳು ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲು ಸಿದ್ದವಾಗುತ್ತಿವೆ.

ವಾರದ ಪ್ರಮುಖ ಸುದ್ದಿಗಳು

ಈ ವಾರದ ಪ್ರಮುಖ ಸುದ್ದಿಯಲ್ಲಿ ಕೇಂದ್ರ ಸಾರಿಗೆ ಇಲಾಖೆಯು ಅಂತಾರಾಜ್ಯ ವಾಹನಗಳ ವರ್ಗಾವಣೆಯನ್ನು ಸರಳಗೊಳಿಸಲು ಮಹತ್ವದ ಕ್ರಮ ಪ್ರಕಟಿಸಿದ್ದು, ವಾರದ ಪ್ರಮುಖ ಸುದ್ದಿಗಳಲ್ಲಿ ಹೊಸ ಕಾರುಗಳ ಮೇಲಿನ ಜಿಎಸ್‌ಟಿ ತಗ್ಗಿಸಲು ಕೇಂದ್ರ ಸರ್ಕಾರವು ಮುಂದಾಗಿರುವುದು ಕೂಡಾ ಪ್ರಮುಖವಾಗಿದೆ. ಹಾಗಾದ್ರೆ ಈ ವಾರದ ಪ್ರಮುಖ ಸುದ್ದಿಗಳ ಹೈಲೆಟ್ಸ್ ಇಲ್ಲಿ ತಿಳಿಯೋಣ.

ವಾರದ ಪ್ರಮುಖ ಸುದ್ದಿಗಳು

ವಾಹನಗಳ ಮೇಲಿನ ಜಿ‌ಎಸ್‌ಟಿ ದರ ಕಡಿತಕ್ಕೆ ಸಿದ್ದವೆಂದ ಕೇಂದ್ರ ಸರ್ಕಾರ

ಭಾರತದಲ್ಲಿ ಮಾರಾಟವಾಗುವ ಕಾರು ಹಾಗೂ ದ್ವಿಚಕ್ರ ವಾಹನಗಳ ಮೇಲಿನ ಜಿ‌ಎಸ್‌ಟಿ ತೆರಿಗೆಯನ್ನು ಕಡಿಮೆ ಮಾಡುವಂತೆ ಹಲವು ಬಾರಿ ವಾಹನ ತಯಾರಕ ಕಂಪನಿಗಳು ಮನವಿ ಮಾಡಿದ್ದವು. ಈ ಮನವಿಗೆ ಸ್ಪಂದಿಸಿರುವ ಕೇಂದ್ರ ಸರ್ಕಾರವು ಕಾರು ಹಾಗೂ ದ್ವಿಚಕ್ರ ವಾಹನಗಳ ಜಿಎಸ್‌ಟಿ ದರಗಳನ್ನು ಕಡಿಮೆ ಮಾಡಲು ಮಾತುಕತೆಗೆ ಸಿದ್ಧವಿರುವುದಾಗಿ ತಿಳಿಸಿದೆ.

ವಾರದ ಪ್ರಮುಖ ಸುದ್ದಿಗಳು

ಕಳೆದ ಬುಧವಾರ ನಡೆದ ಕಾನ್ಫರೆನ್ಸ್ ಸಭೆಯಲ್ಲಿ ಭಾಗವಹಿಸಿದ್ದ ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ರವರು ಭಾರತೀಯ ಆಟೋ ಮೊಬೈಲ್ ಉದ್ಯಮದೊಂದಿಗೆ ಈ ವಿಷಯದ ಬಗ್ಗೆ ಮತ್ತಷ್ಟು ಚರ್ಚಿಸಲು ಸಿದ್ಧವಿರುವುದಾಗಿ ತಿಳಿಸಿದರು. ಕಾರು, ದ್ವಿಚಕ್ರ ವಾಹನ ಹಾಗೂ ಟ್ರಕ್‌ಗಳಂತಹ ವಾಹನಗಳ ಮೇಲೆ ಸದ್ಯಕ್ಕೆ 28% ನಷ್ಟು ಜಿಎಸ್‌ಟಿ ತೆರಿಗೆಯನ್ನು ವಿಧಿಸಲಾಗುತ್ತಿದೆ.

ವಾರದ ಪ್ರಮುಖ ಸುದ್ದಿಗಳು

ಅಂತಾರಾಜ್ಯ ವಾಹನಗಳ ವರ್ಗಾವಣೆಗೆ ಕೇಂದ್ರದಿಂದ ಹೊಸ ಕ್ರಮ

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ದೇಶಾದ್ಯಂತ ಚಾಲ್ತಿಯಲ್ಲಿ ವಾಹನ ನೋಂದಣಿಯಲ್ಲಿ ಮಹತ್ವದ ಬದಲಾವಣೆಯೊಂದನ್ನು ಪರಿಚಯಿಸಿದ್ದು, ಹೊಸ ಯೋಜನೆ ಅಡಿ ಅಂತಾರಾಜ್ಯ ವಾಹನಗಳ ವರ್ಗಾವಣೆಯನ್ನು ಮತ್ತಷ್ಟು ಸರಳಗೊಳಿಸಲು ಹೊಸ ಕ್ರಮ ಪ್ರಕಟಿಸಿದೆ.

ವಾರದ ಪ್ರಮುಖ ಸುದ್ದಿಗಳು

ರಸ್ತೆ ಸಾರಿಗೆ ಇಲಾಖೆ ಜಾರಿಗೆ ತರಲು ಉದ್ದೇಶಿಸಿರುವ ಹೊಸ ಭಾರತ್ ಸೀರಿಸ್(BH Series) ವಾಹನ ನೋಂದಣಿ ವ್ಯವಸ್ಥೆಯು ಅಂತಾರಾಜ್ಯಗಳಿಗೆ ಸ್ಥಳಾಂತರಗೊಳ್ಳುವ ಸಂದರ್ಭದಲ್ಲಿ ವಾಹನದ ನೋಂದಣಿಯನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವರ್ಗಾಯಿಸುವುದನ್ನು ಸುಲಭಗೊಳಿಸಲು ವಾಹನ ಮಾಲೀಕರಿಗೆ ಸಹಕಾರಿಯಾಗಲಿದೆ.

ವಾರದ ಪ್ರಮುಖ ಸುದ್ದಿಗಳು

Maruti Suzuki ಕಂಪನಿಗೆ ರೂ. 200 ಕೋಟಿ ದಂಡ!

ದೇಶದ ಅಗ್ರಗಣ್ಯ ಕಾರು ಉತ್ಪಾದಕ ಮತ್ತು ಮಾರಾಟ ಕಂಪನಿಯಾಗಿರುವ Maruti Suzuki India Limited(MSIL) ಕಂಪನಿಯು ನ್ಯಾಯಸಮ್ಮತವಲ್ಲದ ವ್ಯಾಪಾರ ನೀತಿಯಿಂದಾಗಿ ಭಾರೀ ಪ್ರಮಾಣದ ದಂಡತೆತ್ತ ಬೇಕಾದ ಪರಿಸ್ಥಿತಿ ಎದುರಾಗಿದೆ.

ವಾರದ ಪ್ರಮುಖ ಸುದ್ದಿಗಳು

ದೇಶಾದ್ಯಂತ ಪ್ರತಿನಗರದಲ್ಲೂ ತನ್ನ ಮಾರಾಟ ಜಾಲ ಹೊಂದಿರುವ Maruti Suzuki ಕಂಪನಿಗೆ ಮಾರಾಟ ಪಾಲುದಾರರೊಂದಿಗೆ ಮಾಡಿಕೊಂಡಿರುವ ನ್ಯಾಯಸಮ್ಮತವಲ್ಲದ ವ್ಯಾಪಾರ ನೀತಿಯು ಕಂಟಕವಾಗಿ ಪರಿಣಮಿಸಿದ್ದು, Maruti Suzuki ಕಂಪನಿಯ ವರ್ತನೆಗೆ ಕಿಡಿಕಾರಿರುವ CCI(ಭಾರತೀಯ ಸ್ಪರ್ಧಾ ಆಯೋಗ)ವು ಬರೋಬ್ಬರಿ ರೂ. 200 ಕೋಟಿ ದಂಡವಿಧಿಸಿದೆ.

ವಾರದ ಪ್ರಮುಖ ಸುದ್ದಿಗಳು

ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ ಸುತ್ತಿದ Suzuki Swift

ಲ್ಯಾಟಿನ್ NCAP ಇತ್ತೀಚೆಗೆ Suzuki Swift ಕಾರನ್ನು ಕ್ರ್ಯಾಶ್-ಟೆಸ್ಟ್ ನಡೆಸಿದೆ. ಇದು ಸುರಕ್ಷತಾ ವಾಚ್‌ಡಾಗ್‌ನಿಂದ ಶೂನ್ಯ-ಸ್ಟಾರ್ ರೇಟಿಂಗ್ ಪಡೆದಿದೆ. Suzuki ಮೋಟಾರ್ ಗುಜರಾತ್ ಉತ್ಪಾದನಾ ಘಟಕದಲ್ಲಿ ಲ್ಯಾಟಿನ್ NCAP ಪರೀಕ್ಷಿಸಿದ ಕಾರು ಮೇಡ್-ಇನ್-ಇಂಡಿಯಾ ಎಂಬುದು ಇಲ್ಲಿ ಗಮನಿಸಬೇಕಾದ ವಿಚಾರ.

ವಾರದ ಪ್ರಮುಖ ಸುದ್ದಿಗಳು

Suzuki Swift ಕಾರು ವಯಸ್ಕ ಪ್ರಯಾಣಿಕರ ರಕ್ಷಣೆಗಾಗಿ ಈ ಕಾರು ಶೇಕಡಾ 15.53 ರಷ್ಟು ರೇಟಿಂಗ್ ಪಡೆಯಿತು, ಆದರೆ ಮಕ್ಕಳ ರಕ್ಷಣೆಯಲ್ಲಿ ಇದು ಶೇಕಡಾ ಶೂನ್ಯ ಆಗಿತ್ತು. ಕಾರು ಆಶ್ಚರ್ಯಕರವಾಗಿ ಪಾದಚಾರಿ ರಕ್ಷಣೆ ಮತ್ತು ದುರ್ಬಲ ಟ್ರ್ಯಾಕ್ ಬಳಕೆದಾರರಿಗೆ ಶೇಕಡಾ 66 ರಷ್ಟು ಅಂಕಗಳನ್ನು ಗಳಿಸಿದೆ, ಭದ್ರತಾ ಸಹಾಯ ವ್ಯವಸ್ಥೆಗಳಿಗೆ ಸಂಬಂಧಿಸಿದಂತೆ ರೇಟಿಂಗ್ ಮತ್ತೆ 7 ಪ್ರತಿಶತಕ್ಕೆ ಇಳಿದಿದೆ.

ವಾರದ ಪ್ರಮುಖ ಸುದ್ದಿಗಳು

Tata Punch ಅನಾವರಣ

Tata Motors ಕಂಪನಿಯು ತನ್ನ ಬಹುನೀರಿಕ್ಷಿತ ಮೈಕ್ರೊ ಎಸ್‌ಯುವಿ ಮಾದರಿಯನ್ನು Punch ಹೆಸರಿನೊಂದಿಗೆ ಅನಾವರಣಗೊಳಿಸಿದ್ದು, ಹೊಸ ಕಾರು ಎಂಟ್ರಿ ಲೆವಲ್ ಕಾರು ಮಾದರಿಯಲ್ಲೇ ಹಲವಾರು ಹೊಸ ಸುಧಾರಿತ ತಂತ್ರಜ್ಞಾನ ಪ್ರೇರಣೆ ಪಡೆದುಕೊಂಡಿದೆ.

ವಾರದ ಪ್ರಮುಖ ಸುದ್ದಿಗಳು

Altroz ಕಾರು ಉತ್ಪಾದನೆಗಾಗಿ ಬಳಕೆ ಮಾಡಲಾಗುತ್ತಿರುವ ALFA-ARC ಕಾರು ಉತ್ಪಾದನಾ ಪ್ಲ್ಯಾಟ್‌ಫಾರ್ಮ್‌ನಲ್ಲಿಯೇ ಹೊಸ ಕಾರು ಉತ್ಪಾದನೆಗೊಳ್ಳಲಿದ್ದು, ಹೊಸ ಕಾರಿನಲ್ಲಿ 1.2-ಲೀಟರ್ ನ್ಯಾಚುರಲ್ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಜೊತೆಗೆ ಪರ್ಫಾಮೆನ್ಸ್ ಪ್ರಿಯರಿಗಾಗಿ 1.0-ಲೀಟರ್ ಟರ್ಬೋ ಪೆಟ್ರೋಲ್ ಆವೃತ್ತಿಯನ್ನು ಪರಿಚಯಿಸುವ ಸಾಧ್ಯತೆಗಳಿವೆ.

ವಾರದ ಪ್ರಮುಖ ಸುದ್ದಿಗಳು

Kia Seltos X Line ಅನಾವರಣ

Kia India ಅಧಿಕೃತವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಹೊಸ Seltos X Line ವೆರಿಯೆಂಟ್ ಅನ್ನು ಅನಾವರಣಗೊಳಿಸಿದೆ. ಇದು Seltos ಎಸ್‍ಯುವಿಯ ಲೈನ್‌ಅಪ್‌ನಲ್ಲಿ ಹೊಸ ಟಾಪ್-ಆಫ್-ಲೈನ್ ವೆರಿಯೆಂಟ್ ಆಗಿದೆ.

ವಾರದ ಪ್ರಮುಖ ಸುದ್ದಿಗಳು

ಹೊಸ Kia Seltos X Line ವೆರಿಯೆಂಟ್ ಕೆಲವು ಬಾಹ್ಯ ವಿನ್ಯಾಸ ಬದಲಾವಣೆಗಳನ್ನು ಮತ್ತು ಕ್ಯಾಬಿನ್ ಒಳಗೆ ಕನಿಷ್ಠ ಬದಲಾವಣೆಗಳನ್ನು ಹೊಂದಿದೆ.ಬಾನೆಟ್ ಅಡಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ. ಈ ಹೊಸ Kia Seltos X Line ವೆರಿಯೆಂಟ್ ನಲ್ಲಿ ಸೆಗ್ಮೆಂಟ್-ಅತಿದೊಡ್ಡ 18-ಇಂಚಿನ ಕ್ರಿಸ್ಟಲ್-ಕಟ್ ಮ್ಯಾಟ್ ಗ್ರ್ಯಾಫೈಟ್ ಅಲಾಯ್ ವ್ಹೀಲ್‍ಗಳನ್ನು ಅಳವಡಿಸಲಾಗಿದೆ. ಇದು ಹೊಸ ಇಂಡಿಗೋ ಪೆರಾ ಲೆಥೆರೆಟ್ ಅಪ್‌ಹೋಲ್ಸ್ಟರಿಯನ್ನು ಪಡೆಯುತ್ತದೆ. ಈ X Line ಸ್ಪೋರ್ಟಿ ಲುಕ್ ಅನ್ನು ಹೊಂದಿದೆ.

ವಾರದ ಪ್ರಮುಖ ಸುದ್ದಿಗಳು

Tata Harrier ಕಾರಿನಲ್ಲಿ ಹೊಸ ಬಣ್ಣದ ಆಯ್ಕೆ ಬಿಡುಗಡೆ

Tata Motors ಕಂಪನಿಯು ಕಳೆದ ಒಂದು ವರ್ಷದ ಅವಧಿಯಲ್ಲಿ Harrier ಎಸ್‌ಯುವಿ ಕಾರು ಮಾದರಿಯಲ್ಲಿ ಬಿಎಸ್-6 ಎಂಜಿನ್ ಸೇರಿದಂತೆ ಹಲವಾರು ಬದಲಾವಣೆಗಳನ್ನು ಪರಿಚಯಿಸಿದ್ದು, ಇದೀಗ ಹೊಸ ಕಾರಿನಲ್ಲಿ ಡೇಟೋನಾ ಗ್ರೆ ಬಣ್ಣದ ಆಯ್ಕೆಯನ್ನು ಪರಿಚಯಿಸಿದೆ.

ವಾರದ ಪ್ರಮುಖ ಸುದ್ದಿಗಳು

ಡೇಟೋನಾ ಬಣ್ಣದ ಆಯ್ಕೆಯನ್ನು ಮೊದಲ ಬಾರಿಗೆ Safari ಮಾದರಿಗಾಗಿ ಬಿಡುಗಡೆ ಮಾಡಿದ್ದ Tata Motors ಕಂಪನಿಯು ಇದೀಗ Harrier ಮಾದರಿಯಲ್ಲೂ ಪರಿಚಯಿಸಿದ್ದು, ಹೊಸ ಬಣ್ಣದ ಆಯ್ಕೆಯನ್ನು ಪ್ರತಿ ವೆರಿಯೆಂಟ್‌ನಲ್ಲೂ ಖರೀದಿ ಮಾಡಬಹುದಾಗಿದೆ. Harrier ಕಾರು ಮಾದರಿಯಲ್ಲಿ ಡೇಟೋನಾ ಜೊತೆ ಇನ್ನು ಐದು ಹೊಸ ಬಣ್ಣದ ಆಯ್ಕೆಗಳನ್ನು ನೀಡಲಾಗುತ್ತಿದ್ದು, ಹೊಸ ಬಣ್ಣದ ಆಯ್ಕೆಗಾಗಿ ಕಂಪನಿಯು ಯಾವುದೇ ದರ ಏರಿಕೆ ಮಾಡಿಲ್ಲ.

ವಾರದ ಪ್ರಮುಖ ಸುದ್ದಿಗಳು

ಬಿಡುಗಡೆಯಾಗಲಿದೆ ಪವರ್‌ಫುಲ್ Tata Nexon EV

Tata Motors ಕಂಪನಿಯ Nexon Ev ಮೂಲಕ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಹೊಸ ಕಾರಿನಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕಂಪನಿಯು ಶೀಘ್ರದಲ್ಲೇ ಉನ್ನತೀಕರಿಸಿದ ಮಾದರಿಯನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.

ವಾರದ ಪ್ರಮುಖ ಸುದ್ದಿಗಳು

Nexon EV ಕಾರಿನ ಎಲೆಕ್ಟ್ರಿಕ್ ಮೋಟಾರ್ ಉನ್ನತೀಕರಿಸುವ ಮೂಲಕ ಕಾರಿನ ಪರ್ಫಾಮೆನ್ಸ್ ಹೆಚ್ಚಿಸಲಾಗುತ್ತಿದ್ದು, ಉನ್ನತೀಕರಿಸಿದ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ ಮಾದರಿಗಿಂತಲೂ 7 ಬಿಎಚ್‌ಪಿ ಹೆಚ್ಚುವರಿ ಶಕ್ತಿ ಪೂರೈಕೆಯೊಂದಿಗೆ ಕಾರಿನ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಕಾರಿಯಾಗಲಿದೆ.

Most Read Articles

Kannada
English summary
Top News Of The Week.
Story first published: Sunday, August 29, 2021, 10:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X