ವಾರದ ಸುದ್ದಿ: ಹೆಚ್ಚಿದ ಹೊಸ ವಾಹನಗಳ ಅಬ್ಬರ, ಕೇಂದ್ರದ ಹೊಸ ರೂಲ್ಸ್‌ನಿಂದ ದುಬಾರಿಯಾದ ಹಳೆಯ ವಾಹನಗಳ ನಿರ್ವಹಣೆ..

ಆರ್ಥಿಕ ಸಂಕಷ್ಟದಲ್ಲೂ ಆಟೋ ಉದ್ಯಮವು ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ವಾಹನಗಳ ಬಿಡುಗಡೆ ಪ್ರಕ್ರಿಯೆಯು ಕೂಡಾ ಸಾಕಷ್ಟು ಹೆಚ್ಚಳಗೊಂಡಿದೆ. ಜೊತೆಗೆ ಹೊಸ ಕಾರು ಬೇಡಿಕೆ ಹೆಚ್ಚುತ್ತಿರುವುಗಾಲೇ ಬೆಲೆ ಏರಿಕೆ ಪಡೆದುಕೊಳ್ಳುತ್ತಿರುವುದು ಕೂಡಾ ಗ್ರಾಹಕರ ಹೊರೆಯಾಗಲಿದೆ. ಈ ವಾರದ ಸುದ್ದಿಗಳಲ್ಲಿ ಹೊಸ ವಾಹನಗಳ ಬಿಡುಗಡೆಯ ಜೊತೆಗೆ ಕೇಂದ್ರ ಸರ್ಕಾರ ಹೊಸ ನಿಯಮವು ಸಾಕಷ್ಟು ಚರ್ಚೆಯಾಗುತ್ತಿದ್ದು, ಹಳೆಯ ವಾಹನಗಳ ನೋಂದಣಿ ನವೀಕರಣ ಶುಲ್ಕ ಹೆಚ್ಚಳ ಸುದ್ದಿಯ ಜೊತೆಗೆ ಇನ್ನುಳಿದ ವಾರದ ಪ್ರಮುಖ ಸುದ್ದಿಗಳನ್ನು ಕೆಳಗಿನ ಸ್ಲೈಡ್‌ಗಳಲ್ಲಿ ಒಂದೊಂದಾಗಿ ನೋಡೋಣ.

ವಾರದ ಪ್ರಮುಖ ಸುದ್ದಿ

ಹಳೆಯ ವಾಹನಗಳ ನೋಂದಣಿ ನವೀಕರಣ ಶುಲ್ಕ ಹೆಚ್ಚಳ

ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿರುವ ಹಳೆಯ ವಾಹನಗಳ ಬಳಕೆ ತಗ್ಗಿಸಲು ಮುಂದಾಗಿರುವ ಕೇಂದ್ರ ಸರ್ಕಾರವು ಹಳೆಯ ವಾಹನಗಳ ನೋಂದಣಿ ನವೀಕರಣ ಪ್ರಕ್ರಿಯೆ ನಿಯಮವನ್ನು ಮುಂದಿನ 2022ರ ಏಪ್ರಿಲ್ ತಿಂಗಳಿನಲ್ಲಿ ಜಾರಿಗೆ ತರುವುದಾಗಿ ಘೋಷಣೆ ಮಾಡಿದೆ. ಹೊಸ ನಿಯಮದ ಪ್ರಕಾರ 15 ವರ್ಷಗಳಿಂತಲೂ ಹೆಚ್ಚು ಹಳೆಯ ವಾಹನಗಳು ನೋಂದಣಿ ನವೀಕರಣಕ್ಕಾಗಿ ಸದ್ಯ ಚಾಲ್ತಿಯಲ್ಲಿರುವ ಮರು ನೋಂದಣಿ ಶುಲ್ಕಕ್ಕಿಂತಲೂ ಎಂಟು ಪಟ್ಟು ಹೆಚ್ಚು ಶುಲ್ಕ ಪಾವತಿಸಬೇಕಾಗುತ್ತದೆ.

ವಾರದ ಪ್ರಮುಖ ಸುದ್ದಿ

ಹೊಸ ನಿಯಮದ ಪ್ರಕಾರ ನಿಗದಿತ ಅವಧಿ ಮೀರಿದ ಹಳೆಯ ಕಾರುಗಳ ನೋಂದಣಿ ನವೀಕರಣಕ್ಕೆ 2022ರ ಏಪ್ರಿಲ್‌ನಿಂದ ರೂ. 5 ಸಾವಿರ ಪಾವತಿಸಬೇಕಿದ್ದು, ಇದು ಪ್ರಸ್ತುತ ರೂ. 600 ರೂಪಾಯಿ ಶುಲ್ಕ ಹೊಂದಿದೆ. ನೋಂದಣಿ ನವೀಕರಣ ಪ್ರಕ್ರಿಯೆಯಲ್ಲಿ ವಾಣಿಜ್ಯ ಬಳಕೆಯ ವಾಹನಗಳಿಗೆ ಸದ್ಯ ರೂ. 1,500 ಶುಲ್ಕ ವಿಧಿಸುತ್ತಿರುವ ಕೇಂದ್ರ ಸರ್ಕಾರವು ಮುಂದಿನ ವರ್ಷದಿಂದ ರೂ. 12,500ಕ್ಕೆ ಹೆಚ್ಚಿಸಲು ನಿರ್ಧರಿದ್ದು, ನೋಂದಣಿ ನವೀಕರಣವು ವಿಳಂಬವಾದಲ್ಲಿ ಶುಲ್ಕದ ಮೊತ್ತವು ಮತ್ತಷ್ಟು ಹೆಚ್ಚಳವಾಗುತ್ತದೆ.

ವಾರದ ಪ್ರಮುಖ ಸುದ್ದಿ

ಫೋರ್ಡ್ ಉತ್ಪಾದನಾ ಘಟಕವನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾದ ಟಾಟಾ

ಭಾರತದಿಂದ ನಿರ್ಗಮಿಸಲು ಮುಂದಾಗಿರುವ ಫೋರ್ಡ್ ಇಂಡಿಯಾ ಕಂಪನಿಯು ತಮಿಳುನಾಡಿನ ಚೆನ್ನೈ ಹೊರವಲಯದಲ್ಲಿ ಒಂದು ಮತ್ತು ಗುಜರಾತ್‌ನ ಸನಂದಾದಲ್ಲಿ ಒಂದು ಕಾರು ಉತ್ಪಾದನಾ ಘಟಕಗಳನ್ನು ಹೊಂದಿದ್ದು, ಎರಡು ಘಕಟಗಳಲ್ಲೂ ಈಗಾಗಲೇ ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಿ ಕಾರು ಘಟಕವನ್ನು ದೇಶಿಯ ಕಾರು ಉತ್ಪಾದನಾ ಘಟಕಗಳಿಗೆ ತನ್ನ ಎರಡು ಕಾರು ಘಟಕಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ.

ವಾರದ ಪ್ರಮುಖ ಸುದ್ದಿ

ಚೆನ್ನೈನಲ್ಲಿರುವ ಫೋರ್ಡ್ ಕಂಪನಿಯ ಉತ್ಪಾದನಾ ಘಟಕವನ್ನು ಟಾಟಾ ಮೋಟಾರ್ಸ್ ಕಂಪನಿಯು ಖರೀದಿಸುತ್ತಿದೆ ಎನ್ನುವ ವರದಿಗಳು ಲಭ್ಯವಾಗಿದ್ದು, ಇದಕ್ಕೆ ಪೂರಕವಾಗಿ ಹೊಸ ಕೈಗಾರಿಕಾ ನೀತಿ ಅಡಿಯಲ್ಲಿ ಫೋರ್ಡ್ ಉತ್ಪಾದನಾ ಘಟಕ ಖರೀದಿ ಬಗೆಗೆ ಟಾಟಾ ಕಂಪನಿಯ ಹಿರಿಯ ಅಧಿಕಾರಗಳ ತಂಡವು ತಮಿಳುನಾಡು ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದಾರೆ. ಶೀಘ್ರದಲ್ಲೇ ಫೋರ್ಡ್ ಕಾರು ಘಟಕ ಖರೀದಿಸುವ ಬಗೆಗೆ ಅಂತಿಮ ನಿರ್ಧಾರ ಪ್ರಕಟವಾಗಲಿದೆ.

ವಾರದ ಪ್ರಮುಖ ಸುದ್ದಿ

ಟಾಟಾ ಪಂಚ್ ಮೈಕ್ರೊ ಎಸ್‌ಯುವಿ ಅನಾವರಣ

ಹೊಸ ಪಂಚ್ ಕಾರಿನ ಉತ್ಪಾದನಾ ಮಾದರಿಯನ್ನು ಅನಾವರಣಗೊಳಿಸುವ ಮೂಲಕ ತಾಂತ್ರಿಕ ಅಂಶಗಳ ಮಾಹಿತಿ ಹಂಚಿಕೊಂಡ ಟಾಟಾ ಮೋಟಾರ್ಸ್ ಕಂಪನಿಯು ರೂ. 21 ಸಾವಿರ ಮುಂಗಡದೊಂದಿಗೆ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಹೊಸ ಕಾರು ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಹೆಚ್ಚು ಪ್ರೀಮಿಯಂ ಫೀಚರ್ಸ್ ಮತ್ತು ಆಫ್ ರೋಡ್ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ದಿಗೊಂಡಿದೆ.

ವಾರದ ಪ್ರಮುಖ ಸುದ್ದಿ

ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ ಪ್ಯೂರ್, ಅಡ್ವೆಂಚರ್, ಅಕಾಂಪ್ಲಿಶೆಡ್ ಮತ್ತು ಕ್ರಿಯೆಟಿವ್ ಎನ್ನುವ ನಾಲ್ಕು ವೆರಿಯೆಂಟ್‌ಗಳೊಂದಿಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದು, ಹೊಸ ಕಾರು 1.2 ಪೆಟ್ರೋಲ್ ಎಂಜಿನ್‌ನಲ್ಲಿ ಮಾತ್ರವೇ ಖರೀದಿಗೆ ಲಭ್ಯವಿರಲಿದೆ.

ವಾರದ ಪ್ರಮುಖ ಸುದ್ದಿ

ಬುಕ್ಕಿಂಗ್‌ನಲ್ಲಿ ಮಹೀಂದ್ರಾ ಎಕ್ಸ್‌ಯುವಿ700 ಹೊಸ ದಾಖಲೆ

ಹೊಚ್ಚ ಹೊಸ ಮಹೀಂದ್ರಾ ಎಕ್ಸ್‌ಯುವಿ700 ಎಸ್‌ಯುವಿ ಮಾದರಿಯು ಭಾರತೀಯ ಆಟೋ ಉದ್ಯಮದಲ್ಲಿ ಹೊಸ ದಾಖಲೆಗೆ ಕಾರಣವಾಗಿದ್ದು, ಹೊಸ ಕಾರಿನ ಬುಕ್ಕಿಂಗ್ ಪ್ರಕ್ರಿಯೆ ಆರಂಭವಾದ ಕೇವಲ 2 ದಿನಗಳಲ್ಲಿ 50 ಸಾವಿರ ಯುನಿಟ್‌ಗಳಿಗೆ ಬುಕ್ಕಿಂಗ್ ಪಡೆದುಕೊಂಡಿದೆ. ಉತ್ಪಾದನಾ ಸಾಮರ್ಥ್ಯದ ಮೇಲೆ ಕಾರು ವಿತರಣೆ ಮಾಡಬೇಕಿರುವುದರಿಂದ ಹೊಸ ಕಾರಿನ ಬೆಲೆಯಲ್ಲಿ ಕೆಲವು ಬದಲಾವಣೆ ಪ್ರಕಟಿಸಿದೆ.

ವಾರದ ಪ್ರಮುಖ ಸುದ್ದಿ

ಮಹೀಂದ್ರಾ ಕಂಪನಿಯು ಮೊದಲ 25 ಸಾವಿರ ಗ್ರಾಹಕರಿಗೆ ಅನ್ವಯವಾಗುವಂತೆ ಒಂದು ದರ ಮತ್ತು ತದನಂತರ ಬುಕ್ಕಿಂಗ್ ದಾಖಲಿಸಿದ 25 ಸಾವಿರ ಗ್ರಾಹಕರಿಗೆ ದರ ಹೆಚ್ಚಿಸಿದ ಹೊಸ ದರ ಪಟ್ಟಿ ಬಿಡುಗಡೆ ಮಾಡಿದೆ. ಹೊಸ ಕಾರಿನ ಮೊದಲ 25 ಸಾವಿರ ಯುನಿಟ್ ಖರೀದಿಸುವ ಗ್ರಾಹಕರಿಗೆ ಕಂಪನಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.99 ಲಕ್ಷಕ್ಕೆ ಮತ್ತು ಹೆಚ್ಚಿನ ಮಟ್ಟದ ಫೀಚರ್ಸ್ ಹೊಂದಿರುವ ಟಾಪ್ ಎಂಡ್ ಮಾದರಿಯು ರೂ. 22.89 ಲಕ್ಷಕ್ಕೆ ವಿತರಣೆಯಾಗಲಿದೆ.

ವಾರದ ಪ್ರಮುಖ ಸುದ್ದಿ

ಟೊಯೊಟಾ ಫಾರ್ಚೂನರ್ ಲೆಜೆಂಡರ್ 4X4 ವೆರಿಯೆಂಟ್ ಬಿಡುಗಡೆ

ಜನಪ್ರಿಯ ವಾಹನ ತಯಾರಕ ಕಂಪನಿಯಾದ ಟೊಯೊಟಾ ತನ್ನ ಫಾರ್ಚುನರ್ ಲೆಜೆಂಡರ್ 4X4 ವೆರಿಯೆಂಟ್ ಕೊನೆಗೂ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಟೊಯೊಟಾ ಫಾರ್ಚುನರ್ ಲೆಜೆಂಡರ್ 4X4 ವೆರಿಯೆಂಟ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.42.33 ಲಕ್ಷಗಳಾಗಿದೆ.

ವಾರದ ಪ್ರಮುಖ ಸುದ್ದಿ

ಈ ಹೊಸ ಟೊಯೊಟಾ ಫಾರ್ಚುನರ್ ಲೆಜೆಂಡರ್ 4X4 ವೆರಿಯೆಂಟ್ ಮಾದರಿಯನ್ನು ಖರೀದಿಸಲು ಬಯಸುವ ಗ್ರಾಹಕರು ಆನ್‌ಲೈನ್‌ನಲ್ಲಿ ಅಥವಾ ಹತ್ತಿರದ ಅಧಿಕೃತ ಟೊಯೊಟಾ ಡೀಲರ್‌ಶಿಪ್‌ಗೆ ತೆರಳಿ ಬುಕ್ಕಿಂಗ್ ಮಾಡಿಕೊಳ್ಳಬಹುದು. 2021ರ ಆರಂಭದಲ್ಲಿ ಬಿಡುಗಡೆಗೊಂಡ ಟೊಯೊಟಾ ಫಾರ್ಚುನರ್ ಲೆಜೆಂಡರ್ 4X2 ವೆರಿಯಂಟ್ 2,700ಕ್ಕೂ ಹೆಚ್ಚು ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ ಎಂದು ಕಂಪನಿಯು ಬಹಿರಂಗಪಡಿಸಿದೆ. ಈ ಹೊಸ ಟೊಯೊಟಾ ಫಾರ್ಚುನರ್ ಲೆಜೆಂಡರ್ 4X4 ವೆರಿಯೆಂಟ್ ಡ್ಯುಯಲ್ ಟೋನ್ ಪರ್ಲ್ ವೈಟ್ ಜೊತೆಗೆ ಬ್ಲಾಕ್ ರೂಫ್ ಕಲರ್ ಸ್ಕೀಮ್ ನಲ್ಲಿ ನೀಡಲಾಗುತ್ತಿದೆ.

ವಾರದ ಪ್ರಮುಖ ಸುದ್ದಿ

2021ರ ಎಸ್ ಕ್ಲಾಸ್ ಬಿಡುಗಡೆ

ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ಇಂಡಿಯಾ ತನ್ನ ಹೊಸ ಮೇಡ್ ಇನ್ ಇಂಡಿಯಾ 2021ರ ಎಸ್‌ ಕ್ಲಾಸ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಕಂಪನಿಯು ಈ ಐಷಾರಾಮಿ ಸೆಡಾನ್ ಕಾರ್ ಅನ್ನು S Class 350 D ಹಾಗೂ S Class S 450 ಎಂಬ ಎರಡು ಮಾದರಿಗಳಲ್ಲಿ ಬಿಡುಗಡೆಗೊಳಿಸಿದೆ.

ವಾರದ ಪ್ರಮುಖ ಸುದ್ದಿ

S Class 350 D ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 1.57 ಕೋಟಿಗಳಾದರೆ, Mercedes Benz S Class S 450 ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 1.62 ಕೋಟಿಗಳಾಗಿದೆ.

ವಾರದ ಪ್ರಮುಖ ಸುದ್ದಿ

ಸ್ಕೋಡಾ ರ‍್ಯಾಪಿಡ್ ಮ್ಯಾಟೆ ಎಡಿಷನ್ ಬಿಡುಗಡೆ

ಸ್ಕೋಡಾ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಸೆಡಾನ್ ಕಾರು ಮಾದರಿಯಾದ ರ‍್ಯಾಪಿಡ್ ಮಾದರಿಯಲ್ಲಿ ರ‍್ಯಾಪಿಡ್ ಮ್ಯಾಟೆ ಎಡಿಷನ್(Rapid Matte Edition) ಬಿಡುಗಡೆ ಮಾಡಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 11.99 ಲಕ್ಷ ಬೆಲೆ ಹೊಂದಿದೆ.

ವಾರದ ಪ್ರಮುಖ ಸುದ್ದಿ

ರ‍್ಯಾಪಿಡ್ ಮ್ಯಾಟೆ ಎಡಿಷನ್ ಮಾದರಿಯನ್ನು ಮೊದಲ ಬಾರಿಗೆ 2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿದ್ದ ಸ್ಕೋಡಾ ಇಂಡಿಯಾ ಕಂಪನಿಯು ಇದೀಗ ಹೊಸ ಕಾರನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದು, ಹೊಸ ಕಾರು ಸೀಮಿತ ಅವಧಿಗಾಗಿ ಮಾತ್ರ ಖರೀದಿಗೆ ಲಭ್ಯವಿರದೆ ಎನ್ನಲಾಗಿದೆ.

ವಾರದ ಪ್ರಮುಖ ಸುದ್ದಿ

F-Pace SVR ಪರ್ಫಾಮೆನ್ಸ್ ಎಸ್‍ಯುವಿ ವಿತರಣೆ

ಜಾಗ್ವಾರ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಎಫ್-ಪೇಸ್ ಎಸ್‌ವಿಆರ್ ಪರ್ಫಾಮೆನ್ಸ್ ಎಸ್‍ಯುವಿಯ ಬೆಲೆಯನ್ನು ಘೋಷಿಸಿದೆ. ಈ ಹೊಸ ಜಾಗ್ವಾರ್ ಎಫ್-ಪೇಸ್ ಎಸ್‌ವಿಆರ್(Jaguar F-Pace SVR) ಪರ್ಫಾಮೆನ್ಸ್ ಎಸ್‍ಯುವಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.51 ಕೋಟಿಯಾಗಿದೆ.

ವಾರದ ಪ್ರಮುಖ ಸುದ್ದಿ

ಇದರ ಜೊತೆಗೆ ಜಾಗ್ವಾರ್ ಕಂಪನಿಯು ಈ ಹೊಸ ಎಫ್-ಪೇಸ್ ಎಸ್‌ವಿಆರ್ ಪರ್ಫಾಮೆನ್ಸ್ ಎಸ್‍ಯುವಿಯ ದೇಶದಲ್ಲಿ ವಿತರಣೆಯನ್ನು ಪ್ರಾರಂಭಿಸಿರುವುದಾಗಿ ಘೋಷಿಸಿದೆ. ಭಾರತದಲ್ಲಿ ಇತ್ತೀಚೆಗೆ ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ ಅಧಿಕೃತವಾಗಿ ಹೊಸ ಎಫ್-ಪೇಸ್ ಎಸ್‌ವಿಆರ್ ಪರ್ಫಾಮೆನ್ಸ್ ಎಸ್‍ಯುವಿಯ ಖರೀದಿಗಾಗಿ ಬುಕ್ಕಿಂಗ್ ಸ್ವೀಕರಿಸಲು ಪ್ರಾರಂಭಿಸಿತ್ತು. ಜಾಗ್ವಾರ್ ಎಫ್-ಪೇಸ್ ಎಸ್‍ಯುವಿಯ ಪರ್ಫಾಮೆನ್ಸ್ ಎಸ್‍ಯುವಿಯು ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿರುವ ಮಾದರಿಯಾಗಿದೆ.

ವಾರದ ಪ್ರಮುಖ ಸುದ್ದಿ

2021ರ ES 300h ಬಿಡುಗಡೆಗೊಳಿಸಿದ Lexus

ಐಷಾರಾಮಿ ಕಾರು ತಯಾರಕ ಕಂಪನಿಯಾದ Lexus ಇಂಡಿಯಾ ಹೊಸ ಸೆಡಾನ್ ಕಾರಿನ ಬಿಡುಗಡೆಯೊಂದಿಗೆ ತನ್ನ ಭಾರತೀಯ ಪೋರ್ಟ್ ಫೋಲಿಯೋವನ್ನು ಅಪ್ ಡೇಟ್ ಮಾಡಿದೆ. ಕಂಪನಿಯು 2021 ES 300h ಸೆಡಾನ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಕಾರಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ. 56.65 ಲಕ್ಷಗಳಾಗಿದೆ.

ವಾರದ ಪ್ರಮುಖ ಸುದ್ದಿ

ಹೊಸ Lexus ES 300h ಕಾರಿನಲ್ಲಿ ಕೆಲವು ಸೂಕ್ಷ್ಮ ಬದಲಾವಣೆಗಳನ್ನು ಮಾಡಲಾಗಿದೆ. Lexus ಕಂಪನಿಯು ಈ ಕಾರಿನ ಕ್ಯಾಬಿನ್‌ನಲ್ಲಿ ಹೆಚ್ಚುವರಿ ಫೀಚರ್ ಗಳನ್ನು ಪರಿಚಯಿಸಿದೆ. ಆಶ್ಚರ್ಯಕರ ಸಂಗತಿಯೆಂದರೆ ಇಷ್ಟೆಲ್ಲಾ ಬದಲಾವಣೆಗಳ ನಂತರ 2021 Lexus ES 300h ಕಾರಿನ ಬೆಲೆಯನ್ನು ಕೇವಲ ರೂ. 10,000 ಗಳಷ್ಟು ಏರಿಕೆ ಮಾಡಲಾಗಿದೆ. ಕಂಪನಿಯು ಹೊಸ ES 300h ಕಾರ್ ಅನ್ನು ಎಕ್ಸ್ ಕ್ಲೂಸಿವ್ ಹಾಗೂ ಲಕ್ಷುರಿ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಿದೆ.

Most Read Articles

Kannada
English summary
Top auto news of the week old vehicles re registration fees hike mahindra xuv700 lexus es300h launch
Story first published: Sunday, October 10, 2021, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X