ವಾರದ ಸುದ್ದಿ: ಸೆಮಿಕಂಡಕ್ಟರ್ ಉತ್ಪಾದನೆಗೆ ಪಿ‌ಎಲ್‌ಐ, ಐಎಕ್ಸ್ ಇವಿ ಬಿಡುಗಡೆ, ಕಿಯಾ ಕಾರೆನ್ಸ್ ಅನಾವರಣ..

ಆರ್ಥಿಕ ಸಂಕಷ್ಟದಲ್ಲೂ ಆಟೋ ಉದ್ಯಮವು ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದರೂ ಕೂಡಾ ಸೆಮಿಕಂಡಕ್ಟರ್ ಕೊರತೆಯು ಉತ್ಪಾದನೆ ಮೇಲೆ ಪರಿಣಾಮ ಬೀರುತ್ತಿರುವುದು ಭಾರೀ ಹೊಡೆತ ನೀಡುತ್ತಿದೆ. ಈ ವಾರದ ಸುದ್ದಿಗಳಲ್ಲಿ ಸೆಮಿಕಂಡಕ್ಟರ್ ಕೊರತೆ ಪರಿಣಾಮ ಕಾರುಗಳ ಉತ್ಪಾದನೆ ತಗ್ಗಿರುವುದೇ ಪ್ರಮುಖವಾಗಿದ್ದು, ಸೆಮಿಕಂಡಕ್ಟರ್ ಕೊರತೆ ನಡುವೆಯೂ ಹೊಸ ವಾಹನ ಬಿಡುಗಡೆ ಪ್ರಕ್ರಿಯೆ ಮಂದವಾಗಿ ಸಾಗಿದ್ದು, ಇನ್ನುಳಿದ ವಾರದ ಪ್ರಮುಖ ಸುದ್ದಿಗಳನ್ನು ಕೆಳಗಿನ ಸ್ಲೈಡ್‌ಗಳಲ್ಲಿ ಒಂದೊಂದಾಗಿ ನೋಡೋಣ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಸೆಮಿಕಂಡಕ್ಟರ್ ಉತ್ಪಾದನೆಗಾಗಿ ಪಿ‌ಎಲ್‌ಐ

ಆಟೋ ಉದ್ಯಮವು ಕಾರ್ಯಾಚರಣೆಯನ್ನು ಪುನರಾರಂಭಿಸಿದ ನಂತರ ಮೈಕ್ರೋ ಚಿಪ್‌ಗಳಿಗೆ ಬೇಡಿಕೆ ಗಣನೀಯವಾಗಿ ಹೆಚ್ಚಳವಾಗಿದ್ದು, ಚಿಪ್ ತಯಾರಕ ಕಂಪನಿಗಳು ಬೇಡಿಕೆಗೆ ತಕ್ಕಷ್ಟು ಚಿಪ್ ಗಳನ್ನು ಪೂರೈಸಲು ಸಾಧ್ಯವಾಗದ ಕಾರಣ ಸಾಕಷ್ಟು ಸಮಸ್ಯೆ ಎದುರಾಗಿದೆ. ಹೀಗಾಗಿ ಚಿಪ್ ಬಿಕ್ಕಟ್ಟು ಆರಂಭವಾದ ನಂತರ ಸ್ಥಳೀಯವಾಗಿ ಚಿಪ್ ಉತ್ಪಾದನಾ ಘಟಕಗಳನ್ನು ತೆರೆಯುವ ಬಗ್ಗೆ ಚರ್ಚೆಗಳಾಗುತ್ತಿದ್ದು, ಇದೀಗ ಕೇಂದ್ರ ಸರ್ಕಾರವು ಪಿಎಲ್ಐ ಯೋಜನೆಯ ಮೂಲಕ ಚಿಪ್ ಸಮಸ್ಯೆ ಬಗೆಹರಿಯುವ ನಿರೀಕ್ಷೆಯಲ್ಲಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ದೇಶದಲ್ಲಿ ಸೆಮಿಕಂಡಕ್ಟರ್ ಹಾಗೂ ಡಿಸ್ ಪ್ಲೇ ಬೋರ್ಡ್ ಉತ್ಪಾದನೆಗಾಗಿ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್ಐ) ಯೋಜನೆಗೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದ್ದು, ಪಿಎಲ್ಐ ಯೋಜನೆಯಡಿಯಲ್ಲಿ ಮುಂದಿನ 5ರಿಂದ 6 ವರ್ಷಗಳಲ್ಲಿ ದೇಶದಲ್ಲಿ ಸೆಮಿಕಂಡಕ್ಟರ್ ತಯಾರಿಕೆಗಾಗಿ ರೂ.76,000 ಕೋಟಿ ಬಂಡವಾಳ ಹೂಡಿಕೆ ಮಾಡಲಾಗುತ್ತದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಬಿಎಂಡಬ್ಲ್ಯು ಐಎಕ್ಸ್ ಬಿಡುಗಡೆ

ಹೊಚ್ಚ ಹೊಸ ಬಿಎಂಡಬ್ಲ್ಯು ಐಎಕ್ಸ್(iX) ಎಲೆಕ್ಟ್ರಿಕ್ ಎಸ್‌ಯುವಿಯು ಭಾರತೀಯ ಗ್ರಾಹಕರ ಬೇಡಿಕೆ ಹಲವಾರು ಹೊಸ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಎಕ್ಸ್‌ಡ್ರೈವ್40 ಎನ್ನುವ ಒಂದೇ ವೆರಿಯೆಂಟ್‌ನಲ್ಲಿ ಖರೀದಿಗೆ ಲಭ್ಯವಿರುವ ಹೊಸ ಕಾರು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 1.16 ಕೋಟಿ ಬೆಲೆ ಹೊಂದಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಬಿಎಂಡಬ್ಲ್ಯು ಕಂಪನಿಯು ಐಎಕ್ಸ್ ಎಕ್ಸ್‌ಡ್ರೈವ್40 ಮಾದರಿಯಲ್ಲಿ ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಜೊತೆ ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಿದ್ದು, ಇದಕ್ಕಾಗಿ ಕಂಪನಿಯು ಹೊಸ ಕಾರಿನಲ್ಲಿ 76.6kWh ಬ್ಯಾಟರಿ ಪ್ಯಾಕ್ ನೀಡಲಾಗಿದೆ. ಎಕ್ಸ್‌ಡ್ರೈವ್40 ಮಾದರಿಯು 76.6kWh ಬ್ಯಾಟರಿ ಪ್ಯಾಕ್ ಮೂಲಕ ಗರಿಷ್ಠ 425 ಕಿ.ಮೀ ಮೈಲೇಜ್ ರೇಂಜ್ ಹೊಂದಿದ್ದು, ಐಎಕ್ಸ್ ನಂತರ ಕಂಪನಿಯು ಮತ್ತೆರಡು ಹೊಸ ಇವಿ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಕಿಯಾ ಕಾರೆನ್ಸ್ ಅನಾವರಣ

ಕಿಯಾ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ನಾಲ್ಕನೇ ಕಾರು ಮಾದರಿಯಾಗಿ ಕಾರೆನ್ಸ್ ಎಸ್‌ಯುವಿ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಿದ್ದು, ಅತ್ಯುತ್ತಮ ಎಂಜಿನ್ ಆಯ್ಕೆ, ಸೆಗ್ಮೆಂಟ್ ಫಸ್ಟ್ ಫೀಚರ್ಸ್‌ಗಳೊಂದಿಗೆ ಅನಾವರಣಗೊಂಡಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಹೊಸ ಕಾರು ಅತ್ಯುತ್ತಮ ಒಳಾಂಗಣ ಸೌಲಭ್ಯದೊಂದಿಗೆ 6 ಸೀಟರ್ ಮತ್ತು 7 ಸೀಟರ್ ಆಸನಗಳ ಆಯ್ಕೆ ಹೊಂದಿದ್ದು, ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ 1.5-ಲೀಟರ್ ಸಾಮಾನ್ಯ ಪೆಟ್ರೋಲ್, 1.4-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿರಲಿದೆ. ಹೊಸ ಕಾರು ಮುಂಬರುವ ಫೆಬ್ರುವರಿಯಲ್ಲಿ ಬಿಡುಗಡೆಯಾಗುವ ನೀರಿಕ್ಷೆಯಿದ್ದು, ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ರೂ.12 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 18 ಲಕ್ಷ ಬೆಲೆ ಹೊಂದಿರಬಹುದಾಗಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಡಿಫೆನ್ಸ್ ಕ್ಯಾಂಟಿನ್‌ಗಳಲ್ಲೂ ಪಂಚ್ ಮಾರಾಟ

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಜನಪ್ರಿಯ ಕಾರು ಮಾದರಿಯಾದ ಪಂಚ್ ಮೈಕ್ರೊ ಎಸ್‌ಯುವಿಯನ್ನು ಕ್ಯಾಂಟಿನ್ ಸ್ಟೋರ್ ಡಿರ್ಪಾಟ್ಮೆಂಟ್(ಸಿಎಸ್‌ಡಿ) ಮಳಿಗೆಗಳಲ್ಲೂ ಮಾರಾಟ ಆರಂಭಿಸಿದ್ದು, ವಿಶೇಷವಾಗಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮತ್ತು ನಿವೃತ್ತಿ ಹೊಂದಿರುವ ಸೇನಾಧಿಕಾರಿಗಳಿಗಾಗಿ ಮಾರಾಟಗೊಳ್ಳಲಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಕ್ಯಾಂಟಿನ್ ಸ್ಟೋರ್ ಡಿರ್ಪಾಟ್ಮೆಂಟ್(ಸಿಎಸ್‌ಡಿ) ಮಳಿಗೆಗಳಲ್ಲಿ ಖರೀದಿ ಲಭ್ಯವಿರುವ ಪಂಚ್ ಕಾರು ಸಾಮಾನ್ಯ ಡೀಲರ್ಸ್‌ಗಳಲ್ಲಿ ಖರೀದಿಗೆ ಲಭ್ಯವಿರುವ ಮಾದರಿಗಿಂತಲೂ ರೂ. 1 ಲಕ್ಷದಷ್ಟು ಕಡಿಮೆ ಬೆಲೆಗೆ ಮಾರಾಟಗೊಳ್ಳಲಿದೆ. ಸಿಎಸ್‌ಡಿ ಮಳಿಗೆಗಳಲ್ಲಿ ಖರೀದಿ ಲಭ್ಯವಿರುವ ಪಂಚ್ ಕಾರು ಮಾದರಿಯು ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4,86,631 ಮತ್ತು ಟಾಪ್ ಎಂಡ್ ಮಾದರಿಯು ರೂ. 8,05,733 ಬೆಲೆ ಹೊಂದಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಹೈಡ್ರೋಜನ್ ಫ್ಯೂಲ್ ಸೆಲ್ ಬಸ್ ಅಭಿವೃದ್ದಿ

ಪರ್ಯಾಯ ಇಂಧನ ವಾಹನಗಳ ಬಳಕೆಗಾಗಿ ವಿವಿಧ ಯೋಜನೆಗಳನ್ನು ಆರಂಭಿಸಲಾಗಿದ್ದು, ಎಲೆಕ್ಟ್ರಿಕ್ ವಾಹನಗಳು ಪೆಟ್ರೋಲ್, ಡೀಸೆಲ್ ವಾಹನಗಳಿಗೆ ಪರ್ಯಾಯ ಆಯ್ಕೆ ಎಂದು ಹೇಳಲಾಗಿದ್ದರೂ ಹೈಡ್ರೋಜನ್ ಇಂಧನ ವಾಹನಗಳ ಬಳಕೆಗೂ ಆದ್ಯತೆ ನೀಡಲಾಗುತ್ತಿದೆ. ಹೈಡ್ರೋಜನ್ ಇಂಧನದಿಂದ ವಿದ್ಯುತ್ ಉತ್ಪಾದಿಸುವ ಹಾಗೂ ಬ್ಯಾಟರಿಯಲ್ಲಿ ಸಂಗ್ರಹಿಸುವ ತಂತ್ರಜ್ಞಾನದಿಂದ ಈ ಬಸ್ ಚಾಲನೆಯಾಗಲಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಆರ್ ಅಂಡ್ ಡಿ ಸೆಂಟಿನೆಂಟ್ ಲ್ಯಾಬ್ಸ್ ಭಾರತದ ಮೊದಲ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಹೈಡ್ರೋಜನ್ ಫ್ಯೂಲ್ ಸೆಲ್ ಬಸ್ ಅನ್ನು ಪರಿಚಯಿಸಿದ್ದು, ಹೈಡ್ರೋಜನ್ ಫ್ಯೂಲ್ ಸೆಲ್ ತಂತ್ರಜ್ಞಾನವನ್ನು ದೇಶದ ಕೆಲವು ಸಂಸ್ಥೆಗಳು ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಈ ತಂತ್ರಜ್ಞಾನವನ್ನು CSIR (ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ), NCL (ರಾಷ್ಟ್ರೀಯ ರಾಸಾಯನಿಕ ಪ್ರಯೋಗಾಲಯ) ಮತ್ತು CSIR-CECRI (ಸೆಂಟ್ರಲ್ ಎಲೆಕ್ಟ್ರೋಕೆಮಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್) ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಪ್ಯಾರಾಲಿಂಪಿಕ್ಸ್ ವಿಜೇತೆಗೆ ಕಾರ್ ಗಿಫ್ಟ್

ಟೋಕಿಯೊ ಪ್ಯಾರಾಲಿಂಪಿಕ್ಸ್ 2020 ಕ್ರೀಡಾಕೂಟದಲ್ಲಿ ಟೇಬಲ್ ಟೆನ್ನಿಸ್‌ನಲ್ಲಿ ಬೆಳ್ಳಿ ಪದಕ ವಿಜೇತ ಭಾವಿನಾ ಪಟೇಲ್ ಅವರ ಅಸಾಧಾರಣ ಪ್ರದರ್ಶನಕ್ಕಾಗಿ ಎಂಜಿ ಮೋಟಾರ್ ಇಂಡಿಯಾ ತನ್ನ ಹೊಸ ಹೆಕ್ಟರ್ ಕಾರನ್ನು ಬಹುಮಾನವಾಗಿ ನೀಡಿ ಅಭಿನಂದಿಸಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಎಂಜಿ ಮೋಟಾರ್ ಇಂಡಿಯಾ ಕಂಪನಿಯು ಭರವಸೆ ನೀಡಿದಂತೆ ವಿಶೇಷವಾಗಿ ಕಸ್ಟಮೈಜ್ಡ್ ಮಾಡಲಾದ ಹೆಕ್ಟರ್ ಎಸ್‍ಯುವಿಯನ್ನು ಭಾವಿನಾ ಪಟೇಲ್‌ ಅವರಿಗೆ ಹಸ್ತಾಂತರಿಸಿದ್ದು, ಅದನ್ನು ವಿಶೇಷ ಚೇತನರ ಚಾಲನಾ ಅವಶ್ಯಕತೆಗಳಿಗೆ ಅನುಗುಣವಾಗಿ ಬದಲಾವಣೆಗೊಳಿಸಲಾಗಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

7 ಲಕ್ಷ ಯುನಿಟ್ ಮಾರಾಟ ಗುರಿಸಾಧಿಸಿದ ವಿಟಾರಾ ಬ್ರೆಝಾ

ಮಾರುತಿ ಸುಜುಕಿ ನಿರ್ಮಾಣದ ವಿಟಾರಾ ಬ್ರೆಝಾ ಎಸ್‍ಯುವಿಯು ಬಿಡುಗಡೆಯ ನಂತರ ಹಲವಾರು ಹೊಸ ದಾಖಲೆಗಳಿಗೆ ಕಾರಣವಾಗಿದ್ದು, ಹೆಚ್ಚು ಮಾರಾಟವಾಗುವ ಕಂಪ್ಯಾಕ್ಟ್ ಎಸ್‍ಯುವಿಗಳಲ್ಲಿ ಒಂದಾಗಿರುವ ವಿಟಾರಾ ಬ್ರೆಝಾ ಕಾರು ಇದುವರೆಗೆ ಭಾರತದಲ್ಲಿ 7 ಲಕ್ಷ ಯುನಿಟ್ ಮಾರಾಟಗೊಂಡಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

2016ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡಿದ್ದ ವಿಟಾರಾ ಬ್ರೆಝಾ ಮಾದರಿಯು ಬಿಡುಗಡೆಯ ದಿನದಿಂದ ಈ ತನಕವು ಕಂಪ್ಯಾಕ್ಟ್ ಎಸ್‌ಯುವಿ ಬೇಡಿಕೆಯಲ್ಲಿ ಅಗ್ರಸ್ಥಾನದಲ್ಲಿದ್ದು, ವಿಟಾರಾ ಬ್ರೆಝಾ ಕಾರು ಪ್ರತಿ ತಿಂಗಳು ಸರಾಸರಿ 10 ಸಾವಿರದಿಂದ 12 ಸಾವಿರ ಯುನಿಟ್ ಮಾರಾಟಗೊಳ್ಳುತ್ತಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಹೋಂಡಾ ಅಮೇಜ್ ಹೊಸ ಮೈಲಿಗಲ್ಲು

ಹೋಂಡಾ ಕಾರ್ಸ್ ಇಂಡಿಯಾ ತನ್ನ ಅಮೇಜ್ ಸಬ್ ಕಾಂಪ್ಯಾಕ್ಟ್ ಸೆಡಾನ್‌ ಎರಡನೇ ತಲೆಮಾರಿನ ಮಾದರಿಯ ಮೂಲಕ 2 ಲಕ್ಷ ಯುನಿಟ್ ಮಾರಾಟ ಮೈಲಿಗಲ್ಲು ಸಾಧಿಸಿದೆ. ಎರಡನೇ ತಲೆಮಾರಿನ ಅಮೇಜ್ ಅನ್ನು ಏಪ್ರಿಲ್ 2018 ರಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಮೂರು ವರ್ಷಗಳಲ್ಲಿ 2 ಲಕ್ಷ ಯುನಿಟ್ ಮಾರಾಟಗೊಂಡಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಅಮೇಜ್ ಭಾರತದಲ್ಲಿ ಹೋಂಡಾದ ಅತ್ಯಂತ ಯಶಸ್ವಿ ಕಾರು ಮಾದರಿಯಾಗಿದೆ ಮತ್ತು 2013ರ ಏಪ್ರಿಲ್ ತಿಂಗಳಿನಲ್ಲಿ ಮೊದಲ ಬಾರಿ ಬಿಡುಗಡೆಗೊಂಡ ಈ ಮಾದರಿಯು ಇದುವರೆಗೆ ಒಟ್ಟು 4.6 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡಿದೆ.

Most Read Articles

Kannada
English summary
Top auto news of the week pli scheme for chip production bmw ix launched kia carens unveiled more
Story first published: Sunday, December 19, 2021, 1:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X