ವಾರದ ಸುದ್ದಿ: ಸ್ಕ್ರ್ಯಾಪೇಜ್ ನೀತಿಗೆ ಉತ್ತೇಜನ, ಸೆಮಿಕಂಡಕ್ಟರ್ ಘಟಕ ತೆರೆಯಲಿದೆ ಟಾಟಾ, ಆಡಿ ಕ್ಯೂ5 ಬಿಡುಗಡೆ..

ಭಾರತೀಯ ಆಟೋ ಉದ್ಯಮಕ್ಕೆ ತೀವ್ರ ಹಿನ್ನಡೆ ಉಂಟುಮಾಡುತ್ತಿರುವ ಸೆಮಿಕಂಡಕ್ಟರ್ ಕೊರತೆಗೆ ಮುಕ್ತಿ ನೀಡಲು ಹಲವು ಸ್ವದೇಶಿ ಕಂಪನಿಗಳು ಸ್ಥಳೀಯ ಉತ್ಪಾದನೆಗಾಗಿ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದ್ದು, ಟಾಟಾ ಸಮೂಹ ಸಂಸ್ಥೆಯ ಹೊಸ ಸೆಮಿಕಂಡಕ್ಟರ್ ತೆರೆಯಲು ಸಿದ್ದತೆ ನಡೆಸಿರುವ ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಯಾಗಿದೆ. ಜೊತೆಗೆ ಈ ವಾರದ ಪ್ರಮುಖ ಸುದ್ದಿಗಳಲ್ಲಿ ಸ್ಕ್ರ್ಯಾಪೇಜ್ ನೀತಿ ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಪ್ರೋತ್ಸಾಹ ಯೋಜನೆಗಳು ಮತ್ತು ಹೊಸ ಆಡಿ ಕ್ಯೂ5 ಬಿಡುಗಡೆ ಸುದ್ದಿಗಳು ಪ್ರಮುಖವಾಗಿವೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಸೆಮಿಕಂಡಕ್ಟರ್ ಉತ್ಪಾದನಾ ಘಟಕ ತೆರೆಯಲಿದೆ ಟಾಟಾ ಗ್ರೂಪ್

ಟಾಟಾ ಗ್ರೂಪ್ ಭಾರತದಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಘಟಕವನ್ನು ತೆರೆಯಲು ಸ್ಥಾಪಿಸಲು ನಿರ್ಧರಿಸಿದೆ. ಇದಕ್ಕಾಗಿ ಕಂಪನಿಯು 300 ಮಿಲಿಯನ್ ಡಾಲರ್ ಅಂದರೆ ಸುಮಾರು ರೂ. 2,200 ಕೋಟಿ ಬಂಡವಾಳ ಹೂಡಿಕೆ ಮಾಡಲಿದೆ. ಈ ಉತ್ಪಾದನಾ ಘಟಕಗಾಗಿ ಟಾಟಾ ಗ್ರೂಪ್ ಕರ್ನಾಟಕ, ತಮಿಳುನಾಡು ಹಾಗೂ ತೆಲಂಗಾಣ ರಾಜ್ಯಗಳ ಸರ್ಕಾರಗಳೊಂದಿಗೆ ಮಾತುಕತೆ ನಡೆಸುತ್ತಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

2022ರ ಅಂತ್ಯದ ವೇಳೆಗೆ ಈ ಉತ್ಪಾದನಾ ಘಟಕವನ್ನು ಆರಂಭಿಸಬಹುದು ಎಂದು ಹೇಳಲಾಗಿದೆ. ಕೆಲವು ದಿನಗಳ ಹಿಂದೆ ಕಂಪನಿಯು ಸೆಮಿಕಂಡಕ್ಟರ್ ಉದ್ಯಮಕ್ಕೆ ಪ್ರವೇಶಿಸಲು ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿತ್ತು. ಆದರೆ ಇನ್ನೂ ದೃಢೀಕರಿಸಲ್ಪಟ್ಟಿರಲಿಲ್ಲ. ಆದರೆ ಈಗ ಇದಕ್ಕೆ ಸಂಬಂಧಿಸಿದ ಮಾಹಿತಿ ಹೊರ ಬಿದ್ದಿದೆ. ಟಾಟಾ ಗ್ರೂಪ್‌ನ ಹೈಟೆಕ್ ಉತ್ಪಾದನಾ ವಲಯಕ್ಕೆ ಇದು ಒಂದು ಪ್ರಮುಖ ಹೆಜ್ಜೆಯಾಗಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಸ್ಕ್ರ್ಯಾಪೇಜ್ ನೀತಿಗೆ ಮತ್ತಷ್ಟು ಉತ್ತೇಜನ

ಕೇಂದ್ರ ಸಚಿವ ನಿತಿನ್ ಗಡ್ಕರಿ ರವರು ಇತ್ತೀಚೆಗೆ ಜಾರಿಗೊಳಿಸಲಾದ ಸ್ಕ್ರ್ಯಾಪೇಜ್ ನೀತಿಯಡಿಯಲ್ಲಿ ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡಿದ ನಂತರ ಖರೀದಿಸುವ ವಾಹನಗಳಿಗೆ ಹೆಚ್ಚಿನ ತೆರಿಗೆ ರಿಯಾಯಿತಿ ನೀಡುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರವು ಪರಿಗಣಿಸುತ್ತಿದೆ ಎಂದು ಹೇಳಿದ್ದಾರೆ. ಇತ್ತೀಚೆಗೆ ನಡೆದ ಸರ್ಕಾರದಿಂದ ಅನುಮೋದಿತ ಮಾರುತಿ ಸುಜುಕಿ ಟೊಯೊಟ್ಸು ಸ್ಕ್ರ್ಯಾಪಿಂಗ್ ಹಾಗೂ ಮರುಬಳಕೆ ಸೌಲಭ್ಯದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದಾರೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಸ್ಕ್ರ್ಯಾಪೇಜ್ ನೀತಿಯು ಮಾಲಿನ್ಯವನ್ನು ಕಡಿಮೆ ಮಾಡಲು ನೆರವಾಗುತ್ತದೆ ಎಂದು ಹೇಳಿರುವ ಕೇಂದ್ರ ಸಚಿವರು ಹೊಸ ನೀತಿಯ ಅಡಿಯಲ್ಲಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡಿದ ನಂತರ ಖರೀದಿಸುವ ಹೊಸ ವಾಹನಗಳಿಗೆ ರಸ್ತೆ ತೆರಿಗೆಯಲ್ಲಿ 25% ನಷ್ಟು ತೆರಿಗೆ ವಿನಾಯಿತಿ ನೀಡುತ್ತಿವೆ. ರಾಷ್ಟ್ರೀಯ ಆಟೋಮೊಬೈಲ್ ಸ್ಕ್ರ್ಯಾಪೇಜ್ ನೀತಿಯಡಿ ನೀಡಬಹುದಾದ ಪ್ರೋತ್ಸಾಹ ಧನವನ್ನು ಹೆಚ್ಚಿಸುವಂತೆ ಜಿಎಸ್‌ಟಿ ಕೌನ್ಸಿಲ್‌ಗೆ ಮನವಿ ಮಾಡಿರುವುದಾಗಿ ಗಡ್ಕರಿ ಹೇಳಿದ್ದಾರೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಆಡಿ ಕ್ಯೂ5 ಫೇಸ್‌ಲಿಫ್ಟ್ ಎಸ್‍ಯುವಿ ಬಿಡುಗಡೆ

ಐಷಾರಾಮಿ ಕಾರು ತಯಾರಕ ಕಂಪನಿಯಾದ ಆಡಿ ಇಂಡಿಯಾ ತನ್ನ ಬಹುನಿರೀಕ್ಷಿತ ಕ್ಯೂ5 ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಆಡಿ ಕ್ಯೂ5 ಫೇಸ್‌ಲಿಫ್ಟ್ ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ. 58.93 ಲಕ್ಷಗಳಾಗಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಹೊಸ ಆಡಿ ಕ್ಯೂ5 ಫೇಸ್‌ಲಿಫ್ಟ್ ಎಸ್‍ಯುವಿಯ ಟಾಪ್-ಎಂಡ್ ರೂಪಾಂತರದ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ. 63.77 ಲಕ್ಷಗಳಾಗಿದೆ. ಈ ಹೊಸ ಆಡಿ ಕ್ಯೂ5 ಫೇಸ್‌ಲಿಫ್ಟ್ ಅನ್ನು ಭಾರತದಲ್ಲಿ ಸಂಪೂರ್ಣವಾಗಿ ನಾಕ್ಡ್ ಡೌನ್ ಯುನಿಟ್ ಆಗಿ ನೀಡಲಾಗುವುದು ಮತ್ತು ಔರಂಗಾಬಾದ್‌ನಲ್ಲಿರುವ ಅದರ ಮೂಲ ಕಂಪನಿಯಾದ ವಿಡಬ್ಲ್ಯು ಗ್ರೂಪ್‌ನ ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸ್ಥಾವರದಲ್ಲಿ ಸ್ಥಳೀಯವಾಗಿ ಜೋಡಿಸಲಾಗುತ್ತದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಮೂರು ಹೊಸ ಇವಿ ಕಾರುಗಳನ್ನು ಬಿಡುಗಡೆ ಮಾಡಲಿದೆ ಬಿಎಂಡಬ್ಲ್ಯು

ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಹೊಸ ಕಾರು ಮಾರಾಟವನ್ನು ತೀವ್ರಗೊಳಿಸುತ್ತಿದ್ದು, ಮರ್ಸಿಡಿಸ್ ಬೆಂಝ್ ಕಂಪನಿಗೆ ಪೈಪೋಟಿಯಾಗಿ ಮತ್ತಷ್ಟು ಹೊಸ ಕಾರುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಸಿದ್ದತೆಯಲ್ಲಿದೆ. ಮುಂದಿನ ಆರು ತಿಂಗಳ ಅವಧಿಯಲ್ಲಿ ಮೂರು ಹೊಸ ಕಾರುಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಬಿಎಂಡಬ್ಲ್ಯು ಕಂಪನಿಯು ಭಾರತದಲ್ಲಿ ಮೊದಲ ಹಂತವಾಗಿ ಐಎಕ್ಸ್ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದ್ದು, ಎರಡನೇ ಕಾರು ಮಾದರಿಯಾಗಿ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಮತ್ತು ಮೂರನೇ ಕಾರು ಮಾದರಿಯಾಗಿ ಐ4 ಎಲೆಕ್ಟ್ರಿಕ್ ಸೆಡಾನ್ ಮಾದರಿಯನ್ನು ಬಿಡುಗಡೆ ಮಾಡಲಿದೆ. ಹೊಸ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯು ಜರ್ಮನಿಯ ಡಿಂಗೋಲ್ಫಿಂಗ್ ಘಟಕದಲ್ಲಿ ನಿರ್ಮಾಣಗೊಂಡಿದ್ದು, ಹೊಸ ಇವಿ ಕಾರುಗಳನ್ನು ಬಿಎಂಡಬ್ಲ್ಯು ಕಂಪನಿಯು ಸದ್ಯ ಸಿಬಿಯು ಆಮದು ನೀತಿ ಅಡಿಯಲ್ಲಿಯೇ ಭಾರತಕ್ಕೆ ಆಮದು ಮಾಡಿಕೊಂಡು ಮಾರಾಟ ಮಾಡಲಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ನೆಕ್ಸಾನ್ ಖರೀದಿ ಇದೀಗ ಮತ್ತಷ್ಟು ದುಬಾರಿ

ಟಾಟಾ ಹೊಸ ಕಾರುಗಳ ದರಪಟ್ಟಿಯಲ್ಲಿ ನೆಕ್ಸಾನ್ ಕಂಪ್ಯಾಕ್ಟ್ ಎಸ್‌ಯುವಿ ಬೆಲೆಯಲ್ಲಿ ಶೇ. 0.50 ರಿಂದ ಶೇ. 1 ರಷ್ಟು ದುಬಾರಿಯಾಗಿದ್ದು, ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ರೂ.1 ಸಾವಿರದಿಂದ ರೂ. 11 ಸಾವಿರದಷ್ಟು ಹೆಚ್ಚುವರಿ ಬೆಲೆ ಹೊಂದಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಹೊಸ ದರ ಪಟ್ಟಿಯಲ್ಲಿ ನೆಕ್ಸಾನ್ ಕಾರು ಮಾದರಿಯು ಇದೀಗ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.30 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.13.34 ಲಕ್ಷ ಬೆಲೆ ಹೊಂದಿದ್ದು, ಕೆಲವು ವೆರಿಯೆಂಟ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಬಿಡುಗಡೆಯಾಗಲಿದೆ ಬಿಎಸ್ಎ ಹೊಸ ಮೋಟಾರ್‌ಸೈಕಲ್

ಭಾರತೀಯ ಮಾರುಕಟ್ಟೆಯಲ್ಲಿ ಹೊಸ ರೂಪದೊಂದಿಗೆ ಬಿಡುಗಡೆಯಾಗಿರುವ ಜಾವಾ ಕ್ಲಾಸಿಕ್ ಬೈಕ್‌ಗಳು ಗ್ರಾಹಕರ ಆಕರ್ಷಣೆಗೆ ಕಾರಣವಾಗಿದ್ದು, ಜಾವಾ ಬೈಕ್‌ಗಳನ್ನು ಹೊಸ ರೂಪದಲ್ಲಿ ಬಿಡುಗಡೆಗೊಳಿಸಿ ಯಶಸ್ವಿಯಾಗಿರುವ ಕ್ಲಾಸಿಕ್ ಲೆಜೆಂಡ್ ಕಂಪನಿಯು ಇದೀಗ ಯಜ್ಡಿ ಮತ್ತು ಬಿಎಸ್ಎ ಬೈಕ್‌ಗಳನ್ನು ಹೊಸ ರೂಪದಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಹೊಸ ಟ್ವಿಟರ್ ಖಾತೆಯಲ್ಲಿ ಹೊಸ ಬೈಕ್ ಮಾದರಿಯೊಂದಿಗೆ ಭಾರತದಲ್ಲಿ ಹೊಸ ಅಧ್ಯಾಯ ಆರಂಭಿಸುತ್ತಿರುವ ಬಗೆಗೆ ಮಾಹಿತಿ ಹಂಚಿಕೊಂಡಿರುವ ಬಿಎಸ್ಎ ಕಂಪನಿಯು ಡಿಸೆಂಬರ್ 4ರಂದು ತನ್ನ ಹೊಸ ಬೈಕ್ ಬಿಡುಗಡೆ ಮಾಡುವುದಾಗಿ ಮಾಹಿತಿ ಹಂಚಿಕೊಂಡಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಅನಾವರಣಗೊಂಡ ನ್ಯೂ ಜನರೇಷನ್ ಎಸ್-ಕ್ರಾಸ್

ಜಪಾನ್ ಮೂಲದ ಕಾರು ತಯಾರಕ ಕಂಪನಿಯಾದ ಸುಜುಕಿ ತನ್ನ ನ್ಯೂ ಜನರೇಷನ್ ಎಸ್-ಕ್ರಾಸ್ ಕಾರನ್ನು ಯುರೋಪಿಯನ್ ಮಾರುಕಟ್ಟೆಗಾಗಿ ಅನಾವರಣಗೊಳಿಸಿದೆ. ಈ ನ್ಯೂ ಜನರೇಷನ್ ಎಸ್-ಕ್ರಾಸ್ ಸಮಗ್ರ ವಿನ್ಯಾಸ ಬದಲಾವಣೆಗಳು ಮತ್ತು ವೈಶಿಷ್ಟ್ಯಗಳ ನವೀಕರಣಗಳಿಗೆ ಸಾಕ್ಷಿಯಾಗಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ನ್ಯೂ ಜನರೇಷನ್ ಸುಜುಕಿ ಎಸ್-ಕ್ರಾಸ್ ಕಾರು 4,300 ಎಂಎಂ ಉದ್ದ, 1,785 ಎಂಎಂ ಅಗಲ, 1,585 ಎಂಎಂ ಎತ್ತರ ಮತ್ತು 2,600 ಎಂಎಂ ವ್ಹೀಲ್‌ಬೇಸ್ ಅನ್ನು ಹೊಂದಿದೆ. ಇದರ ಹಿಂದಿನ ಮಾದರಿಗೆ ಹೋಲಿಸಿದರೆ ಒಟ್ಟಾರೆ ಎತ್ತರವು ವಾಸ್ತವವಾಗಿ 10 ಎಂಎಂ ಚಿಕ್ಕದಾಗಿದೆ. ಹಂಗೇರಿಯಲ್ಲಿರುವ ಸುಜುಕಿಯ ಎಸ್‌ಟರ್‌ಗಾಮ್ ಆಧಾರಿತ ಘಟಕದಲ್ಲಿ ಹೊಸ ಎಸ್-ಕ್ರಾಸ್‌ ಕಾರನ್ನು ಉತ್ಪಾದಿಸಲಾಗುತ್ತದೆ. ಈ ನ್ಯೂ ಜನರೇಷನ್ ಎಸ್-ಕ್ರಾಸ್ ಹೊಸ ವಿನ್ಯಾಸ ಬದಲಾವಣೆಗಳು ಮತ್ತು ವೈಶಿಷ್ಟ್ಯಗಳ ನವೀಕರಣಗಳಿಗೆ ಪಡೆದುಕೊಂಡಿದ್ದು, ಎಂಜಿನ್ ಮಾತ್ರ ಬದಲಾಗದೆ ಉಳಿದಿದೆ.

Most Read Articles

Kannada
English summary
Top auto news of the week tata to set up semiconductor production unit 2021 q5 launched and more
Story first published: Sunday, November 28, 2021, 9:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X