ವಾರದ ಸುದ್ದಿ: ವಾಹನ ಮಾರಾಟ ಹೆಚ್ಚಳ, ಇಂಧನ ಬೆಲೆ ತಗ್ಗಿಸಲು ಹೊಸ ಪ್ಲ್ಯಾನ್, ಸಂಚಲನ ಮೂಡಿಸಿದ ಓಲಾ ಇವಿ ಸ್ಕೂಟರ್!

ಕೋವಿಡ್ ಪರಿಣಾಮ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಆಟೋ ಉದ್ಯಮದಲ್ಲಿ ವಾಹನ ಬೆಲೆ ಏರಿಕೆ ಮತ್ತು ದುಬಾರಿ ಇಂಧನ ಸಮರದಲ್ಲೂ ಹೊಸ ವಾಹನಗಳ ಮಾರಾಟದಲ್ಲಿ ಏರಿಕೆ ಕಂಡುಬರುತ್ತಿದೆ.

ವಾರದ ಪ್ರಮುಖ ಸುದ್ದಿ

ಕೋವಿಡ್‌ನಿಂದಾಗಿರುವ ಆರ್ಥಿಕ ಬಿಕ್ಕಟ್ಟು ಹಂತ-ಹಂತವಾಗಿ ಸುಧಾರಿಸುತ್ತಿದ್ದು, ಆಟೋ ಉದ್ಯಮ ಚಟುವಟಿಕೆಗಳು ಈಗಾಗಲೇ ಪೂರ್ಣಪ್ರಮಾಣದಲ್ಲಿ ಪುನಾರಂಭಗೊಂಡಿವೆ. ಇದರ ನಡುವೆ ಇಂಧನಗಳ ಬೆಲೆ ಏರಿಕೆ ಪರಿಣಾಮ ಹೊಸ ವಾಹನ ಖರೀದಿದಾರರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದು, ಈ ವಾರದ ಪ್ರಮುಖ ಸುದ್ದಿಗಳ ಹೈಲೈಟ್ಸ್ ಇಲ್ಲಿ ತಿಳಿಯೋಣ.

ವಾರದ ಪ್ರಮುಖ ಸುದ್ದಿ

ಪೆಟ್ರೋಲ್‌ನಲ್ಲಿ ಹೆಚ್ಚಾಗಲಿದೆ ಎಥೆನಾಲ್ ಮಿಶ್ರಣ

ಹೆಚ್ಚುತ್ತಿರುವ ಇಂಧನ ಬೆಲೆ ತಗ್ಗಿಸಲು ಮುಂದಾಗಿರುವ ಕೇಂದ್ರ ಸರ್ಕಾರವು 2023-24ರ ವೇಳೆಗೆ 20% ನಷ್ಟು ಎಥೆನಾಲ್ ಅನ್ನು ಪೆಟ್ರೋಲ್‌ನೊಂದಿಗೆ ಬೆರೆಸುವ ಗುರಿಯನ್ನು ಹೊಂದಲಾಗಿದ್ದು, ಪೆಟ್ರೋಲ್‌ಗೆ ಬೆರೆಸುವ ಎಥೆನಾಲ್ ಪ್ರಮಾಣವನ್ನು ಹಂತ ಹಂತವಾಗಿ ಹೆಚ್ಚಿಸಲು ನಿರ್ಧರಿಸಿದೆ.

ವಾರದ ಪ್ರಮುಖ ಸುದ್ದಿ

ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದ ಭಾರತಕ್ಕೆ ವಿವಿಧ ರೀತಿಯ ಪ್ರಯೋಜನಗಳಾಗಲಿದ್ದು, ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಪ್ರಮಾಣವು ಕಡಿಮೆಯಾಗುವುದರೊಂದಿಗೆ ಬೆಲೆ ತಗ್ಗುವುದಲ್ಲದೆ ಪ್ರಪಂಚದ ಅತ್ಯಂತ ಕಲುಷಿತ ದೇಶಗಳಲ್ಲಿ ಒಂದಾದ ಭಾರತಕ್ಕೆ ಎಥೆನಾಲ್ ಬಳಕೆಯು ವರದಾನವಾಗಲಿದೆ.

ವಾರದ ಪ್ರಮುಖ ಸುದ್ದಿ

ಹೆಚ್ಚಳವಾಗಲಿದೆ ವಾಹನಗಳ ವೇಗದ ಮಿತಿ

ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸಂಚರಿಸುವ ವಾಹನಗಳ ಗರಿಷ್ಠ ವೇಗ ಮಿತಿ ತುಸು ಕಡಿಮೆ ಎಂದೇ ಹೇಳಬಹುದು. ನಮ್ಮ ದೇಶದಲ್ಲಿ ಕೆಲವೇ ಕೆಲವು ಜನರು ಮಾತ್ರ ನಿಗದಿತ ವೇಗದಲ್ಲಿ ಅಥವಾ ನಿಗದಿತ ವೇಗಕ್ಕಿಂತ ಕಡಿಮೆ ವೇಗದಲ್ಲಿ ವಾಹನ ಚಲಾಯಿಸುತ್ತಾರೆ.

ವಾರದ ಪ್ರಮುಖ ಸುದ್ದಿ

ಭಾರತದಲ್ಲಿ ಕೆಲವೆಡೆ ವಾಹನಗಳ ವೇಗಕ್ಕೆ ಕಡಿವಾಣ ಹಾಕಲು ರಸ್ತೆಗಳಲ್ಲಿ ಸ್ಪೀಡ್ ಬ್ರೆಕರ್'ಗಳನ್ನು ಅಳವಡಿಸಲಾಗಿರುತ್ತದೆ. ಕೇಂದ್ರ ಸರ್ಕಾರವು ಎಲ್ಲಾ ರೀತಿಯ ರಸ್ತೆಗಳಲ್ಲಿ ನಿಗದಿ ಪಡಿಸಿರುವ ವೇಗದ ಮಿತಿಗಿಂತ 20 ಕಿ.ಮೀ ಹೆಚ್ಚು ವೇಗದಲ್ಲಿ ಪ್ರಯಾಣಿಸಲು ಅನುಕೂಲ ಕಲ್ಪಿಸಲು ಚಿಂತನೆ ನಡೆಸುತ್ತಿದೆ. ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿರವರು ಈ ಬಗ್ಗೆ ಸುಳಿವು ನೀಡಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ವಾರದ ಪ್ರಮುಖ ಸುದ್ದಿ

ಇವಿ ನೀತಿ ಪರಿಣಾಮ ಹೆಚ್ಚಿದ ಇವಿ ಮಾರಾಟ

ಹೆಚ್ಚುತ್ತಿರುವ ಇಂಧನಗಳ ಬೆಲೆ ಮತ್ತು ಮಾಲಿನ್ಯದ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕೇಂದ್ರ ಸರ್ಕಾರದ ಜೊತೆಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನ ನೀತಿಯನ್ನು ಅಳವಡಿಸಿಕೊಳ್ಳುತ್ತಿರುವ ಇವಿ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹವು ಹೊಸ ಬದಲಾವಣೆಗೆ ಕಾರಣವಾಗಿದೆ.

ವಾರದ ಪ್ರಮುಖ ಸುದ್ದಿ

ಕೇಂದ್ರದ ಫೇಮ್ 2 ಜೊತೆಗೆ ಮಹಾರಾಷ್ಟ್ರ ಸರ್ಕಾರವು ಸಹ ಹೊಸ ಇವಿ ವಾಹನ ನೀತಿಯನ್ನು ಪ್ರಕಟಿಸಿದ್ದು, ಮಾಹಾರಾಷ್ಟ್ರದಲ್ಲಿ ಇವಿ ವಾಹನಗಳನ್ನು ಖರೀದಿಸುವವರಿಗಾಗಿ ಭಾರೀ ಪ್ರಮಾಣದ ಸಬ್ಸಡಿ ಆರಂಭಿಸಿದೆ. ಹೊಸ ಎಲೆಕ್ಟ್ರಿಕ್ ವಾಹನ ನೀತಿ ಅಡಿಯಲ್ಲಿ ದ್ವಿಚಕ್ರ ವಾಹನಗಳಿಗಾಗಿ ಗರಿಷ್ಠ ರೂ.44 ಸಾವಿರ, ತ್ರಿ ಚಕ್ರ ವಾಹಗಳಿಗಾಗಿ ಗರಿಷ್ಠ ರೂ. 90 ಸಾವಿರ ಮತ್ತು ಎಲೆಕ್ಟ್ರಿಕ್ ಕಾರುಗಳಿಗಾಗಿ ಗರಿಷ್ಠ ರೂ. 2.75 ಲಕ್ಷ ಸಬ್ಸಡಿ ನೀಡುತ್ತಿದೆ.

ವಾರದ ಪ್ರಮುಖ ಸುದ್ದಿ

ಓಲಾ ಎಲೆಕ್ಟ್ರಿಕ್ ಸ್ಕೂಟರ್ ಹೊಸ ದಾಖಲೆ

ಓಲಾ ಎಲೆಕ್ಟ್ರಿಕ್ ಕಂಪನಿಯು ತನ್ನ ಬಹನೀರಿಕ್ಷಿತ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಹೊಸ ಸ್ಕೂಟರ್ ಖರೀದಿದಾಗಿ ಈಗಾಗಲೇ ಅಧಿಕೃತ ಬುಕ್ಕಿಂಗ್ ಪ್ರಕ್ರಿಯೆ ಕೂಡಾ ಆರಂಭವಾಗಿದೆ. ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗಾಗಿ ಓಲಾ ಕಂಪನಿಯು ಬುಕ್ಕಿಂಗ್ ಆರಂಭಿಸಿದ ಕೇವಲ 24 ಗಂಟೆಗಳಲ್ಲಿ ದಾಖಲೆ ಪ್ರಮಾಣದಲ್ಲಿ ಬೇಡಿಕೆ ಹರಿದುಬಂದಿದ್ದು, ಒಂದು ಲಕ್ಷಕ್ಕೂ ಅಧಿಕ ಗ್ರಾಹಕರು ಮುಂಗಡ ಹಣ ಪಾವತಿ ಬುಕ್ಕಿಂಗ್ ದಾಖಲಿಸಿದ್ದಾರೆ.

ವಾರದ ಪ್ರಮುಖ ಸುದ್ದಿ

ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗಾಗಿ ಓಲಾ ಕಂಪನಿಯು ಬುಕ್ಕಿಂಗ್ ಆರಂಭಿಸಿದ ಕೇವಲ 24 ಗಂಟೆಗಳಲ್ಲಿ ದಾಖಲೆ ಪ್ರಮಾಣದಲ್ಲಿ ಬೇಡಿಕೆ ಹರಿದುಬಂದಿದ್ದು, ಒಂದು ಲಕ್ಷಕ್ಕೂ ಅಧಿಕ ಗ್ರಾಹಕರು ಮುಂಗಡ ಹಣ ಪಾವತಿ ಬುಕ್ಕಿಂಗ್ ದಾಖಲಿಸಿದ್ದಾರೆ.

ವಾರದ ಪ್ರಮುಖ ಸುದ್ದಿ

ಮಹೀಂದ್ರಾ ಬೊಲೆರೊ ನಿಯೋ ಬಿಡುಗಡೆ

ಮಹೀಂದ್ರಾ ಕಂಪನಿಯು ತನ್ನ ಬೊಲೆರೊ ಎಸ್‌ಯುವಿ ಮಾದರಿಯಲ್ಲಿ ಹೊಸದಾಗಿ ಬೊಲೆರೊ ನಿಯೋ ಎಡಿಷನ್ ಬಿಡುಗಡೆ ಮಾಡಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.48 ಲಕ್ಷ ಬೆಲೆ ಹೊಂದಿದೆ.

ವಾರದ ಪ್ರಮುಖ ಸುದ್ದಿ

ಟಿಯುವಿ300 ಫೇಸ್‌ಲಿಫ್ಟ್ ಮಾದರಿಯಾಗಿರುವ ಬೊಲೊರೊ ನಿಯೋ ಮಾದರಿಯು ಸ್ಟ್ಯಾಂಡರ್ಡ್ ಬೊಲೆರೊ ಮಾದರಿಗಿಂತಲೂ ಉನ್ನತ ಮಟ್ಟದ ಮಾದರಿಯಾಗಿ ಮಾರಾಟಗೊಳ್ಳಲಿದ್ದು, 7 ಸೀಟರ್ ಸೌಲಭ್ಯದೊಂದಿಗೆ ಎನ್4, ಎನ್8, ಎನ್10 ಮತ್ತು ಎನ್10 ಆಪ್ಷನ್ ಎನ್ನುವ ನಾಲ್ಕು ವೆರಿಯೆಂಟ್‌ 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಪಡೆದುಕೊಂಡಿದೆ.

ವಾರದ ಪ್ರಮುಖ ಸುದ್ದಿ

ಮರ್ಸಿಡಿಸ್-ಎಎಂಜಿ ಇ53 ಮತ್ತು ಇ63 ಎಸ್ ಬಿಡುಗಡೆ

ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ ಜನಪ್ರಿಯ ಪರ್ಫಾಮೆನ್ಸ್ ಸೆಡಾನ್ ಕಾರು ಮಾದರಿಗಳಾದ ಮರ್ಸಿಡಿಸ್-ಎಎಂಜಿ ಇ53 ಮತ್ತು ಇ63 ಎಸ್ ಆವೃತ್ತಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರುಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 1.02 ಕೋಟಿ ಬೆಲೆ ನಿಗದಿಪಡಿಸಲಾಗಿದೆ.

ವಾರದ ಪ್ರಮುಖ ಸುದ್ದಿ

ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಆರಂಭಿಕ ಆವೃತ್ತಿಯಾದ ಇ53 ಮಾದರಿಯ ಎಕ್ಸ್‌ಶೋರೂಂ ಪ್ರಕಾರ ರೂ. 1.02 ಕೋಟಿ ಮತ್ತು ಇ63 ಎಸ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 1.70 ಕೋಟಿ ಬೆಲೆ ಹೊಂದಿವೆ.

ವಾರದ ಪ್ರಮುಖ ಸುದ್ದಿ

ಬಿಎಂಡಬ್ಲ್ಯು ಎಕ್ಸ್1 20ಐ ಟೆಕ್ ಎಡಿಷನ್ ಬಿಡುಗಡೆ

ಜರ್ಮನ್ ಮೂಲದ ವಾಹನ ತಯಾರಾಕ ಕಂಪನಿಯಾದ ಬಿಎಂಡಬ್ಲ್ಯು ತನ್ನ ಹೊಸ ಎಕ್ಸ್1 20ಐ ಟೆಕ್ ಎಡಿಷನ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಬಿಎಂಡಬ್ಲ್ಯು ಎಕ್ಸ್1 20ಐ ಟೆಕ್ ಎಡಿಷನ್ ಬೆಲೆಯು ರೂ.43 ಲಕ್ಷಗಳಾಗಿದೆ.

ವಾರದ ಪ್ರಮುಖ ಸುದ್ದಿ

ಹೊಸ ಬಿಎಂಡಬ್ಲ್ಯು ಎಕ್ಸ್1 20ಐ ಟೆಕ್ ಎಡಿಷನ್ ಖರೀದಿಗೆ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದಾರೆ. ಇನ್ನು ಈ ಮಾದರಿಯು ಆಲ್ಪೈನ್ ವೈಟ್ ಮತ್ತು ಫೈಟೋನಿಕ್ ಬ್ಲೂ ಎಂಬ ಎರಡು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಬಿಎಂಡಬ್ಲ್ಯು ಎಕ್ಸ್1 20ಐ ಟೆಕ್ ಎಡಿಷನ್ ಮಾದರಿಯಲ್ಲಿ 2.0-ಲೀಟರ್ 4-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 192 ಬಿಹೆಚ್‌ಪಿ ಪವರ್ ಮತ್ತು 280 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

Most Read Articles

Kannada
English summary
Top Auto News Of This Week. Read in Kannada.
Story first published: Sunday, July 18, 2021, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X