ವಾರದ ಸುದ್ದಿ: ಬಿಸಿತುಪ್ಪವಾಗಿ ಪರಿಣಮಿಸಿದ ಇಂಧನ ಬೆಲೆ, ಬರಲಿದೆ ಫ್ಲೆಕ್ಸ್ ಎಂಜಿನ್, ಇವಿ ಉದ್ಯಮಕ್ಕೆ ರಿಲಯನ್ಸ್!

ಕೋವಿಡ್ ಪರಿಣಾಮ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿಯಿಂದ ಚೇತರಿಸಿಕೊಳ್ಳುತ್ತಿರುವ ಆಟೋ ಉದ್ಯಮವು ಇದೀಗ ಇಂಧನಗಳ ಬೆಲೆ ಏರಿಕೆ ಪರಿಣಾಮ ಎದುರುಸುತ್ತಿದ್ದು, ಕೇಂದ್ರ ಸರ್ಕಾರ ಇಂಧನಗಳ ಬೆಲೆ ಇಳಿಕೆಗೆ ಹಲವಾರು ಕಠಿಣ ಕ್ರಮ ಕೈಗೊಳ್ಳುತ್ತಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು!

ಕೋವಿಡ್‌ನಿಂದಾಗಿರುವ ಆರ್ಥಿಕ ಬಿಕ್ಕಟ್ಟು ಸುಧಾರಿಸಲು ಇನ್ನು ಕೆಲ ತಿಂಗಳುಗಳು ಬೇಕಾಗಬಹುದೆಂದು ಅಂದಾಜಿಸಲಾಗಿದ್ದು, ಹಂತ-ಹಂತವಾಗಿ ಆಟೋ ಉದ್ಯಮ ಚಟುವಟಿಕೆಗಳು ಪುನಾರಂಭಗೊಂಡಿವೆ. ಇದರ ನಡುವೆ ಇಂಧನಗಳ ಬೆಲೆ ಏರಿಕೆಯು ಹೊಸ ವಾಹನ ಮಾರಾಟ ಕುಸಿತಕ್ಕೆ ಕಾರಣವಾಗುತ್ತಿದ್ದು, ಇಂಧನ ಬೆಲೆ ತಗ್ಗಿಸಲು ಸರ್ಕಾರವು ಫ್ಲೆಕ್ಸ್ ಎಂಜಿನ್ ಕಡ್ಡಾಯಕ್ಕೆ ಮುಂದಾಗಿದ್ದು, ಎಲೆಕ್ಟ್ರಿಕ್ ವಾಹನಗಳಿಗೂ ಹೆಚ್ಚಿನ ಪ್ರೊತ್ಸಾಹ ನೀಡುತ್ತಿದೆ. ಹಾಗಾದ್ರೆ ಈ ವಾರದ ಪ್ರಮುಖ ಸುದ್ದಿಗಳಲ್ಲಿ ಯಾವೆಲ್ಲಾ ಸುದ್ದಿಗಳಿವೆ ಎಂಬುವುದರ ಹೈಲೈಟ್ಸ್ ತಿಳಿಯೋಣ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು!

ಶತಕ ಪೂರೈಸಿದ ಇಂಧಇಂಧನ ದರ ಏರಿಕೆ, ವಾಹನಗಳ ಬೆಲೆ ಹೆಚ್ಚಳ

ಆಟೋ ಬಿಡಿಭಾಗಗಳ ವೆಚ್ಚದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಪರಿಣಾಮ ಬಹುತೇಕ ಕಾರು ಕಂಪನಿಗಳು ವಾಹನಗಳ ಬೆಲೆ ಹೆಚ್ಚಳ ಮಾಡುತ್ತಿದ್ದು, ವಾಹನಗಳ ಬೆಲೆ ಹೆಚ್ಚಳದ ಜೊತೆಗೆ ಇಂಧನಗಳ ಬೆಲೆಯಲ್ಲೂ ನಿರಂತರವಾಗಿ ಹೆಚ್ಚುತ್ತಿರುವ ಪರಿಣಾಮ ಆಟೋ ಉದ್ಯಮವು ವ್ಯತಿರಿಕ್ತ ಪರಿಣಾಮ ಎದುರಿಸುತ್ತಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು!

ಕೋವಿಡ್‌ಗೂ ಮುನ್ನ ಪ್ರತಿ ಆರು ತಿಂಗಳಿಗೆ ಒಂದು ಬಾರಿ ವಾಹನಗಳ ದರ ಪರಿಷ್ಕರಣೆ ಮಾಡುತ್ತಿದ್ದ ಆಟೋ ಕಂಪನಿಗಳು ಇದೀಗ ಬಿಡಿಭಾಗಗಳ ಕೊರತೆ ಮತ್ತು ಹೆಚ್ಚುತ್ತಿರುವ ವೆಚ್ಚಗಳನ್ನು ನಿರ್ವಹಿಸಲು ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಬೆಲೆ ಪರಿಷ್ಕರಣೆ ಮಾಡುತ್ತಿದ್ದು, ಹೊಸ ವಾಹನಗಳ ಬೆಲೆ ಏರಿಕೆಯೊಂದಿಗೆ ಇಂಧನಗಳ ಬೆಲೆ ಹೆಚ್ಚಳವು ಸಹ ವಾಹನ ಮಾಲೀಕತ್ವವನ್ನು ಮತ್ತಷ್ಟು ದುಬಾರಿಯಾಗಿಸುತ್ತಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು!

ಹೊಸ ವಾಹನಗಳ ಬೆಲೆಯಲ್ಲಿ ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಬಹುತೇಕ ಕಂಪನಿಗಳು ತಮ್ಮ ವಾಹನಗಳ ಮೂಲ ಬೆಲೆಯಲ್ಲಿ ಶೇ. 1.50ರಿಂದ ಶೇ.2 ರಷ್ಟು ಬೆಲೆ ಹೆಚ್ಚಿಸುತ್ತಿದ್ದು, ಕಳೆದ ಒಂದು ವರ್ಷದಲ್ಲಿ ಬಜೆಟ್ ಕಾರುಗಳ ಬೆಲೆಯಲ್ಲಿ ಸರಾಸರಿಯಾಗಿಯಾಗಿ ರೂ. 50 ಸಾವಿರದಿಂದ ರೂ.1.20 ಲಕ್ಷದಷ್ಟು ಬೆಲೆ ಹೆಚ್ಚಳವಾಗಿವೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು!

ಜೊತೆಗೆ ಇಂಧನಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ವಾಹನ ಸವಾರರು ಇಂಧನ ಬೆಲೆ ಹೊಡೆತಕ್ಕೆ ಹೈರಾಣಾಗಿ ಹೋಗಿದ್ದಾರೆ. ದೇಶದ ಪ್ರಮುಖ ನಗರಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಸರಾಸರಿಯಾಗ ರೂ.97ರಿಂದ ರೂ. 106ಕ್ಕೆ ತಲುಪಿದ್ದು, ಡೀಸೆಲ್ ಬೆಲೆಯು ಕೂಡಾ ವಿವಿಧ ನಗರಗಳಲ್ಲಿ ರೂ.91 ರಿಂದ ರೂ. 96 ಬೆಲೆ ಹೊಂದಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು!

ಫ್ಲೆಕ್ಸ್ ಇಂಧನ ಎಂಜಿನ್ ಕಡ್ಡಾಯಕ್ಕೆ ಸಿದ್ದತೆ

ಇಂಧನ ಬೆಲೆ ಹೆಚ್ಚಳಕ್ಕಾಗ ಮುಂದಿನ 8-10 ದಿನಗಳಲ್ಲಿ ಫ್ಲೆಕ್ಸ್ ಇಂಧನ ಎಂಜಿನ್'ಗಳ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಸರ್ಕಾರವು ಈ ಎಂಜಿನ್'ಗಳನ್ನು ಕಡ್ಡಾಯಗೊಳಿಸುವುದರ ಬಗ್ಗೆ ಚಿಂತನೆ ನಡೆಸುತ್ತಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು!

ಎಥೆನಾಲ್ ಬಳಸುವ ಮೂಲಕ ಭಾರತೀಯರು ಪ್ರತಿ ಲೀಟರ್‌ಗೆ ರೂ.30-35 ಉಳಿತಾಯ ಮಾಡಬಹುದು. ಸಾರಿಗೆ ಸಚಿವನಾಗಿ ನಾನು ಪೆಟ್ರೋಲ್ ಎಂಜಿನ್ ಮಾತ್ರವಲ್ಲದೇ, ಫ್ಲೆಕ್ಸ್-ಇಂಧನ ಎಂಜಿನ್ ಸಹ ಇರಲಿ ಎಂದು ಆಟೋ ಮೊಬೈಲ್ ಉದ್ಯಮಕ್ಕೆ ಆದೇಶ ಹೊರಡಿಸಲಿದ್ದೇನೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು!

2014ರಲ್ಲಿ 38 ಕೋಟಿ ಲೀಟರ್'ಗಳಿದ್ದ ಎಥೆನಾಲ್ ಸಂಗ್ರಹ ಪ್ರಮಾಣವು ಈಗ 320 ಕೋಟಿ ಲೀಟರ್'ಗಳಿಗೆ ಏರಿಕೆಯಾಗಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ಎಥೆನಾಲ್ ಪೆಟ್ರೋಲ್'ಗಿಂತ ಉತ್ತಮ ಇಂಧನವಾಗಿದ್ದು, ಆಮದು ಮೇಲಿನ ಅವಲಂಬನೆ ತಪ್ಪಿಸುವುದರ ಜೊತೆಗೆ ಮಾಲಿನ್ಯ ಮುಕ್ತವಾಗಿದೆ ಎಂದು ಅವರು ಹೇಳಿದ್ದಾರೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು!

ಬಿಡುಗಡೆಗೆ ಸಿದ್ದವಾದ ಸ್ಕೋಡಾ ಕುಶಾಕ್

ಎಸ್‌ಯುವಿ ವಿಭಾಗದಲ್ಲಿನ ಹೊಸ ಕಾರುಗಳ ಬಿಡುಗಡೆ ಪ್ರಕ್ರಿಯೆ ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಸ್ಕೋಡಾ ಇಂಡಿಯಾ ಕಂಪನಿಯು ಸಹ ತನ್ನ ಹೊಚ್ಚ ಹೊಸ ಕುಶಾಕ್ ಕಂಪ್ಯಾಕ್ಟ್ ಎಸ್‌ಯುವಿಯನ್ನು ಬಿಡುಗಡೆ ಮಾಡುವ ತವಕದಲ್ಲಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು!

ಸಬ್ ಫೋರ್ ಮೀಟರ್ ಎಸ್‌ಯುವಿ, ಕಂಪ್ಯಾಕ್ಟ್ ಎಸ್‌ಯುವಿ ಮತ್ತು ಫುಲ್ ಸೈಜ್ ಎಸ್‌ಯುವಿ ವಿಭಾಗದಲ್ಲಿ ಹೊಸ ನೀರಿಕ್ಷೆಯೊಂದಿಗೆ ವಿವಿಧ ಕಾರು ಕಂಪನಿಗಳು ಹಲವು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡುತ್ತಿದ್ದು, ಸ್ಕೋಡಾ ಕಂಪನಿಯು ಸಹ ಕುಶಾಕ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯೊಂದಿಗೆ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುವ ತವಕದಲ್ಲಿದೆ. ಹೊಸ ಕಾರು ಬಿಡುಗಡೆಗೂ ಮುನ್ನ ಹೊಸ ಕಾರಿನ ಕಾರ್ಯಕ್ಷಮತೆ ಪರೀಕ್ಷಿಸಲು ಸ್ಕೋಡಾ ಕಂಪನಿಯು ಡ್ರೈವ್‌ಸ್ಪಾರ್ಕ್ ಆಹ್ವಾನಿಸಿತ್ತು. ಕಾರು ವಿಮರ್ಶೆ ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು!

ಹ್ಯುಂಡೈ ಅಲ್ಕಾಜರ್ ಫಸ್ಟ್ ಡ್ರೈವ್ ರಿವ್ಯೂ

ಹೊಸ ವಾಹನಗಳ ಉತ್ಪಾದನೆ, ಮಾರಾಟದಲ್ಲಿ ಸಾಕಷ್ಟು ಸುಧಾರಣೆ ಕಂಡಿರುವ ಭಾರತೀಯ ಆಟೋ ಉದ್ಯಮದಲ್ಲಿ ಎಸ್‌ಯುವಿ ಸೆಗ್ಮೆಂಟ್ ತೀವ್ರವಾಗಿ ಬೆಳವಣಿಗೆ ಕಾಣುತ್ತಿದ್ದು, ದೇಶದ ಎರಡನೇ ಅತಿ ದೊಡ್ಡ ಕಾರು ಉತ್ಪಾದನಾ ಕಂಪನಿಯಾದ ಹ್ಯುಂಡೈ ಮೋಟಾರ್ಸ್ ಕಂಪನಿಯು ತನ್ನ ಹೊಚ್ಚ ಹೊಸ ಅಲ್ಕಾಜರ್ ಕಾರು ಮಾದರಿಯನ್ನು ಬಿಡುಗಡೆಗೊಳಿಸುವ ಮೂಲಕ ಎಸ್‌‌ಯುವಿ ವಿಭಾಗದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು!

ಹೊಸ ಅಲ್ಕಾಜರ್ ಕಾರು ಮಾದರಿಯುು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 6 ಸೀಟರ್ ಮತ್ತು 7 ಸೀಟರ್ ಸೌಲಭ್ಯಗಳೊಂದಿಗೆ ಪ್ರತಿಸ್ಪರ್ಧಿ ಮಾದರಿಗಳಿಗೆ ತೀವ್ರ ಪೈಪೋಟಿ ನೀಡುವ ಸಿದ್ದತೆಯಲ್ಲಿದ್ದು, ಕ್ರೆಟಾ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಆಧರಿಸಿ ನಿರ್ಮಾಣವಾಗಿರುವ ಹೊಸ ಕಾರು ಮಾದರಿಯು ವಿವಿಧ ವೆರಿಯೆಂಟ್‌ಗಳೊಂದಿಗೆ ಸೆಗ್ಮೆಂಟ್ ಇನ್ ಫಸ್ಟ್ ಫೀಚರ್ಸ್‍ಗಳನ್ನು ಹೊಂದಿದೆ. ಹೊಸ ಕಾರಿನ ಫಸ್ಟ್ ಡ್ರೈವ್ ಸಂಪೂರ್ಣ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು!

ಇವಿ ವಾಹನ ಉದ್ಯಮಕ್ಕೆ ಕಾಲಿಟ್ಟ ರಿಲಯನ್ಸ್

ಆಮದುಗೊಳ್ಳುವ ಬ್ಯಾಟರಿಯಿಂದಾಗಿ ದುಬಾರಿ ಬೆಲೆ ಪರಿಣಾಮ ಇವಿ ವಾಹನ ಖರೀದಿಗೆ ಆಸಕ್ತಿ ಇದ್ದರೂ ಹಿಂದೇಟು ಹಾಕುತ್ತಿರುವ ಗ್ರಾಹಕರು ಬಜೆಟ್ ಬೆಲೆಯಲ್ಲಿ ಇವಿ ವಾಹನಗಳನ್ನು ನೀರಿಕ್ಷಿಸುತ್ತಿದ್ದು, ಹೊಸ ಉದ್ಯಮದಲ್ಲಿ ರಿಲಯನ್ಸ್ ಕಂಪನಿಯು ಭಾರೀ ಪ್ರಮಾಣದ ಹೂಡಿಕೆಗೆ ಸಿದ್ದವಾಗಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು!

ಭವಿಷ್ಯ ವಾಹನಗಳಿಗಾಗಿ ವಿಶ್ವದ ಅತಿದೊಡ್ಡ ಸಮಗ್ರ ನವೀಕರಿಸಬಹುದಾದ ಇಂಧನ ಘಟಕ ಸ್ಥಾಪಿಸಲು ಮುಂದಾಗಿರುವ ರಿಲಯನ್ಸ್ ಕಂಪನಿಯು ಬ್ಯಾಟರಿ ಉತ್ಪಾದನೆಗಾಗಿ ಸುಮಾರು ರೂ. 60 ಸಾವಿರ ಕೋಟಿ ಹೂಡಿಕೆಗೆ ಮುಂದಾಗಿದೆ. ಭಾರತದಲ್ಲಿ ನಿರ್ಮಾಣವಾಗುವ ಎಲೆಕ್ಟ್ರಿಕ್ ವಾಹನಗಳಿಗೆ ಗರಿಷ್ಠ ಮಟ್ಟದಲ್ಲಿ ಸ್ವದೇಶಿ ನಿರ್ಮಿತ ಬ್ಯಾಟರಿ ಸಂಪನ್ಮೂಲ ಲಭ್ಯವಾಗುವಂತೆ ಹೆಚ್ಚಿನ ಮಟ್ಟದಲ್ಲಿ ಉತ್ಪಾದನೆ ಮಾಡಲು ನಿರ್ಧರಿಸಿರುವ ರಿಲಯನ್ಸ್ ಕಂಪನಿಯು ಹೊಸ ಘಟಕ ನಿರ್ಮಾಣಕ್ಕಾಗಿ 5 ಸಾವಿರ ಎಕರೆ ಭೂಮಿ ಖರೀದಿಗೆ ಚಾಲನೆ ನೀಡಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು!

ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ ಮಾರುತಿ ಸುಜುಕಿ

ಆಟೋ ಬಿಡಿಭಾಗಗಳ ವೆಚ್ಚ ಹೆಚ್ಚುತ್ತಿರುವ ಪರಿಣಾಮ ಬಹುತೇಕ ಕಾರು ಕಂಪನಿಗಳು ವಾಹನಗಳ ಬೆಲೆ ಹೆಚ್ಚಳ ಮಾಡುತ್ತಿದ್ದು, ಕಾರು ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಮಾರುತಿ ಸುಜುಕಿ ಕಂಪನಿಯು ಕೂಡಾ ಜುಲೈ 1ರಿಂದಲೇ ತನ್ನ ಪ್ರಮುಖ ಕಾರು ಮಾದರಿಗಳ ಬೆಲೆ ಏರಿಕೆಗೆ ಸಿದ್ದವಾಗಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು!

ಕೋವಿಡ್‌ಗೂ ಮುನ್ನ ಪ್ರತಿ ಆರು ತಿಂಗಳಿಗೆ ಒಂದು ಬಾರಿ ವಾಹನಗಳ ದರ ಪರಿಷ್ಕರಣೆ ಮಾಡುತ್ತಿದ್ದ ಆಟೋ ಕಂಪನಿಗಳು ಇದೀಗ ಬಿಡಿಭಾಗಗಳ ಕೊರತೆ ಮತ್ತು ಹೆಚ್ಚುತ್ತಿರುವ ವೆಚ್ಚಗಳನ್ನು ನಿರ್ವಹಿಸಲು ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಬೆಲೆ ಪರಿಷ್ಕರಣೆ ಮಾಡುತ್ತಿದ್ದು, ಹೊಸ ವಾಹನಗಳು ಕಳೆದ ಒಂದು ವರ್ಷದಲ್ಲಿ ಸಾಕಷ್ಟು ಬೆಲೆ ಏರಿಕೆ ಕಂಡಿರುವುದು ವಾಹನ ಮಾಲೀಕತ್ವವು ದುಬಾರಿಯಾಗಿ ಪರಿಣಮಿಸಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು!

ಡೀಸೆಲ್ ಎಂಜಿನ್‌ನತ್ತ ಮುಖ ಮಾಡಿದ ಮಾರುತಿ ಸುಜುಕಿ

ಹೊಸ ಎಮಿಷನ್ ನಿಯಮ ಅನುಸಾರವಾಗಿ ಡೀಸೆಲ್ ಎಂಜಿನ್ ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್‌ಜಿ ಕಾರು ಮಾದರಿಗಳನ್ನು ಮಾತ್ರ ಮಾರಾಟ ಮಾಡುತ್ತಿರುವ ಮಾರುತಿ ಸುಜುಕಿ ಇದೀಗ ಮತ್ತೆ ಹೊಸ ಮಾದರಿಯ ಡೀಸೆಲ್ ಎಂಜಿನ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸುವ ಸಿದ್ದತೆಯಲ್ಲಿರುವ ಮಾಹಿತಿ ಲಭ್ಯವಾಗಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು!

ಬಿಎಸ್-6 ಎಮಿಷನ್ ಜಾರಿ ನಂತರ ಡೀಸೆಲ್ ಎಂಜಿನ್ ಕಾರುಗಳನ್ನು ಮರುಬಿಡುಗಡೆ ಮಾಡುವುದಿಲ್ಲ ಎಂದಿದ್ದ ಮಾರುತಿ ಸುಜುಕಿಯು ಇದೀಗ ಗ್ರಾಹಕರ ಬೇಡಿಕೆಯೆಂತೆ ಆಯ್ದ ಕಾರು ಮಾದರಿಗಳಿಗಾಗಿ ಮತ್ತೆ ಹೊಸ ಡೀಸೆಲ್ ಮಾದರಿಯನ್ನು ಅಳವಡಿಸಿಕೊಳ್ಳುವ ಸಿದ್ದತೆಯಲ್ಲಿದೆ.

Most Read Articles

Kannada
English summary
Top Auto News Of This Week. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X