ವಾರದ ಸುದ್ದಿ:ಸುಧಾರಣೆಯತ್ತ ವಾಹನ ಮಾರಾಟ, ಇವಿ ವಾಹನ ಹೆಚ್ಚಳಕ್ಕೆ ಕ್ರಮ, ಕಾರು ಉತ್ಪಾದನೆಯಲ್ಲಿ ಹ್ಯುಂಡೈ ದಾಖಲೆ!

ಕೋವಿಡ್ ಪರಿಣಾಮ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಆಟೋ ಉದ್ಯಮವು ಬೆಲೆ ಏರಿಕೆಯ ಸಮರದಲ್ಲೂ ಹೊಸ ವಾಹನಗಳ ಮಾರಾಟದಲ್ಲಿ ತುಸು ಬೆಳವಣಿಗೆ ಸಾಧಿಸಿದೆ.

ಇವಿ ವಾಹನ ಹೆಚ್ಚಳಕ್ಕೆ ಕ್ರಮ, ಕಾರು ಉತ್ಪಾದನೆಯಲ್ಲಿ ಹ್ಯುಂಡೈ ಹೊಸ ದಾಖಲೆ!

ಕೋವಿಡ್‌ನಿಂದಾಗಿರುವ ಆರ್ಥಿಕ ಬಿಕ್ಕಟ್ಟು ಸುಧಾರಿಸಲು ಇನ್ನು ಕೆಲ ತಿಂಗಳುಗಳು ಬೇಕಾಗಬಹುದೆಂದು ಅಂದಾಜಿಸಲಾಗಿದ್ದು, ಹಂತ-ಹಂತವಾಗಿ ಆಟೋ ಉದ್ಯಮ ಚಟುವಟಿಕೆಗಳು ಪುನಾರಂಭಗೊಂಡಿವೆ. ಇದರ ನಡುವೆ ಇಂಧನಗಳ ಬೆಲೆ ಏರಿಕೆಯು ಹೊಸ ವಾಹನ ಮಾರಾಟದ ಪರಿಣಾಮ ಬೀರುತ್ತಿದ್ದು, ಇಂಧನ ಬೆಲೆ ತಗ್ಗಿಸಲು ಸರ್ಕಾರವು ಹಲವಾರು ಪ್ರಯತ್ನಗಳೊಂದಿಗೆ ಎಲೆಕ್ಟ್ರಿಕ್ ವಾಹನಗಳಿಗೂ ಹೆಚ್ಚಿನ ಪ್ರೊತ್ಸಾಹ ನೀಡುತ್ತಿದೆ. ಹಾಗಾದ್ರೆ ಈ ವಾರದ ಪ್ರಮುಖ ಸುದ್ದಿಗಳಲ್ಲಿ ಯಾವೆಲ್ಲಾ ಸುದ್ದಿಗಳಿವೆ ಎಂಬುವುದರ ಹೈಲೈಟ್ಸ್ ಇಲ್ಲಿ ತಿಳಿಯೋಣ.

ಇವಿ ವಾಹನ ಹೆಚ್ಚಳಕ್ಕೆ ಕ್ರಮ, ಕಾರು ಉತ್ಪಾದನೆಯಲ್ಲಿ ಹ್ಯುಂಡೈ ಹೊಸ ದಾಖಲೆ!

ಆರ್ಥಿಕ ಸಂಕಷ್ಟದಲ್ಲೂ ವಾಹನ ಮಾರಾಟದಲ್ಲಿ ಏರಿಕೆ

ಕೋವಿಡ್ ಎರಡನೇ ಅಲೆಯಿಂದಾಗಿ ಮೇ ಅವಧಿಯಲ್ಲಿ ಸಂಪೂರ್ಣವಾಗಿ ನೆಲಕಚ್ಚಿದ್ದ ವಾಹನ ಮಾರಾಟವು ಜೂನ್ ಅವಧಿಯಲ್ಲಿ ತುಸು ಚೇತರಿಕೆ ಕಂಡಿದೆ. ಲಾಕ್‌ಡೌನ್ ನಡುವೆಯೂ ವಾಹನ ಖರೀದಿಗಾಗಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳು ವಾಹನ ಮಾರಾಟಕ್ಕೆ ಸಹಕಾರಿಯಾಗುತ್ತಿದ್ದು, ಮೇ ಅವಧಿಯಲ್ಲಿ ವಿತರಣೆಯಾಗಬೇಕಿದ್ದ ಕೆಲವು ವಾಹನಗಳು ಜೂನ್‌ನಲ್ಲಿ ವಿತರಣೆಯಾಗಿರುವುದೂ ಸಹ ಮಾರಾಟ ಪಟ್ಟಿಯಲ್ಲಿ ತುಸು ಬೆಳವಣಿಗೆ ಕಂಡುಬಂದಿದೆ.

ಇವಿ ವಾಹನ ಹೆಚ್ಚಳಕ್ಕೆ ಕ್ರಮ, ಕಾರು ಉತ್ಪಾದನೆಯಲ್ಲಿ ಹ್ಯುಂಡೈ ಹೊಸ ದಾಖಲೆ!

ಇದೀಗ ಲಾಕ್‌ಡೌನ್ ಸಡಿಲ ಮಾಡಿರುವುದು ಮುಂಬರುವ ಕೆಲ ತಿಂಗಳಿನಲ್ಲಿ ವಾಹನ ಮಾರಾಟವು ಸುಧಾರಿಸುವ ಸಾಧ್ಯತೆಗಳಿದ್ದು, ಇಂಧನ ಆಧರಿತ ವಾಹನಗಳ ಜೊತೆಗೆ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ನೀಡಲಾಗುತ್ತಿದೆ.

ಇವಿ ವಾಹನ ಹೆಚ್ಚಳಕ್ಕೆ ಕ್ರಮ, ಕಾರು ಉತ್ಪಾದನೆಯಲ್ಲಿ ಹ್ಯುಂಡೈ ಹೊಸ ದಾಖಲೆ!

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಮಹತ್ವದ ಯೋಜನೆ

ಕೇಂದ್ರ ಸರ್ಕಾರದ ಹೊಸ ಯೋಜನೆಗೆ ಅನುಗುಣವಾಗಿ ವಿವಿಧ ನಗರಗಳಲ್ಲಿ ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆ ನಿಧಾನವಾಗಿ ಹೆಚ್ಚಳವಾಗುತ್ತಿದ್ದು, ಕೇವಲ ನಗರಪ್ರದೇಶಗಳಿಗೆ ಮಾತ್ರ ಸೀಮಿತವಾಗಿರುವ ಇವಿ ವಾಹನಗಳ ಸಂಚಾರರವನ್ನು ಅಂತರ್‌ ಜಿಲ್ಲೆ ಹಾಗೂ ಅಂತರ್‌ರಾಜ್ಯಗಳ ನಡುವೆಯೂ ಪ್ರಯಾಣಿಸಲು ಸಹಕಾರಿಯಾಗುವಂತೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರವು ಬೃಹತ್ ಯೋಜನೆ ರೂಪಿಸಿದೆ.

ಇವಿ ವಾಹನ ಹೆಚ್ಚಳಕ್ಕೆ ಕ್ರಮ, ಕಾರು ಉತ್ಪಾದನೆಯಲ್ಲಿ ಹ್ಯುಂಡೈ ಹೊಸ ದಾಖಲೆ!

ಎಲೆಕ್ಟ್ರಿಕ್ ವಾಹನಗಳಿಗೆ ಸಹಕಾರಿಯಾಗುವಂತೆ ದೇಶಾದ್ಯಂತ ವಿಸ್ತರಿಸಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲು ಚಾಲನೆ ನೀಡಿದೆ. ಆರಂಭಿಕ ಹಂತವಾಗಿ 22 ರಾಜ್ಯಗಳಲ್ಲಿ 650 ಕಡೆಗಳಲ್ಲಿ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲು ನಿರ್ಧರಿಸಿದ್ದು, ಈ ವರ್ಷಾಂತ್ಯಕ್ಕೆ 138 ಕಡೆಗಳಲ್ಲಿ ಫಾಸ್ಟ್ ಚಾರ್ಜಿಂಗ್ ನಿಲ್ದಾಣ ತೆರೆಯಲು ಟೆಂಡರ್ ಸಹ ಕರೆದಿದೆ.

ಇವಿ ವಾಹನ ಹೆಚ್ಚಳಕ್ಕೆ ಕ್ರಮ, ಕಾರು ಉತ್ಪಾದನೆಯಲ್ಲಿ ಹ್ಯುಂಡೈ ಹೊಸ ದಾಖಲೆ!

ಬಿಎಂಡಬ್ಲ್ಯು ಎಂ5 ಕಾಂಪಿಟೇಶನ್ ಕಾರು ಬಿಡುಗಡೆ

ಜರ್ಮನ್ ಮೂಲದ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ ಎಂ5 ಕಾಂಪಿಟೇಶನ್ ಫೇಸ್‌ಲಿಫ್ಟ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಬಿಎಂಡಬ್ಲ್ಯು ಎಂ5 ಕಾಂಪಿಟೇಶನ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.62 ಕೋಟಿಯಾಗಿದೆ.

ಇವಿ ವಾಹನ ಹೆಚ್ಚಳಕ್ಕೆ ಕ್ರಮ, ಕಾರು ಉತ್ಪಾದನೆಯಲ್ಲಿ ಹ್ಯುಂಡೈ ಹೊಸ ದಾಖಲೆ!

ಎಂ5 ಕಾರು ನವೀಕರಿಸಿದ ವಿನ್ಯಾಸ, ಸುಧಾರಿತ ಕಾರ್ಯಕ್ಷಮತೆ, ಡೈನಾಮಿಕ್ಸ್ ಮತ್ತು ಇತರ ಅಂಶಗಳನ್ನು ಒಳಗೊಂಡಿದ್ದು, 4.4-ಲೀಟರ್, ಟ್ವಿನ್-ಟರ್ಬೊ ವಿ8 ಎಂಜಿನ್ ಮೂಲಕ 625 ಹೆಚ್‌ಪಿ ಪವರ್ ಮತ್ತು 750 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಇವಿ ವಾಹನ ಹೆಚ್ಚಳಕ್ಕೆ ಕ್ರಮ, ಕಾರು ಉತ್ಪಾದನೆಯಲ್ಲಿ ಹ್ಯುಂಡೈ ಹೊಸ ದಾಖಲೆ!

ಕಾರು ಉತ್ಪಾದನೆಯಲ್ಲಿ ಹ್ಯುಂಡೈ ಹೊಸ ಮೈಲಿಗಲ್ಲು

ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (ಹೆಚ್‌ಎಂಐಎಲ್) ಕಂಪನಿಯು ಭಾರತದಲ್ಲಿ ಭಾರತದಲ್ಲಿ 1 ಕೋಟಿ ಕಾರು ಉತ್ಪಾದಿಸಿ ಹೊಸ ಮೈಲಿಗಲ್ಲನ್ನು ಸಾಧಿಸಿದೆ. ಹ್ಯುಂಡೈ ಕಂಪನಿಯು ತಮಿಳುನಾಡಿನ ಶ್ರೀಪೆರುಂಬುದೂರ್‌ನಲ್ಲಿರುವ ಉತ್ಪಾದನಾ ಕೇಂದ್ರದಲ್ಲಿ 1996ರಿಂದ ಇದುವರೆಗೆ ಬರೋಬ್ಬರಿ 1 ಕೋಟಿ ಕಾರುಗಳನ್ನು ನಿರ್ಮಾಣ ಮಾಡಿದೆ.

ಇವಿ ವಾಹನ ಹೆಚ್ಚಳಕ್ಕೆ ಕ್ರಮ, ಕಾರು ಉತ್ಪಾದನೆಯಲ್ಲಿ ಹ್ಯುಂಡೈ ಹೊಸ ದಾಖಲೆ!

1996ರ ಮೇ ತಿಂಗಳಿನಲ್ಲಿ ಸ್ಯಾಂಟ್ರೊ ಮಾದರಿಯ ಉತ್ಪಾದನೆಯ ಮೂಲಕ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದ ಹ್ಯುಂಡೈ ಕಂಪನಿಯು ಸದ್ಯ ಭಾರತದ ಎರಡನೇ ಅತಿ ದೊಡ್ಡ ಕಾರು ಉತ್ಪಾದನಾ ಕಂಪನಿಯಾಗಿ ಗುರುತಿಸಿಕೊಂಡಿದ್ದು, ಕ್ರೆಟಾ, ಸ್ಯಾಂಟ್ರೊ, ಐ20 ಮತ್ತು ಐ10 ಕಾರುಗಳು ಹ್ಯುಂಡೈ ಕಂಪನಿಯ ಮಾರಾಟದಲ್ಲಿ ಅಗ್ರಸ್ಥಾನದಲ್ಲಿವೆ.

ಇವಿ ವಾಹನ ಹೆಚ್ಚಳಕ್ಕೆ ಕ್ರಮ, ಕಾರು ಉತ್ಪಾದನೆಯಲ್ಲಿ ಹ್ಯುಂಡೈ ಹೊಸ ದಾಖಲೆ!

ಬಿಡುಗಡೆಯಾಗಲಿವೆ ಹ್ಯಾರಿಯರ್, ನೆಕ್ಸಾನ್ ಮತ್ತು ಆಲ್‌ಟ್ರೋಜ್ ಡಾರ್ಕ್ ಎಡಿಷನ್

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಜನಪ್ರಿಯ ಕಾರು ಮಾದರಿಗಳಾದ ಹ್ಯಾರಿಯರ್, ನೆಕ್ಸಾನ್ ಮತ್ತು ಆಲ್‌ಟ್ರೊಜ್ ಕಾರು ಮಾದರಿಗಳಲ್ಲಿ ಡಾರ್ಕ್ ಎಡಿಷನ್ ಬಿಡುಗಡೆ ಮಾಡುತ್ತಿದ್ದು, ಹೊಸ ಬಣ್ಣದ ಆಯ್ಕೆಯ ಕಾರು ಮಾದರಿಗಳಾಗಿ ಈಗಾಗಲೇ ಬುಕ್ಕಿಂಗ್ ಪ್ರಕ್ರಿಯೆ ಕೂಡಾ ಆರಂಭವಾಗಿದೆ.

ಇವಿ ವಾಹನ ಹೆಚ್ಚಳಕ್ಕೆ ಕ್ರಮ, ಕಾರು ಉತ್ಪಾದನೆಯಲ್ಲಿ ಹ್ಯುಂಡೈ ಹೊಸ ದಾಖಲೆ!

ಕಳೆದ ವರ್ಷ ಮೊದಲ ಬಾರಿಗೆ ಹ್ಯಾರಿಯರ್ ಕಾರು ಮಾದರಿಯಲ್ಲಿ ಡಾರ್ಕ್ ಎಡಿಷನ್ ಪರಿಚಯಿಸಿದ್ದ ಟಾಟಾ ಮೋಟಾರ್ಸ್ ಕಂಪನಿಯು ಇದೀಗ ಹ್ಯಾರಿಯರ್ 2021ರ ಮಾದರಿಯ ಡಾರ್ಕ್ ಎಡಿಷನ್‌ನೊಂದಗೆ ನೆಕ್ಸಾನ್ ಮತ್ತು ಆಲ್‌ಟ್ರೊಜ್ ಮಾದರಿಗಳಲ್ಲೂ ಹೊಸ ಬಣ್ಣದ ಆಯ್ಕೆ ಪರಿಚಯಿಸುವ ಮೂಲಕ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

Most Read Articles

Kannada
English summary
Top Auto News Of This Week. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X