ವಾರದ ಪ್ರಮುಖ ಆಟೋ ಸುದ್ದಿ: ಬಿಸಿತುಪ್ಪವಾದ ಲಾಕ್‌ಡೌನ್, ವಾಹನಗಳ ಬೆಲೆ ಹೆಚ್ಚಳ, ವಾರಂಟಿ ಅವಧಿ ವಿಸ್ತರಣೆ..

ಕೋವಿಡ್ ಪರಿಣಾಮ ದೇಶಿಯ ಆಟೋ ಉದ್ಯಮವು ಈ ಹಿಂದಿನ ಲಾಕ್‌ಡೌನ್‌ಗಿಂತಲೂ ಹೆಚ್ಚಿನ ಮಟ್ಟದ ನಷ್ಟ ಭೀತಿಯಲ್ಲಿದ್ದು, ಉತ್ಪಾದನೆ ಸ್ಥಗಿತದ ಜೊತೆಗ ವಾಹನ ಉತ್ಪಾದನಾ ಬಿಡಿಭಾಗಗಳ ಬೆಲೆ ಏರಿಕೆಯು ವಾಹನ ಕಂಪನಿಗಳಿಗೆ ಬಿಸಿತುಪ್ಪವಾಗುತ್ತಿದೆ. ಇದರ ನಡುವೆ ವಾರಂಟಿ ಅವಧಿ ಮುಕ್ತಾಯದ ಕುರಿತು ಗೊಂದಲದಲ್ಲಿದ್ದ ಗ್ರಾಹಕರಿಗೆ ವಿವಿಧ ಕಾರು ಕಂಪನಿಗಳು ವಾರಂಟಿ ವಿಸ್ತರಣೆ ಮಾಡಿದ್ದಲ್ಲದೆ ಕೇಂದ್ರ ಸರ್ಕಾರದ ಮನವಿ ಮೇರೆಗೆ ಕೋವಿಡ್ ಪರಿಹಾರ ಕಾರ್ಯದಲ್ಲಿ ಆಟೋ ಉತ್ಪಾದನಾ ಕಂಪನಿಗಳ ನೆರವು ಸೇರಿದಂತೆ ಈ ವಾರದ ಪ್ರಮುಖ ಸುದ್ದಿಗಳ ಹೈಲೆಟ್ಸ್‌ ಇಲ್ಲಿ ತಿಳಿಯೋಣ.

ಈ ವಾರದ ಪ್ರಮುಖ ಆಟೋ ಸುದ್ದಿಗಳು

ಹೊಸ ವಾಹನಗಳ ಉತ್ಪಾದನೆ ಸ್ಥಗಿತ, ಮಾರಾಟದಲ್ಲೂ ಕುಸಿತ

2020 ಮಾರ್ಚ್ ಮತ್ತು ಏಪ್ರಿಲ್ ಅವಧಿಯಲ್ಲಿನ ಲಾಕ್‌ಡೌನ್‌ ಹೊಡೆತಕ್ಕೆ ಸಿಲುಕಿ ಸುಧಾರಣೆಯ ಹಾದಿಯಲ್ಲಿದ್ದ ಆಟೋ ಉದ್ಯಮವು ಇದೀಗ ಮತ್ತಷ್ಟು ಸಂಕಷ್ಟ ಪರಿಸ್ಥಿತಿಗೆ ಸಿಲುಕಿದೆ. ಬಹುತೇಕ ವಾಹನ ಉತ್ಪಾದನಾ ಕಂಪನಿಗಳು ಉದ್ಯೋಗಿಗಳ ಆರೋಗ್ಯದ ದೃಷ್ಠಿಯಿಂದ ಹೊಸ ವಾಹನಗಳ ಉತ್ಪಾದನೆಯನ್ನೇ ತಾತ್ಕಾಲಿಕವಾಗಿ ಬಂದ್ ಮಾಡಿವೆ. ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದ್ದ ಸಂದರ್ಭದಲ್ಲೇ ಲಾಕ್‌ಡೌನ್‌ನಿಂದಾಗಿ ಭಾರೀ ಪ್ರಮಾಣದ ನಷ್ಟ ಎದುರಿಸುವ ಭೀತಿ ಎದುರಾಗಿದ್ದು, ಹೊಸ ಸುರಕ್ಷಾ ಕ್ರಮಗಳ ನಡುವೆಯೂ ಗ್ರಾಹಕರು ಹೊಸ ವಾಹನಗಳ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.

ಈ ವಾರದ ಪ್ರಮುಖ ಆಟೋ ಸುದ್ದಿಗಳು

ವೈದ್ಯಕೀಯ ಸೇವೆಗಳಿಗೆ ಕೈಜೋಡಿಸಿದ ಆಟೋ ಉತ್ಪಾದನಾ ಕಂಪನಿಗಳು

ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಲು ವೈದ್ಯಕೀಯ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದ್ದು, ಆಕ್ಸಿಜನ್ ಉತ್ಪಾದನಾ ಕಂಪನಿಗಳಿಗೆ ಬೇಡಿಕೆ ಪೂರೈಸಲು ಸಾಧ್ಯವಾಗದ ಪರಿಣಾಮ ವಾಹನ ಉತ್ಪಾದನೆಯನ್ನು ಸ್ಥಗಿತಗೊಳಿಸಿರುವ ಪ್ರಮುಖ ಕಾರು ಕಂಪನಿಗಳು ಮೆಡಿಕಲ್ ಆಕ್ಸಿಜನ್ ಉತ್ಪಾದಿಸುತ್ತಿದ್ದು, ಇನ್ನು ಕೆಲವು ಆಟೋ ಕಂಪನಿಗಳು ಭಾರೀ ಪ್ರಮಾಣದ ದೇಣಿಗೆ ನೀಡಿವೆ.

ಈ ವಾರದ ಪ್ರಮುಖ ಆಟೋ ಸುದ್ದಿಗಳು

ಕಾರ್ ಆಂಬ್ಯುಲೆನ್ಸ್ ನಿಯೋಜಿಸಿದ ಎಂಜಿ ಮೋಟಾರ್

ಕೋವಿಡ್ ವಿರುದ್ದದ ಹೋರಾಟದಲ್ಲಿ ಆರಂಭದಿಂದಲೂ ವಿವಿಧ ಹಂತಗಳಲ್ಲಿ ವಿವಿಧ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರಕ್ಕೆ ಹಣಕಾಸಿನ ಜೊತೆ ವೈದ್ಯಕೀಯ ಸೇವೆಗಳ ನೆರವು ನೀಡಿರುವ ಎಂಜಿ ಮೋಟಾರ್ ಕಂಪನಿಯು ಇದೀಗ ಕೇಂದ್ರ ಸಚಿವರ ಸೂಚನೆ ಮೇರೆಗೆ ವೈದ್ಯಕೀಯ ಸೇವೆಗಳಿಗೆ ಮತ್ತೊಂದು ಸಹಕಾರ ನೀಡಿ ಸಾರ್ವಜನಿಕ ಮೆಚ್ಚುಗೆಗೆ ಪಾತ್ರವಾಗಿದೆ.

ಈ ವಾರದ ಪ್ರಮುಖ ಆಟೋ ಸುದ್ದಿಗಳು

ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ(ಸಿಎಸ್‍ಆರ್) ನೀತಿ ಅಡಿಯಲ್ಲಿ ನಾಗಪುರ ಮತ್ತು ಅಮರಾವತಿ ವಿಭಾಗಗಳನ್ನು ಒಳಗೊಂಡ ವಿದರ್ಭದಲ್ಲಿ ಆಂಬ್ಯುಲೆನ್ಸ್ ಕೊರತೆ ನಿಗಿಸಲು ಎಂಜಿ ಮೋಟಾರ್ ಮತ್ತು ಪೆಟಿಎಂ ಕಂಪನಿಗಳು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಮನವಿ ಮೇರೆಗೆ ತುರ್ತಾಗಿ ಸುಮಾರು 8 ಕಾರ್ ಆಂಬ್ಯುಲೆನ್ಸ್‌ಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ನಿಯೋಜಿಸಿವೆ.

ಈ ವಾರದ ಪ್ರಮುಖ ಆಟೋ ಸುದ್ದಿಗಳು

ವಾಹನಗಳ ವಾರಂಟಿ ಅವಧಿ ಹೆಚ್ಚಿಸಿದ ವಿವಿಧ ಆಟೋ ಉತ್ಪಾದನಾ ಕಂಪನಿಗಳು

ಲಾಕ್‌ಡೌನ್ ಅವಧಿಯಲ್ಲಿ ಕೊನೆಗೊಳ್ಳಲಿರುವ ವಾಹನಗಳ ವಾರಂಟಿ ಅವಧಿಯನ್ನು ಬಹುತೇಕ ಕಂಪನಿಗಳು ವಿಸ್ತರಣೆ ಮಾಡಿದ್ದು, ಹೊಸ ಕಾರುಗಳನ್ನು ಹೊರ ತೆಗೆಯಲು ಸಾಧ್ಯವಿಲ್ಲದ ಸಂದರ್ಭದಲ್ಲಿ ತನ್ನ ಗ್ರಾಹಕರಿಗೆ ಸಿಹಿಸುದ್ದಿ ನೀಡಿವೆ.

ಈ ವಾರದ ಪ್ರಮುಖ ಆಟೋ ಸುದ್ದಿಗಳು

ಕೋವಿಡ್ ಹೆಚ್ಚುತ್ತಿರುವ ಸಂದರ್ಭದಲ್ಲಿ ವಾಹನ ಮಾರಾಟಕ್ಕೆ ಕೆಲವು ಕಡೆಗಳಲ್ಲಿ ಷರತ್ತು ಬದ್ದ ಅವಕಾಶಗಳಿದ್ದರೂ ಗ್ರಾಹಕರ ಸೇವೆಗಳನ್ನು ಪೂರೈಸುವುದು ಆಟೋ ಉತ್ಪಾದನಾ ಕಂಪನಿಗಳಿಗೆ ಸವಾಲಿನ ಕೆಲಸವಾಗಿದೆ. ಆದರೆ ಲಾಕ್‌ಡೌನ್ ಅವಧಿಯಲ್ಲಿ ಮುಕ್ತಾಯಗೊಳ್ಳಲಿರುವ ನಿಗದಿತ ಅವಧಿಯ ಸೇವೆಗಳನ್ನು ಪಡೆದುಕೊಳ್ಳದ ವಾಹನಗಳ ವಾರಂಟಿ ಆಫರ್ ಮುಗಿದುಹೋಗಲಿದ್ದು, ವಾರಂಟಿ ಅವಧಿ ಮುಕ್ತಾಯದಿಂದ ಉಚಿತ ಸೇವೆಗಳನ್ನು ಕಳೆದುಕೊಳ್ಳಲಿರುವ ಗ್ರಾಹಕರಿಗೆ ವಾಹನ ಉತ್ಪಾದನಾ ಕಂಪನಿಗಳು ಸಿಹಿಸುದ್ದಿ ಪ್ರಕಟಿಸಿದೆ.

ಈ ವಾರದ ಪ್ರಮುಖ ಆಟೋ ಸುದ್ದಿಗಳು

ಬಿಎಸ್-6 ಇಸುಝು ಡಿ-ಕ್ರಾಸ್ ವಿ-ಕ್ರಾಸ್ ಬಿಡುಗಡೆ

ಕಳೆದ ವರ್ಷವೇ ಬಿಡುಗಡೆಯಾಗಬೇಕಿದ್ದ ಬಿಎಸ್-6 ಡಿ-ಕ್ರಾಸ್ ವಿ-ಕ್ರಾಸ್ ಮಾದರಿಯನ್ನು ಕೋವಿಡ್ ಪರಿಣಾಮ ಇಸುಝು ಕಂಪನಿಯು ಮುಂದೂಡಿಕೆ ಮಾಡುತ್ತಾ ಇದೀಗ ಕೋವಿಡ್ 2ನೇ ಅಲೆ ಹೆಚ್ಚಳ ಸಂದರ್ಭದಲ್ಲಿ ಬಿಡುಗಡೆ ಮಾಡಿದೆ.

ಈ ವಾರದ ಪ್ರಮುಖ ಆಟೋ ಸುದ್ದಿಗಳು

ಹೊಸ ಡಿ-ಕ್ರಾಸ್ ವಿ-ಕ್ರಾಸ್ ಪಿಕ್‌ಅಪ್ ಎಸ್‌ಯುವಿ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಹೊಚ್ಚ ಹೊಸ ಹೈ-ಲ್ಯಾಂಡರ್ ವೆರಿಯೆಂಟ್‌ನೊಂದಿಗೆ ಪ್ರಮುಖ ಮೂರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಹೈ-ಲ್ಯಾಂಡರ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 16.98 ಲಕ್ಷ ಬೆಲೆ ಹೊಂದಿದ್ದರೆ, ಜೆಡ್ ಸೀರಿಸ್ ಮಾದರಿಗಳು ಎಕ್ಸ್‌ಶೋರೂಂ ಪ್ರಕಾರ ರೂ. 19.98 ಲಕ್ಷದಿಂದ ರೂ. 24.49 ಲಕ್ಷ ಬೆಲೆ ಹೊಂದಿವೆ.

ಈ ವಾರದ ಪ್ರಮುಖ ಆಟೋ ಸುದ್ದಿಗಳು

2021ರ ಎಂಯು-ಎಕ್ಸ್ ಎಸ್‌ಯುವಿ ಬಿಡುಗಡೆ

ಹೊಸ ಎಮಿಷನ್‌ನೊಂದಿಗೆ ಹೊಸ ಕಾರು ಮಾದರಿಗಳ ಎಂಜಿನ್ ಆಯ್ಕೆಯಲ್ಲಿ ಹೊಸ ಬದಲಾವಣೆ ಪರಿಚಯಿಸಿರುವ ಇಸುಝು ಕಂಪನಿಯು ಎಂಯು-ಎಕ್ಸ್ ಮಾದರಿಯಲ್ಲಿ 4x2 ಆಟೋಮ್ಯಾಟಿಕ್ ಮತ್ತು 4x4 ಆಟೋಮ್ಯಾಟಿಕ್ ಮಾದರಿಗಳೊಂದಿಗೆ ಬಿಡುಗಡೆ ಮಾಡಿದ್ದು, ಹೊಸ ಕಾರು ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 33.23 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 35.19 ಲಕ್ಷ ಬೆಲೆ ಹೊಂದಿದೆ.

ಈ ವಾರದ ಪ್ರಮುಖ ಆಟೋ ಸುದ್ದಿಗಳು

2021ರ ಸೆಲ್ಟೊಸ್ ಮತ್ತು ಸೊನೆಟ್ ಕಾರುಗಳ ವಿತರಣೆಗೆ ಚಾಲನೆ

ಕಿಯಾ ಇಂಡಿಯಾ ಕಂಪನಿಯು ಕಳೆದ ವಾರವಷ್ಟೇ ತನ್ನ ಜನಪ್ರಿಯ ಕಾರು ಮಾದರಿಗಳಾದ ಸೆಲ್ಟೊಸ್ ಮತ್ತು ಸೊನೆಟ್ ಕಾರುಗಳ 2021ರ ಆವೃತ್ತಿಗಳನ್ನು ಬಿಡುಗಡೆ ಮಾಡಿದ್ದು, ಹೊಸ ಕಾರುಗಳ ವಿತರಣೆಯನ್ನು ಇದೀಗ ಆರಂಭಿಸಲಾಗಿದೆ.

ಈ ವಾರದ ಪ್ರಮುಖ ಆಟೋ ಸುದ್ದಿಗಳು

2021ರ ಸೆಲ್ಟೊಸ್ ಮತ್ತು ಸೊನೆಟ್ ಆವೃತ್ತಿಗಳು ಬ್ರಾಂಡ್ ನ್ಯೂ ಲೊಗೊ ಸೇರಿದಂತೆ ಕೆಲವು ಪ್ರಮುಖ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ಕಾರುಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.79 ಲಕ್ಷ(ಸೊನೆಟ್) ಮತ್ತು ರೂ. 9.95 ಲಕ್ಷ(ಸೆಲ್ಟೊಸ್) ಬೆಲೆ ಹೊಂದಿವೆ. 2021ರ ಸೆಲ್ಟೊಸ್ ಮತ್ತು ಸೊನೆಟ್ ಕಾರುಗಳಲ್ಲಿ ಹೊಸ ಲೊಗೊ ವಿನ್ಯಾಸವು ಕಾರುಗಳಿಗೆ ಮತ್ತಷ್ಟು ಮೆರಗು ನೀಡುತ್ತಿದ್ದು, ಸೊನೆಟ್ ಮಾದರಿಯಲ್ಲಿ ಹೊಸ ಲೊಗೊ ಹೊರತುಪಡಿಸಿ ಈ ಹಿಂದಿನ ತಾಂತ್ರಿಕ ಅಂಶಗಳನ್ನೆ ಮುಂದುವರಿಸಲಾಗಿದೆ.

Most Read Articles

Kannada
English summary
Top Auto News Of The Week. Read in Kannada.
Story first published: Sunday, May 16, 2021, 3:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X