ವಾರದ ಪ್ರಮುಖ ಸುದ್ದಿ: ವಾಹನ ದಾಖಲೆಗಳ ಮಾನ್ಯತೆ ಅವಧಿ ವಿಸ್ತರಣೆ, ಹೊಸ ವಾಹನ ಬಿಡುಗಡೆ ಮುಂದೂಡಿಕೆ..

ಕೋವಿಡ್ ಪರಿಣಾಮ ದೇಶಿಯ ಆಟೋ ಉದ್ಯಮವು ಈ ಹಿಂದಿನ ಲಾಕ್‌ಡೌನ್‌ಗಿಂತಲೂ ಈ ಬಾರಿ ಹೆಚ್ಚಿನ ಮಟ್ಟದ ನಷ್ಟ ಎದುರಿಸುತ್ತಿದ್ದು, ವಾಹನ ಉತ್ಪಾದನೆ ಸ್ಥಗಿತದ ಜೊತೆಗೆ ವಾಹನ ಮಾರಾಟಕ್ಕೂ ಅವಕಾಶ ಇಲ್ಲದಿರುವುದು ಆಟೋ ಕಂಪನಿಗಳಿಗೆ ಉದ್ಯಮ ಚಟುವಟಿಕೆಯನ್ನು ಮುಂದುವರಿಸುವುದು ಬಿಸಿತುಪ್ಪವಾಗಿ ಪರಿಣಮಿಸಿದೆ.

ವಾರದ ಪ್ರಮುಖ ಆಟ ಸುದ್ದಿ: ವಾಹನ ದಾಖಲೆಗಳ ಮಾನ್ಯತೆ ಅವಧಿ ವಿಸ್ತರಣೆ, ಹೊಸ ಕಾರುಗಳ ಬಿಡುಗಡೆ ಮುಂದೂಡಿಕೆ..

ಕಳೆದ ವರ್ಷದ ಕೋವಿಡ್ ಅಬ್ಬರ ತಗ್ಗಿದ ನಂತರ ವಾಹನ ಉತ್ಪಾದನೆಯಲ್ಲಿ ಭಾರೀ ಏರಿಕೆ ಕಂಡಿದ್ದ ಆಟೋ ಉತ್ಪಾದನಾ ಕಂಪನಿಗಳಿಗೆ ಕೋವಿಡ್ ಎರಡನೇ ಅಲೆಯು ಭಾರೀ ಪ್ರಮಾಣದ ನಷ್ಟ ಭೀತಿ ಉಂಟು ಮಾಡುತ್ತಿದ್ದು, ಉತ್ಪಾದನೆ ಮತ್ತು ಮಾರಾಟ ಎರಡರ ಮೇಲೂ ಹೊಡೆತ ನೀಡುತ್ತಿದೆ. ಜೊತೆಗೆ ಮೇ ಮತ್ತು ಜೂನ್ ಅವಧಿಯಲ್ಲಿ ಬಿಡುಗಡೆಯಾಗಬೇಕಿದ್ದ ಹಲವಾರು ಹೊಸ ವಾಹನಗಳ ಬಿಡುಗಡೆಯೂ ಮುಂದಿನ ಕೆಲ ತಿಂಗಳಿಗೆ ಮುಂದೂಡಿಕೆ ಮಾಡಲಾಗಿದ್ದು, ಇನ್ನು ಹಲವು ಪ್ರಮುಖಸುದ್ದಿಗಳ ಹೈಲೆಟ್ಸ್‌ ಇಲ್ಲಿ ತಿಳಿಯೋಣ.

ವಾರದ ಪ್ರಮುಖ ಆಟ ಸುದ್ದಿ: ವಾಹನ ದಾಖಲೆಗಳ ಮಾನ್ಯತೆ ಅವಧಿ ವಿಸ್ತರಣೆ, ಹೊಸ ಕಾರುಗಳ ಬಿಡುಗಡೆ ಮುಂದೂಡಿಕೆ..

ಉತ್ಪಾದನೆಯಲ್ಲಿ ಕುಂಠಿತ, ಮಾರಾಟದಲ್ಲೂ ಕುಸಿತ

ಈ ಹಿಂದಿನ ಲಾಕ್‌ಡೌನ್‌ ಹೊಡೆತಕ್ಕೆ ಸಿಲುಕಿ ಸುಧಾರಣೆಯ ಹಾದಿಯಲ್ಲಿದ್ದ ಆಟೋ ಉದ್ಯಮವು ಇದೀಗ ಮತ್ತಷ್ಟು ಸಂಕಷ್ಟಕರ ಪರಿಸ್ಥಿತಿಗೆ ಸಿಲುಕಿದೆ. ಬಹುತೇಕ ವಾಹನ ಉತ್ಪಾದನಾ ಕಂಪನಿಗಳು ಉದ್ಯೋಗಿಗಳ ಆರೋಗ್ಯದ ದೃಷ್ಠಿಯಿಂದ ಹೊಸ ವಾಹನಗಳ ಉತ್ಪಾದನೆಯನ್ನೇ ತಾತ್ಕಾಲಿಕವಾಗಿ ಬಂದ್ ಮಾಡಿವೆ.

ವಾರದ ಪ್ರಮುಖ ಆಟ ಸುದ್ದಿ: ವಾಹನ ದಾಖಲೆಗಳ ಮಾನ್ಯತೆ ಅವಧಿ ವಿಸ್ತರಣೆ, ಹೊಸ ಕಾರುಗಳ ಬಿಡುಗಡೆ ಮುಂದೂಡಿಕೆ..

ಜೊತೆಗೆ ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದ್ದ ಸಂದರ್ಭದಲ್ಲೇ ಲಾಕ್‌ಡೌನ್‌ನಿಂದಾಗಿ ಭಾರೀ ಪ್ರಮಾಣದ ನಷ್ಟ ಎದುರಿಸುವ ಭೀತಿ ಎದುರಾಗಿದ್ದು, ಆರ್ಥಿಕ ಅಭದ್ರತೆಯಿಂದಾಗಿ ಗ್ರಾಹಕರು ಸಹ ಹೊಸ ವಾಹನಗಳ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.

ವಾರದ ಪ್ರಮುಖ ಆಟ ಸುದ್ದಿ: ವಾಹನ ದಾಖಲೆಗಳ ಮಾನ್ಯತೆ ಅವಧಿ ವಿಸ್ತರಣೆ, ಹೊಸ ಕಾರುಗಳ ಬಿಡುಗಡೆ ಮುಂದೂಡಿಕೆ..

ವೈದ್ಯಕೀಯ ಸೇವೆಗಳಿಗೆ ಕೈಜೋಡಿಸಿದ ವಿವಿಧ ಆಟೋ ಉತ್ಪಾದನಾ ಕಂಪನಿಗಳು

ಕೋವಿಡ್ ಸೋಂಕಿತರಿಗೆ ಸರಿಯಾದ ಸಮಯಕ್ಕೆ ಆಕ್ಸಿಜನ್ ಸಿಗದ ಪರಿಣಾಮ ಸಾವಿರಾರು ಸೋಂಕಿತರು ದಿನಂಪ್ರತಿ ಜೀವಕಳೆದುಕೊಳ್ಳವಂತಾಯಿತು. ಈ ವೇಳೆ ಆಕ್ಸಿಜನ್ ಉತ್ಪಾದನಾ ಕಂಪನಿಗಳಿಗೆ ಬೇಡಿಕೆ ಪೂರೈಸಲು ಸಾಧ್ಯವಾಗದ ಪರಿಣಾಮ ವಾಹನ ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದ ಪ್ರಮುಖ ಕಾರು ಕಂಪನಿಗಳು ಮೆಡಿಕಲ್ ಆಕ್ಸಿಜನ್ ಅನ್ನು ಉತ್ಪಾದಿಸುತ್ತಿದ್ದು, ಇನ್ನು ಕೆಲವು ಆಟೋ ಕಂಪನಿಗಳು ಭಾರೀ ಪ್ರಮಾಣದ ದೇಣಿಗೆ ನೀಡಿ ಸರ್ಕಾರದ ಪ್ರಯತ್ನಗಳಿಗೆ ಸಹಕಾರಿಯಾಗಿವೆ.

ವಾರದ ಪ್ರಮುಖ ಆಟ ಸುದ್ದಿ: ವಾಹನ ದಾಖಲೆಗಳ ಮಾನ್ಯತೆ ಅವಧಿ ವಿಸ್ತರಣೆ, ಹೊಸ ಕಾರುಗಳ ಬಿಡುಗಡೆ ಮುಂದೂಡಿಕೆ..

ವಾಹನ ದಾಖಲೆಗಳ ಮಾನ್ಯತಾ ಅವಧಿ ವಿಸ್ತರಣೆ

ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿರುವ ವಾಹನ ಮಾಲೀಕರಿಗೆ ಕೆಲವು ಪ್ರಮುಖ ವಿನಾಯ್ತಿಗಳನ್ನು ನೀಡಲಾಗಿದೆ. ಕಳೆದ ವರ್ಷದಿಂದ ಸುಮಾರು ಆರು ಬಾರಿ ವಾಹನಗಳ ಅಗತ್ಯ ದಾಖಲೆಗಳ ಮಾನ್ಯತಾ ಅವಧಿಯನ್ನು ವಿಸ್ತರಿಸಲಾಗಿದ್ದು, ಇದೀಗ 2ನೇ ಅಲೆಯ ಸಂದರ್ಭದಲ್ಲೂ ಡ್ರೈವಿಂಗ್ ಲೈಸೆನ್ಸ್, ಆರ್‌ಸಿ, ಎಫ್‌ಸಿ ಮಾನ್ಯತಾ ಅವಧಿ ಮತ್ತೆ ವಿಸ್ತರಿಸಲಾಗಿದೆ.

ವಾರದ ಪ್ರಮುಖ ಆಟ ಸುದ್ದಿ: ವಾಹನ ದಾಖಲೆಗಳ ಮಾನ್ಯತೆ ಅವಧಿ ವಿಸ್ತರಣೆ, ಹೊಸ ಕಾರುಗಳ ಬಿಡುಗಡೆ ಮುಂದೂಡಿಕೆ..

ಏಪ್ರಿಲ್ 30ರಿಂದ ಅನ್ವಯವಾಗುವಂತೆ ವಾಹನಗಳ ಅಗತ್ಯ ದಾಖಲೆಗಳ ಮಾನ್ಯತಾ ಅವಧಿಯನ್ನು ವಿಸ್ತರಣೆ ಮಾಡಿರುವ ಕೇಂದ್ರ ಸಾರಿಗೆ ಇಲಾಖೆಯು ದಾಖಲೆಗಳ ಮಾನ್ಯತಾ ಅವಧಿಯನ್ನು ಜೂನ್ 30ರ ತನಕ ಮಾನ್ಯತಾ ಅವಧಿಯನ್ನು ವಿಸ್ತರಣೆ ಮಾಡಿದೆ.

ವಾರದ ಪ್ರಮುಖ ಆಟ ಸುದ್ದಿ: ವಾಹನ ದಾಖಲೆಗಳ ಮಾನ್ಯತೆ ಅವಧಿ ವಿಸ್ತರಣೆ, ಹೊಸ ಕಾರುಗಳ ಬಿಡುಗಡೆ ಮುಂದೂಡಿಕೆ..

ಹೊಸ ಉತ್ಪಾದನಾ ಘಟಕ ಆರಂಭಿಸಿದ ಅಪೊಲೊ ಟೈರ್ಸ್

ದೇಶದ ಮುಂಚೂಣಿ ಟೈರ್ ಉತ್ಪಾದನಾ ಕಂಪನಿಯಾಗಿರುವ ಅಪೊಲೊ ಟೈರ್ಸ್ ಹೊಸ ಉತ್ಪಾದನಾ ಘಟಕಗಳ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದ್ದು, ಕಂಪನಿಯು ಇತ್ತೀಚೆಗೆ ತನ್ನ 7ನೇ ಟೈರ್ ಉತ್ಪಾದನಾ ಘಟಕಕ್ಕೆ ಅಧಿಕೃತವಾಗಿ ಚಾಲನೆ ನೀಡಿತು.

ವಾರದ ಪ್ರಮುಖ ಆಟ ಸುದ್ದಿ: ವಾಹನ ದಾಖಲೆಗಳ ಮಾನ್ಯತೆ ಅವಧಿ ವಿಸ್ತರಣೆ, ಹೊಸ ಕಾರುಗಳ ಬಿಡುಗಡೆ ಮುಂದೂಡಿಕೆ..

ಚಿತ್ತೂರು ಜಿಲ್ಲೆಯ ಚಿನ್ನಪಂದೂರಿನಲ್ಲಿ ನಿರ್ಮಾಣಗೊಂಡಿರುವ ಅಪೊಲೊ ಹೊಸ ಟೈರ್ ಘಟಕವು ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ದಿಗೊಂಡಿದ್ದು, ಸುಮಾರು 256 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಹೊಸ ಘಟಕದಲ್ಲಿ ಪ್ರತಿ ತಿಂಗಳಿಗೆ ಕನಿಷ್ಠ 5 ಲಕ್ಷ ಟೈರ್‌ಗಳು ಉತ್ಪಾದನೆಗೊಳಿಸುವ ಗುರಿಹೊಂದಲಾಗಿದೆ.

ವಾರದ ಪ್ರಮುಖ ಆಟ ಸುದ್ದಿ: ವಾಹನ ದಾಖಲೆಗಳ ಮಾನ್ಯತೆ ಅವಧಿ ವಿಸ್ತರಣೆ, ಹೊಸ ಕಾರುಗಳ ಬಿಡುಗಡೆ ಮುಂದೂಡಿಕೆ..

ಹೊಸ ಕಾರು ಬಿಡುಗಡೆಗೊಳಿಸಿದ ರೋಲ್ಸ್ ರಾಯ್ಸ್

ವಿಶ್ವದ ಜನಪ್ರಿಯ ಐಷಾರಾಮಿ ಕಾರು ತಯಾರಕ ಕಂಪನಿಯಾದ ರೋಲ್ಸ್ ರಾಯ್ಸ್ ವಿಶ್ವದ ಅತಿ ದುಬಾರಿ ಬೆಲೆಯ ಕಾರನ್ನು ಬಿಡುಗಡೆಗೊಳಿಸಿದೆ. ಕಂಪನಿಯು ಈ ಸೂಪರ್ ಐಷಾರಾಮಿ ಕಾರಿಗೆ ಬೋಟ್ ಟೇಲ್ ಎಂದು ಹೆಸರಿಟ್ಟಿದೆ.

ವಾರದ ಪ್ರಮುಖ ಆಟ ಸುದ್ದಿ: ವಾಹನ ದಾಖಲೆಗಳ ಮಾನ್ಯತೆ ಅವಧಿ ವಿಸ್ತರಣೆ, ಹೊಸ ಕಾರುಗಳ ಬಿಡುಗಡೆ ಮುಂದೂಡಿಕೆ..

ರೋಲ್ಸ್ ರಾಯ್ಸ್ ಬೋಟ್ ಟೇಲ್ ಕಾರಿನ ಬೆಲೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 28 ಮಿಲಿಯನ್ ಡಾಲರ್ ಅಂದರೆ ಸುಮಾರು ರೂ.200 ಕೋಟಿಗಳಾಗಿದೆ. ರೋಲ್ಸ್ ರಾಯ್ಸ್ ಬೋಟ್ ಟೇಲ್ ಕಾರ್ ಅನ್ನು ಕಂಪನಿಯ ಅತ್ಯಂತ ಐಷಾರಾಮಿ ಕಾರು ಎಂದು ಪರಿಗಣಿಸಲಾಗಿದೆ.

ವಾರದ ಪ್ರಮುಖ ಆಟ ಸುದ್ದಿ: ವಾಹನ ದಾಖಲೆಗಳ ಮಾನ್ಯತೆ ಅವಧಿ ವಿಸ್ತರಣೆ, ಹೊಸ ಕಾರುಗಳ ಬಿಡುಗಡೆ ಮುಂದೂಡಿಕೆ..

ಅಲ್ಟ್ರಾ ಎಕ್ಸ್‌ಕ್ಲೂಸಿವ್ ಎಕ್ಸ್7 ಡಾರ್ಕ್ ಶ್ಯಾಡೋ ಎಡಿಷನ್ ಅನಾವರಣ

ಜರ್ಮನ್ ಮೂಲದ ಐಷಾರಾಮಿ ಕಾರು ತಯಾರ ಕಂಪನಿಯಾದ ಬಿಎಂಡಬ್ಲ್ಯು ಭಾರತೀಯ ಮಾರುಕಟ್ಟೆಯಲ್ಲಿ ಅಲ್ಟ್ರಾ ಎಕ್ಸ್‌ಕ್ಲೂಸಿವ್ ಎಕ್ಸ್7 ಡಾರ್ಕ್ ಶ್ಯಾಡೋ ಎಡಿಷನ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಐಷಾರಾಮಿ ಬಿಎಂಡಬ್ಲ್ಯು ಎಸ್‍ಯುವಿಯು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆ ಪ್ರವೇಶಿಸಲಿದೆ.

ವಾರದ ಪ್ರಮುಖ ಆಟ ಸುದ್ದಿ: ವಾಹನ ದಾಖಲೆಗಳ ಮಾನ್ಯತೆ ಅವಧಿ ವಿಸ್ತರಣೆ, ಹೊಸ ಕಾರುಗಳ ಬಿಡುಗಡೆ ಮುಂದೂಡಿಕೆ..

ಬಿಎಂಡಬ್ಲ್ಯುನ ಪ್ರಮುಖ ಎಸ್‍ಯುವಿಯಾದ ಡಾರ್ಕ್ ಶ್ಯಾಡೋ ಎಡಿಷನ್ ಅನ್ನು 2020ರಲ್ಲಿ ಪರಿಚಯಿಸಲಾಯಿತು. ಇದರ ಅಲ್ಟ್ರಾ ಎಕ್ಸ್‌ಕ್ಲೂಸಿವ್ ಎಕ್ಸ್7 ಡಾರ್ಕ್ ಶ್ಯಾಡೋ ಎಡಿಷನ್ ಅನ್ನು ವಿಶ್ವದಾದ್ಯಂತ ಕೇವಲ 500 ಯುನಿಟ್ ಗಳಾಗಿ ಸೀಮಿತವಾಗಿ ಬಿಡುಗಡೆಗೊಳಿಸಲಿದೆ. ಇದರ ರೇಂಜ್-ಟಾಪಿಂಗ್ M50ಐ ರೂಪಾಂತರವನ್ನು ಆಧರಿಸಿದೆ, ಇದು ಆಕರ್ಷಕವಾದ ಬ್ಲ್ಯಾಕ್ ಬಣ್ಣದ ಥೀಮ್ ಅನ್ನು ಒಳಗೊಂಡಿದೆ.

ವಾರದ ಪ್ರಮುಖ ಆಟ ಸುದ್ದಿ: ವಾಹನ ದಾಖಲೆಗಳ ಮಾನ್ಯತೆ ಅವಧಿ ವಿಸ್ತರಣೆ, ಹೊಸ ಕಾರುಗಳ ಬಿಡುಗಡೆ ಮುಂದೂಡಿಕೆ..

ನೆಕ್ಸ್‌ಜು ರೋಡ್‌ಲಾರ್ಕ್ ಕಾರ್ಗೋ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆ

ನೆಕ್ಸ್‌ಜು ಮೊಬಿಲಿಟಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ರೋಡ್‌ಲಾರ್ಕ್ ಕಾರ್ಗೋ ಎಲೆಕ್ಟ್ರಿಕ್ ಸೈಕಲ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ನೆಕ್ಸ್‌ಜು ರೋಡ್‌ಲಾರ್ಕ್ ಕಾರ್ಗೋ ಎಲೆಕ್ಟ್ರಿಕ್ ಸೈಕಲ್ ಬೆಲೆಯು ರೂ.42,000 ಆಗಿದೆ.

ವಾರದ ಪ್ರಮುಖ ಆಟ ಸುದ್ದಿ: ವಾಹನ ದಾಖಲೆಗಳ ಮಾನ್ಯತೆ ಅವಧಿ ವಿಸ್ತರಣೆ, ಹೊಸ ಕಾರುಗಳ ಬಿಡುಗಡೆ ಮುಂದೂಡಿಕೆ..

ಇ-ಸೈಕಲ್‌ನ ಪವರ್‌ಟ್ರೇನ್‌ನ ಬಗ್ಗೆ ಹೇಳುವುದಾದರೆ, ಡ್ಯುಯಲ್ ಬ್ಯಾಟರಿ ಪ್ಯಾಕ್ ಅನ್ನು 250ಡಬ್ಲ್ಯು 36ವಿ ಬಿಎಲ್‌ಡಿಸಿ ಎಲೆಕ್ಟ್ರಿಕ್ ಮೋಟರ್‌ಗೆ ಜೋಡಿಸಲಾಗಿದೆ. ರೋಡ್‌ಲಾರ್ಕ್ ಪೆಡ್ಲೆಕ್' ಮೋಡ್‌ನಲ್ಲಿ 100 ಕಿ.ಮೀ ರೇಂಜ್ ಅನ್ನು 'ಥ್ರೊಟಲ್' ಮೋಡ್‌ನಲ್ಲಿ 75 ಕಿ.ಮೀ ರೇಂಜ್ ಅನ್ನು ನೀಡುತ್ತದೆ.

Most Read Articles

Kannada
English summary
Top Auto News Of The Week. Read in Kannada.
Story first published: Sunday, May 30, 2021, 13:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X