ವಾರದ ಸುದ್ದಿ: ಸಂಕಷ್ಟದಲ್ಲಿ ಆಟೋ ಉದ್ಯಮ, ಆಕ್ಸಿಜನ್ ಉತ್ಪಾದನೆ ಕೈಜೋಡಿಸಿದ ಕಾರು ಕಂಪನಿಗಳು..

ಕೋವಿಡ್ ಅಬ್ಬರದ ನಡುವೆಯೂ ಕಳೆದ ವರ್ಷದ ಕೊನೆಯಲ್ಲಿ ಮತ್ತು ಈ ವರ್ಷದ ಆರಂಭದಲ್ಲಿ ದೇಶಿಯ ಆಟೋ ಉದ್ಯಮವು ಹಲವಾರು ಹೊಸ ಬದಲಾವಣೆಗಳೊಂದಿಗೆ ದಾಖಲೆ ಪ್ರಮಾಣದ ವಾಹನಗಳ ಮಾರಾಟಕ್ಕೆ ಸಾಕ್ಷಿಯಾಗುತ್ತಿತ್ತು. ಬದಲಾದ ಪರಿಸ್ಥಿತಿಯಲ್ಲಿ ಇದೀಗ ಕೋವಿಡ್ 2ನೇ ಅಲೆ ಹೆಚ್ಚಿರುವುದರಿಂದ ಆಟೋ ಉದ್ಯಮವು ಈ ಹಿಂದಿಗಿಂತಲೂ ಹೆಚ್ಚಿನ ಮಟ್ಟದಲ್ಲಿ ನೆಲಕಚ್ಚುವ ಭೀತಿಯಲ್ಲಿದ್ದು, ಈ ವಾರದ ಪ್ರಮುಖ ಸುದ್ದಿಗಳ ಹೈಲೆಟ್ಸ್‌ ಇಲ್ಲಿ ತಿಳಿಯೋಣ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಹೊಸ ವಾಹನಗಳ ಉತ್ಪಾದನೆಯಲ್ಲಿ ಕುಂಠಿತ, ಮಾರಾಟದಲ್ಲೂ ಕುಸಿತ

2020 ಮಾರ್ಚ್ ಮತ್ತು ಏಪ್ರಿಲ್ ಅವಧಿಯಲ್ಲಿನ ಲಾಕ್‌ಡೌನ್‌ ಹೊಡೆತಕ್ಕೆ ಸಿಲುಕಿ ಸುಧಾರಣೆಯ ಹಾದಿಯಲ್ಲಿದ್ದ ಆಟೋ ಉದ್ಯಮವು ಇದೀಗ ಮತ್ತೊಮ್ಮೆ ಸಂಕಷ್ಟ ಪರಿಸ್ಥಿತಿಯಲ್ಲಿ ಸಿಲುಕಿದ್ದು, ಬಹುತೇಕ ವಾಹನ ಉತ್ಪಾದನಾ ಕಂಪನಿಗಳು ಉದ್ಯೋಗಿಗಳ ಆರೋಗ್ಯದ ದೃಷ್ಠಿಯಿಂದ ಹೊಸ ವಾಹನಗಳ ಉತ್ಪಾದನೆಯನ್ನೇ ತಾತ್ಕಾಲಿಕವಾಗಿ ಬಂದ್ ಮಾಡಿದ್ದರೆ ಇನ್ನು ಕೆಲವು ವಾಹನ ಕಂಪನಿಗಳು ಕನಿಷ್ಠ ಪ್ರಮಾಣದ ಉದ್ಯೋಗಿಗಳೊಂದಿಗೆ ಸಾಧ್ಯವಿರುವಷ್ಟು ಉತ್ಪಾದನೆ ಕೈಗೊಳ್ಳುತ್ತಿವೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದ್ದ ಸಂದರ್ಭದಲ್ಲೇ ಲಾಕ್‌ಡೌನ್‌ನಿಂದಾಗಿ ಭಾರೀ ಪ್ರಮಾಣದ ನಷ್ಟ ಎದುರಿಸುವ ಭೀತಿ ಎದುರಾಗಿದ್ದು, ಹೊಸ ಸುರಕ್ಷಾ ಕ್ರಮಗಳ ನಡುವೆಯೂ ಗ್ರಾಹಕರು ಹೊಸ ವಾಹನಗಳ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಕಳೆದ ಕೆಲ ತಿಂಗಳಿನಿಂದ ಹೊಸ ವಾಹನಗಳಿಗೆ ದಾಖಲಾಗಿರುವ ಬುಕ್ಕಿಂಗ್ ಪ್ರಮಾಣವು ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದ್ದು, ಈಗಾಗಲೇ ಬುಕ್ಕಿಂಗ್ ಮಾಡಿದ್ದ ಹಲವಾರು ಗ್ರಾಹಕರು ಬುಕ್ಕಿಂಗ್ ಹಿಂಪಡೆದುಕೊಳ್ಳುತ್ತಿರುವುದು ವಾಹನ ಕಂಪನಿಗಳಿಗೆ ಭಾರೀ ಎದುರಿಸಬೇಕಾದ ಪರಿಸ್ಥಿತಿ ಎದುರಾಗಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಆಕ್ಸಿಜನ್ ಕೊರತೆ ನಿವಾರಿಸಲು ಮುಂದಾದ ಕಾರು ಕಂಪನಿಗಳು

ಕೋವಿಡ್ ಹರಡುವಿಕೆಯನ್ನು ತಡೆಯಲು ಮಾಸ್ಕ್, ಹ್ಯಾಂಡ್ ಸ್ಯಾನಿಟೈಜ್ ಮತ್ತು ಫೇಸ್-ಶೀಲ್ಡ್‌ಗಳ ಬಳಕೆಯು ಹೆಚ್ಚಿಸಲಾಗುತ್ತಿದ್ದರೂ ಸೋಂಕಿತರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಲು ವೈದ್ಯಕೀಯ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ಅದರಲ್ಲೂ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಕೋವಿಡ್ ಸೋಂಕಿತರಿಗೆ ಅಗತ್ಯವಾಗಿರುವ ಆಕ್ಸಿಜನ್ ಕೊರತೆಯು ಸಾವಿನ ಸಂಖ್ಯೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗುತ್ತಿದ್ದು, ಆಕ್ಸಿಜನ್ ಉತ್ಪಾದನಾ ಕಂಪನಿಗಳಿಗೆ ಬೇಡಿಕೆ ಪೂರೈಸಲು ಸಾಧ್ಯವಾಗುತ್ತಿಲ್ಲ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಹೀಗಾಗಿ ಆಕ್ಸಿಜನ್ ಪೂರೈಕೆ ಮಾಡಲು ಪರದಾಡುತ್ತಿರುವ ಆಕ್ಸಿಜನ್ ಕಂಪನಿಗಳು ಸಾಮಾರ್ಥ್ಯ ಮೀರಿ ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸಿದ್ದು, ಕೆಲವು ಆಕ್ಸಿಜನ್ ಉತ್ಪಾದನಾ ಕಂಪನಿಗಳು ವಿವಿಧ ಆಟೋ ಉತ್ಪಾದನಾ ಕಂಪನಿಗಳ ಜೊತೆಗೂಡಿ ತಾತ್ಕಾಲಿಕ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ತೆರೆಯುತ್ತಿವೆ. ಮಾರುತಿ ಸುಜುಕಿ, ಟಾಟಾ ಮೋಟಾರ್ಸ್ ಮತ್ತು ಎಂಜಿ ಮೋಟಾರ್ಸ್ ಸೇರಿದಂತೆ ಹಲವು ಕಂಪನಿಗಳು ಮೆಡಿಕಲ್ ಆಕ್ಸಿಜನ್ ಉತ್ಪಾದನೆಗೆ ಕೈಜೋಡಿಸಿದ್ದು, ಹೀರೋ ಮೋಟೊಕಾರ್ಪ್ ಕಂಪನಿಯು ಕೋವಿಡ್ ಕೇರ್ ಆರಂಭಿಸಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

14 ದಿನಗಳ ಕಾಲ ಟೈಟ್ ಕರ್ಫ್ಯೂ

ದೇಶಾದ್ಯಂತ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳು ಸೋಂಕು ಹರಡುವಿಕೆಯನ್ನು ತಗ್ಗಿಸಲು ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಕರ್ನಾಟಕವು ಸೇರಿದಂತೆ ಸೋಂಕು ಹೆಚ್ಚಿರುವ ಪ್ರಮುಖ ನಗರಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಕರ್ಫ್ಯೂ ವೇಳೆ ಸಾರ್ವಜನಿಕರಿಗೆ ಬೆಳಗಿನ 6ರಿಂದ 10ರ ತನಕ ಮಾತ್ರವೇ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದು, ನಿಗದಿತ ಅವಧಿ ನಂತರ ಟೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಕರ್ಫ್ಯೂ ಸಂದರ್ಭದಲ್ಲಿ ಸಾಮಾನ್ಯ ವಾಹನಗಳ ಸಂಚಾರವೂ ಕೂಡಾ ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಅಗತ್ಯ ಸೇವೆಗಳಿಗಾಗಿ ಬಳಕೆಯಾಗುವ ವಾಹನ ಸಂಚಾರವನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಮಾದರಿಗಳ ವಾಹನ ಸಂಚಾರವನ್ನು ಕಟ್ಟುನಿಟ್ಟಾಗಿ ಬಂದ್ ಮಾಡಲಾಗುತ್ತದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

2021ರ ಕಿಯಾ ಸೆಲ್ಟೊಸ್ ಮತ್ತು ಸೊನೆಟ್ ಬಿಡುಗಡೆ

ಕಿಯಾ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಕಾರು ಮಾದರಿಗಳಾದ ಸೆಲ್ಟೊಸ್ ಮತ್ತು ಸೊನೆಟ್ ಆವೃತ್ತಿಯ 2021ರ ಮಾದರಿಗಳನ್ನು ಕೋವಿಡ್ ಅಬ್ಬರದ ನಡುವೆಯೇ ಡಿಜಿಟಲ್ ಪ್ಲ್ಯಾಟ್‌ಫಾರ್ಮ್ ಮೂಲಕ ಬಿಡುಗಡೆಗೊಳಿಸಿದ್ದು, ಹೊಸ ಕಾರುಗಳು ಬ್ರಾಂಡ್ ನ್ಯೂ ಲೊಗೊ ಸೇರಿದಂತ ಕೆಲವು ಪ್ರಮುಖ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿವೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

2021ರ ಸೆಲ್ಟೊಸ್ ಮತ್ತು ಸೊನೆಟ್ ಕಾರುಗಳಲ್ಲಿ ಹೊಸ ಲೊಗೊ ವಿನ್ಯಾಸವು ಕಾರುಗಳಿಗೆ ಮತ್ತಷ್ಟು ಮೆರಗು ನೀಡುತ್ತಿದ್ದು, ಹೊಸ ಕಾರುಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.79 ಲಕ್ಷ(ಸೊನೆಟ್) ಮತ್ತು ರೂ. 9.95 ಲಕ್ಷ(ಸೆಲ್ಟೊಸ್) ಬೆಲೆ ಹೊಂದಿವೆ. ಕೋವಿಡ್ ಹಿನ್ನಲೆಯಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಕಂಪನಿಯು ಸದ್ಯಕ್ಕೆ ಕೆಲವೇ ಕೆಲವು ತಾಂತ್ರಿಕ ಅಂಶಗಳ ಬದಲಾವಣೆಯೊಂದಿಗೆ 2021ರ ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಡಿಸೈನ್ ಹೊಂದಿರುವ ಸೆಲ್ಟೊಸ್ ಫೇಸ್‌ಲಿಫ್ಟ್ ಮಾದರಿಯ ಬಿಡುಗಡೆಯನ್ನು ಮುಂದಿನ ವರ್ಷಕ್ಕೆ ಮುಂದೂಡಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಅಂತಾರಾಜ್ಯ ವಾಹನಗಳ ವರ್ಗಾವಣೆಗೆ ಹೊಸ ಮಾದರಿಯ ನಂಬರ್ ಪ್ಲೇಟ್

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ದೇಶಾದ್ಯಂತ ಚಾಲ್ತಿಯಲ್ಲಿ ವಾಹನ ನೋಂದಣಿಯಲ್ಲಿ ಮಹತ್ವದ ಬದಲಾವಣೆ ತರುವ ಕುರಿತು ಹೊಸ ವ್ಯವಸ್ಥೆಯೊಂದರ ಕುರಿತು ಪ್ರಸ್ತಾಪಿಸಿದ್ದು, ಹೊಸ ಪ್ರಸ್ತಾಪವು ಅಂತರರಾಜ್ಯ ವಾಹನಗಳ ವರ್ಗಾವಣೆಯನ್ನು ಮತ್ತಷ್ಟು ಸರಳಗೊಳಿಸಲಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಪ್ರಸ್ತುತ ಮೋಟಾರ್ ವಾಹನಗಳ ಕಾಯ್ದೆಯಲ್ಲಿ ಯಾವುದೇ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ತೆರಳಿ ಅಲ್ಲಿಯೇ ನೆಲೆಯೂರುವ ವಾಹನ ಮಾಲೀಕರು ನಿಗದಿತ ಅವಧಿಯ ನಂತರ ಆ ರಾಜ್ಯದ ನೋಂದಣಿ ಪಡೆದುಕೊಳ್ಳಬೇಕಾಗುತ್ತದೆ. ಆದರೆ ಚಾಲ್ತಿಯಲ್ಲಿ ಅಂತರರಾಜ್ಯ ವಾಹನ ವರ್ಗಾವಣೆ ಪ್ರಕ್ರಿಯೆಯು ಹಲವಾರು ಗೊಂದಲಗಳಿಂದಾಗಿ ವರ್ಗಾವಣೆಯ ಪ್ರಕ್ರಿಯೆಯಲ್ಲಿ ಸಾಕಷ್ಟು ವಿಳಂಬವಾಗುತ್ತಿರುವುದಕ್ಕೆ ಹೊಸ ವ್ಯವಸ್ಥೆಯೊಂದನ್ನು ಜಾರಿಗೆ ತರುವ ಸಿದ್ದತೆ ನಡೆಸಲಾಗುತ್ತಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮಾಡಲಿದೆ ಓಲಾ ಎಲೆಕ್ಟ್ರಿಕ್

ದೇಶಿಯ ಮಾರುಕಟ್ಟೆಯಲ್ಲಿ ಮುಂದಿನ ಕೆಲವೇ ತಿಂಗಳಿನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಆರಂಭಿಸಲು ಸಜ್ಜಾಗುತ್ತಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಭವಿಷ್ಯದಲ್ಲಿ ಹಲವಾರು ಹೊಸ ಯೋಜನೆಗಳನ್ನು ಸಿದ್ದಪಡಿಸುತ್ತಿದ್ದು, ಇವಿ ಸ್ಕೂಟರ್ ಜೊತೆಗೆ ಬಜೆಟ್ ಬೆಲೆಯ ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ದಿಗೊಳಿಸುವ ಯೋಜನೆಯಲ್ಲಿದೆ.

ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಓಲಾ ಕಂಪನಿಯಯು ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯ ನಂತರ ಮತ್ತಷ್ಟು ಹೊಸ ಯೋಜನೆಗಳಿಗೆ ಚಾಲನೆ ನೀಡಲಿದ್ದು, ಭಾರತೀಯ ಗ್ರಾಹಕರ ಅಭಿರುಚಿಗೆ ತಕ್ಕಂತೆ ಕಂಪ್ಯಾಕ್ಟ್ ಎಲೆಕ್ಟ್ಕಿಕ್ ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಹೊಸ ಯೋಜನೆಗಾಗಿ ಓಲಾ ಕಂಪನಿಯು ಆರಂಭಿಕ ಬಂಡವಾಳವಾಗಿ ರೂ. 2,400 ಕೋಟಿ ಹೂಡಿಕೆ ಮಾಡಲಾಗುತ್ತಿದ್ದು, ಸದ್ಯ ಇವಿ ಸ್ಕೂಟರ್ ಮಾತ್ರ ಉತ್ಪಾದನೆ ಮಾಡಲಿರುವ ಕಂಪನಿಯು ಮುಂಬರುವ ದಿನಗಳಲ್ಲಿ ಗ್ರಾಹಕರ ಬೇಡಿಕೆಯೆಂತೆ ಹಲವು ಹೊಸ ಇವಿ ವಾಹನಗಳನ್ನು ಅಭಿವೃದ್ದಿಪಡಿಸಲಿದೆ.

Most Read Articles

Kannada
English summary
Top Auto News Of The Week. Read in Kannada.
Story first published: Saturday, May 1, 2021, 16:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X