ವಾರದ ಪ್ರಮುಖ ಸುದ್ದಿ: ಕುಸಿದ ವಾಹನ ಮಾರಾಟ ಮತ್ತು ಉತ್ಪಾದನೆ, ಗ್ರಾಹಕರನ್ನು ಸೆಳೆಯಲು ವಿವಿಧ ಕಂಪನಿಗಳಿಂದ ಆಫರ್!

ಎರಡನೇ ಅಲೆಯ ಕೋವಿಡ್ ಪರಿಣಾಮ ದೇಶಿಯ ಆಟೋ ಉದ್ಯಮವು ಈ ಹಿಂದಿನ ಲಾಕ್‌ಡೌನ್‌ಗಿಂತಲೂ ಈ ಬಾರಿ ಹೆಚ್ಚಿನ ಮಟ್ಟದ ನಷ್ಟಕ್ಕೆ ಒಳಗಾಗಿದ್ದು, ವಾಹನ ಉತ್ಪಾದನೆ ಸ್ಥಗಿತದ ಜೊತೆಗೆ ವಾಹನ ಮಾರಾಟಕ್ಕೆ ಮುಕ್ತ ಅವಕಾಶ ಇಲ್ಲದಿರುವುದು ಆಟೋ ಕಂಪನಿಗಳಿಗೆ ಉದ್ಯಮ ಚಟುವಟಿಕೆಯನ್ನು ಮುಂದುವರಿಸುವುದೇ ಒಂದು ದೊಡ್ಡ ಸವಾಲಾಗಿದೆ.

ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಕಳೆದ ವರ್ಷದ ಕೋವಿಡ್ ಅಬ್ಬರ ತಗ್ಗಿದ ನಂತರ ದಸರಾ ಮತ್ತು ದೀಪಾವಳಿಯಲ್ಲಿ ವೇಳೆಗೆ ಉತ್ಪಾದನೆಯಲ್ಲಿ ಭಾರೀ ಏರಿಕೆ ಕಂಡಿದ್ದ ಆಟೋ ಉತ್ಪಾದನಾ ಕಂಪನಿಗಳಿಗೆ ಕೋವಿಡ್ ಎರಡನೇ ಅಲೆಯು ನಷ್ಟಕ್ಕೆ ಸಿಲುಕಿದೆ. ಇದು ಉತ್ಪಾದನೆ ಮತ್ತು ಮಾರಾಟ ಎರಡರ ಮೇಲೂ ಹೊಡೆತ ನೀಡುತ್ತಿದ್ದು, ಜೊತೆಗೆ ಮೇ ಮತ್ತು ಜೂನ್ ಅವಧಿಯಲ್ಲಿ ಬಿಡುಗಡೆಯಾಗಬೇಕಿದ್ದ ಹಲವಾರು ಹೊಸ ವಾಹನಗಳ ಬಿಡುಗಡೆಯೂ ಮುಂದಿನ ಕೆಲ ತಿಂಗಳಿಗೆ ಮುಂದೂಡಿಕೆ ಮಾಡಲಾಗಿದ್ದು, ಈ ವಾರದ ಪ್ರಮುಖ ಸುದ್ದಿಗಳ ಹೈಲೆಟ್ಸ್ ಇಲ್ಲಿದೆ.

ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಉತ್ಪಾದನೆಯಲ್ಲಿ ಕುಂಠಿತ, ಮಾರಾಟದಲ್ಲೂ ಕುಸಿತ

ಲಾಕ್‌ಡೌನ್‌ ಹೊಡೆತಕ್ಕೆ ಸಿಲುಕಿ ಸುಧಾರಣೆಯ ಹಾದಿಯಲ್ಲಿದ್ದ ಆಟೋ ಉದ್ಯಮವು ಇದೀಗ ಮತ್ತಷ್ಟು ಸಂಕಷ್ಟಕರ ಪರಿಸ್ಥಿತಿಗೆ ಸಿಲುಕಿದೆ. ಬಹುತೇಕ ವಾಹನ ಉತ್ಪಾದನಾ ಕಂಪನಿಗಳು ಉದ್ಯೋಗಿಗಳ ಆರೋಗ್ಯದ ದೃಷ್ಠಿಯಿಂದ ಹೊಸ ವಾಹನಗಳ ಉತ್ಪಾದನೆಯನ್ನೇ ತಾತ್ಕಾಲಿಕವಾಗಿ ಬಂದ್ ಮಾಡಿದ್ದು, ಉತ್ಪಾದನೆಯಲ್ಲಿ ಶೇ.60 ರಿಂದ ಶೇ.70 ರಷ್ಟು ಕುಸಿತ ಕಂಡಿದೆ.

ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಜೊತೆಗೆ ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದ್ದ ಸಂದರ್ಭದಲ್ಲೇ ಲಾಕ್‌ಡೌನ್‌ನಿಂದಾಗಿ ಭಾರೀ ಪ್ರಮಾಣದ ನಷ್ಟ ಎದುರಿಸುವ ಭೀತಿ ಎದುರಾಗಿದೆ. ಆರ್ಥಿಕ ಅಭದ್ರತೆಯಿಂದಾಗಿ ಗ್ರಾಹಕರು ಸಹ ಹೊಸ ವಾಹನಗಳ ಖರೀದಿಗೆ ಹಿಂದೇಟು ಹಾಕುತ್ತಿದ್ದು, ಮೇ ಅವಧಿಯಲ್ಲಿನ ಕಾರು ಮಾರಾಟದಲ್ಲೂ ಬಹುತೇಕ ಕಾರು ಕಂಪನಿಗಳು ಏಪ್ರಿಲ್ ಅವಧಿಯಲ್ಲಿನ ಕಾರು ಮಾರಾಟಕ್ಕಿಂತಲೂ ಶೇ.50 ರಿಂದ ಶೇ.70 ರಷ್ಟು ಕುಸಿತ ಕಂಡಿವೆ.

ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಗ್ರಾಹಕರಿಗೆ ಮಹೀಂದ್ರಾ ಹೊಸ ಆಫರ್

ಕೋವಿಡ್ ಆತಂಕದಿಂದ ಆಟೋ ಉದ್ಯಮವು ತೀವ್ರ ಹಿನ್ನಡೆ ಅನುಭವಿಸುತ್ತಿದ್ದು, ಹೊಸ ವಾಹನ ಮಾರಾಟದಲ್ಲಿ ಭಾರೀ ಪ್ರಮಾಣದ ಕುಸಿತ ಕಂಡಿದೆ. ಕೋವಿಡ್ ಸಂಕಷ್ಟದಿಂದಾಗಿ ವಾಹನ ಖರೀದಿ ಪ್ರಕ್ರಿಯೆಯಿಂದ ಹಿಂದೆ ಸರಿಯುತ್ತಿರುವ ಗ್ರಾಹಕರು ಸೆಳೆಯಲು ಮಹೀಂದ್ರಾ ಕಂಪನಿಯು ಹೊಸ ಫೈನಾನ್ಸ್ ಆಫರ್ ನೀಡುತ್ತಿದೆ.

ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಹೊಸ ಫೈನಾನ್ಸ್ ಆಫರ್‌ನಲ್ಲಿ ಕಾರು ಖರೀದಿಸುವ ಗ್ರಾಹಕರಿಗೆ ಹೊಸ ಕಾರು ವಿತರಣೆ ಮಾಡಿದ 90 ದಿನಗಳ ನಂತರ ಇಎಂಐ ಪಾವತಿ ಆರಂಭಕ್ಕೆ ಅವಕಾಶ ನೀಡಿದ್ದು, ಕಾರು ಖರೀದಿಯನ್ನು ಮುಂದೂಡಿರುವ ಗ್ರಾಹಕರಿಗೆ ಸಾಕಷ್ಟು ಸಹಕಾರಿಯಾಗಿದೆ.

ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಪೊಲೊ ಕಂಫರ್ಟ್‌ಲೈನ್ ಟಿಎಸ್ಐ ಎಟಿ ವರ್ಷನ್ ಬಿಡುಗಡೆ

ಫೋಕ್ಸ್‌ವ್ಯಾಗನ್ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಜನಪ್ರಿಯ ಕಾರು ಮಾದರಿಗಳಾದ ಪೊಲೊ ಹ್ಯಾಚ್‌ಬ್ಯಾಕ್ ಕಾರು ಮಾದರಿಗಳಲ್ಲಿ ಹೊಸದಾಗಿ ಕಂಫರ್ಟ್‌ಲೈನ್ ಆಟೋಮ್ಯಾಟಿಕ್ ಮಾದರಿಯನ್ನು ಟಿಎಸ್ಐ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆ ಮಾಡಿದೆ.

ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಪೊಲೊ ಹ್ಯಾಚ್‌ಬ್ಯಾಕ್ ಕಾರಿನ ಕಂಫರ್ಟ್‌ಲೈನ್ ಟಿಎಸ್ಐ ಮಾದರಿಯನ್ನು ಸ್ಥಗಿತಗೊಳ್ಳಲಿರುವ ಟರ್ಬೊ ಮಾದರಿಯನ್ನು ಆಧರಿಸಿ ಬಿಡುಗಡೆ ಮಾಡಿದ್ದು, ಸ್ಟ್ಯಾಂಡರ್ಡ್ ಕಂಪರ್ಟ್‌ಲೈನ್ ಮಾದರಿಗಿಂತಲೂ ಹೊಸ ಆವೃತ್ತಿಗಳಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಪರಿಚಯಿಸಲಾಗಿದೆ. ಹೊಸ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 8.51 ಲಕ್ಷ ಬೆಲೆ ಹೊಂದಿದ್ದು, ಹೊಸ ಕಾರಿನ ಬೆಲೆಯು ಸ್ಟ್ಯಾಂಡರ್ಡ್ ಕಂಪರ್ಟ್‌ಲೈನ್ ಮಾದರಿಗಿಂತಲೂ ತುಸು ದುಬಾರಿಯಾಗಿದೆ.

ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

1,360 ಯುನಿಟ್ ಅಲ್ಕಾಜರ್ ನೋಂದಣಿ ಮಾಡಿದ ಹ್ಯುಂಡೈ

ಹ್ಯುಂಡೈೈ ಹೊಸ ಕಾರು ಬಿಡುಗಡೆ ಮುನ್ನ ಈಗಾಗಲೇ ಪ್ರಮುಖ ಡೀಲರ್ಸ್ ಯಾರ್ಡ್‌ಗಳಲ್ಲಿ ಪ್ರದರ್ಶನಕ್ಕಾಗಿ ಅಲ್ಕಾಜರ್ ಮಾದರಿಯನ್ನು ನೋಂದಣಿ ಮಾಡಿಸಲಾಗಿದ್ದು, ಮುಂದಿನ ವಾರ ಲಾಕ್‌ಡೌನ್ ಸಡಿಲಿಕೆ ನಂತರ ಆಸಕ್ತ ಗ್ರಾಹಕರಿಗಾಗಿ ಟೆಸ್ಟ್ ಡ್ರೈವ್ ಆರಂಭಿಸಲಾಗುತ್ತಿದ್ದು, ಹೊಸ ಕಾರು ಟಾಟಾ ಸಫಾರಿ ಮತ್ತು ಎಂಜಿ ಹೆಕ್ಟರ್ ಪ್ಲಸ್ ಕಾರುಗಳಿಗೆ ಉತ್ತಮ ಪೈಪೋಟಿ ನೀಡಲಿದೆ.

ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಕ್ರೆಟಾ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಆಧರಿಸಿ ನಿರ್ಮಾಣವಾಗಿರುವ ಹೊಸ ಅಲ್ಕಾಜರ್ ಕಾರು ಮಾದರಿಯು ವಿವಿಧ ಆರು ವೆರಿಯೆಂಟ್‌ಗಳೊಂದಿಗೆ ಸೆಗ್ಮೆಂಟ್ ಫಸ್ಟ್ ಫೀಚರ್ಸ್ ಹೊಂದಿದ್ದು, ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರು 6 ಸೀಟರ್ ಮತ್ತು 7 ಸೀಟರ್ ಮಾದರಿಯಲ್ಲಿ ಖರೀದಿಗೆ ಲಭ್ಯವಿರಲಿದೆ.

ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಮೇಬ್ಯಾಚ್ ಜಿಎಲ್ಎಸ್600 ಕಾರು ಬಿಡುಗಡೆ ಮಾಹಿತಿ ಖಚಿತ

ಜರ್ಮನಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ಪ್ರಸಕ್ತ ಹಣಕಾಸು ವರ್ಷದಲ್ಲಿ ಹೊಸ ಕಾರುಗಳ ಬಿಡುಗಡೆ ಮಾಹಿತಿ ಹಂಚಿಕೊಂಡಿದ್ದು, ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಬಹುನೀರಿಕ್ಷಿತ ಮೇಬ್ಯಾಚ್ ಜಿಎಲ್ಎಸ್600 ಅಲ್ಟ್ರಾ ಲಗ್ಷುರಿ ಎಸ್‌ಯುವಿಯನ್ನು ಇದೇ ತಿಂಗಳು 8ರಂದು ಬಿಡುಗಡೆಯಾಗುತ್ತಿದೆ.

ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಕ್ರ್ಯಾಶ್‌ ಟೆಸ್ಟಿಂಗ್‌ನಲ್ಲಿ ಮಿಂಚಿದ ರೆನಾಲ್ಟ್ ಟ್ರೈಬರ್

ಹೊಸ ಕಾರುಗಳ ಉತ್ಪಾದನೆಯಲ್ಲಿ ಸಾಕಷ್ಟು ಬದಲಾವಣೆ ಪರಿಚಯಿಸಿರುವ ರೆನಾಲ್ಟ್ ಟ್ರೈಬರ್ ಕಾರು ಎಂಪಿವಿ ಕಾರು ಮಾದರಿಯು ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಉತ್ತಮ ಅಂಕಗಳೊಂದಿಗೆ ಸುರಕ್ಷಿತ ಕಾರು ಮಾದರಿಯಾಗಿ ಹೊರಹೊಮ್ಮಿದೆ.

ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಒಟ್ಟು ಐದು ಅಂಕಗಳಿಗೆ ನಾಲ್ಕು ಅಂಕ ಪಡೆದುಕೊಂಡಿರುವ ಟ್ರೈಬರ್ ಕಾರು ಮಾದರಿಯು ವಯಸ್ಕ ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ಖಾತ್ರಿಪಡಿಸಿದ್ದಲ್ಲಿ ಮಕ್ಕಳ ಸುರಕ್ಷಾ ವಿಚಾರವಾಗಿ ಒಟ್ಟು ಐದು ಅಂಕಗಳಲ್ಲಿ ಮೂರು ಅಂಕಗಳನ್ನು ಪಡೆದುಕೊಂಡಿದೆ.

ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಕೆಎಸ್‌ಆರ್‌ಟಿಸಿ ಟ್ರೇಡ್‌ಮಾರ್ಕ್ ಗೊಂದಲಕ್ಕೆ ಸ್ಪಷ್ಟನೆ ನೀಡಿದ ರಾಜ್ಯ ಸಾರಿಗೆ ಇಲಾಖೆ

ಕೆಎಸ್‌ಆರ್‌ಟಿಸಿ ಟ್ರೇಡ್‌ಮಾರ್ಕ್ ಬಳಕೆ ವಿಚಾರಕ್ಕೆ ರಾಜ್ಯ ಸಾರಿಗೆ ನಿಗಮವು ಕೊನೆಗೂ ಮಾಧ್ಯಮಗಳ ವರದಿಗಳಿಗೆ ಪ್ರಕ್ರಿಯೆಸಿದ್ದು, ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳನ್ನು ತಳ್ಳಿಹಾಕಿದೆ.

ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳು

ಕೊರೊನಾ ಹಾವಳಿಯ ನಡುವೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಇನ್ಮುಂದೆ 'ಕೆಎಸ್‌ಆರ್‌ಟಿಸಿ' ಟ್ರೇಡ್‌ಮಾರ್ಕ್ ಬಳಕೆ ಮಾಡಬಾರದೆಂದು ಕೋರ್ಟ್ ತೀರ್ಪು ನೀಡಿರುವುದಾಗಿ ಸುದ್ದಿಯೊಂದು ಭಾರೀ ಸಂಚಲನ ಮೂಡಿಸಿತ್ತು. ಆದರೆ ಟ್ರೇಡ್‌ಮಾರ್ಕ್ ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಮಾಧ್ಯಮ ವರದಿಗಳ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದೆ.

Most Read Articles

Kannada
English summary
Top Auto News Of The Week. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X