ವಾರದ ಪ್ರಮುಖ ಸುದ್ದಿ: ಜೆಡ್ಎಸ್ ಇವಿ ಬಿಡುಗಡೆ, ಡಿಎಲ್‌‌ಗೆ ಹೊಸ ವಿಧಾನ, ಬಿಸಿ ತುಪ್ಪವಾಗಲಿದೆ ಪಾರ್ಕಿಂಗ್ ನೀತಿ!

ಆಟೋ ಮಾರುಕಟ್ಟೆಯಲ್ಲಿ ಹೊಸ ವಾಹನಗಳ ಮಾರಾಟವು ಸುಧಾರಣೆಗೊಂಡಿರುವ ಹಿನ್ನಲೆಯಲ್ಲಿ ವಾಹನಗಳ ಬಿಡುಗಡೆ ಪ್ರಕ್ರಿಯೆ ಜೋರಾಗುತ್ತಿದ್ದು, ಈ ವಾರದ ಪ್ರಮುಖ ಆಟೋ ಉತ್ಪಾದನಾ ಸುದ್ದಿಗಳಲ್ಲಿ ವಿವಿಧ ಹೊಸ ವಾಹನಗಳ ಬಿಡುಗಡೆಯ ಜೊತೆಗೆ ಹೊಸ ವಾಹನಗಳ ಸಂಖ್ಯೆಯನ್ನು ನಿಯಂತ್ರಿಸಲು ಜಾರಿಗೆ ತರಲಾಗುತ್ತಿರುವ ಪಾರ್ಕಿಂಗ್ ನೀತಿಯು ಪ್ರಮುಖವಾಗಿದೆ. ಹಾಗಾದ್ರೆ ಈ ವಾರದ ಪ್ರಮುಖ ಸುದ್ದಿಗಳಲ್ಲಿ ಯಾವೆಲ್ಲಾ ಹೊಸ ವಾಹನ ಬಿಡುಗಡೆಯಾಗಿವೆ ಮತ್ತು ಸರ್ಕಾರವು ಜಾರಿಗೆ ತರುತ್ತಿರುವ ಹೊಸ ನಿಯಮಗಳ ಮಾಹಿತಿಯನ್ನು ತಿಳಿಯೋಣ.

ವಾರದ ಪ್ರಮುಖ ಸುದ್ದಿ: ಹೊಸ ಜೆಡ್ಎಸ್ ಇವಿ ಬಿಡುಗಡೆ, ಡಿಎಲ್‌ ಅರ್ಜಿಗೆ ಹೊಸ ವಿಧಾನ, ಬಿಸಿ ತುಪ್ಪವಾಗಲಿದೆ ಹೊಸ ಪಾರ್ಕಿಂಗ್ ನೀತಿ..

2021ರ ಎಂಜಿ ಜೆಡ್ಎಸ್ ಇವಿ ಬಿಡುಗಡೆ

ಎಂಜಿ ಮೋಟಾರ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಮಾದರಿಯಾದ ಜೆಡ್ಎಸ್ ಇವಿ ಕಾರಿನ 2021ರ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿನ ಆವೃತ್ತಿಗಿಂತಲೂ ಹಲವಾರು ಹೊಸ ಬದಲಾವಣೆಗಳೊಂದಿಗೆ 419 ಕಿ.ಮೀ ಮೈಲೇಜ್ ನೀಡುವ ಹೈಟೆಕ್ ತಂತ್ರಜ್ಞಾನ ಪ್ರೇರಿತ 44.5 kWh ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿದೆ.

ವಾರದ ಪ್ರಮುಖ ಸುದ್ದಿ: ಹೊಸ ಜೆಡ್ಎಸ್ ಇವಿ ಬಿಡುಗಡೆ, ಡಿಎಲ್‌ ಅರ್ಜಿಗೆ ಹೊಸ ವಿಧಾನ, ಬಿಸಿ ತುಪ್ಪವಾಗಲಿದೆ ಹೊಸ ಪಾರ್ಕಿಂಗ್ ನೀತಿ..

ಹೊಸ ಜೆಡ್ಎಸ್ ಎಲೆಕ್ಟ್ರಿಕ್ ಎಸ್‌ಯುವಿ ಆವೃತ್ತಿಯು ಎಕ್ಸೈಟ್ ಮತ್ತು ಎಕ್ಸ್‌ಕ್ಲೂಸಿವ್ ಎನ್ನುವ ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕ ಎಕ್ಸೈಟ್ ಮಾದರಿಯು ರೂ. 20,99,800 ಮತ್ತು ಎಕ್ಸ್‌ಕ್ಲೂಸಿವ್ ಮಾದರಿಯು ರೂ. 24,18,000 ಬೆಲೆ ಹೊಂದಿದೆ.

ವಾರದ ಪ್ರಮುಖ ಸುದ್ದಿ: ಹೊಸ ಜೆಡ್ಎಸ್ ಇವಿ ಬಿಡುಗಡೆ, ಡಿಎಲ್‌ ಅರ್ಜಿಗೆ ಹೊಸ ವಿಧಾನ, ಬಿಸಿ ತುಪ್ಪವಾಗಲಿದೆ ಹೊಸ ಪಾರ್ಕಿಂಗ್ ನೀತಿ..

ಪಾರ್ಕಿಂಗ್ ನೀತಿ 2.0

ಹೊಸ ಪಾರ್ಕಿಂಗ್ ನೀತಿಯನ್ನು ಕ್ರಮಬದ್ದವಾಗಿ ಜಾರಿಗೆ ತರುವಂತೆ ಡಲ್ಟ್ ಮತ್ತು ಬಿಬಿಎಂಪಿಗೆ ಆದೇಶಿಸಿರುವ ರಾಜ್ಯ ಸರ್ಕಾರವು ಹೊಸ ನೀತಿಯನ್ನು ಪ್ರದೇಶಗಳಿಗೆ ಅನುಗುಣವಾಗಿ ಜಾರಿಗೆ ತರಲು ಸಮ್ಮತಿ ಸೂಚಿಸಿದ್ದು, ಹೊಸ ನೀತಿ ಜಾರಿ ನಂತರ ನಗರದ ಯಾವುದೇ ಸಾರ್ವಜನಿಕ ಪ್ರದೇಶದಲ್ಲಿ ಉಚಿತವಾಗಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯು ಇರುವುದಿಲ್ಲ.

ವಾರದ ಪ್ರಮುಖ ಸುದ್ದಿ: ಹೊಸ ಜೆಡ್ಎಸ್ ಇವಿ ಬಿಡುಗಡೆ, ಡಿಎಲ್‌ ಅರ್ಜಿಗೆ ಹೊಸ ವಿಧಾನ, ಬಿಸಿ ತುಪ್ಪವಾಗಲಿದೆ ಹೊಸ ಪಾರ್ಕಿಂಗ್ ನೀತಿ..

ಹೊಸ ವಾಹನ ಖರೀದಿ ಮಾಡುವ ಶೇ.60ರಷ್ಟು ಗ್ರಾಹಕರು ಸೂಕ್ತವಾದ ಪಾರ್ಕಿಂಗ್ ಸೌಲಭ್ಯವಿಲ್ಲವಾದರೂ ಸಾರ್ವಜನಿಕ ಸ್ಥಳಗಳನ್ನೇ ಅಕ್ರಮಿಸಿಕೊಂಡು ಪಾರ್ಕಿಂಗ್ ಸೌಲಭ್ಯವನ್ನಾಗಿ ಬಳಕೆ ಮಾಡುತ್ತಿದ್ದು, ಹೊಸ ಪಾರ್ಕಿಂಗ್ ನೀತಿಯು ಇಂತಹ ಪ್ರವೃತ್ತಿಗೆ ಇದೀಗ ಬ್ರೇಕ್ ಹಾಕುತ್ತಿದೆ. ಪಾರ್ಕಿಂಗ್ ಪಾಲಿಸಿ 2.0 ಜಾರಿಗೆ ಬಂದ ನಂತರ ಹೊಸ ವಾಹನಗಳ ಖರೀದಿ ಕೂಡಾ ಮತ್ತಷ್ಟು ಕಠಿಣವಾಗಲಿದ್ದು, ಪಾರ್ಕಿಂಗ್ ಸೌಲಭ್ಯದ ಬಗೆಗೆ ಸ್ಪಷ್ಟನೆ ನೀಡಿದ ನಂತರವೇ ಹೊಸ ವಾಹನ ಖರೀದಿಗೆ ಒಪ್ಪಿಗೆ ಸಿಗಲಿದೆ.

ವಾರದ ಪ್ರಮುಖ ಸುದ್ದಿ: ಹೊಸ ಜೆಡ್ಎಸ್ ಇವಿ ಬಿಡುಗಡೆ, ಡಿಎಲ್‌ ಅರ್ಜಿಗೆ ಹೊಸ ವಿಧಾನ, ಬಿಸಿ ತುಪ್ಪವಾಗಲಿದೆ ಹೊಸ ಪಾರ್ಕಿಂಗ್ ನೀತಿ..

ಡಿಎಲ್ ಪಡೆಯುವುದು ಇನ್ನಷ್ಟು ಸುಲಭ

ಡ್ರೈವಿಂಗ್ ಲೈಸೆನ್ಸ್ ಪಡೆಯುವುದನ್ನು ಸುಲಭಗೊಳಿಸಲು ಕೆಲವು ರಾಜ್ಯಗಳು ಡಿಜಿಟಲ್ ಅಪ್ಲಿಕೇಶನ್ ಅನ್ನು ಜಾರಿಗೆ ತಂದಿವೆ. ಇನ್ನು ಮುಂದೆ ಉತ್ತರ ಪ್ರದೇಶ, ಜಾರ್ಖಂಡ್, ಮಧ್ಯಪ್ರದೇಶ, ಬಿಹಾರ, ರಾಜಸ್ಥಾನ ಹಾಗೂ ದೆಹಲಿ-ಎನ್‌ಸಿಆರ್'ಗಳ ನಾಗರಿಕರು ಆನ್‌ಲೈನ್ ಮೂಲಕ ಡ್ರೈವಿಂಗ್ ಲೈಸೆನ್ಸ್'ಗೆ ಅರ್ಜಿ ಸಲ್ಲಿಸಬಹುದು.

ವಾರದ ಪ್ರಮುಖ ಸುದ್ದಿ: ಹೊಸ ಜೆಡ್ಎಸ್ ಇವಿ ಬಿಡುಗಡೆ, ಡಿಎಲ್‌ ಅರ್ಜಿಗೆ ಹೊಸ ವಿಧಾನ, ಬಿಸಿ ತುಪ್ಪವಾಗಲಿದೆ ಹೊಸ ಪಾರ್ಕಿಂಗ್ ನೀತಿ..

ಲರ್ನರ್ ಲೈಸೆನ್ಸ್ ಅರ್ಜಿ ಪ್ರಕ್ರಿಯೆಯಲ್ಲಿ ಆನ್‌ಲೈನ್ ಮಾಧ್ಯಮದ ಮೂಲಕವೂ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅರ್ಜಿದಾರರಿಗೆ 10 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅದರಲ್ಲಿ 6 ಪ್ರಶ್ನೆಗಳಿಗೆ ಉತ್ತರಿಸುವವರಿಗೆ ಲರ್ನರ್ ಲೈಸೆನ್ಸ್ ನೀಡಲಾಗುತ್ತದೆ. ಲರ್ನರ್ ಲೈಸೆನ್ಸ್ ಅನ್ನು ಅರ್ಜಿದಾರರಿಗೆ ಇ-ಮೇಲ್ ಮೂಲಕ ಕಳುಹಿಸಲಾಗುತ್ತದೆ. ಆನ್‌ಲೈನ್ ಮೂಲಕ ಲರ್ನರ್ ಲೈಸೆನ್ಸ್ ನೀಡುವುದರಿಂದ ಸಮಯ ಉಳಿಸುವುದರ ಜೊತೆಗೆ ಹಣವನ್ನು ಸಹ ಉಳಿಸಬಹುದು. ಲರ್ನರ್ ಲೈಸೆನ್ಸ್ ನಂತರ ಸಿಕ್ಕ ನಂತರವಷ್ಟೇ ಮುಖ್ಯ ಪರೀಕ್ಷೆಗಾಗಿ ಹಾಜರಾಗಬೇಕಿದ್ದು, ಲರ್ನರ್ ಲೈಸೆನ್ಸ್ ವೇಳೆ ಕಾಯುವುದನ್ನು ತಪ್ಪಿಸಲಿದೆ.

ವಾರದ ಪ್ರಮುಖ ಸುದ್ದಿ: ಹೊಸ ಜೆಡ್ಎಸ್ ಇವಿ ಬಿಡುಗಡೆ, ಡಿಎಲ್‌ ಅರ್ಜಿಗೆ ಹೊಸ ವಿಧಾನ, ಬಿಸಿ ತುಪ್ಪವಾಗಲಿದೆ ಹೊಸ ಪಾರ್ಕಿಂಗ್ ನೀತಿ..

ಕಾರು ಕಂಪನಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಕೇಂದ್ರ ಸರ್ಕಾರ

ಬಜೆಟ್ ಬೆಲೆಯ ವಾಹನಗಳೊಂದಿಗೆ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಆಟೊಮೊಬೈಲ್ ತಯಾರಕರು ಸುರಕ್ಷತೆಯ ಗುಣಮಟ್ಟಗಳನ್ನು ಉದ್ದೇಶಪೂರ್ವಕವಾಗಿ ಕಡಿತಗೊಳಿಸುತ್ತಿರುವುದು ಗಂಭೀರ ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತಿದ್ದು, ಕನಿಷ್ಠ ಪ್ರಮಾಣದ ಸುರಕ್ಷತೆ ಇಲ್ಲದಿರುವ ಸಾವಿರಾರು ವಾಹನಗಳು ದಿನಂಪ್ರತಿ ಮಾರಾಟವಾಗುತ್ತಿವೆ.

ವಾರದ ಪ್ರಮುಖ ಸುದ್ದಿ: ಹೊಸ ಜೆಡ್ಎಸ್ ಇವಿ ಬಿಡುಗಡೆ, ಡಿಎಲ್‌ ಅರ್ಜಿಗೆ ಹೊಸ ವಿಧಾನ, ಬಿಸಿ ತುಪ್ಪವಾಗಲಿದೆ ಹೊಸ ಪಾರ್ಕಿಂಗ್ ನೀತಿ..

ಇಂತಹ ವಾಹನಗಳು ಅಪಘಾತ ಸಂದರ್ಭದಲ್ಲಿ ಪ್ರಯಾಣಿಕರಿಗೆ ಸುರಕ್ಷೆ ಒದಗಿಸುವಲ್ಲಿ ವಿಫಲವಾಗುದರೊಂದಿಗೆ ಜೀವ ಹಾನಿ ಹೆಚ್ಚುತ್ತಿದ್ದು, ವಾಹನಗಳ ಉತ್ಪಾದನೆಯಲ್ಲಿ ನಿಗದಿತ ಸುರಕ್ಷತಾ ಗುಣಮಟ್ಟಗಳನ್ನು ಪಾಲನೆ ಮಾಡದ ಕಂಪನಿಗಳು ವಾಹನಗಳ ಮಾರಾಟವನ್ನು ಈ ಕೂಡಲೇ ನಿಲ್ಲಿಸಿ ಎಂದು ಕೇಂದ್ರ ಸಾರಿಗೆ ಇಲಾಖೆಯು ಖಡಕ್ ಸಂದೇಶ ನೀಡಿದೆ.

ವಾರದ ಪ್ರಮುಖ ಸುದ್ದಿ: ಹೊಸ ಜೆಡ್ಎಸ್ ಇವಿ ಬಿಡುಗಡೆ, ಡಿಎಲ್‌ ಅರ್ಜಿಗೆ ಹೊಸ ವಿಧಾನ, ಬಿಸಿ ತುಪ್ಪವಾಗಲಿದೆ ಹೊಸ ಪಾರ್ಕಿಂಗ್ ನೀತಿ..

ವಾಹನಗಳ ಉತ್ಪಾದನೆಯಲ್ಲಿ ನಿಗದಿತ ಸುರಕ್ಷಾ ಮಾನದಂಡಗಳನ್ನು ಪಾಲಿಸಲು ಸಾಧ್ಯವಿಲ್ಲದ ಕಾರು ಕಂಪನಿಗಳು ಮಾರಾಟವನ್ನು ಮುಂದುವರಿಸುವ ಅವಶ್ಯವಿಲ್ಲ ಎಂದಿರುವ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ಕಡಿಮೆ ಬೆಲೆ ಎನ್ನುವ ಉದ್ದೇಶಕ್ಕೆ ಸುರಕ್ಷಾ ಮಾನದಂಡಗಳನ್ನು ಗಾಳಿಗೆ ತೂರಿ ವಾಹನ ಮಾರಾಟ ಮಾಡುತ್ತಿರುವುದನ್ನು ಸರ್ಕಾರ ಸಹಿಸುವುದಿಲ್ಲ ಎಂದಿದೆ.

ವಾರದ ಪ್ರಮುಖ ಸುದ್ದಿ: ಹೊಸ ಜೆಡ್ಎಸ್ ಇವಿ ಬಿಡುಗಡೆ, ಡಿಎಲ್‌ ಅರ್ಜಿಗೆ ಹೊಸ ವಿಧಾನ, ಬಿಸಿ ತುಪ್ಪವಾಗಲಿದೆ ಹೊಸ ಪಾರ್ಕಿಂಗ್ ನೀತಿ..

ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಕಾರುಗಳಲ್ಲಿ ಸಿವಿಟಿ ಬಿಡುಗಡೆ

ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಎಸ್‌ಯುವಿಯಲ್ಲಿ ಸದ್ಯ ಎಂಜಿ ಮೋಟಾರ್ ಕಂಪನಿಯು 6-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ಸ್ಟ್ಯಾಂಡರ್ಡ್ ಆಗಿ ಮತ್ತು ಟರ್ಬೊ ಪೆಟ್ರೋಲ್ ಮಾದರಿಗಳಿಗಾಗಿ 6-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಆಯ್ಕೆಯನ್ನು ನೀಡುತ್ತಿದ್ದು, ಹೊಸ ಕಾರುಗಳಲ್ಲಿ ಕಂಪನಿಯು ಇದೀಗ 8-ಸ್ಪೀಡ್ ಸಿವಿಟಿ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಇಕೋ ಮತ್ತು ಸ್ಪೋಟ್ ಮೋಡ್‌ಗಳನ್ನು ಹೊಸದಾಗಿ ಪರಿಚಯಿಸಿದೆ.

ವಾರದ ಪ್ರಮುಖ ಸುದ್ದಿ: ಹೊಸ ಜೆಡ್ಎಸ್ ಇವಿ ಬಿಡುಗಡೆ, ಡಿಎಲ್‌ ಅರ್ಜಿಗೆ ಹೊಸ ವಿಧಾನ, ಬಿಸಿ ತುಪ್ಪವಾಗಲಿದೆ ಹೊಸ ಪಾರ್ಕಿಂಗ್ ನೀತಿ..

ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಆವೃತ್ತಿಯು ಹೈ ಎಂಡ್ ಪೆಟ್ರೋಲ್ ಮಾದರಿಯಲ್ಲಿ ಮಾತ್ರ ಖರೀದಿಗೆ ಲಭ್ಯವಿದ್ದು, ಆರಂಭಿಕ ಪೆಟ್ರೋಲ್ ಮಾದರಿಗಳಿಗಾಗಿ 8-ಸ್ಪೀಡ್ ಸಿವಿಟಿ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದೆ. ಸಿಟಿವಿ ಗೇರ್‌ಬಾಕ್ಸ್ ಆಯ್ಕೆಯನ್ನ ಹೆಕ್ಟರ್ ಮತ್ತು ಹೆಕ್ಟರ್ ಕಾರುಗಳ ಸ್ಮಾರ್ಟ್ ಮತ್ತು ಶಾರ್ಪ್ ಆವೃತ್ತಿಗಳಲ್ಲಿ ಬಿಡುಗಡೆ ಮಾಡಲಾಗಿದ್ದು, ಹೆಕ್ಟರ್ ಸಿವಿಟಿ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 16.52 ಲಕ್ಷಕ್ಕೆ ಮತ್ತು ರೂ. 18.10 ಲಕ್ಷಕ್ಕೆ ಖರೀದಿ ಲಭ್ಯವಿದ್ದಲ್ಲಿ ಹೆಕ್ಟರ್ ಪ್ಲಸ್ ಸಿಟಿವಿ ಮಾದರಿಯು ರೂ. 17.22 ಲಕ್ಷಕ್ಕೆ ಮತ್ತು ರೂ. 18.90 ಲಕ್ಷಕ್ಕೆ ಖರೀದಿಗೆ ಲಭ್ಯವಿದೆ.

ವಾರದ ಪ್ರಮುಖ ಸುದ್ದಿ: ಹೊಸ ಜೆಡ್ಎಸ್ ಇವಿ ಬಿಡುಗಡೆ, ಡಿಎಲ್‌ ಅರ್ಜಿಗೆ ಹೊಸ ವಿಧಾನ, ಬಿಸಿ ತುಪ್ಪವಾಗಲಿದೆ ಹೊಸ ಪಾರ್ಕಿಂಗ್ ನೀತಿ..

ಬುಲೆಟ್ ಪ್ರೂಫ್ ಕಾರು ಬಿಟ್ಟು ಎಲೆಕ್ಟ್ರಿಕ್ ಕಾರಿನಲ್ಲಿ ಸಂಚರಿಸಿದ ಕೇಂದ್ರ ಸಚಿವರು

ದೇಶದ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರ ಬಳಕೆಗಾಗಿ ಝಡ್-ಪ್ಲಸ್ ರಕ್ಷಣೆ ಹೊಂದಿರುವ ಬುಲೆಟ್ ಪ್ರೂಫ್ ಕಾರುಗಳನ್ನು ನೀಡಲಾಗುತ್ತದೆ. ಅದರಂತೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೂ ಮಹಾರಾಷ್ಟ್ರ ರಾಜ್ಯದಿಂದ ಹೆಚ್ಚಿನ ಭದ್ರತಾ ಸೌಲಭ್ಯವನ್ನು ಹೊಂದಿರುವ ಕಾರ್ ಅನ್ನು ನೀಡಲಾಗಿದ್ದರೂ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸುವ ಉದ್ದೇಶದಿಂದ ಬುಲೆಟ್ ಪ್ರೂಫ್ ಹೊಂದಿರುವ ಫಾರ್ಚೂನರ್ ಡೀಸೆಲ್ ಬದಲಾಗಿ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಬಳಕೆ ಮಾಡುತ್ತಿದ್ದಾರೆ.

ವಾರದ ಪ್ರಮುಖ ಸುದ್ದಿ: ಹೊಸ ಜೆಡ್ಎಸ್ ಇವಿ ಬಿಡುಗಡೆ, ಡಿಎಲ್‌ ಅರ್ಜಿಗೆ ಹೊಸ ವಿಧಾನ, ಬಿಸಿ ತುಪ್ಪವಾಗಲಿದೆ ಹೊಸ ಪಾರ್ಕಿಂಗ್ ನೀತಿ..

ಹೊಸ ಇನ್ಪೋಟೈನ್‌ಮೆಂಟ್ ಸಿಸ್ಟಂ ಪಡೆದ 2021ರ ಡಿಜೈರ್

ಮಾರುತಿ ಸುಜುಕಿ ಕಂಪನಿಯು ತನ್ನ ಜನಪ್ರಿಯ ಕಂಪ್ಯಾಕ್ಟ್ ಸೆಡಾನ್ ಆವೃತ್ತಿಯಾಗಿರುವ ಡಿಜೈರ್ ಕಾರು ಮಾದರಿಯ 2021ರ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರಿನಲ್ಲಿ ಎರ್ಟಿಗಾ ಆವೃತ್ತಿಯಲ್ಲಿ ಜೋಡಣೆ ಮಾಡಲಾಗಿರುವ ಹೊಸ ಇನ್ಪೋಟೈನ್‌ಮೆಂಟ್ ಸಿಸ್ಟಂ ಜೋಡಣೆ ಮಾಡಿದೆ.

ವಾರದ ಪ್ರಮುಖ ಸುದ್ದಿ: ಹೊಸ ಜೆಡ್ಎಸ್ ಇವಿ ಬಿಡುಗಡೆ, ಡಿಎಲ್‌ ಅರ್ಜಿಗೆ ಹೊಸ ವಿಧಾನ, ಬಿಸಿ ತುಪ್ಪವಾಗಲಿದೆ ಹೊಸ ಪಾರ್ಕಿಂಗ್ ನೀತಿ..

ಡಿಜೈರ್ ಕಾರಿನ ವಿಎಕ್ಸ್ಐ ಮಾದರಿಯಲ್ಲಿ ಹೊಸ ಇನ್ಪೋಟೈನ್‌ಮೆಂಟ್ ಸಿಸ್ಟಂ ಜೋಡಣೆ ಮಾಡಿದ್ದು, ಹೊಸ ಇನ್ಪೋಟೈನ್ ಸಿಸ್ಟಂ ಮೂಲಕ ಟ್ರ್ಯಾಕ್ ಚೆಂಜ್, ಧ್ವನಿ ಏರಿಳಿತ, ರೆಡಿಯೋ, ಮಿಡಿಯಾ, ಸೆಟ್‌ಅಪ್, ಸಿಹೆಚ್/ಎಫ್ಎಲ್‌ಜಿ, ಡಿಎಸ್‌ಪಿ/ಎಎನ್‌ಟಿ ಸೌಲಭ್ಯಗಳನ್ನು ನಿಯಂತ್ರಿಸಬಹುದಾಗಿದೆ. ಹೊಸ ಇನ್ಟೋಟೈನ್ ಸಿಸ್ಟಂ ಅನ್ನು ಮೊದಲ ಬಾರಿಗೆ 2020ರ ಎರ್ಟಿಗಾ ಮಾದರಿಯಲ್ಲಿ ಪರಿಚಯಿಸಿದ್ದ ಮಾರುತಿ ಸುಜುಕಿಯು ಇದೀಗ ಡಿಜೈರ್ ಕಾರಿನಲ್ಲೂ ಅಳವಡಿಸಿದೆ.

Most Read Articles

Kannada
English summary
Top Auto News Of The Week. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X