ವಾರದ ಸುದ್ದಿ: ಸ್ಕ್ರ್ಯಾಪೇಜ್ ನೀತಿ ಅಡಿ ಹೊಸ ಆಫರ್, ಟ್ರ್ಯಾಕ್ಟರ್ ಖರೀದಿಗೆ ಸಬ್ಸಡಿ, ಕಾರುಗಳ ಬೆಲೆ ಹೆಚ್ಚಳ..!

ಕೋವಿಡ್ 2ನೇ ಅಲೆಯಿಂದ ತಗ್ಗಿದ್ದ ಹೊಸ ವಾಹನ ಮಾರಾಟವು ಇದೀಗ ಸಾಕಷ್ಟು ಸುಧಾರಣೆಗೊಂಡಿದ್ದು, ಕೇಂದ್ರ ಸರ್ಕಾರವು ಹಲವಾರು ಹೊಸ ಪಾಲಿಸಿಗಳನ್ನು ಜಾರಿಗೆ ಮುಂದಾಗಿದೆ. ಹಾಗೆಯೇ ಈ ವಾರದ ಪ್ರಮುಖ ಸುದ್ದಿಯಲ್ಲಿ ವಾಹನಗಳ ಬೆಲೆ ಹೆಚ್ಚಳ ಕೂಡಾ ಪ್ರಮುಖವಾಗಿದ್ದು, ಈ ವಾರದ ಪ್ರಮುಖ ಸುದ್ದಿಗಳಲ್ಲಿ ಇನ್ನು ಯಾವೆಲ್ಲಾ ಪ್ರಮುಖ ಸುದ್ದಿಗಳಿವೆಂದು ಇಲ್ಲಿ ತಿಳಿಯೋಣ.

ವಾರದ ಪ್ರಮುಖ ಸುದ್ದಿಗಳು

ಸ್ಕ್ರ್ಯಾಪೇಜ್ ನೀತಿ ಅಡಿ ಕಾರು ಮಾಲೀಕರಿಗೆ ಸಿಹಿಸುದ್ದಿ

ಕೇಂದ್ರ ಸರ್ಕಾರವು ಅವಧಿ ಮೀರಿದ ಹಳೆಯ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಲು ಹೊಸ ಸ್ಕ್ರ್ಯಾಪೇಜ್ ನೀತಿಯನ್ನು ಕಡ್ಡಾಯ ಜಾರಿಗೆ ತರುವ ಮಹತ್ವದ ನಿರ್ಣಯ ಕೈಗೊಂಡಿದ್ದು, ಹೊಸ ಸ್ಕ್ರ್ಯಾಪೇಜ್ ನೀತಿಯನ್ನು ಪ್ರಕಟಗೊಳಿಸಲು ಅಂತಿಮ ಹಂತದ ಸಿದ್ದತೆಗಳನ್ನು ಕೈಗೊಳ್ಳಲಾಗುತ್ತಿದೆ.

ವಾರದ ಪ್ರಮುಖ ಸುದ್ದಿಗಳು

ಹಸಿರು ತೆರಿಗೆ ವ್ಯಾಪ್ತಿಗೆ ಬರುವ ವಾಹನಗಳನ್ನು ಹೊರತುಪಡಿಸಿ 20 ವರ್ಷ ಮೇಲ್ಪಟ್ಟ ಹಳೆಯ ವಾಹನಗಳನ್ನು ಸ್ವಯಂಪ್ರೇರಿತವಾಗಿ ಗುಜುರಿಗೆ ಹಾಕುವ ಮಾಲೀಕರಿಗೆ ಹಲವಾರು ಹೊಸ ಕ್ರಮಗಳನ್ನು ಪ್ರಕಟಿಸುತ್ತಿರುವ ಕೇಂದ್ರ ಸರ್ಕಾರವು ಹೊಸ ವಾಹನ ಖರೀದಿಗಾಗಿ ರಸ್ತೆ ತೆರಿಗೆಯಲ್ಲಿ ಶೇ.25 ರಷ್ಟು ವಿನಾಯ್ತಿ ನೀಡುವುದಾಗಿ ಹೇಳಿಕೊಂಡಿದೆ.

ವಾರದ ಪ್ರಮುಖ ಸುದ್ದಿಗಳು

ಟ್ರಾಕ್ಟರ್ ಖರೀದಿಗೆ ಶೇ.50% ರಷ್ಟು ಸಬ್ಸಿಡಿ

ಕೇಂದ್ರ ಸರ್ಕಾರವು ರೈತರ ಆದಾಯವನ್ನು ಹೆಚ್ಚಿಸಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಈಗ ಕೇಂದ್ರ ಸರ್ಕಾರವು ರೈತರಿಗೆ ಟ್ರಾಕ್ಟರ್ ಖರೀದಿಸಲು ಸಬ್ಸಿಡಿ ನೀಡುವ ಯೋಜನೆಯನ್ನು ಆರಂಭಿಸಿದೆ. ಕೇಂದ್ರ ಸರ್ಕಾರವು ರೈತರಿಗಾಗಿ ಪ್ರಧಾನ್ ಮಂತ್ರಿ ಕಿಸಾನ್ ಟ್ರ್ಯಾಕ್ಟರ್ ಎಂಬ ಹೆಸರಿನ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಡಿ ರೈತರು ಯಾವುದೇ ಕಂಪನಿಯ ಟ್ರಾಕ್ಟರ್'ಗಳನ್ನು ಖರೀದಿಸಬಹುದು.

ವಾರದ ಪ್ರಮುಖ ಸುದ್ದಿಗಳು

ಹೀಗೆ ಖರೀದಿಸಲಾಗುವ ಟ್ರಾಕ್ಟರ್‌ನ ಬೆಲೆಯ 50% ನಷ್ಟು ಹಣವನ್ನು ರೈತರು ಪಾವತಿಸಬೇಕಾಗುತ್ತದೆ. ಇದೇ ವೇಳೆ ಉಳಿದ ಅರ್ಧದಷ್ಟು ಹಣವನ್ನು ಕೇಂದ್ರ ಸರ್ಕಾರವು ಸಬ್ಸಿಡಿಯಾಗಿ ನೀಡಲಿದೆ.

ವಾರದ ಪ್ರಮುಖ ಸುದ್ದಿಗಳು

ಮಾರುತಿ ಸುಜುಕಿ ಸ್ವಿಫ್ಟ್ ಮತ್ತಷ್ಟು ದುಬಾರಿ

ಬಿಡಿಭಾಗಗಳ ಬೆಲೆ ಹೆಚ್ಚಳ ಪರಿಣಾಮ ಕಳೆದ ಜನವರಿ, ಏಪ್ರಿಲ್‌ ಮತ್ತು ಜೂನ್‌ನಲ್ಲಿ ಬೆಲೆ ಏರಿಕೆ ಮಾಡಿದ್ದ ಮಾರುತಿ ಸುಜುಕಿಯು ಇದೀಗ ಮತ್ತೊಮ್ಮೆ ದರ ಹೆಚ್ಚಿಸಿದ್ದು, ಸ್ವಿಫ್ಟ್ ಕಾರಿನ ಬೆಲೆಯು ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ರೂ. 1 ಸಾವಿರದಿಂದ ರೂ. 15 ಸಾವಿರದಷ್ಟು ದರ ಏರಿಕೆಯಾಗಿದೆ.

ವಾರದ ಪ್ರಮುಖ ಸುದ್ದಿಗಳು

ಸ್ವಿಫ್ಟ್ ಕಾರಿನ ಜೆಡ್ಎಕ್ಸ್ಐ ಪ್ಲಸ್ ಆಟೋಮ್ಯಾಟಿಕ್ ಡ್ಯುಯಲ್ ಟೋನ್ ಮಾದರಿಯ ಬೆಲೆಯಲ್ಲಿ ಗರಿಷ್ಠ ಏರಿಕೆ ಮಾಡಲಾಗಿದ್ದು, ಹೊಸ ದರವನ್ನು ಜುಲೈ 27ರಿಂದಲೇ ಅನ್ವಯವಾಗುವಂತೆ ಜಾರಿಗೊಳಿಸಲಾಗಿದೆ.

ವಾರದ ಪ್ರಮುಖ ಸುದ್ದಿಗಳು

ಟೊಯೊಟಾ ಹೈಬ್ರಿಡ್ ಕಾರುಗಳಿಗಾಗಿ ಭರ್ಜರಿ ಆಫರ್

ಟೊಯೊಟಾ ಕಂಪನಿಯು ಹೈಬ್ರಿಡ್ ಕಾರುಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು, ಕಂಪನಿಯು ಹೈಬ್ರಿಡ್ ಕಾರುಗಳಿಗಾಗಿ ವಿಸ್ತರಿತ ವಾರಂಟಿ ಆಫರ್ ಘೋಷಣೆ ಮಾಡಿದೆ.

ವಾರದ ಪ್ರಮುಖ ಸುದ್ದಿಗಳು

ಸೆಲ್ಪ್-ರೀಚಾರ್ಜ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್‌(ಎಸ್‌ಹೆಚ್‌ಇವಿ)ಗಳ ಬ್ಯಾಟರಿ ಮೇಲೆ ಟೊಯೊಟಾ ಕಂಪನಿಯು ಸದ್ಯ 3 ವರ್ಷ ಅಥವಾ 1 ಲಕ್ಷ ಕಿ.ಮೀ ಮೇಲೆ ಸ್ಟ್ಯಾಂಡರ್ಡ್ ವಾರಂಟಿ ನೀಡುತ್ತಿದ್ದು, ಅಗಸ್ಟ್ 1ರಿಂದ ಹೈಬ್ರಿಡ್ ಕಾರುಗಳ ಬ್ಯಾಟರಿ ಮೇಲೆ 8 ವರ್ಷ ಅಥವಾ 1.60 ಲಕ್ಷ ಕಿ.ಮೀ ತನಕ ವಾರಂಟಿ ನೀಡಲು ನಿರ್ಧರಿಸಿದೆ.

ವಾರದ ಪ್ರಮುಖ ಸುದ್ದಿಗಳು

3.5 ಕೋಟಿಗೂ ಹೆಚ್ಚು ಫಾಸ್ಟ್‌ಟ್ಯಾಗ್‌ ವಿತರಣೆ

ಕೇಂದ್ರ ಸಾರಿಗೆ ಇಲಾಖೆಯು ಇತ್ತೀಚಿಗೆ ಬಿಡುಗಡೆಗೊಳಿಸಿರುವ ಅಂಕಿ ಅಂಶಗಳ ಪ್ರಕಾರ 2021 ರ ಜುಲೈ 14 ರವರೆಗೆ ದೇಶದಲ್ಲಿ 3.54 ಕೋಟಿ ಫಾಸ್ಟ್‌ಟ್ಯಾಗ್‌ಗಳನ್ನು ವಿತರಿಸಲಾಗಿದೆ. ಈ ವರ್ಷದ ಫೆಬ್ರವರಿ 14 ರಿಂದ ಫಾಸ್ಟ್‌ಟ್ಯಾಗ್‌ ಬಳಕೆಯನ್ನು ಕಡ್ಡಾಯಗೊಳಿಸಲಾಗಿದೆ.

ವಾರದ ಪ್ರಮುಖ ಸುದ್ದಿಗಳು

ಜುಲೈ 14 ರಿಂದ ಹೆದ್ದಾರಿಗಳಲ್ಲಿರುವ ಎಲ್ಲಾ ಪಥಗಳಲ್ಲಿ ಫಾಸ್ಟ್‌ಟ್ಯಾಗ್ ಆಧಾರಿತ ಟೋಲ್ ಶುಲ್ಕ ಸಂಗ್ರಹವನ್ನು ಜಾರಿಗೊಳಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳನಿಯಮ 2008 ರ ಪ್ರಕಾರ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್ ಬಳಸದ ವಾಹನಗಳಿಗೆ ಟೋಲ್ ಶುಲ್ಕಕ್ಕಿಂತ ಎರಡು ಪಟ್ಟು ಹೆಚ್ಚು ಶುಲ್ಕ ವಿಧಿಸಲಾಗುತ್ತದೆ.

ವಾರದ ಪ್ರಮುಖ ಸುದ್ದಿಗಳು

ಟಾಟಾ ಏಸ್ ಗೋಲ್ಡ್ ಪೆಟ್ರೋಲ್ ಸಿಎಕ್ಸ್ ವಾಣಿಜ್ಯ ವಾಹನ ಬಿಡುಗಡೆ

ದೇಶಿಯ ಮಾರುಕಟ್ಟೆಯಲ್ಲಿನ ವಾಣಿಜ್ಯ ವಾಹನಗಳ ಉತ್ಪಾದನೆಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಟಾಟಾ ಮೋಟಾರ್ಸ್ ಕಂಪನಿಯು ಹೊಸ ವಾಹನ ಉತ್ಪದನೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಕಂಪನಿಯು ಏಸ್ ಲಘು ವಾಣಿಜ್ಯ ವಾಹನದ ಪೆಟ್ರೋಲ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

ವಾರದ ಪ್ರಮುಖ ಸುದ್ದಿಗಳು

ಏಸ್ ಗೋಲ್ಡ್ ಪೆಟ್ರೋಲ್ ಸಿಎಕ್ಸ್ ವಾಹನದ ಫ್ಲ್ಯಾಟ್ ಬೆಡ್ ವರ್ಷನ್(ರೂ.3.99 ಲಕ್ಷ) ಮತ್ತು ಹಾಫ್ ಡೆಕ್ ವರ್ಷನ್(ರೂ. 4.10) ಲಕ್ಷ ಬೆಲೆ ಹೊಂದಿದ್ದು, ಅತ್ಯುತ್ತಮ ಸಾಣಾಣಿಕೆ ಸಾಮರ್ಥ್ಯ ಹೊಂದಿದೆ. ಹೊಸ ವಾಣಿಜ್ಯ ವಾಹನವು 2,200 ಎಂಎಂ ಉದ್ದ, 1,490 ಎಂಎಂ ಅಗಲವಾಗಿರುವ ಕಾರ್ಗೊ ಡೆಕ್ ಹೊಂದಿದ್ದು, ಸಣ್ಣ ಪ್ರಮಾಣದ ಸರಕು ಸಾಗಾಣಿಕೆಗೆ ಅನುಕೂಲಕವಾಗಿ 1.5 ಟನ್ ಪ್ಲೇ ಲೋಡ್ ಸಾಮರ್ಥ್ಯ ಹೊಂದಿದೆ.

ವಾರದ ಪ್ರಮುಖ ಸುದ್ದಿಗಳು

ವಾಯ್ಸ್ ಕಮಾಂಡ್ ಫೀಚರ್ಸ್ ಪಡೆದುಕೊಂಡ ಹೋಂಡಾ ಸಿಟಿ

ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಮಧ್ಯಮ ಕ್ರಮಾಂಕದ ಸೆಡಾನ್ ಮಾದರಿಗಾಗಿ ಗೂಗಲ್ ಅಸಿಸ್ಟೆನ್ಸ್ ಸೌಲಭ್ಯಗಳನ್ನು ಜೋಡಣೆ ಮಾಡಿದ್ದು, ಹೊಸ ಫೀಚರ್ಸ್‌ನಲ್ಲಿ ಹಲವಾರು ವಾಯ್ಸ್ ಕಮಾಂಡ್ ಹೊಂದಿದೆ.

ವಾರದ ಪ್ರಮುಖ ಸುದ್ದಿಗಳು

ಕಾರಿನ ಸೇಫ್ಟಿ ಜೊತೆಗೆ ಪ್ರಯಾಣಿಕರಿಗೂ ಗರಿಷ್ಠ ಸುರಕ್ಷತೆ ಖಾತ್ರಿಪಡಿಸಲು ಹೋಂಡಾ ಕಂಪನಿಯು ಸಿಟಿ ಸೆಡಾನ್ ಮಾದರಿಗಾಗಿ ಗೂಗಲ್ ಅಸಿಸ್ಟೆನ್ಸ್ ಅಲೆಕ್ಸಾ ಫೀಚರ್ಸ್ ನೀಡಲಾಗಿದ್ದು, ಕಾರು ಚಾಲನೆ ಮಾಡುತ್ತಲೇ ಧ್ವನಿ ಆಜ್ಞೆಯ ಮೂಲಕ ವಿವಿಧ ಫೀಚರ್ಸ್‌ಗಳನ್ನು ನಿಯಂತ್ರಣ ಮಾಡಬಹುದು. ಧ್ವನಿ ಆಜ್ಞೆಗಳನ್ನು ಪಾಲಿಸಲು ಗೂಗಲ್ ನೆಸ್ಟ್ ಸ್ಪೀಕರ್ಸ್ ಇಲ್ಲವೆ ಅಂಡ್ರಾಯಿಡ್ ಫೋನ್ ಬಳಕೆ ಮಾಡಬಹುದಾಗಿದ್ದು, ಹೊಸ ವಾಯ್ಸ್ ಕಮಾಂಡ್‌ನಲ್ಲಿ ಒಟ್ಟು 36 ಫೀಚರ್ಸ್‌ಗಳನ್ನು ಧ್ವನಿ ಆಜ್ಞೆಯ ಮೂಲಕವೇ ನಿಯಂತ್ರಿಸಬಹುದು.

Most Read Articles

Kannada
English summary
Top Auto News Of This Week. Read in Kannada.
Story first published: Sunday, August 1, 2021, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X