ವಾರದ ಸುದ್ದಿ: ಹೊಸ ಕಾರುಗಳು ಬಿಡುಗಡೆ, ವಾಹನಗಳ ಬೆಲೆ ಹೆಚ್ಚಳ, ಇವಿ ವಾಹನಗಳಿಗೆ ಹೆಚ್ಚಿದ ಬೇಡಿಕೆ!

ಕೋವಿಡ್ ಪರಿಣಾಮ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಆಟೋ ಉದ್ಯಮವು ಬೆಲೆ ಏರಿಕೆಯ ಸಮರ ನಡುವೆಯೂ ಹೊಸ ವಾಹನಗಳ ಬಿಡುಗಡೆ ಕಾರಣವಾಗಿದೆ.

ವಾರದ ಸುದ್ದಿ: ಹೊಸ ಕಾರುಗಳು ಬಿಡುಗಡೆ, ವಾಹನಗಳ ಬೆಲೆ ಹೆಚ್ಚಳ, ಇವಿ ವಾಹನಗಳಿಗೆ ಹೆಚ್ಚಿದ ಬೇಡಿಕೆ!

ಕೋವಿಡ್‌ನಿಂದಾಗಿರುವ ಆರ್ಥಿಕ ಬಿಕ್ಕಟ್ಟು ಇದೀಗ ನಿಧಾನವಾಗಿ ಸುಧಾರಿಸುತ್ತಿದ್ದು, ಹಲವು ಹೊಸ ವಾಹನಗಳು ಮಾರುಕಟ್ಟೆ ಪ್ರವೇಶಿಸಿವೆ. ಇದರ ನಡುವೆ ಇಂಧನಗಳ ಬೆಲೆ ಏರಿಕೆಯು ಹೊಸ ವಾಹನ ಮಾರಾಟದ ಪರಿಣಾಮ ಬೀರುತ್ತಿದ್ದು, ಇಂಧನ ಬೆಲೆ ತಗ್ಗಿಸಲು ಸರ್ಕಾರವು ಹಲವಾರು ಪ್ರಯತ್ನಗಳೊಂದಿಗೆ ಎಲೆಕ್ಟ್ರಿಕ್ ವಾಹನಗಳಿಗೂ ಹೆಚ್ಚಿನ ಪ್ರೊತ್ಸಾಹ ನೀಡುತ್ತಿದೆ. ಹಾಗಾದ್ರೆ ಈ ವಾರದ ಪ್ರಮುಖ ಸುದ್ದಿಗಳಲ್ಲಿ ಯಾವೆಲ್ಲಾ ಸುದ್ದಿಗಳಿವೆ ಎಂಬುವುದರ ಹೈಲೈಟ್ಸ್ ಇಲ್ಲಿ ತಿಳಿಯೋಣ.

ವಾರದ ಸುದ್ದಿ: ಹೊಸ ಕಾರುಗಳು ಬಿಡುಗಡೆ, ವಾಹನಗಳ ಬೆಲೆ ಹೆಚ್ಚಳ, ಇವಿ ವಾಹನಗಳಿಗೆ ಹೆಚ್ಚಿದ ಬೇಡಿಕೆ!

ಆರ್ಥಿಕ ಸಂಕಷ್ಟದಲ್ಲೂ ವಾಹನ ಮಾರಾಟದಲ್ಲಿ ಏರಿಕೆ

ಕೋವಿಡ್ ಎರಡನೇ ಅಲೆಯಿಂದಾಗಿ ಮೇ ಅವಧಿಯಲ್ಲಿ ಸಂಪೂರ್ಣವಾಗಿ ನೆಲಕಚ್ಚಿದ್ದ ವಾಹನ ಮಾರಾಟವು ಜೂನ್ ಅವಧಿಯಲ್ಲಿ ಸಾಕಷ್ಟು ಚೇತರಿಕೆ ಕಂಡಿದೆ. ಲಾಕ್‌ಡೌನ್ ನಡುವೆಯೂ ವಾಹನ ಖರೀದಿಗಾಗಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳು ವಾಹನ ಮಾರಾಟಕ್ಕೆ ಸಹಕಾರಿಯಾಗುತ್ತಿದ್ದು, ಹಲವು ಹೊಸ ವಾಹನಗಳು ಬಿಡುಗಡೆಗೊಂಡಿವೆ.

ವಾರದ ಸುದ್ದಿ: ಹೊಸ ಕಾರುಗಳು ಬಿಡುಗಡೆ, ವಾಹನಗಳ ಬೆಲೆ ಹೆಚ್ಚಳ, ಇವಿ ವಾಹನಗಳಿಗೆ ಹೆಚ್ಚಿದ ಬೇಡಿಕೆ!

ಲಾಕ್‌ಡೌನ್ ಸಡಿಲ ಮಾಡಿರುವುದು ಮುಂಬರುವ ಕೆಲ ತಿಂಗಳಿನಲ್ಲಿ ವಾಹನ ಮಾರಾಟವು ಸುಧಾರಿಸುವ ಸಾಧ್ಯತೆಗಳಿದ್ದು, ಇಂಧನ ಆಧರಿತ ವಾಹನಗಳ ಜೊತೆಗೆ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ನೀಡಲಾಗುತ್ತಿದೆ.

ವಾರದ ಸುದ್ದಿ: ಹೊಸ ಕಾರುಗಳು ಬಿಡುಗಡೆ, ವಾಹನಗಳ ಬೆಲೆ ಹೆಚ್ಚಳ, ಇವಿ ವಾಹನಗಳಿಗೆ ಹೆಚ್ಚಿದ ಬೇಡಿಕೆ!

ಎಲೆಕ್ಟ್ರಿಕ್ ವಾಹನಗಳಿಗೆ ಭರ್ಜರಿ ಬೇಡಿಕೆ

ಹೆಚ್ಚುತ್ತಿರುವ ಇಂಧನಗಳ ಬೆಲೆಗಳ ಪರಿಣಾಮ ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಮಾರಾಟವು ಸಹ ಮುಂಚೂಣಿ ಸಾಧಿಸುತ್ತಿದ್ದು, ಕಳೆದ ವರ್ಷಕ್ಕಿಂತಲೂ ಇದೀಗ ಹೆಚ್ಚಿನ ಮಟ್ಟದ ಎಲೆಕ್ಟ್ರಿಕ್ ಕಾರುಗಳ ಮಾರಾಟವು ದಾಖಲಾಗಿದೆ.

ವಾರದ ಸುದ್ದಿ: ಹೊಸ ಕಾರುಗಳು ಬಿಡುಗಡೆ, ವಾಹನಗಳ ಬೆಲೆ ಹೆಚ್ಚಳ, ಇವಿ ವಾಹನಗಳಿಗೆ ಹೆಚ್ಚಿದ ಬೇಡಿಕೆ!

ದೇಶಿಯ ಮಾರುಕಟ್ಟೆಯಲ್ಲಿರುವ ಎಲೆಕ್ಟ್ರಿಕ್ ಕಾರುಗಳ ಪೈಕಿ ಟಾಟಾ ನೆಕ್ಸಾನ್, ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಮತ್ತು ಹ್ಯುಂಡೈ ಕೊನಾ ಕಾರುಗಳು ಗ್ರಾಹಕರನ್ನು ಸೆಳೆಯುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಮಾರಾಟಕ್ಕೆ ಹೋಲಿಕೆ ಮಾಡಿದರೆ ಇದು ಶೇ. 1ರಷ್ಟಿಲ್ಲವಾದರೂ ಇತ್ತೀಚೆಗೆ ಇವಿ ವಾಹನ ಖರೀದಿದಾರರ ಸಂಖ್ಯೆಯು ನಿಧಾನವಾಗಿ ಏರಿಕೆಯಾಗುತ್ತಿದೆ. ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಸದ್ಯ ಟಾಟಾ ನೆಕ್ಸಾನ್ ಇವಿ ಪ್ರಥಮ ಸ್ಥಾನದಲ್ಲಿದ್ದರೆ ಎರಡನೇ ಸ್ಥಾನದಲ್ಲಿ ಎಂಜಿ ಜೆಡ್ಎಸ್, ಮೂರನೇ ಸ್ಥಾನದಲ್ಲಿ ಹ್ಯುಂಡೈ ಕೊನಾ ಮಾರಾಟಗೊಳ್ಳುತ್ತಿದೆ.

ವಾರದ ಸುದ್ದಿ: ಹೊಸ ಕಾರುಗಳು ಬಿಡುಗಡೆ, ವಾಹನಗಳ ಬೆಲೆ ಹೆಚ್ಚಳ, ಇವಿ ವಾಹನಗಳಿಗೆ ಹೆಚ್ಚಿದ ಬೇಡಿಕೆ!

ಟಾಟಾ ಡಾರ್ಕ್ ಎಡಿಷನ್‌ಗಳು ಬಿಡುಗಡೆ

ಟಾಟಾ ಮೋಟಾರ್ಸ್ ತನ್ನ ಜನಪ್ರಿಯ ಆಲ್‌ಟ್ರೊಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್, ನೆಕ್ಸಾನ್ ಕಂಪ್ಯಾಕ್ಟ್ ಎಸ್‌ಯುವಿ ಮತ್ತು ನೆಕ್ಸಾನ್ ಇವಿ ಮತ್ತು ಹ್ಯಾರಿಯರ್ ಮಾದರಿಗಳ ಡಾರ್ಕ್ ಎಡಿಷನ್‌ಗಳನ್ನು ಬಿಡುಗಡೆಗೊಳಿಸಿದೆ.

ವಾರದ ಸುದ್ದಿ: ಹೊಸ ಕಾರುಗಳು ಬಿಡುಗಡೆ, ವಾಹನಗಳ ಬೆಲೆ ಹೆಚ್ಚಳ, ಇವಿ ವಾಹನಗಳಿಗೆ ಹೆಚ್ಚಿದ ಬೇಡಿಕೆ!

ಆಲ್‌ಟ್ರೊಜ್ ಡಾರ್ಕ್ ಎಡಿಷನ್ ಆರಂಭಿಕ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ.8.71 ಲಕ್ಷಗಳಾದರೆ, ನೆಕ್ಸಾನ್ ಡಾರ್ಕ್ ಎಡಿಷನ್ ಆರಂಭಿಕ ಬೆಲೆಯು ರೂ.10.40 ಲಕ್ಷಗಳಾಗಿದೆ. ಇನ್ನು ನೆಕ್ಸಾನ್ ಇವಿ ಡಾರ್ಕ್ ಎಡಿಷನ್ ಆರಂಭಿಕ ಬೆಲೆಯು ರೂ.15.99 ಲಕ್ಷಗಳಾದರೆ, ಹ್ಯಾರಿಯರ್ ಡಾರ್ಕ್ ಎಡಿಷನ್ ಆರಂಭಿಕ ಬೆಲೆಯು ರೂ.18.04 ಲಕ್ಷಗಳಾಗಿದೆ.

ವಾರದ ಸುದ್ದಿ: ಹೊಸ ಕಾರುಗಳು ಬಿಡುಗಡೆ, ವಾಹನಗಳ ಬೆಲೆ ಹೆಚ್ಚಳ, ಇವಿ ವಾಹನಗಳಿಗೆ ಹೆಚ್ಚಿದ ಬೇಡಿಕೆ!

2021ರ ರೇಂಜ್ ರೋವರ್ ಇವೋಕ್ ಬಿಡುಗಡೆ

ಜೆಎಲ್ಆರ್ ಕಂಪನಿಯು ತನ್ನ ಜನಪ್ರಿಯ ಐಷಾರಾಮಿ ಎಸ್‌ಯುವಿ ಮಾದರಿಯಾದ ಇವೋಕ್ 2021ರ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 64.12 ಲಕ್ಷ ಬೆಲೆ ಹೊಂದಿದೆ.

ವಾರದ ಸುದ್ದಿ: ಹೊಸ ಕಾರುಗಳು ಬಿಡುಗಡೆ, ವಾಹನಗಳ ಬೆಲೆ ಹೆಚ್ಚಳ, ಇವಿ ವಾಹನಗಳಿಗೆ ಹೆಚ್ಚಿದ ಬೇಡಿಕೆ!

ರೇಂಜ್ ರೋವರ್ ಇವೋಕ್ ಹೊಸ ಆವೃತ್ತಿಯಲ್ಲಿ ಈ ಹಿಂದಿನ ಎರಡು ಎಂಜಿನ್ ಮಾದರಿಗಳನ್ನು ಉನ್ನತೀಕರಿಸಲಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆ ಹೊಂದಿರುವ ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ ಎರಡು ಮಾದರಿಯಲ್ಲೂ ಆರ್ ಡೈಮಾನಿಕ್ ವೆರಿಯೆಂಟ್‌ನೊಂದಿಗೆ ಎಸ್ ವೆರಿಯೆಂಟ್ ಹೊಂದಿವೆ.

ವಾರದ ಸುದ್ದಿ: ಹೊಸ ಕಾರುಗಳು ಬಿಡುಗಡೆ, ವಾಹನಗಳ ಬೆಲೆ ಹೆಚ್ಚಳ, ಇವಿ ವಾಹನಗಳಿಗೆ ಹೆಚ್ಚಿದ ಬೇಡಿಕೆ!

ಹ್ಯುಂಡೈ ವೆನ್ಯೂ ಎಸ್(ಒ), ಎಸ್ಎಕ್ಸ್ (ಒ) ಎಕ್ಸಿ‌ಕ್ಯೂಟಿವ್ ಬಿಡುಗಡೆ

ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ವೆನ್ಯೂ ಕಂಪ್ಯಾಕ್ಟ್ ಎಸ್‌ಯುವಿ ಕಾರಿನ ವೆರಿಯೆಂಟ್‌ಗಳಲ್ಲಿ ಪ್ರಮುಖ ಬದಲಾವಣೆ ತರುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಕಂಪನಿಯು ಕೆಲವು ವೆರಿಯೆಂಟ್‌ಗಳನ್ನು ಸ್ಥಗಿತಗೊಳಿಸುವುದರ ಕೆಲವು ಹೊಸ ವೆರಿಯೆಂಟ್ ಬಿಡುಗಡೆ ಮಾಡಿದೆ.

ವಾರದ ಸುದ್ದಿ: ಹೊಸ ಕಾರುಗಳು ಬಿಡುಗಡೆ, ವಾಹನಗಳ ಬೆಲೆ ಹೆಚ್ಚಳ, ಇವಿ ವಾಹನಗಳಿಗೆ ಹೆಚ್ಚಿದ ಬೇಡಿಕೆ!

ವೆನ್ಯೂ ಕಾರಿನಲ್ಲಿ ಹ್ಯುಂಡೈ ಕಂಪನಿಯು ಹೊಸದಾಗಿ ಎಸ್(ಒ), ಎಸ್ಎಕ್ಸ್ (ಒ) ಎಕ್ಸಿ‌ಕ್ಯೂಟಿವ್ ವೆರಿಯೆಂಟ್‌ಗಳನ್ನು ಬಿಡುಗಡೆ ಮಾಡಿದ್ದು, ಎರಡು ವೆರಿಯೆಂಟ್‌ಗಳಲ್ಲಿ ಪ್ರಮುಖ ನಾಲ್ಕು ಮಾದರಿಗಳು ಖರೀದಿಗೆ ಲಭ್ಯವಿವೆ. ಹೊಸ ವೆರಿಯೆಂಟ್‌ಗಳು ಆರಂಭಿಕವಾಗಿ ರೂ.9.03 ಲಕ್ಷ ಬೆಲೆ ಹೊಂದಿದ್ದು, ಹೊಸ ವೆರಿಯೆಂಟ್‌ಗಳಲ್ಲಿ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್‌ಗಳನ್ನು ನೀಡಲಾಗಿದೆ.

ವಾರದ ಸುದ್ದಿ: ಹೊಸ ಕಾರುಗಳು ಬಿಡುಗಡೆ, ವಾಹನಗಳ ಬೆಲೆ ಹೆಚ್ಚಳ, ಇವಿ ವಾಹನಗಳಿಗೆ ಹೆಚ್ಚಿದ ಬೇಡಿಕೆ!

3 ಡೋರುಗಳ ಡಿಫೆಂಡರ್ 90 ಎಸ್‌ಯುವಿ ಬಿಡುಗಡೆ

ಲ್ಯಾಂಡ್ ರೋವರ್ ಡಿಫೆಂಡರ್‌ನ 5 ಡೋರುಗಳ ಆವೃತ್ತಿಯಾದ ಡಿಫೆಂಡರ್ 110 ಎಸ್‌ಯುವಿಯನ್ನು ಕಳೆದ ವರ್ಷ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು. ಈಗ ಲ್ಯಾಂಡ್ ರೋವರ್ ಡಿಫೆಂಡರ್‌ನ 3 ಡೋರುಗಳ ಆವೃತ್ತಿಯಾದ ಡಿಫೆಂಡರ್ 90 ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ.

ವಾರದ ಸುದ್ದಿ: ಹೊಸ ಕಾರುಗಳು ಬಿಡುಗಡೆ, ವಾಹನಗಳ ಬೆಲೆ ಹೆಚ್ಚಳ, ಇವಿ ವಾಹನಗಳಿಗೆ ಹೆಚ್ಚಿದ ಬೇಡಿಕೆ!

ಲ್ಯಾಂಡ್ ರೋವರ್ ಡಿಫೆಂಡರ್ 90 ಎಸ್‌ಯುವಿಯ ಆರಂಭಿಕ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.76.57 ಲಕ್ಷಗಳಾಗಿದೆ. ಕಂಪನಿಯು ಈ ಎಸ್‌ಯುವಿಯನ್ನು ಎಕ್ಸ್-ಡೈನಾಮಿಕ್ ಹಾಗೂ ಡಿಫೆಂಡರ್ ಎಕ್ಸ್ ಸೇರಿದಂತೆ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಿದೆ. ಈ ಎರಡೂ ಮಾದರಿಗಳು ಎಸ್, ಎಸ್‌ಇ ಹಾಗೂ ಹೆಚ್‌ಎಸ್‌ಇ ಸ್ಪೆಸಿಫಿಕೇಶನ್ ಪ್ಯಾಕ್‌ಗಳನ್ನು ಹೊಂದಿವೆ.

Most Read Articles

Kannada
English summary
Top Auto News Of This Week. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X