ಮಾರ್ಚ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಹ್ಯಾಚ್‌ಬ್ಯಾಕ್‌ ಕಾರುಗಳಿವು

ರೂ.10 ಲಕ್ಷಕ್ಕಿಂತ ಕಡಿಮೆ ಬೆಲೆಯ ಹ್ಯಾಚ್‌ಬ್ಯಾಕ್ ಸೆಗ್'ಮೆಂಟಿನಲ್ಲಿ ಮಾರುತಿ ಸುಜುಕಿ ಹಾಗೂ ಹ್ಯುಂಡೈ ಕಂಪನಿಯ ಕಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ. ಈ ಸೆಗ್'ಮೆಂಟಿನಲ್ಲಿ ಕಾರು ತಯಾರಕ ಕಂಪನಿಗಳು ಸಹ ಹೆಚ್ಚು ಲಾಭ ಗಳಿಸುತ್ತವೆ.

ಮಾರ್ಚ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಹ್ಯಾಚ್‌ಬ್ಯಾಕ್‌ ಕಾರುಗಳಿವು

2021ರ ಮಾರ್ಚ್ ತಿಂಗಳಿನಲ್ಲಿ ಮಾರುತಿ ಸುಜುಕಿ ಕಂಪನಿಯ ಸ್ವಿಫ್ಟ್ ಕಾರು, ಹ್ಯಾಚ್‌ಬ್ಯಾಕ್ ಸೆಗ್'ಮೆಂಟಿನಲ್ಲಿ 21,714 ಯುನಿಟ್‌ಗಳ ಮಾರಾಟದೊಂದಿಗೆ ಅಗ್ರಸ್ಥಾನದಲ್ಲಿದೆ. ಕಳೆದ ವರ್ಷ ಇದೇ ತಿಂಗಳು ಈ ಕಾರಿನ 8,575 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಈ ವರ್ಷದ ಮಾರಾಟ ಪ್ರಮಾಣವು 153%ನಷ್ಟು ಏರಿಕೆಯಾಗಿದೆ.

ಮಾರ್ಚ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಹ್ಯಾಚ್‌ಬ್ಯಾಕ್‌ ಕಾರುಗಳಿವು

ಎರಡನೇ ಸ್ಥಾನದಲ್ಲಿರುವ ಮಾರುತಿ ಸುಜುಕಿ ಬಲೆನೊ ಕಾರಿನ 21,217 ಯುನಿಟ್‌ಗಳು ಮಾರ್ಚ್ ತಿಂಗಳಿನಲ್ಲಿ ಮಾರಾಟವಾಗಿವೆ. 2020ರ ಮಾರ್ಚ್ ತಿಂಗಳಿನಲ್ಲಿ ಈ ಕಾರಿನ 11,406 ಯುನಿಟ್‌ಗಳು ಮಾರಾಟವಾಗಿದ್ದವು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಮಾರ್ಚ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಹ್ಯಾಚ್‌ಬ್ಯಾಕ್‌ ಕಾರುಗಳಿವು

ಮಾರುತಿ ಸುಜುಕಿ ಬಲೆನೊ ಕಾರಿನ ಮಾರಾಟವು ಈ ವರ್ಷ 86%ನಷ್ಟು ಏರಿಕೆಯಾಗಿದೆ. ಮಾರುತಿ ಸುಜುಕಿಯ ಮತ್ತೊಂದು ಹ್ಯಾಚ್‌ಬ್ಯಾಕ್ ಕಾರ್ ಆದ ವ್ಯಾಗನ್ ಆರ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದೆ.

ಮಾರ್ಚ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಹ್ಯಾಚ್‌ಬ್ಯಾಕ್‌ ಕಾರುಗಳಿವು

ಕಳೆದ ತಿಂಗಳು ಈ ಹ್ಯಾಚ್‌ಬ್ಯಾಕ್‌ ಕಾರಿನ 18,757 ಯುನಿಟ್‌ಗಳು ಮಾರಾಟವಾಗಿವೆ. ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ ಈ ಕಾರಿನ 9,151 ಯುನಿಟ್‌ಗಳು ಮಾರಾಟವಾಗಿದ್ದವು. ಈ ವರ್ಷದ ಮಾರ್ಚ್‌ ತಿಂಗಳಿನಲ್ಲಿ ಈ ಕಾರಿನ ಮಾರಾಟ ಪ್ರಮಾಣವು 105%ನಷ್ಟು ಹೆಚ್ಚಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಮಾರ್ಚ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಹ್ಯಾಚ್‌ಬ್ಯಾಕ್‌ ಕಾರುಗಳಿವು

ಮಾರುತಿ ಸುಜುಕಿ ಆಲ್ಟೊ ಹೆಚ್ಚು ಮಾರಾಟವಾದ ಹ್ಯಾಚ್‌ಬ್ಯಾಕ್ ಕಾರುಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಕಳೆದ ತಿಂಗಳು ಈ ಕಾರಿನ 61,801 ಯುನಿಟ್'ಗಳು ಮಾರಾಟವಾಗಿವೆ.

ಮಾರ್ಚ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಹ್ಯಾಚ್‌ಬ್ಯಾಕ್‌ ಕಾರುಗಳಿವು

ಈ ಕಾರಿನ ಮಾರಾಟ ಪ್ರಮಾಣವು ಕಳೆದ ವರ್ಷದ ಮಾರಾಟಕ್ಕಿಂತ ಈ ವರ್ಷ 61%ನಷ್ಟು ಹೆಚ್ಚಳವಾಗಿದೆ. ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಮಾರ್ಚ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಹ್ಯಾಚ್‌ಬ್ಯಾಕ್‌ ಕಾರುಗಳಿವು

ಕಳೆದ ತಿಂಗಳು ಗ್ರ್ಯಾಂಡ್ ಐ 10 ನಿಯೋಸ್ ಹ್ಯಾಚ್‌ಬ್ಯಾಕ್‌ ಕಾರಿನ 11,020 ಯುನಿಟ್‌ಗಳು ಮಾರಾಟವಾಗಿವೆ. 2020ರ ಮಾರ್ಚ್ ತಿಂಗಳಿನಲ್ಲಿ ಈ ಕಾರಿನ 4,293 ಯುನಿಟ್‌ಗಳು ಮಾರಾಟವಾಗಿದ್ದವು.

ಮಾರ್ಚ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಹ್ಯಾಚ್‌ಬ್ಯಾಕ್‌ ಕಾರುಗಳಿವು

ಈ ಕಾರಿನ ಮಾರಾಟ ಪ್ರಮಾಣವು ಕಳೆದ ವರ್ಷಕ್ಕಿಂತ ಈ ವರ್ಷ 156.7%ನಷ್ಟು ಹೆಚ್ಚಾಗಿದೆ. ಇತ್ತೀಚಿಗೆ ಬಿಡುಗಡೆಯಾದ ಹ್ಯುಂಡೈ ಕಂಪನಿಯ ಹೊಸ ತಲೆಮಾರಿನ ಐ 20 ಈ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಮಾರ್ಚ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಹ್ಯಾಚ್‌ಬ್ಯಾಕ್‌ ಕಾರುಗಳಿವು

ಕಳೆದ ವರ್ಷದ ಮಾರ್ಚ್‌ ತಿಂಗಳಿನಲ್ಲಿ ಕಂಪನಿಯು ಈ ಕಾರಿನ 3,455 ಯುನಿಟ್‌ಗಳು ಮಾರಾಟವಾಗಿದ್ದರೆ, ಈ ವರ್ಷದ ಮಾರ್ಚ್‌ನಲ್ಲಿ 9,045 ಯುನಿಟ್‌ಗಳು ಮಾರಾಟವಾಗಿವೆ.

ಮಾರ್ಚ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಹ್ಯಾಚ್‌ಬ್ಯಾಕ್‌ ಕಾರುಗಳಿವು

ಈ ಕಾರಿನ ಮಾರಾಟ ಪ್ರಮಾಣವು 161.7%ನಷ್ಟು ಹೆಚ್ಚಾಗಿದೆ. ಈ ಪಟ್ಟಿಯಲ್ಲಿ ಮಾರುತಿ ಸುಜುಕಿ ಎಸ್ ಪ್ರೆಸ್ಸೊ 7,252 ಯುನಿಟ್ ಮಾರಾಟದೊಂದಿಗೆ ಏಳನೇ ಸ್ಥಾನದಲ್ಲಿದ್ದರೆ ಟಾಟಾ ಆಲ್ಟ್ರೋಜ್ 7,550 ಯುನಿಟ್ ಮಾರಾಟದೊಂದಿಗೆ ಎಂಟನೇ ಸ್ಥಾನದಲ್ಲಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಮಾರ್ಚ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಹ್ಯಾಚ್‌ಬ್ಯಾಕ್‌ ಕಾರುಗಳಿವು

ಟಾಟಾ ಟಿಯಾಗೊ ಹ್ಯಾಚ್‌ಬ್ಯಾಕ್‌ ಕಾರು 6,893 ಯುನಿಟ್'ಗಳ ಮಾರಾಟದೊಂದಿಗೆ ಒಂಭತ್ತನೇ ಸ್ಥಾನದಲ್ಲಿದ್ದರೆ, ಮಾರುತಿ ಸುಜುಕಿ ಸೆಲೆರಿಯೊ 4,720 ಯುನಿಟ್'ಗಳ ಮಾರಾಟದೊಂದಿಗೆ ಹತ್ತನೇ ಸ್ಥಾನದಲ್ಲಿದೆ.

Article Published On: Thursday, April 8, 2021, 10:16 [IST]
English summary
Top selling hatchback cars in domestic market during March 2021. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+