ಜನವರಿ ತಿಂಗಳಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದ ಎಸ್‌ಯುವಿಗಳಿವು

ದೇಶಿಯ ಮಾರುಕಟ್ಟೆಯ ಎಸ್‌ಯುವಿ ಸೆಗ್'ಮೆಂಟಿನಲ್ಲಿ ಕಳೆದ ತಿಂಗಳು ಹಲವಾರು ಹೊಸ ಮಾದರಿಗಳು ಬಿಡುಗಡೆಯಾಗಿವೆ. ಇದರಿಂದಾಗಿ ಈ ವಿಭಾಗದಲ್ಲಿನ ಮಾರಾಟವೂ ಸಹ ಸುಧಾರಿಸಿದೆ. ಹ್ಯುಂಡೈ ಕ್ರೆಟಾ ಹೆಚ್ಚು ಮಾರಾಟವಾದ ಎಸ್‌ಯುವಿಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಜನವರಿ ತಿಂಗಳಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದ ಎಸ್‌ಯುವಿಗಳಿವು

ಹ್ಯುಂಡೈ ಕಂಪನಿಯ ವೆನ್ಯೂ ಎರಡನೇ ಸ್ಥಾನದಲ್ಲಿದೆ. ಮ್ಯಾಗ್ನೈಟ್ ಎಸ್‌ಯುವಿಯು ಟಾಪ್ 10 ಪಟ್ಟಿಯಲ್ಲಿ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದೆ. ಹ್ಯುಂಡೈನ ಕ್ರೆಟಾ ಎಸ್‌ಯುವಿಯನ್ನು ಹೊಸ ಮಾದರಿಯಲ್ಲಿ ಪರಿಚಯಿಸಿದಾಗಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. 2020ರ ಜನವರಿಯಲ್ಲಿ ಈ ಎಸ್‌ಯುವಿಯ 6,900 ಯುನಿಟ್‌ಗಳು ಮಾರಾಟವಾಗಿದ್ದರೆ, ಕಳೆದ ತಿಂಗಳು ಈ ಎಸ್‌ಯುವಿಯ 12,284 ಯುನಿಟ್‌ಗಳು ಮಾರಾಟವಾಗಿವೆ.

ಜನವರಿ ತಿಂಗಳಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದ ಎಸ್‌ಯುವಿಗಳಿವು

ಇದರಿಂದಾಗಿ ಈ ಎಸ್‌ಯುವಿಯು ಮಾರಾಟದಲ್ಲಿ 78%ನಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಈ ಪ್ರಮಾಣವು ಮುಂಬರುವ ದಿನಗಳಲ್ಲಿ ಇನ್ನಷ್ಟು ಸುಧಾರಿಸುವ ಸಾಧ್ಯತೆಗಳಿವೆ. ಎರಡನೇ ಸ್ಥಾನದಲ್ಲಿರುವ ಹ್ಯುಂಡೈ ವೆನ್ಯೂ ಬಿಡುಗಡೆಯಾದ ಒಂದು ವರ್ಷದ ನಂತರವೂ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಜನವರಿ ತಿಂಗಳಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದ ಎಸ್‌ಯುವಿಗಳಿವು

ಜನವರಿ ತಿಂಗಳಿನಲ್ಲಿ ಈ ಎಸ್‌ಯುವಿಯ 11,779 ಯುನಿಟ್‌ಗಳು ಮಾರಾಟವಾಗಿವೆ. ಈ ಎಸ್‌ಯುವಿಯು ಸಹ ಮಾರಾಟದಲ್ಲಿ 74%ನಷ್ಟು ಹೆಚ್ಚಳವನ್ನು ದಾಖಲಿಸಿದೆ. ಹ್ಯುಂಡೈ ಎಸ್‌ಯುವಿಯ ಫೇಸ್ ಲಿಫ್ಟ್ ಮಾದರಿಯು ಈ ವರ್ಷ ಬಿಡುಗಡೆಯಾಗುವ ನಿರೀಕ್ಷೆಗಳಿವೆ.

ಜನವರಿ ತಿಂಗಳಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದ ಎಸ್‌ಯುವಿಗಳಿವು

ಹೊಸ ಅಪ್‌ಡೇಟ್‌ನ ನಂತರ ಮಾರುತಿ ಬ್ರೆಝಾ ಸಹ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. 2020ರ ಜನವರಿ ತಿಂಗಳಿನಲ್ಲಿ ಈ ಎಸ್‌ಯುವಿಯ 10,134 ಯುನಿಟ್‌ಗಳು ಮಾರಾಟವಾಗಿದ್ದರೆ, ಈ ವರ್ಷದ ಜನವರಿಯಲ್ಲಿ 10,623 ಯುನಿಟ್‌ಗಳು ಮಾರಾಟವಾಗಿವೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಜನವರಿ ತಿಂಗಳಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದ ಎಸ್‌ಯುವಿಗಳಿವು

ಬ್ರೆಝಾ ಎಸ್‌ಯುವಿಯ ಮಾರಾಟದಲ್ಲಿ 4%ನಷ್ಟು ಹೆಚ್ಚಳವಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಈ ಎಸ್‌ಯುವಿಯ ಮಾರಾಟದಲ್ಲಿ ಕುಸಿತ ಉಂಟಾಗಿತ್ತು. ಬಿಡುಗಡೆಯಾದ ಕೆಲವು ತಿಂಗಳುಗಳ ಕಾಲ ಕಿಯಾ ಸೆಲ್ಟೋಸ್ ಮಾರುಕಟ್ಟೆಯಲ್ಲಿ ಪ್ರಾಬಲ್ಯವನ್ನು ಹೊಂದಿತ್ತು.

ಜನವರಿ ತಿಂಗಳಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದ ಎಸ್‌ಯುವಿಗಳಿವು

ಆದರೆ ಈಗ ಈ ಎಸ್‌ಯುವಿಗೆ ಬೇಡಿಕೆ ಕಡಿಮೆಯಾಗಿದೆ. ಕಳೆದ ತಿಂಗಳು ಈ ಎಸ್‌ಯುವಿಯ 9,869 ಯುನಿಟ್‌ಗಳು ಮಾರಾಟವಾಗಿದ್ದು, ಮಾರಾಟದಲ್ಲಿ 34%ನಷ್ಟು ಇಳಿಕೆ ಕಂಡುಬಂದಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಜನವರಿ ತಿಂಗಳಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದ ಎಸ್‌ಯುವಿಗಳಿವು

ಇದೇ ವೇಳೆ ಕಿಯಾ ಮೋಟಾರ್ಸ್ ಕಂಪನಿಯ ಸೊನೆಟ್ ಎಸ್‌ಯುವಿ 8,859 ಯುನಿಟ್‌ಗಳು ಜನವರಿ ತಿಂಗಳಿನಲ್ಲಿ ಮಾರಾಟವಾಗಿವೆ. ಟಾಟಾ ಮೋಟಾರ್ಸ್ ಕಂಪನಿಯ ನೆಕ್ಸಾನ್ ಸಹ ಕೆಲವು ತಿಂಗಳುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ.

ಜನವರಿ ತಿಂಗಳಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದ ಎಸ್‌ಯುವಿಗಳಿವು

ಕಳೆದ ತಿಂಗಳು ಟಾಟಾ ನೆಕ್ಸಾನ್ ಎಸ್‌ಯುವಿಯ 8,225 ಯುನಿಟ್‌ಗಳು ಮಾರಾಟವಾಗಿದ್ದು, ಮಾರಾಟ ಪ್ರಮಾಣವು 143%ನಷ್ಟು ಹೆಚ್ಚಾಗಿದೆ. ಕಳೆದ ವರ್ಷ ಜನವರಿ ತಿಂಗಳಿನಲ್ಲಿ ಈ ಎಸ್‌ಯುವಿಯ 3,382 ಯುನಿಟ್‌ಗಳು ಮಾರಾಟವಾಗಿದ್ದು, ಇದುವರೆಗಿನ ದಾಖಲೆಯಾಗಿತ್ತು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಜನವರಿ ತಿಂಗಳಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದ ಎಸ್‌ಯುವಿಗಳಿವು

ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ 300ನ 4,612 ಯುನಿಟ್‌ಗಳನ್ನು ಕಳೆದ ತಿಂಗಳು ಮಾರಾಟ ಮಾಡಿದೆ. ಈ ಎಸ್‌ಯುವಿಯ ಮಾರಾಟದಲ್ಲಿ 37%ನಷ್ಟು ಹೆಚ್ಚಳವಾಗಿದೆ. ಕಂಪನಿಯ ಸ್ಕಾರ್ಪಿಯೋ ಎಸ್‌ಯುವಿಯ 4,081 ಯುನಿಟ್‌ಗಳು ಜನವರಿ ತಿಂಗಳಿನಲ್ಲಿ ಮಾರಾಟವಾಗಿವೆ.

ಜನವರಿ ತಿಂಗಳಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದ ಎಸ್‌ಯುವಿಗಳಿವು

ಕಳೆದ ವರ್ಷದ ಜನವರಿಯಲ್ಲಿ ಈ ಎಸ್‌ಯುವಿಯ 5,316 ಯುನಿಟ್‌ಗಳು ಮಾರಾಟವಾಗಿದ್ದವು. ಇದರಿಂದಾಗಿ ಈ ಎಸ್‌ಯುವಿಯ ಮಾರಾಟ ಪ್ರಮಾಣವು 23%ನಷ್ಟು ಕಡಿಮೆಯಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಜನವರಿ ತಿಂಗಳಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದ ಎಸ್‌ಯುವಿಗಳಿವು

ಟೊಯೊಟಾದ ಅರ್ಬನ್ ಕ್ರೂಸರ್'ನ 3,075 ಯುನಿಟ್‌ಗಳು ಜನವರಿ ತಿಂಗಳಿನಲ್ಲಿ ಮಾರಾಟವಾಗಿದ್ದರೆ, ನಿಸ್ಸಾನ್ ಮ್ಯಾಗ್ನೈಟ್ ಎಸ್‌ಯುವಿಯ 3,011 ಯುನಿಟ್‌ಗಳು ಮಾರಾಟವಾಗಿವೆ. ಶೀಘ್ರದಲ್ಲೇ ಕಿಗರ್ ಎಸ್‌ಯುವಿಯು ಈ ಸೆಗ್'ಮೆಂಟಿನಲ್ಲಿ ಬಿಡುಗಡೆಯಾಗಲಿದೆ.

Article Published On: Wednesday, February 3, 2021, 10:06 [IST]
English summary
Top selling SUVs in Indian market during January 2021. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+