2021ರಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ಸಿಯಾದ ಕಾರುಗಳಿವು..

ಈ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ಜನಪ್ರಿಯ ಕಾರು ತಯಾರಕ ಕಂಪನಿಗಳು ಹೊಸ ಕಾರುಗಳನ್ನು ಬಿಡುಗಡೆಗೊಳಿಸಿವೆ. ಇದರಲ್ಲಿ ಹಲವು ಜನಪ್ರಿಯ ಕಾರುಗಳು ಉತ್ತಮ ಯಶಸ್ಸು ಕಂಡು ದಾಖಲೆಯ ಮಟ್ಟದಲ್ಲಿ ಮಾರಾಟವಾಗುತ್ತಿವೆ.

ಈ ವರ್ಷದ ಭಾರತದ ಗ್ರಾಹಕರನ್ನು ಸೆಳೆಯುವಲ್ಲಿ ಅತಿ ಹೆಚ್ಚು ಯಶಸ್ಸಿಯಾದ ಕಾರುಗಳಿವು

ಹೊಸ ಕಾರುಗಳ ಬಿಡುಗಡೆಯೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳನ್ನು ಹೊಂದಿದೆ. ಗ್ರಾಹಕರು ತಮ್ಮ ಆಧ್ಯತೆಕ್ಕೆ ಅನುಗುಣವಾಗಿ ಕಾರುಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ, ಈ ವರ್ಷ ಮಹೀಂದ್ರಾ ಎಕ್ಸ್‌ಯುವಿ700, ಟಾಟಾ ಪಂಚ್, ರೆನಾಲ್ಟ್ ಕಿಗರ್ ಮತ್ತು ಫೋಕ್ಸ್‌ವ್ಯಾಗನ್ ಟೈಗನ್ ಕಾರುಗಳು ಉತ್ತಮ ಯಶಸ್ಸು ಕಂಡಿವೆ. ಈ ಕಾರುಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಈ ವರ್ಷದ ಭಾರತದ ಗ್ರಾಹಕರನ್ನು ಸೆಳೆಯುವಲ್ಲಿ ಅತಿ ಹೆಚ್ಚು ಯಶಸ್ಸಿಯಾದ ಕಾರುಗಳಿವು

ಮಹೀಂದ್ರಾ ಎಕ್ಸ್‌ಯುವಿ700

ಈ ಹೊಸ ಮಹೀಂದ್ರಾ ಎಕ್ಸ್‌ಯುವಿ700 ಎಸ್‍ಯುವಿ ಬಿಡುಗಡೆಯಾದ 3 ಗಂಟೆಗಳಲ್ಲಿ 50,000 ಬುಕ್ಕಿಂಗ್‌ಗಳನ್ನು ಪಡೆದುಕೊಂಡಿತು ಮತ್ತು ಈಗ 70,000 ಯುನಿಟ್‌ಗಳನ್ನು ದಾಟಿದೆ. ಈ ಎಸ್‌ಯುವಿಯ 700 ಕ್ಕೂ ಹೆಚ್ಚು ಯುನಿಟ್‌ಗಳನ್ನು ದೀಪಾವಳಿಯ ಸಮಯದಲ್ಲಿ ವಿತರಿಸಲಾಗುವುದು ಎಂದು ಕಂಪನಿ ಹೇಳಿತ್ತು ಕಂಪನಿಯು ಜನವರಿ 14 ರ ಮೊದಲು 14,000 ಯುನಿಟ್‌ಗಳನ್ನು ವಿತರಿಸಲಾಗುವುದು ಎಂದು ಹೇಳಿದೆ. ಕಂಪನಿಯು ಪ್ರಸ್ತುತ ಈ ಗುರಿಯತ್ತ ಸಾಗುತ್ತಿದೆ.

ಈ ವರ್ಷದ ಭಾರತದ ಗ್ರಾಹಕರನ್ನು ಸೆಳೆಯುವಲ್ಲಿ ಅತಿ ಹೆಚ್ಚು ಯಶಸ್ಸಿಯಾದ ಕಾರುಗಳಿವು

ಕಂಪನಿಯು ನವೆಂಬರ್ ತಿಂಗಳಿನಲ್ಲಿ 3207 ಯೂನಿಟ್ ವಾಹನಗಳನ್ನು ವಿತರಿಸಿದೆ ಮತ್ತು ಅಂತಹ ಪರಿಸ್ಥಿತಿಯಲ್ಲಿ ಡಿಸೆಂಬರ್ ತಿಂಗಳಲ್ಲೂ ಅದೇ ವೇಗದಲ್ಲಿ ವಾಹನಗಳನ್ನು ವಿತರಿಸಬೇಕಾಗುತ್ತದೆ. ಕಂಪನಿಯು ಸರಾಸರಿ 3200 - 3300 ಯುನಿಟ್‌ಗಳನ್ನು ವಿತರಿಸಲಿದೆ.

ಈ ವರ್ಷದ ಭಾರತದ ಗ್ರಾಹಕರನ್ನು ಸೆಳೆಯುವಲ್ಲಿ ಅತಿ ಹೆಚ್ಚು ಯಶಸ್ಸಿಯಾದ ಕಾರುಗಳಿವು

ಮಹೀಂದ್ರಾ ಎಕ್ಸ್‌ಯುವಿ700 ಎಸ್‍ಯುವಿಯ ಆರಂಭಿಕ ಬೆಲೆಯು ಎಕ್ಸ್ ಶೋ ರೂಂ ಪ್ರಕಾರ ರೂ.12.49 ಲಕ್ಷವಾಗಿದೆ. ಆದರೆ ಟಾಪ್-ಸ್ಪೆಕ್ ರೂಪಾಂತರದ ಬೆಲೆಯು ಎಕ್ಸ್ ಶೋ ರೂಂ ಪ್ರಕಾರ ರೂ.22.99 ಲಕ್ಷವಾಗಿದೆ, ಈ ಕಾರನ್ನು ಒಟ್ಟು ನಾಲ್ಕು ರೂಪಾಂತರಗಳಲ್ಲಿ ಮಾರಾಟ ಮಾಡುತ್ತಿದೆ, ಇದು MX, AX3, AX5 ಮತ್ತು AX7 ರೂಪಾಂತರಗಳಾಗಿವೆ. ಇದರೊಂದಿಗೆ ಆಕ್ಸೆಸರೀಸ್ ಪ್ಯಾಕ್‌ಗಳನ್ನು ಸಹ ಲಭ್ಯವಾಗುವಂತೆ ಮಾಡಲಾಗಿದೆ.

ಈ ವರ್ಷದ ಭಾರತದ ಗ್ರಾಹಕರನ್ನು ಸೆಳೆಯುವಲ್ಲಿ ಅತಿ ಹೆಚ್ಚು ಯಶಸ್ಸಿಯಾದ ಕಾರುಗಳಿವು

ಟಾಟಾ ಪಂಚ್

ಕಂಪನಿಯು ತನ್ನ ಬುಕಿಂಗ್ ಅನ್ನು ಬಹಿರಂಗಪಡಿಸದಿದ್ದರೂ, ಬಿಡುಗಡೆಗೂ ಮುನ್ನವೇ ಟಾಟಾ ಪಂಚ್ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ.ಟಾಟಾ ಪಂಚ್ ಮೊದಲ ತಿಂಗಳಲ್ಲೇ ಬಜ್ ಅನ್ನು ಸೃಷ್ಟಿಸಿದೆ. ಕಳೆದ ತಿಂಗಳು, ಟಾಟಾ ಮೋಟಾರ್ಸ್ ಕಂಪನಿಯು ಭಾರತದಲ್ಲಿ ಮೈಕ್ರೋ-ಎಸ್‌ಯುವಿಯ ಒಟ್ಟು 6,110 ಯುನಿಟ್‌ಗಳನ್ನು ಮಾರಾಟ ಮಾಡಿದರು ಕುತೂಹಲಕಾರಿಯಾಗಿ, ಪಂಚ್ ನಮ್ಮ ಮಾರುಕಟ್ಟೆಗೆ ಬಂದ ನಂತರ ಅಲ್ಟ್ರೋಜ್ ಕಾರಿನ ಮಾರಾಟವು ಕುಸಿತ ಕಂಡಿದೆ.

ಈ ವರ್ಷದ ಭಾರತದ ಗ್ರಾಹಕರನ್ನು ಸೆಳೆಯುವಲ್ಲಿ ಅತಿ ಹೆಚ್ಚು ಯಶಸ್ಸಿಯಾದ ಕಾರುಗಳಿವು

ಸ್ವದೇಶಿ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಬಹುನಿರೀಕ್ಷಿತ ಟಾಟಾ ಪಂಚ್ ಅನ್ನು ಈ ವರ್ಷದ ಅಕ್ಟೋಬರ್‌ ತಿಂಗಳಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು, ಈ ಟಾಟಾ ಪಂಚ್ ಕಾರು ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಕೈಗೆಟುಕುವ ಮೈಕ್ರೋ ಎಸ್‌ಯುವಿಗಳಲ್ಲಿ ಒಂದಾಗಿದೆ. ಟಾಟಾ ಪಂಚ್ ಮಾದರಿಯು ನೂತನ ಫೀಚರ್ಸ್, ಬಜೆಟ್ ಬೆಲೆ ಮತ್ತು ಅತ್ಯುತ್ತಮ

ಈ ವರ್ಷದ ಭಾರತದ ಗ್ರಾಹಕರನ್ನು ಸೆಳೆಯುವಲ್ಲಿ ಅತಿ ಹೆಚ್ಚು ಯಶಸ್ಸಿಯಾದ ಕಾರುಗಳಿವು

ಎಂಜಿನ್ ಆಯ್ಕೆಯೊಂದಿಗೆ ಮೈಕ್ರೊ ಎಸ್‌ಯುವಿಯಾಗಿದೆ. ಇನ್ನು ಈ ಹೊಸ ಮಾದರಿಯು ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಪ್ರಮುಖ ನಾಲ್ಕು ವೆರಿಯೆಂಟ್‌ಗಳೊಂದಿಗೆ ಲಭ್ಯವಿದೆ. ಹೊಸ ಕಾರು ಮೈಕ್ರೋ ಎಸ್‌ಯುವಿ ಮಾದರಿಗಳಿಗೆ ಮಾತ್ರವಲ್ಲದೆ ಹ್ಯಾಚ್‌ಬ್ಯಾಕ್ ಕಾರು ಮಾದರಿಗಳಿಗೂ ಭರ್ಜರಿ ಪೈಪೋಟಿ ನೀಡುತ್ತಿದೆ. ಪಂಚ್ ಕಾರು ಪ್ಯೂರ್, ಅಡ್ವೆಂಚರ್, ಅಕಾಂಪ್ಲಿಶೆಡ್ ಮತ್ತು ಕ್ರಿಯೆಟಿವ್ ಎನ್ನುವ ನಾಲ್ಕು ವೆರಿಯೆಂಟ್‌ಗಳೊಂದಿಗೆ ಲಭ್ಯವಿದೆ. ಈ ಕಾರಿನಲ್ಲಿ 1.2-ಲೀಟರ್ ರಿವೊಟ್ರಾನ್ ತ್ರಿ ಸಿಲಿಂಡರ್ ನ್ಯಾಚುರಲ್ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.

ಈ ವರ್ಷದ ಭಾರತದ ಗ್ರಾಹಕರನ್ನು ಸೆಳೆಯುವಲ್ಲಿ ಅತಿ ಹೆಚ್ಚು ಯಶಸ್ಸಿಯಾದ ಕಾರುಗಳಿವು

ರೆನಾಲ್ಟ್ ಕಿಗರ್

ಈ ರೆನಾಲ್ಟ್ ಕಿಗರ್ ಕಾರು ಕಂಪನಿಗೆ ಗೇಮ್ ಚೇಂಜರ್ ಎಂದು ಸಾಬೀತಾಗಿದೆ, ಇದರಿಂದಾಗಿ ಕಂಪನಿಯು ಎಸ್‍ಯುವಿ ವಿಭಾಗದಲ್ಲಿ ತನ್ನ ಸ್ಥಾನವನ್ನು ಬಲಪಡಿಸಿದೆ. ರೆನಾಲ್ಟ್ ಕಿಗರ್ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ ಆದರೆ ಅದರ ಮಾರಾಟದ ಮೇಲೂ ಪರಿಣಾಮ ಬೀರಿದೆ.

ಈ ವರ್ಷದ ಭಾರತದ ಗ್ರಾಹಕರನ್ನು ಸೆಳೆಯುವಲ್ಲಿ ಅತಿ ಹೆಚ್ಚು ಯಶಸ್ಸಿಯಾದ ಕಾರುಗಳಿವು

ಇದು ಕಂಪನಿಯ ಹೆಚ್ಚು ಮಾರಾಟವಾದ ಮಾದರಿಯಾಗಿದ್ದರೂ ಸಹ, ಅದರ ಮಾರಾಟವು ಅಕ್ಟೋಬರ್‌ಗೆ ಹೋಲಿಸಿದರೆ ಶೇಕಡಾ 22 ರಷ್ಟು ಕುಸಿತವನ್ನು ದಾಖಲಿಸಿದೆ. ಈ ಎಸ್‍ಯುವಿಯು 2062 ಯುನಿಟ್‌ಗಳು ಕಳೆದ ತಿಂಗಳು ಮಾರಾಟವಾಗಿವೆ. ರೆನಾಲ್ಟ್ ಕಿಗರ್ ಅನ್ನು ಮೂರು ಟ್ರಿಮ್‌ಗಳಲ್ಲಿ ನೀಡುತ್ತದೆ. ಇದು ಲೈಫ್, ಜೆನ್ ಮತ್ತು ಇಂಟೆನ್ಸ್ ಎಂಬ ರೂಪಾಂತರಗಳಾಗಿದೆ.

ಈ ವರ್ಷದ ಭಾರತದ ಗ್ರಾಹಕರನ್ನು ಸೆಳೆಯುವಲ್ಲಿ ಅತಿ ಹೆಚ್ಚು ಯಶಸ್ಸಿಯಾದ ಕಾರುಗಳಿವು

ಇನ್ನು ಈ ಕಾರಿನಲ್ಲಿ 1.0-ಲೀಟರ್ ನ್ಯಾಚುರಲಿ ಆಸ್ಪರೆಟೆಡ್ ಎಂಜಿನ್ ಮತ್ತು 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಸಾಮಾನ್ಯ ಪೆಟ್ರೋಲ್ ಎಂಜಿನ್ 72 ಬಿಹೆಚ್‍ಪಿ ಪವರ್ ಮತ್ತು ಟರ್ಬೋ ಪೆಟ್ರೋಲ್ ಎಂಜಿನ್ 100 ಬಿಜೆಚ್‍ಪಿ ಪವರ್ ಅನ್ನು ಉತ್ಪಾಸುತ್ತದೆ. ಈ ಎಂಜಿನ್ ಗಳೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದೆ.

ಈ ವರ್ಷದ ಭಾರತದ ಗ್ರಾಹಕರನ್ನು ಸೆಳೆಯುವಲ್ಲಿ ಅತಿ ಹೆಚ್ಚು ಯಶಸ್ಸಿಯಾದ ಕಾರುಗಳಿವು

ಫೋಕ್ಸ್‌ವ್ಯಾಗನ್ ಟೈಗನ್

ಈ ಫೋಕ್ಸ್‌ವ್ಯಾಗನ್ ಟೈಗನ್ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.10.50 ಲಕ್ಷವಾಗಿದೆ. ಇದು ಭಾರತದ ಫೋಕ್ಸ್‌ವ್ಯಾಗನ್‌ನಿಂದ ಅತ್ಯಂತ ಕೈಗೆಟುವ ದರದ ಕಾಂಪ್ಯಾಕ್ಟ್ ಎಸ್‌ಯುವಿಯಾಗಿದೆ. ಈ ಎಸ್‍ಯುವಿಗಾಗಿ ಇಲ್ಲಿಯವರೆಗೆ 20,000 ಯುನಿಟ್‌ಗಳನ್ನು ಕಾಯ್ದಿರಿಸಲಾಗಿದೆ, ಫೋಕ್ಸ್‌ವ್ಯಾಗನ್ ಇಂಡಿಯಾವು ಹೊಸ ಟೈಗನ್ ಎಸ್‌ಯುವಿಗಾಗಿ ಸುಮಾರು 12,000 ಯುನಿಟ್‌ಗಳ ಪ್ರಿ-ಬುಕಿಂಗ್ ಅನ್ನು ಅದರ ಬಿಡುಗಡೆಗೆ ಮುಂಚಿತವಾಗಿ ಸ್ವೀಕರಿಸಿದೆ,

ಈ ವರ್ಷದ ಭಾರತದ ಗ್ರಾಹಕರನ್ನು ಸೆಳೆಯುವಲ್ಲಿ ಅತಿ ಹೆಚ್ಚು ಯಶಸ್ಸಿಯಾದ ಕಾರುಗಳಿವು

ಕಳೆದ ವರ್ಷ ನಡೆದ ಆಟೋ ಎಕ್ಸ್‌ಪೋದಲ್ಲಿ ಟೈಗನ್ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಮೊದಲು ಪ್ರದರ್ಶಿಸಲಾಯಿತು. ಟೈಗನ್‌ನ ಉತ್ಪಾದನಾ ಆವೃತ್ತಿಯು ಎಕ್ಸ್‌ಪೋದಲ್ಲಿ ತೋರಿಸಿರುವಂತೆಯೇ ಇದೆ, ಇದು MQB A0-IN ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ.

ಈ ವರ್ಷದ ಭಾರತದ ಗ್ರಾಹಕರನ್ನು ಸೆಳೆಯುವಲ್ಲಿ ಅತಿ ಹೆಚ್ಚು ಯಶಸ್ಸಿಯಾದ ಕಾರುಗಳಿವು

ಈ ಫೋಕ್ಸ್‌ವ್ಯಾಗನ್ ಟೈಗನ್ ಎಸ್‍ಯುವಿಯು ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಡೈನಾಮಿಕ್ ಟ್ರಿಮ್ ಅಡಿಯಲ್ಲಿರುವ ರೂಪಾಂತರಗಳು 1.0 ಲೀಟರ್, ಮೂರು ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದರೆ, ಪರ್ಫಾರ್ಮೆನ್ಸ್ ಮಾದರಿಯು 1.5 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ. ಟೈಗನ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿದೆ.

Most Read Articles

Kannada
English summary
Top successful cars 2021 mahindra xuv700 tata punch renault kiger read to find more details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X