ಬಿಡುಗಡೆಯಾಗಲಿರುವ ನ್ಯೂ ಜನರೇಷನ್ ಫೋರ್ಡ್ ಎಂಡೀವರ್ ಎಸ್‍ಯುವಿಯ ವಿಶೇಷತೆಗಳು
ಅಮೆರಿಕಾ ಮೂಲದ ವಾಹನ ತಯಾರಕ ಕಂಪನಿಯಾದ ಫೋರ್ಡ್ ಕಂಪನಿಯು ತನ್ನ ನ್ಯೂ ಜನರೇಷನ್ ಎಂಡೀವರ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಮುಂದಿನ ತಲೆಮಾರಿನ ಫೋರ್ಡ್ ಎಂಡೀವರ್ ಎಸ್‍ಯುವಿಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 2022ರಲ್ಲಿ ಬಿಡುಗಡೆಯಾಗಲಿದೆ.

ಫೋರ್ಡ್ ಎಂಡೀವರ್ ಎಸ್‍ಯುವಿಯನ್ನು ಅಂತರರಾಷ್ಟ್ರೀಯ ಮಾರುಕಟೆಯಲ್ಲಿ ಎವರೆಸ್ಟ್ ಎಂಬ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ. ಅದರೆ ಭಾರತದ ಮರುಕಟ್ಟೆಯಲ್ಲಿ ಎಂಡೀವರ್ ಹೆಸರಿನಲ್ಲಿ ಮಾರಾಟವವಾಗುತ್ತಿದೆ. ಮುಂದಿನ ತಲೆಮಾರಿನ ಫೋರ್ಡ್ ಎಂಡೀವರ್ ಹೊಸ ವಿನ್ಯಾಸ ಮತ್ತು ಒಳಾಭಾಗದಲ್ಲಿ ಕೆಲವು ನವೀಕರಣಗಳನ್ನು ಪಡೆಯಲಿದೆ. ಇನ್ನು ಬಿಡುಗಡೆಯಾಗಲಿರುವ ನ್ಯೂ ಜನರೇಷನ್ ಫೋರ್ಡ್ ಎಂಡೀವರ್ ಎಸ್‍ಯುವಿಯ ಪ್ರಮುಖ ವಿಶೇಷತೆಗಳ ಬಗ್ಗೆ ಮಾಹಿತಿ ಇಲ್ಲಿದೆ.

ಪ್ಲಾಟ್‌ಫಾರ್ಮ್
2022ರ ಫೋರ್ಡ್ ಎಂಡೀವರ್ ಅನ್ನು ಸ್ವಲ್ಪ ನವೀಕರಿಸಿದ ಲ್ಯಾಡರ್ ಫ್ರೇಮ್ ಪ್ಲಾಟ್‌ಫಾರ್ಮ್‌ನಲ್ಲಿ ವಿನ್ಯಾಸಗೊಳಿಸಲಾಗುತ್ತದೆ. ಈ ಪ್ಲಾಟ್‌ಫಾರ್ಮ್ ಆಧರಿಸಿ ಈಗಾಗಲೇ ಹೊಸ ಫೋರ್ಡ್ ರೇಂಜರ್ ಅನ್ನು ವಿನ್ಯಾಸಗೊಳಿಸಲಾಗಿದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಆಫ್-ರೋಡ್ ವೆರಿಯೆಂಟ್
ಹೊಸ ಎಂಡೀವರ್ ಆಫ್-ರೋಡ್ ಫೋಕಸ್ಡ್ ವೈಲ್ಡ್ಟ್ರಾಕ್ ಎಕ್ಸ್ ವೆರಿಯೆಂಟ್ ಅನ್ನು ಸಹ ಸ್ವೀಕರಿಸಲಿದೆ. ಇನ್ನು ನ್ಯೂ ಜನರೇಷನ್ ಫೋರ್ಡ್ ಎಂಡೀವರ್ ಅಂಬಿನೆಟ್, ಟ್ರೆಂಡ್, ಟ್ರೆಂಡ್ ಸ್ಪೋರ್ಟ್, ವೈಲ್ಡ್‌ಟ್ರಾಕ್ ಎಕ್ಸ್, ಟೈಟಾನಿಯಂ ಮತ್ತು ಪ್ಲಾಟಿನಂ ಎಂಬ ಆರು ವೆರಿಯೆಂಟೆ ಗಳಲ್ಲಿ ಲಭ್ಯವಿರುತ್ತದೆ. ಇದರಲ್ಲಿ ಟೂ-ವ್ಹೀಲ್ ಡ್ರೈವ್ ಮತ್ತು ಫ್ಹೋರ್ ವ್ಜೀಲ್-ಡ್ರೈವ್ ಸಿಸ್ಟಂ ಆಯ್ಕೆಗಳನ್ನು ಒಳಗೊಂಡಿರುತ್ತದೆ.

ಫೀಚರ್ಸ್
ನ್ಯೂ ಜನರೇಷನ್ ಫೋರ್ಡ್ ಎಂಡೀವರ್ ಎಸ್‍ಯುವಿಯಲ್ಲಿ ಹೊಸ 12.8-ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇಯೊಂದಿಗೆ ಬ್ರ್ಯಾಂಡ್‌ನ ಎಸ್‌ವೈಎನ್‌ಸಿ 4 ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿರಲಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಇದರೊಂದಿಗೆ 10.25-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ನ್ನು ಸಹ ಸ್ವೀಕರಿಸಲಿದೆ. ಇನ್ಫೋಟೈನ್ಮೆಂಟ್ ಸಿಸ್ಟಂ ರಿಮೋಟ್ ಕನೆಕ್ಟಿವಿಟಿಯೊಂದಿಗೆ ವೈರ್ಲೆಸ್ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋವನ್ನು ಒಳಗೊಂಡಿರುತ್ತದೆ. ಇನ್ನು ಕನಕ್ಟಿವಿಟಿ ಕಾರ್ ತಂತ್ರಜ್ಞಾನವನ್ನು ಸಹ ಪಡೆಯಲಿದೆ.

ಎಂಜಿನ್
ವರದಿಗಳ ಪ್ರಕಾರ, 2022ರ ಫೋರ್ಡ್ ಎಂಡೀವರ್ 3 ಎಂಜಿನ್ ಆಯ್ಕೆಗಳೊಂದಿಗೆ ಬಿಡುಗಡೆಯಾಗಲಿದೆ. ಇದರಲ್ಲಿ 2.0-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ 4-ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದೆ. ಈ ಎಂಜಿನ್ 210 ಬಿಹೆಚ್ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಟಾಪ್-ಸ್ಪೆಕ್ ಮಾದರಿಯಲ್ಲಿ ಹೊಸ 3.0-ಲೀಟರ್ ಟರ್ಬೋಚಾರ್ಜ್ಡ್ 6-ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿರುತ್ತದೆ. ಈ ಎಂಜಿನ್ ಈ ಎಂಜಿನ್ 250 ಬಿಹೆಚ್ಪಿ ಪವರ್ ಮತ್ತು 600 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು 6-ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಪ್ರಸ್ತುತ ಅಮೇರಿಕನ್-ಸ್ಪೆಕ್ ಫೋರ್ಡ್ ಎಫ್ -150 ನಲ್ಲಿ ನೀಡಲಾಗಿದೆ.

ಇನ್ನು ಹೊಸ ಎಂಡೀವರ್ ಪ್ಲಗ್-ಇನ್ ಹೈಬ್ರಿಡ್ ಸಿಸ್ಟಂ ಅನ್ನು ಹೊಂದಿರುವ 2.3-ಲೀಟರ್ ಟರ್ಬೋಚಾರ್ಜ್ಡ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಸಹ ಸ್ವೀಕರಿಸಲಿದೆ. ಈ ಎಂಜಿನ್ 270 ಬಿಹೆಚ್ಪಿ ಪವರ್ ಮತ್ತು 680 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಆಯಾಮಗಳು
ನ್ಯೂ ಜನರೇಷನ್ ಫೋರ್ಡ್ ಎಂಡೀವರ್ 4903 ಮಿಮೀ ಎಂಎಂ, 1869 ಎಂಎಂ ಅಗಲ ಮತ್ತು 1837 ಎಂಎಂ ಎತ್ತರವನ್ನು ಹೊಂದಿರುತ್ತದೆ. ಇನ್ನು ಈ ಹೊಸ ಎಸ್‍ಯುವಿಯು 2850 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿರುತ್ತದೆ. ಹಿಂದಿನ ಮಾದರಿಗಿಂತ ವಿಶಾಲವಾಗಿರುತ್ತದೆ.

ನ್ಯೂ ಜನರೇಷನ್ ಫೋರ್ಡ್ ಎಂಡೀವರ್ ಎಸ್‍ಯುವಿಯು ಮುಂದಿನ ವರ್ಷ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಈ ಹೊಸ ಫೋರ್ಡ್ ಎಂಡೀವರ್ ಎಸ್‍ಯುವಿಯು 2023ರಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.


Click it and Unblock the Notifications








